ನಮ್ಮ ಹಿರಿಯರು ಹಿಂದೆಲ್ಲಾ ಅಡುಗೆ ಮನೆ ಡಬಬಿ ಗಳಲ್ಲಿರುವ ಮಸಾಲೆ ಪದಾರ್ಥಗಳಿಂದಲೇ ಬಹುತೇಕ ಎಲ್ಲಾ ಖಾಯಿಲೆಗಳಿಗೂ ಔಷಧಿ ಮಾಡಿಕೊಳ್ಳುತ್ತಿದ್ದರು. ನಮ್ಮ ಆಯುರ್ವೇದ ಕೂಡ ಇದನ್ನೇ ಹೇಳುತ್ತದೆ. ಖಾಯಿಲೆ ಬಂದ ಮೇಲೆ ಚಿಕಿತ್ಸೆಗೆ ಒದ್ದಾಡುವುದಕ್ಕಿಂತ ನಮ್ಮ ದೇಹಕ್ಕೆ ಯಾವುದೇ ಪೋಷಕಾಂಶ, ವಿಟಮಿನ್ ಗಳು ಮತ್ತು ಇನ್ನಿತರ ನ್ಯೂಟ್ರಿಯೆಂಟ್ಸ್ ಗಳ ಕೊರತೆ ಆಗದಂತೆ ಸರಿಯಾದ ಆಹಾರ ಪದ್ಧತಿ ರೂಢಿಸಿಕೊಂಡರೆ ಒಳ್ಳೆಯದು.
ಆಗಿದ್ದು ಒಮ್ಮೊಮ್ಮೆ ಆರೋಗ್ಯ ವ್ಯತ್ಯಾಸ ಆದರೆ ನಮ್ಮ ಮನೆಯಲ್ಲಿರುವ ಪದಾರ್ಥಗಳಿಂದಲೇ ಅದನ್ನು ಗುಣಪಡಿಸಿಕೊಳ್ಳಬಹುದು. ಈ ರೀತಿರ ಪದಾರ್ಥಗಳಲ್ಲಿ ಧನಿಯಾ ಮಹತ್ವದ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಇದನ್ನು ಧನ್ಯ ಪದಾರ್ಥ ಎಂದು ಕೂಡ ಹೇಳುತ್ತಾರೆ. ಕೊತ್ತಂಬರಿ ಬೀಜ, ಹವೀಜಾ ಎಂದು ಕೂಡ ಕರೆಯಲಾಗುವ ಇದಕ್ಕೆ ಆಯುರ್ವೇದದಲ್ಲಿ ಬಹಳ ಮಹತ್ವದ ಸ್ಥಾನ ಇದೆ.
ಇದರಲ್ಲಿ ಮೆಗ್ನೀಷಿಯಂ ಕ್ರೋಮಿಯಂ ಝಿಂಕ್ ಮುಂತಾದ ಅನೇಕ ಜೀವಸತ್ವಗಳಿವೆ. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹಕ್ಕೆ ಇಮ್ಯೂನಿಟಿ ಪವರ್ ಕೊಡುತ್ತದೆ. ಇದು ವಾತಾ ಪಿತ್ತ ಕಫ ಮುಂತಾದ ಎಲ್ಲಾ ದೋಷಗಳನ್ನು ಕೂಡ ಸರಿಪಡಿಸುತ್ತದೆ. ಅಡುಗೆಗೆ ಬಳಸುವುದರಿಂದ ಅಥವಾ ಪ್ರತಿನಿತ್ಯ ಒಂದು ಚಮಚ ದನಿಯಾವನ್ನು ಒಂದು ಲೋಟ ಬಿಸಿನೀರಿಗೆ ಹಾಕಿ ಕುದಿಸಿ ಆರಿಸಿ ಕುಡಿಯುವುದರಿಂದ ಅಥವಾ ಧನಿಯಾ ಕಷಾಯ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಬಹುದು ಅದರಲ್ಲಿ ಕೆಲ ವಿವರ ಹೀಗಿದೆ ನೋಡಿ.
* ನಿಯಮಿತವಾಗಿ ದನಿಯಾವನ್ನು ಆಹಾರದಲ್ಲಿ ಸೇವಿಸುವುದರಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಗುಣ ಆಗುತ್ತವೆ, ಕಿಡ್ನಿಯಲ್ಲಿರುವ ನ್ಯೂರಾನ್ ಗಳಿಗೆ ಕ್ರಿಯಾಶೀಲ ಗುಣ ಹೆಚ್ಚಾಗುತ್ತದೆ ಇದರ ಮೂಲಕ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತಾಗುತ್ತದೆ, ದೇಹದ ಟಾಕ್ಸಿನ್ ಅಂಶಗಳನ್ನು ಹೊರಹಾಕುವಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ.
* ಹೈಪರ್ ಥೈರಾಯ್ಡಿಸಂ ಮತ್ತು ಹೈಪೋ ಥೈರಾಯಿಡಿಸಂ ಈ ರೀತಿ ಥೈರೊಯ್ಡ್ ಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಕೂಡ ಪ್ರತಿದಿನ ಕೊತ್ತಂಬರಿ ಬೀಜವನ್ನು ಸೇವಿಸುವುದು ಒಳ್ಳೆಯದು.
* ಗಾಯಿಟರ್ ಎನ್ನುವ ಗಂಟಲಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆ ಬರುತ್ತದೆ ಇದಕ್ಕೂ ಕೂಡ ಕೊತ್ತಂಬರಿ ಬೀಜ ಹಾಕಿದ ನೀರು ಅಥವಾ ಕಷಾಯ ಬಹಳ ಒಳ್ಳೆಯದು.
* ಕೆಲವರಿಗೆ ದೇಹ ಬಹಳ ಕಂಟ್ರೋಲ್ ತಪ್ಪುತ್ತದ. ಅವರಿಗೆ ಉಷ್ಣ ಪದಾರ್ಥ ಸೇವಿಸಿದಾಗ ಶೀತವಾಗುವುದು, ಶೀತ ಪದಾರ್ಥಗಳನ್ನು ಸೇವಿಸಿದಾಗ ಉಷ್ಣವಾಗುವುದು ಈ ರೀತಿ ಸಮಸ್ಯೆ ಆಗುತ್ತಿರುತ್ತದೆ. ಈ ರೀತಿ ಕಫ ಪಿತ್ತ ವಾಯುವಿಕಾರವಾಗಿ ಸಮಸ್ಯೆ ಪಡುತ್ತಿರುವವರು ನಿಯಮಿತವಾಗಿ ದನಿಯಾ ಸೇವನೆ ಮಾಡುವುದರಿಂದ ಸಮಸ್ಯೆ ಕಂಟ್ರೋಲ್ ಆಗಿ ನಾರ್ಮಲ್ ಗೆ ಬರುತ್ತಾರೆ.
* ಚರ್ಮಕ್ಕೆ ಸಂಬಂಧಿಸಿದ ದೋಷಗಳು ಇರುವವರು ಕೂಡ ನಿಯಮಿತವಾಗಿ ದನಿಯಾ ಸೇವನೆ ಮಾಡುವುದರಿಂದ ಇದು ಗುಣವಾಗುತ್ತದೆ.
* ಲಿವರ್ ಗೆ ಸಂಬಂಧಿಸಿದ ತೊಂದರೆಗಳನ್ನು ಅನುಭವಿಸುತ್ತಾ ಇರುವವರು ಕೂಡ ನಿಯಮಿತವಾಗಿ ದನಿಯಾ ಸೇವನೆ ಮಾಡುವುದರಿಂದ ಲಿವರ್ ಕ್ಲೀನ್ ಆಗುತ್ತದೆ. ದನಿಯ ಕಷಾಯ ಕುಡಿಯುವುದರಿಂದ ಲಿವರ್ ಸಮಸ್ಯೆ ಬರುವುದಿಲ್ಲ.
* ಹೃದ್ಯಾ ಅಂದರೆ ಹೃದಯದ ಶಕ್ತಿಯನ್ನು ಹೆಚ್ಚಿಸುತ್ತದೆ, ಮೂತ್ರಲ ಎಂದರೆ ದೇಹದಿಂದ ಟಾಕ್ಸಿನ್ ಅಂಶಗಳನ್ನು ಮೂತ್ರದ ಮೂಲಕ ಹೊರ ಹಾಕುವುದು, ಚಕ್ಷುಷ್ಯ ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.
* ಹೆಣ್ಣು ಮಕ್ಕಳಿಗೆ ಗರ್ಭಕೋಶಕ್ಕೆ ಸಂಬಂಧಿಸಿದ PCOD, PCOS ಮುಂತಾದ ಸಮಸ್ಯೆಗಳನ್ನು ಕೂಡ ನಿಯಂತ್ರಣಕ್ಕೆ ತರುತ್ತದೆ.
* ಮೇಧ್ಯ ಹಾಗೂ ಸ್ಥಿಗ್ದ್ನ ಗುಣ ಹೊಂದಿರುವುದರಿಂದ ಬಹಳ ಒಳ್ಳೆಯದು. ಜ್ಞಾಪಕ ಶಕ್ತಿ ಸ್ಮರಣಶಕ್ತಿ ಐ ಕ್ಯೂ ಲೆವಲ್ ಇವುಗಳನ್ನು ಇಂಪ್ರೂ ಮಾಡುತ್ತದೆ.
* ಕರುಳಿನ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ದನಿಯಾ ರಾಮಬಾಣ. ನರ ದೌರ್ಬಲ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.