● ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ಪ್ರತಿದಿನ ದೇವರಿಗೆ ದೀಪ ಹಚ್ಚುತ್ತಾರೋ ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ ಜರಗುತ್ತವೆ.
● ಯಾರ ಮನೆಯಲ್ಲಿ ಕುಲದೇವರಿಗೆ ಪೂಜೆ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ನಂದಾದೀಪ ಹಚ್ಚಿರುತ್ತಾರೋ ಅವರ ಮನೆಯಲ್ಲಿ ಸಿರಿ ಸಂಪತ್ತು ವೃದ್ದಿಯಾಗುತ್ತದೆ. ಆ ಮನೆ ನಂದ ಗೋಕುಲದಂತೆ ಬೆಳಗುತ್ತದೆ.
● ಮದುವೆ ವಿಳಂಬವಾಗುತ್ತಿರುವ ಕಾರಣಕ್ಕೆ ಹೆಣ್ಣು ಮತ್ತು ಗಂಡು ಮಕ್ಕಳು ಕಂಕಣ ಭಾಗ್ಯ ಕೂಡಿ ಬರಲು ಕಾತ್ಯಾಯಿನಿ ಪೂಜೆ ಮಾಡುವಾಗ ಆ ಪೂಜೆಗೆ ಕೊಬ್ಬರಿ ಎಣ್ಣೆಯಿಂದ ಮಾಡಿದ ದೀಪವನ್ನು ಹಚ್ಚಿದರೆ ನಿಮ್ಮ ಕೋರಿಕೆ ಬಹಳ ಬೇಗ ನೆರವೇರುತ್ತದೆ.
ಲಕ್ಷಾಂತರ ಜನರ ಜೀವನ ಬದಲಾಗಿದೆ.! ಸುಲಭವಾಗಿ ದುಡ್ಡು ಮಾಡಲು ಇರುವ 6 ನಿಯಮಗಳು.!
● ಸಂತಾನ ಭಾಗ್ಯ ಇಲ್ಲದವರು ಮಂಗಳವಾರದಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಗೆ ಪೂಜೆ ಮಾಡುತ್ತಾರೆ. ಈ ಪೂಜೆಯ ವಿಧಿ ವಿಧಾನಗಳನ್ನು ಸರಿಯಾಗಿ ತಿಳಿದುಕೊಂಡು ಅದೇ ರೀತಿ ಕಟ್ಟುನಿಟ್ಟಾದ ರೀತಿಯಲ್ಲಿ ಪೂಜೆ ಮಾಡಬೇಕು. ಈ ಪೂಜೆ ಮಾಡುವಾಗಲೂ ಕೂಡ ಸುಬ್ರಮಣ್ಯ ಸ್ವಾಮಿಗೆ ದೀಪಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಚ್ಚುವುದರಿಂದ ಶೀಘ್ರದಲ್ಲಿ ಸಂತಾನ ಭಾಗ್ಯ ಸಿದ್ಧಿಯಾಗುತ್ತದೆ.
● ಪತಿ ಪತ್ನಿ ನಡುವೆ ಯಾವಾಗಲೂ ವಿರಸವಿದ್ದರೆ, ಸಣ್ಣ ಪುಟ್ಟ ವಿಶಯಕ್ಕೂ ಕೂಡ ಕಲಹವಾಗುತ್ತಿದ್ದರೆ, ದಾಂಪತ್ಯ ಸರಿ ಹೋಗಬೇಕು ಎನ್ನುವುದಾದರೆ ಅಶ್ವತ್ಥರಳೀ ವೃಕ್ಷದ ಕೆಳಗೆ ಇರುವ ನಾಗರಕಲ್ಲಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿ ಅಶ್ವತ್ಥರಳೀ ಮರ ಹಾಗೂ ನಾಗರಕಲ್ಲು ಎರಡನ್ನು ಕೂಡ ಪ್ರಾರ್ಥಿಸಿ, ಪರಿಹಾರ ಸಿಗುತ್ತದೆ.
ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.!
● ಜಾತಕದಲ್ಲಿ ಕುಜ ದೋಷ ಇರುವವರು ಮಂಗಳವಾರ ಅಥವಾ ಶುಕ್ರವಾರ ದೇವಿಯನ್ನು ಪೂಜೆ ಮಾಡಿ ಮನೆಯಲ್ಲಿ ಒಬ್ಬಟ್ಟು ನೈವೇದ್ಯ ಮಾಡಿ ಮುತ್ತೈದೆಯರಿಗೆ ಮರದ ಬಾಗಿನವನ್ನು ಹಾಗೂ ಪ್ರಾಯಶ್ಚಿತ ಸಂಕಲ್ಪ ತಾಂಬೂಲ ದಾನವನ್ನು ನೀಡಿದರೆ ಕುಜ ದೋಷ ನಿವಾರಣೆ ಆಗುತ್ತದೆ. ಹಾಗೂ ಈ ದೇವಿ ಪೂಜೆಯಲ್ಲಿ ದೇವರ ದೀಪವನ್ನು ಹಚ್ಚಲು ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಇನ್ನು ಉತ್ತಮ ಫಲ ದೊರೆಯುತ್ತದೆ.
● ಹೋಮದ ಪೂರ್ಣಾಹುತಿಗೆ ರೇಷ್ಮೆ ವಸ್ತುವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹಾಕಿದರೆ ಅಷ್ಟ ನಿಧಿ ಹಾಗೂ ನವ ನಿಧಿ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.
● ಶನಿವಾರದಂದು ಶ್ರೀನಿವಾಸನಿಗೆ ಕೊಬ್ಬರಿ ಎಣ್ಣೆ ಹಚ್ಚಿ, ಪೂಜೆ ಮಾಡಿ ತುಳಸಿ ಹಾರವನ್ನು ಅರ್ಪಿಸಿದರೆ ಶ್ರೀನಿವಾಸನ ಕೃಪಾಕಟಾಕ್ಷದಿಂದ ಅವರಿಗೆ ಜೀವನದಲ್ಲಿ ಎಂದೆಂದೂ ಕೂಡ ಹಣದ ಸಮಸ್ಯೆ ಬರುವುದಿಲ್ಲ ಎಂದು ಹೇಳಲಾಗುತ್ತದೆ.
ಸುಂದರ ಬದುಕಿಗೆ ಬೇಕಾದ 10 ಅಮೂಲ್ಯ ಸೂತ್ರಗಳು.! ಯಾರು ಸೂತ್ರವನ್ನು ಅಳವಡಿಸಿಕೊಳ್ಳುತ್ತಾರೋ ಅವರ ಬದುಕು ಸ್ವರ್ಗ..!
● ಹೆಣ್ಣು ಮಕ್ಕಳಿಗೆ ಮದುವೆ ನಿಶ್ಚಯವಾಗಿ ಹಣಕಾಸಿನ ತೊಂದರೆ ಉಂಟಾಗಿದ್ದರೆ ಆಗಲು ಕೂಡ ಕೊಬ್ಬರಿ ಎಣ್ಣೆಯಿಂದ ಮಾಡಿದ ದೀಪಗಳನ್ನು ದೇವರ ಮನೆಯಲ್ಲಿ ಹಚ್ಚುವುದು ಅಥವಾ ದೇವಾಲಯಗಳಲ್ಲಿ ಇರುವ ದೀಪಗಳಿಗೆ ಕೊಬ್ಬರಿ ಎಣ್ಣೆ ಹಾಕಿ ದೀಪ ಹಚ್ಚಿ ಭಕ್ತಿಯಿಂದ ಪ್ರಾರ್ಥನೆ ಮಾಡುವುದು ಈ ರೀತಿ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ ಎಂದು ತಿಳಿಸಲಾಗಿದೆ.
● ಪಿತೃ ಶ್ರಾದ್ಧ ಮಾಡುವ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ವಿಷ್ಣು ಪಾದದ ಮುಂದೆ ಹಚ್ಚಿ ಇಟ್ಟರೆ ಸಮಸ್ತ ಪಿತೃದೋಷ ಕೂಡ ನಿವಾರಣೆ ಆಗುತ್ತದೆ.
ತಕ್ಷಣಕ್ಕೆ ಹಣ ಬೇಕಿದ್ದರೆ ಈ ನಂಬರ್ ಹೇಳಿಕೊಳ್ಳಿ ಸಾಕು, ಜಾದು ನಡೆಯುತ್ತದೆ.!
● ಸಾಲದ ಸಮಸ್ಯೆಯಿಂದ ನೀವು ನರಳುತ್ತಿದ್ದರೆ ಅದರಿಂದ ಮುಕ್ತಿ ಹೊಂದಲು ಅಥವಾ ನಿಮಗೆ ಯಾರಾದರೂ ಹಣ ಕೊಡಬೇಕಾಗಿದ್ದು ಅವರು ವಾಯಿದೆ ಹೇಳುತ್ತಿದ್ದರು, ನೀವು ಸಂಕಲ್ಪ ಮಾಡಿಕೊಂಡು ಮನೆಯಲ್ಲಿ ನಿಮ್ಮ ಕುಲದೇವರು ಹಾಗೂ ಇಷ್ಟದೇವರನ್ನು ಪೂಜೆ ಮಾಡಿ ನಿಮ್ಮ ಸಮಸ್ಯೆ ಹೇಳಿಕೊಂಡು ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚಿದರೆ ನಿಮ್ಮ ಹಣಕಾಸಿನ ತೊಡಕು ನಿವಾರಣೆ ಆಗುತ್ತದೆ.