Home Health Tips ಎದೆಯಲ್ಲಿ ಕಟ್ಟಿದ ಕಫ ಸಮಸ್ಯೆಗೆ ಮನೆ ಮದ್ದು.!

ಎದೆಯಲ್ಲಿ ಕಟ್ಟಿದ ಕಫ ಸಮಸ್ಯೆಗೆ ಮನೆ ಮದ್ದು.!

0
ಎದೆಯಲ್ಲಿ ಕಟ್ಟಿದ ಕಫ ಸಮಸ್ಯೆಗೆ ಮನೆ ಮದ್ದು.!

ಕೆಲವೊಂದಷ್ಟು ಜನರಿಗೆ ಎದೆಯಲ್ಲಿ ಕಫ ಕಟ್ಟಿಕೊಳ್ಳುತ್ತದೆ ಆದರೆ ಅವರಿಗೆ ಯಾವ ಒಂದು ಕಾರಣಕ್ಕೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿದಿರುವುದಿಲ್ಲ. ಹಾಗಾದರೆ ಎದಿಯಲ್ಲಿ ಕಫ ಕಟ್ಟುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ತಿಳಿದುಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ.

ಆನಂತರ ಅದನ್ನು ಹೇಗೆ ದೂರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಹಾಗಾದರೆ ಈ ಸಮಸ್ಯೆಗೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ನೋಡುವುದಾದರೆ. ಪ್ರತಿಯೊಬ್ಬರ ದೇಹದ ಸ್ಥಿತಿ ಒಂದೇ ರೀತಿಯಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಹೌದು ಒಬ್ಬರಿಗೆ ವಾತ ಪ್ರಧಾನವಾಗಿದ್ದರೆ ಕೆಲವೊಬ್ಬರಿಗೆ ಪಿತ್ತ ಪ್ರಧಾನವಾಗಿರುತ್ತದೆ, ಇನ್ನು ಕೆಲವೊಂದಷ್ಟು ಜನರಿಗೆ ಕಫ ಪ್ರಧಾನವಾಗಿರುತ್ತದೆ. ಆದ್ದರಿಂದ ಇವುಗಳನ್ನು ನಾವು ತಿಳಿದು ಕೊಂಡು ಆನಂತರ ನಮ್ಮ ದೇಹ ಸ್ಥಿತಿಗೆ ಯಾವ ಆಹಾರ ಕ್ರಮ ಆಗುತ್ತದೆಯೋ.

ಅಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಉತ್ತಮ. ಇಲ್ಲವಾದರೆ ನಾವು ವಿರುದ್ಧವಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಅದು ನಮಗೆ ವಾತ ಪಿತ್ತ ಕಫವಾಗಿ ಪರಿಣಮಿಸುತ್ತದೆ. ಹೌದು ಆಯುರ್ವೇದದಲ್ಲಿ ಈ ಮೂರು ಪ್ರಧಾನಗಳಿಗೂ ಕೂಡ ವಿಭಿನ್ನವಾದಂತ ಆಹಾರ ಪದ್ಧತಿಯನ್ನು ವರ್ಗೀಕರಿಸಲಾಗಿದೆ.

ಆದ್ದರಿಂದ ವಾತ ಪ್ರಕೃತಿ ಇರುವವರು, ಪಿತ್ತ ಪ್ರಕೃತಿ ಇರುವವರು ಕಫ ಪ್ರಕೃತಿ ಇರುವವರು ಆಯುರ್ವೇದದಲ್ಲಿ ತಿಳಿಸಲಾದ ಆಹಾರದ ವರ್ಗೀಕರಣ ವನ್ನು ತಿಳಿದುಕೊಂಡು ಅವುಗಳನ್ನು ಸೇವನೆ ಮಾಡುವುದು ಉತ್ತಮ ಹಾಗಾದರೆ ಎದೆಯಲ್ಲಿ ಕಫ ಕಟ್ಟುವುದಕ್ಕೆ ಪ್ರಧಾನವಾಗಿರುವ ಕಾರಣ ಏನು ಎಂದು ನೋಡುವುದಾದರೆ.

ಶೀತ ಪಿತ್ತದಿಂದ ಬರುತ್ತದೆ. ಪಿತ್ತ ಪ್ರದಾನ ಕಫ ಪ್ರಕೃತಿ ಇರುವವರಿಗೆ ಬರುತ್ತದೆ ಕಫ ಪ್ರಧಾನ ವಾತ ಪ್ರಕೃತಿ ಇರುವವರಿಗೆ ಬರುತ್ತದೆ. ಒಟ್ಟಾರೆಯಾಗಿ ಬಹಳ ಮುಖ್ಯವಾಗಿ ಕಫಜ ವಿಕಾರಗಳಿಂದ ಈ ಸಮಸ್ಯೆ ಯಥೇಚ್ಛವಾಗಿ ಬರುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.

ಹಾಗಾದರೆ ಇಷ್ಟೆಲ್ಲಾ ಕಾರಣಗಳಿಂದ ಬರುವಂತಹ ಕಫವನ್ನು ನಾವು ಹೇಗೆ ದೂರ ಮಾಡಿಕೊಳ್ಳುವುದು ಯಾವ ಮನೆ ಮದ್ದನ್ನು ಮಾಡಿ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ಶಾಶ್ವತವಾಗಿ ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ ಕೇವಲ ಎರಡೇ ಎರಡು ಪದಾರ್ಥದಿಂದ ಎದೆಯಲ್ಲಿ ಕಟ್ಟಿದ ಕಫವನ್ನು ದೂರ ಮಾಡಬಹುದು.

ಆ ಪದಾರ್ಥ ಯಾವುದು ಎಂದರೆ.
* ವೀಳ್ಯದೆಲೆ
* ತುಳಸಿ ಗಿಡದ ಬೀಜ
ದೊಡ್ಡವರಾದರೆ ಹತ್ತರಿಂದ ಹದಿನೈದು ತುಳಸಿ ಬೀಜವನ್ನು ಚೆನ್ನಾಗಿ ಅರೆದು ಒಂದು ವೀಳ್ಯದೆಲೆ ಜೊತೆ ಸೇರಿಸಿ 21 ದಿನ ಸೇವನೆ ಮಾಡುತ್ತಾ ಬಂದರೆ ಎದೆಯಲ್ಲಿ ಕಟ್ಟಿದ ಕಫ ಕಡಿಮೆಯಾಗುತ್ತಾ ಬರುತ್ತದೆ.

ಹಾಗೂ ಚಿಕ್ಕ ಮಕ್ಕಳಾದರೆ ಎರಡರಿಂದ ಮೂರು ತುಳಸಿ ಬೀಜ ಹಾಗೂ ಅರ್ದ ವೀಳ್ಯದೆಲೆ ಇದನ್ನು ಮಕ್ಕಳಿಗೆ ತಿನ್ನುವಂತೆ ಕೊಟ್ಟರೆ ಈ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ ಮತ್ತೊಂದು ಮನೆ ಮದ್ದು ನೋಡುವುದಾದರೆ :- ಎಕ್ಕದ ಗಿಡದ ಬೇರಿನ ಚಕ್ಕೆಯನ್ನು ಹಾಗೂ ಓಂಕಾಳು ಇವೆರಡನ್ನು ಸಹ ಸಮ ಪ್ರಮಾಣದಲ್ಲಿ ತೆಗೆದುಕೊಂಡು ನೆರಳಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು.

ಚಿಕ್ಕ ಮಕ್ಕಳಾದರೆ ಜೇನುತುಪ್ಪದ ಜೊತೆ ಅರ್ಧ ಚಿಟಿಕೆ ಈ ಪುಡಿಯನ್ನು ಹಾಕಿ ಬೆಳಗ್ಗಿನ ಸಮಯ ಐದು ಗಂಟೆಗೆ ನೆಕ್ಕಿಸಬೇಕು ಅರ್ಧಗಂಟೆ ಬಿಟ್ಟು ನಂತರ ಒಂದು ಲೋಟ ಬಿಸಿ ನೀರನ್ನು ಕುಡಿಸಬೇಕು ಹಾಗೆಯೇ ದೊಡ್ಡವರು ಎರಡು ಚಿಟಿಕೆ ಪುಡಿಯ ಜೊತೆ ಜೇನುತುಪ್ಪವನ್ನು ಹಾಕಿ ತಿಂದು ನೀರು ಕುಡಿಯಬೇಕು ಈ ರೀತಿ 21 ದಿನ ಅಥವಾ ಒಂದು ತಿಂಗಳು ಮಾಡಿದರೆ ಸಂಪೂರ್ಣವಾಗಿ ಎದೆಯಲ್ಲಿ ಕಟ್ಟಿದ ಕಫ ನಿವಾರಣೆಯಾಗುತ್ತದೆ.

https://youtu.be/yVilgv2H1tc?si=AErlvyAV1CanhB2g

LEAVE A REPLY

Please enter your comment!
Please enter your name here