ಇದುವರೆಗೂ ಇದ್ದ ವಾದವೇನೆಂದರೆ ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂದು ಆದರೆ ಈಗ ಟ್ರೆಂಡ್ ಬದಲಾಗಿದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಇಂಟರೆಸ್ಟ್ ಕಡಿಮೆಯಾಗಿ ಯಾವ ಕೋಳಿ ಒಳ್ಳೆಯದು ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಈ ಕೋಳಿ ತಿನ್ನುವ ಆಸೆಯಿಂದ ಹಿಡಿದು ಈ ಅಭ್ಯಾಸ ಶುರುವಾದ ನಾಗರಿಕತೆ ತನಕ ಮತ್ತು ಈಗ ಇರುವ ಫಾರಂ ಕೋಳಿಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು.?
ಮತ್ತು ಮೊಟ್ಟೆಯ ಮೇಲಿನ ಬಣ್ಣದಿಂದ ಅದರ ಗುಣಮಟ್ಟ ಅಳೆಯುವುದು ಸರಿಯೇ ಎನ್ನುವುದರ ವರೆಗೆ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ಕೋಳಿ ತಿನ್ನುವವರು ಅಥವಾ ಮೊಟ್ಟೆ ತಿನ್ನುವವರು ಸಮಯ ಮಾಡಿಕೊಂಡು ಈ ಅಂಕಣವನ್ನು ಕೊನೆಯವರೆಗೂ ತಪ್ಪದೆ ಓದಿ.
ನಮಗೆ ಈಗ ಸಿಕ್ಕಿರುವ ಪುರಾವೆಗಳ ತನಕ ಸಿಂಧೂ ನಾಗರಿಕತೆಯಿಂದಲೂ ಕೂಡ ಮನುಷ್ಯರು ಕೋಳಿ ತಿನ್ನುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಆದರೆ ನಮ್ಮ ದೇಶದಲ್ಲಿ ಕೋಳಿ ಸಾಕುವ ಅಭ್ಯಾಸ ಇರಲಿಲ್ಲ, ಕಾಡು ಕೋಳಿಗಳನ್ನು ಆಹಾರಕ್ಕಾಗಿ ಬೇಟೆಯಾಡುತ್ತಿದ್ದರು.
ಆದರೆ ಭಾರತದ ಐತಿಹಾಸಿಕ ವೃತ್ತಾಂತಗಳಲ್ಲಿ ಚಿಕನ್ ಬಗ್ಗೆ ಆಗಲಿ ಮೊಟ್ಟೆ ಬಗ್ಗೆ ಆಗಲಿ ಹೆಚ್ಚು ಪ್ರಸ್ತಾಪವಿಲ್ಲ. ದಕ್ಷಿಣ ಏಷ್ಯಾ ಹಾಗೂ ಚೀನಾದ ದಕ್ಷಿಣ ಭಾಗಗಳಲ್ಲಿ ಈ ರೀತಿ ಕೋಳಿ ಸಾಕಾಣಿಕೆ ಮಾಡುವುದು ರೂಢಿಯಲ್ಲಿತ್ತು ನಂತರ ಅದು ವಿಶ್ವದ ಎಲ್ಲಾ ಕಡೆ ಹಬ್ಬಿತು ಎಂದು ಕೆಲಸ ಸಂಶೋಧನೆಗಳು ಹೇಳುತ್ತವೆ. 1939 ರಿಂದ 1945ರ ವೇಳೆ ನಡೆದ ಎರಡನೇ ಮಹಾಯುದ್ಧದ ಸಂದರ್ಭ ಕೋಳಿ ಸಾಕಾಣಿಕೆಗೆ ಹೊಸ ಪರ್ವವನ್ನು ಬರೆಯಿತು ಎಂದರೆ ತಪ್ಪಾಗಲಾರದು.
ಯಾಕೆಂದರೆ ಅಲ್ಲಿಯವರೆಗೂ ದನ ಹಾಗೂ ಹಂದಿಯ ಮಾಂಸಗಳನ್ನು ಹೆಚ್ಚು ಮಾಂಸಹಾರಿಗಯಳು ಸೇವಿಸುತ್ತಿದ್ದರು. ಅದರಲ್ಲಿ ಒಂದು ವರ್ಗಕ್ಕೆ ಹಂದಿ ನಿಷಿದ್ಧವಾಗಿದ್ದರೆ ಮತ್ತೊಂದು ವರ್ಗ ದನದ ಮಾಂಸ ಸೇವಿಸುತ್ತಿರಲಿಲ್ಲ. ಹೀಗಾಗಿ ಕೋಳಿಯ ಮಾಂಸವು ಎಲ್ಲರೂ ಸೇವಿಸಬಹುದಾದ ಆಹಾರ ಆದ್ದರಿಂದ ಮತ್ತು ಕೋಳಿ ಮಾಂಸದ ರುಚಿ ನಾಲಿಗೆ ಹತ್ತಿದ್ದರಿಂದ ಕೋಳಿ ಮಾಂಸದ ಕಡೆಗೆ ಜನ ವಾಲಿದರು ಮತ್ತು ಇದನ್ನು ಫಾರಂಗಳಲ್ಲಿ ಬೆಳೆಸುವುದು ಕೂಡ ಬಹಳ ಸಲೀಸು ಎನಿಸತೊಡಗಿತ್ತು. ಆದರೆ ಭಾರತದಲ್ಲಿ ಹಲವು ವರ್ಷಗಳವರೆಗೆ ಆಹಾರಕ್ಕಾಗಿ ಮನೆಗಳಲ್ಲಿಯೇ ಕೋಳಿ ಸಾಕಾಣಿಕೆ ಮಾಡುತ್ತಿದ್ದರು ಈಗಲೂ ಹಳ್ಳಿಗಳ ಭಾಗದಲ್ಲಿ ಈ ಅಭ್ಯಾಸ ಇದೆ. ಈ ಕೋಳಿಗಳು ಮನೆಯಲ್ಲಿ ಹಾಕುವ ಧವಸ ಧಾನ್ಯಗಳನ್ನು ಮಾತ್ರವಲ್ಲದೆ ಅವುಗಳ ಅಕ್ಕಪಕ್ಕ ಜಾಗದಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಹುಳಹುಪ್ಪಟೆಗಳನ್ನು ಆಯ್ದುಕೊಂಡು ತಿಂದು ಬದುಕುತ್ತವೆ, ಹೀಗಾಗಿ ಈ ನಾಟಿ ಕೋಳಿಗಳು ಹೆಚ್ಚು ಪೋಷಕಾಂಶವನ್ನು ಹೊಂದಿರುತ್ತವೆ ಮತ್ತು ಇವುಗಳು ಯಾವಾಗಲೂ ಓಡಾಡುತ್ತಿರುವುದರಿಂದ ಇವುಗಳ ಮಾಂಸ ಆರೋಗ್ಯಕ್ಕೆ ಅಷ್ಟೊಂದು ಮಾರಕವಲ್ಲ ಎಂದು ಹೇಳಲಾಗುತ್ತದೆ.
ಆದರೆ ಫಾರಂಗಳಲ್ಲಿ ಕೋಳಿಗಳನ್ನು ಸಾಕಿ ಮಾರಾಟ ಮಾಡುವ ಬಿಸಿನೆಸ್ ಆರಂಭ ಆದಮೇಲೆ ಕೋಳಿಗಳನ್ನು ಬರಿ ಮಾಂಸದ ಉದ್ದೇಶಕ್ಕಾಗಿ ಬೆಳೆಯಲಾಯಿತು. ಅದಕ್ಕಾಗಿ ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯಲಿ ಎನ್ನುವ ಕಾರಣಕ್ಕಾಗಿ ಅವುಗಳಿಗೆ ಹಲವು ಔಷಧಿಗಳನ್ನು ನೀಡಲಾಗುತ್ತಿದೆ ಮತ್ತು ಕೋಳಿ ಜ್ವರ ಬಂದರೆ ಒಂದರಿಂದ ಒಂದಕ್ಕೆ ಬಹಳ ಬೇಗ ಎಲ್ಲವೂ ಸಾವನಪ್ಪುವುದನ್ನು ತಪ್ಪಿಸಲು Colistin antibiotic ಡ್ರಗ್ ಗಳನ್ನು ನೀಡಲಾಗುತ್ತದೆ. ಇದು ಕೋಳಿ ಮೂಲಕ ಮಾನವನ ದೇಹಕ್ಕೂ ಸೇರುತ್ತದೆ ಎಂದು ಬ್ಯಾನ್ ಕೂಡ ಮಾಡಲಾಗಿದೆ, ಅವುಗಳಿಗೆ ನೀಡುವ antimicrobial resistance ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಆಗ ದೇಹವು ವೈರಸ್, ಬ್ಯಾಕ್ಟೀರಿಯಾ ಫಂಗಸ್ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳುವುದರಿಂದ ಇವುಗಳಿಗೆ ಸಂಬಂಧಿಸಿದ ಇಂಫೆಕ್ಷನ್ ಗಳಿಗೆ ಒಳಗಾಗುತ್ತದೆ.ಆದರೂ ಕಣ್ತಪ್ಪಿಸಿ ಈ ವ್ಯವಹಾರ ನಡೆಯುತ್ತಲೇ ಇದೆ ಮತ್ತು ಫಾರಂ ಗಳಲ್ಲಿ ಸಾಕು ಕೋಳಿಯೂ ಜೈಲಿನಲ್ಲಿರುವುದರಿಂದ ಅವುಗಳ ಮಾಂಸ ಹೆಚ್ಚು ಆರೋಗ್ಯಕರವಲ್ಲ ಎಂದು ಹೇಳಲಾಗುತ್ತದೆ.
antibiotic free chicken ಕೂಡ ಕೆಲವು ಬ್ರಾಂಡ್ ಗಳಲ್ಲಿ ಸಿಗುತ್ತದೆ ಆದರೆ ಅದರ ರುಚಿ ಜನರಿಗೆ ಹಿಡಿಸಿದ ಕಾರಣ ಅವರು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಕೋಳಿ ಮೊಟ್ಟೆಗಳ ಬಗ್ಗೆ ಹೇಳುವುದಾದರೆ Brown Shell ಹಾಗೂ White Shell ಮೊಟ್ಟೆಗಳನ್ನು ನೋಡುತ್ತೇವೆ. ಆದರೆ ಇದು ಅವುಗಳಲ್ಲಿರುವ ಪೋಷಕಾಂಶಗಳನ್ನು ಸೂಚಿಸುವುದಿಲ್ಲ ಬದಲಾಗಿ ಅದರ ತಳಿ ಹಾಗೂ ಕೋಳಿ ಬಣ್ಣದ ಆಧಾರದ ಮೇಲೆ ಇದು ನಿರ್ಧಾರವಾಗುತ್ತದ ಎರಡರಲ್ಲೂ ಒಂದೇ ರೀತಿಯ ಪೋಷಕಾಂಶಗಳಿರುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ.