ಬ್ರಹ್ಮಿ ಎಂದರೆ ಬ್ರಹ್ಮ ದೇವರು, ಮುಹೂರ್ತ ಎಂದರೆ ಸಮಯ ಈ ಶಬ್ಧದ ಅರ್ಥವೇ ಹೇಳುವುದಂತೆ ಇದನ್ನು ದೇವಾನುದೇವತೆಗಳ ಸಂಚರಿಸುವ ಕಾಲ ಎಂದು ಪುರಾಣಗಳಲ್ಲಿ ಧರ್ಮ ಗ್ರಂಥಗಳಲ್ಲಿ ಹೇಳಿದ್ದಾರೆ. ಬ್ರಹ್ಮನು ಹಣೆಬರಹ ಬರೆಯುವಂತೆ ಈ ಸಮಯದಲ್ಲಿ ಏಳುವವರು ಬದುಕನ್ನು ಅವರ ಇಚ್ಛೆಯಂತೆಯೇ ಬರೆದುಕೊಳ್ಳಬಹುದು.
ಈ ಭೂಮಿಯಲ್ಲಿರುವ ಸಕಲ ಜೀವರಾಶಿಗಳು ಕೂಡ ಪ್ರಕೃತಿಗೆ ತಕ್ಕಹಾಗೆ ಸೂರ್ಯೋದಯದ ಸಮಯದಲ್ಲಿ ಏಳುತ್ತವೆ ಆದರೆ ಮನುಷ್ಯ ಮಾತ್ರ ತನಗೆ ಇಷ್ಟ ಬಂದ ಸಮಯಕ್ಕೆ ಏಳುತ್ತಾನೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ, ಒಂದು ಬಾರಿ ನಿಮಗೆ ಇದು ಅಭ್ಯಾಸವಾಗಿ ಹೋದರೆ ಇನ್ನೂ ಜನ್ಮ ಪೂರ್ತಿ ನೀವು ಜೀವನದಲ್ಲಿ ಲೇಟಾಗಿ ಏಳುವುದಿಲ್ಲ.
ಬೆಳಗ್ಗೆ 4 ರಿಂದ 5.30 ರ ಸಮಯವನ್ನು ಬ್ರಾಹ್ಮಿ ಮುಹೂರ್ತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ದೇವಾನುದೇವತೆಗಳು ಮನೆಗೆ ಬರುತ್ತಾರೆ ಎಂದು ಸಹ ನಂಬಲಾಗುತ್ತದೆ. ಈ ಸಮಯದಲ್ಲಿ ಏಳುವುದರಿಂದ ದೇಹಕ್ಕೆ ಮನಸ್ಸಿಗೆ ಹಾಗೂ ಬದುಕಿಗೆ ಕೂಡ ಒಳ್ಳೆಯದು.
ಈ ಸಮಯದಲ್ಲಿ ಮಾಡುವ ಧ್ಯಾನವೂ ಬ್ರಹ್ಮ ಜ್ಞಾನವಾಗಿರುತ್ತದೆ, ವಿದ್ಯಾರ್ಥಿಗಳು ಎದ್ದು ಓದಿನಲ್ಲಿ ತೊಡಗಿಕೊಂಡರೆ ಏಕಾಗ್ರತೆ ಹೆಚ್ಚುತ್ತದೆ ಹಾಗೂ ಓದಿದ ವಿಚಾರಗಳು ಬಹಳ ಬೇಗ ಮನಸ್ಸಿಗೆ ಇಳಿಯುತ್ತವೆ ಮತ್ತು ಅದು ಜೀವನ ಪರ್ಯಂತ ನೆನಪಿನಲ್ಲಿ ಇರುತ್ತದೆ ಹಾಗಾಗಿ ಅಭ್ಯಾಸ ಮಾಡುವವರಿಗೆ ಇದು ಉತ್ತಮ ಸಮಯ. ಯಾವುದೇ ದೇವಾಲಯಗಳಾದರೂ ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ತೆರೆದಿರುತ್ತದೆ.
ಯಾಕೆಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವ ಯಾವುದೇ ಪೂಜೆಗಳಿಗೆ ಯಾವುದೇ ಶುಭ ಸಮಯ ನೋಡಬೇಕಾದ ಅವಶ್ಯಕತೆ ಇರುವುದಿಲ್ಲ. ಈ ಸಮಯದಲ್ಲಿ ಎಲ್ಲಾ ಶುಭ ಮುಹೂರ್ತವೇ ಆಗಿರುವುದರಿಂದ ದೇವರನ್ನು ಪೂಜೆ ಮಾಡುವುದಕ್ಕೆ ಈ ಸಮಯ ಒಳ್ಳೆಯದು ಮತ್ತು ಈ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಿದ ಪ್ರಾರ್ಥನೆ ಬಹಳ ಬೇಗ ದೇವರನ್ನು ತಲುಪುತ್ತದೆ ಎಂದು ಸಹ ಹೇಳಲಾಗುತ್ತದೆ.
ವ್ಯಾಪಾರ ವ್ಯವಹಾರ ಉದ್ಯಮದಲ್ಲಿ ಗೆದ್ದಿರುವವರನ್ನು ಅಥವಾ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ಗಳು ಅಥವಾ ಸಿನಿಮಾ ಸ್ಟಾರ್ಗಳನ್ನು ಕೂಡ ಕೇಳಿದರು ಅವರೆಲ್ಲ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಾರೆ. ಯಾಕೆಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಮ್ಮ ಇಚ್ಛೆಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಾಗ ಅದರಿಂದ ಯಶಸ್ಸು ಖಂಡಿತವಾಗಿ ದೊರೆಯುತ್ತದೆ.
ಯಾರು ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಾರೋ ಮತ್ತು ಎದ್ದು ಸಮಯ ವ್ಯರ್ಥ ಮಾಡದೆ ಅವರ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ಯೋಗ ವ್ಯಾಯಾಮ ದೇವರ ಧ್ಯಾನ ಮುಂತಾದ ಕಾರ್ಯಗಳಿಗೆ ಹೆಚ್ಚು ಸಮಯ ಮೀಸಲಿಡಲಾಗುತ್ತದ, ಆ ಕಾರಣದಿಂದಾಗಿ ಅವನ ಇಡೀ ದಿನ ಚೆನ್ನಾಗಿ ಇರುತ್ತದೆ.
ಪ್ರತಿದಿನ 8.00 ಗಂಟೆಗೆ ಏಳುತ್ತಿದ್ದ ವ್ಯಕ್ತಿ 5:00 ಗಂಟೆಗೆ ಏಳಲು ಶುರು ಮಾಡಿದರೆ ಒಂದು ದಿನದಲ್ಲಿ ಅವನು ಮೂರು ತಾಸು ಹೆಚ್ಚಿಗೆ ಪಡೆದಂತೆ ಹಾಗಾದರೆ ಒಂದು ತಿಂಗಳಿಗೆ 90 ದಿನಗಳನ್ನು ಹೆಚ್ಚಿಗೆ ಪಡೆದಂತೆ, ಒಂದು ತಿಂಗಳಲ್ಲಿ ನಾಲ್ಕರಿಂದ ಐದು ದಿನಗಳನ್ನು ಹೆಚ್ಚಿಗೆ ಪಡೆದಂತೆ ಇನ್ನು ವರ್ಷಕ್ಕೆ ಎರಡು ತಿಂಗಳಷ್ಟು ಸಮಯವನ್ನು ಹೆಚ್ಚಿಗೆ ಪಡೆದಂತೆ. ಈ ಕಾಲವನ್ನು ಸರಿಯಾಗಿ ವಿನಿಯೋಗಿಸಿಕೊಂಡರೆ ಖಂಡಿತವಾಗಿಯೂ ಆತನಿಗೆ ಸಮಯದ ಕೊರತೆ ಬರುವುದಿಲ್ಲ ಮತ್ತು ಆತ ಇಟ್ಟ ಗುರಿಯನ್ನು ಬಹಳ ಬೇಗ ತಲುಪುತ್ತಾನೆ.
ಈ ಸಮಯದಲ್ಲಿ ಏಳುವುದರಿಂದ ಸುತ್ತಮುತ್ತ ನಿಶಬ್ದವಾಗಿರುವುದರಿಂದ ಆಲೋಚನೆಗಳು ಸಕರಾತ್ಮಕವಾಗಿರುತ್ತದೆ ಇದರಿಂದ ಮಾನಸಿಕ ಒತ್ತಡಗಳು ಕೂಡ ಕಡಿಮೆ ಆಗುತ್ತದೆ. ನೀವು ಹೆಚ್ಚು ಲವಲವಿಕೆಯಿಂದ ಇರುತ್ತೀರಿ. ಈ ರೀತಿ ದೇಹ ಮನಸ್ಸು ಆರೋಗ್ಯದ ಕಡೆ ಕಾಳಜಿ ಇರುವವರು ಜೀವನದಲ್ಲಿ ಯಾವುದೇ ವಿಷಯದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವವರು ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು ಒಳ್ಳೆಯದು.