ಸಕ್ಕರೆಯನ್ನು ಬೆಳ್ಳಗಾಗಿಸಲು ಮತ್ತು ಅದಕ್ಕೆ ಕ್ರಿಸ್ಟಲ್ ರೂಪ ಕೊಡಲು ಬಳಸುವ ಕೆಮಿಕಲ್ ದೇಹಕ್ಕೆ ಎಷ್ಟು ಮಾರಕ ಗೊತ್ತಾ? ಪ್ರತಿಯೊಬ್ಬರೂ ತಪ್ಪದೆ ಈ ಮಾಹಿತಿ ನೋಡಿ ಸಕ್ಕರೆ ಎಂದ ತಕ್ಷಣ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ಅದರ ಕ್ರಿಸ್ಟಲ್ ರೂಪ, ಬಿಳಿ ಬಣ್ಣ ಎಂತಹವರನ್ನಾದರೂ ಆಕರ್ಷಣೆ ಮಾಡುತ್ತದೆ.
ನಮಗೆ ಸಿಹಿ ಪದಾರ್ಥ ಎಂದರೆ ಸಕ್ಕರೆಯಿಂದ ಮಾಡಿದ್ದೆ ಆಗಬೇಕು ಎನ್ನುವ ಮಟ್ಟಕ್ಕೆ ನಮ್ಮ ಮನಸ್ಥಿತಿ ಬದಲಾಗಿದೆ ಆದರೆ ಇಷ್ಟು ಇಷ್ಟಪಟ್ಟು ಮಕ್ಕಳಿಂದ ವೃದ್ದರವರೆಗೆ ಎಲ್ಲರಿಗೂ ನೋಡಿದ ತಕ್ಷಣ ಒಂದು ಚಮಚ ಬಾಯಿಗೆ ಹಾಕಿಕೊಳ್ಳುವ ಈ ಸಕ್ಕರೆಯಿಂದ ನಮ್ಮ ದೇಹಕ್ಕೆ ಎಷ್ಟೊಂದು ರೀತಿಯ ಕಾಯಿಲೆಗಳು ಬರುತ್ತಿವೆ ಗೊತ್ತಾ?
ಸಕ್ಕರೆ ಪದಾರ್ಥ ಹೆಚ್ಚಿಗೆ ತಿನ್ನುವುದರಿಂದ ಶುಗರ್ ಬರುತ್ತದೆ ಎನ್ನುವುದು ಅನೇಕರಿಗೆ ಗೊತ್ತು ಇದಲ್ಲದೆ ಸಕ್ಕರೆ ರೂಪ ತಾಳುವುದಕ್ಕಾಗಿ ಅದಕ್ಕೆ ಹಾಕಿರುವ ಕೆಮಿಕಲ್ ಗಳಿಂದ ಇನ್ನೂ ಎಂತಹ ವ್ಯಾಧಿಗಳು ದೇಹವನ್ನು ಬಾಧಿಸಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಸಕ್ಕರೆಯನ್ನು ಕಬ್ಬಿನಿಂದ ತಯಾರಿಸುತ್ತಾರೆ. ಕಬ್ಬನ್ನು ರಸ ತೆಗೆದು ಕುದಿಸಿದಾಗ ಅದು ಬಿಳಿ ಬಣ್ಣದ ಇರುವುದಿಲ್ಲ. ಬದಲಾಗಿ ಚಾಕಲೇಟ್ ಕಲರ್ ಇರುತ್ತದೆ. ಅದನ್ನು ಬಿಳಿ ಮಾಡಿ, ಸಣ್ಣ ಸಣ್ಣ ಚೂರುಗಳಾಗಿ ಮಾಡುವುದಕ್ಕೆ ಅನೇಕ ಕೆಮಿಕಲ್ ಗಳ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಫ್ಯಾಕ್ಟರಿಗಳಲ್ಲಿ ಸಲ್ಫರ್ ಡೈ ಆಕ್ಸೈಡ್ ಪಾಸ್ಪರಿಕ್ ಆಸಿಡ್, ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಬಳಸಲೇಬೇಕು.
ಈ ಕೆಮಿಕಲ್ ಗಳಿಂದ ಆಗುವಂತಹ ದುಷ್ಪರಿಣಾಮ ಎಷ್ಟಿದೆ ಎನ್ನುವುದು ಗೊತ್ತಾದರೆ ಇನ್ನು ಮುಂದೆ ಬಹುತೇಕರು ಸಕ್ಕರೆ ತಿನ್ನುವುದನ್ನೇ ನಿಲ್ಲಿಸಿ ಬಿಡಬಹುದು. ನಿಧಾನ ವಿಷ ಎಂದು ಕರೆಯಲಾಗುವ ಈ ಸಕ್ಕರೆಗೆ ಹಾಕಿರುವ ಕೆಮಿಕಲ್ ಗಳಿಂದ ಶರೀರದಲ್ಲಿ ಬೇಡದ ಆಸಿಡ್ ಗಳು ಹೆಚ್ಚು ಉತ್ಪತ್ತಿ ಆಗುತ್ತವೆ. ಇವು ಪಿತ್ತ, ವಾತ, ಕಫ ವಿಕಾರಗಳಿಗೆ ಕಾರಣವಾಗುತ್ತದೆ.
ಶರೀರದ PH value ಹಾಳಾಗುತ್ತದೆ. ಫ್ಯಾಟ್ ಮೆಟಬೋಲಿಸಂ ಸ್ಲೋ ಆಗುತ್ತದೆ. ಲಿವರ್ ,ಕಿಡ್ನಿ, ಕರುಳು, ಪಿತ್ತಕೋಶ, ಮೇದೋಜೀರಕ ಗ್ರಂಥಿ, ಜಠರ ಇವುಗಳು ನಿಶ್ಯಕ್ತಗೊಳ್ಳುತ್ತವೆ. ಪಾಸ್ಪರಿಕ್ ಆಸಿಡ್ ಹಾಗೂ ಸಲ್ಫರ್ ಆಕ್ಸೈಡ್ , ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನಿಂದ ಶ್ವಾಸಕೋಶದ ಆರೋಗ್ಯ ಬಹಳ ಗಂಭೀರವಾಗುತ್ತದೆ.
ಶರೀರಕ್ಕೆ ಪ್ರಾಣಶಕ್ತಿ ಒದಗಿಸುವಂತಹ ಶ್ವಾಸಕೋಶ ಹಾಗೂ ನಾವು ತಿಂದ ಆಹಾರವನ್ನು ಜೀರ್ಣ ಮಾಡಿ ಶಕ್ತಿ ನೀಡುವ ಪೋಷಕಾಂಶಗಳನ್ನು ಕರಗಿಸುವ ಜೀರ್ಣಾಂಗವ್ಯೂಹದ ವಿವಿಧ ಅಂಗಗಳನ್ನು ಡ್ಯಾಮೇಜ್ ಮಾಡಿಕೊಳ್ಳುವುದರಿಂದ ದೇಹ ಬಹಳ ದುರ್ಬಲಗೊಳ್ಳುತ್ತದೆ. ಹಾಗಾಗಿ ಜನತೆ ಇದರ ಬಗ್ಗೆ ಎಚ್ಚೆತ್ತುಕೊಂಡು ಸಕ್ಕರೆ ಸೇವಿಸುವುದು ನಿಲ್ಲಿಸುವುದು ಬಹಳ ಒಳ್ಳೆಯದು. ಸಕ್ಕರೆ ಬದಲಿಗೆ ಬೆಲ್ಲವನ್ನು ಸೇವಿಸುವುದು ಬಹಳ ಬದಲಾವಣೆ.
ಶುದ್ಧವಾಗಿ ತಯಾರಾದ ಬೆಲ್ಲಗಳಲ್ಲಿ ದೇಹಕ್ಕೆ ಪೂರಕವಾದ ಅನೇಕ ಪೋಷಕಾಂಶಗಳು ಇರುತ್ತವೆ. ಕ್ಯಾಲ್ಸಿಯಂ ಹೇರಳವಾಗಿದ್ದು ರಕ್ತ ಹೀನತೆಗೆ ಬೆಲ್ಲ ಪರಿಹಾರ. ಜೊತೆಗೆ ಬೆಲ್ಲವನ್ನು ತಿನ್ನುವುದರಿಂದ ದೇಹದಲ್ಲಿ ಅನೇಕ ಉತ್ತಮ ರೀತಿಯ ಬದಲಾವಣೆಗಳು ಆಗುತ್ತದೆ.
ಬೆಲ್ಲ ತಯಾರಿಕೆಗೆ ಕೆಮಿಕಲ್ ಬಳಸುವುದು ಕೂಡ ಕಡಿಮೆ ಅದರಲ್ಲೂ ಬ್ರೌನ್ ಬಣ್ಣದ ಬೆಲ್ಲವನ್ನು ಖರೀದಿಸಿದರೆ ಉತ್ತಮ ಬೆಲ್ಲವನ್ನು ಕೂಡ ಬ್ಲೀಚ್ ಮಾಡುತ್ತಾರೆ ಎನ್ನುವ ದೂರು ಇದೆ. ಬೆಲ್ಲವನ್ನು b cft ಎಚ್ಚರಿಕೆಯಿಂದ ಶುದ್ಧವಾದ ಬೆಲ್ಲವನ್ನು ಖರೀದಿಸಿ ಮತ್ತು ಸಕ್ಕರೆಯನ್ನು g r ಮಾಡಿ ಇದರಿಂದ ನಿಮ್ಮ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.