ಮನುಷ್ಯನ ಹಸ್ತ ರೇಖೆಗಳನ್ನು ನೋಡಿ ಶಾಸ್ತ್ರ ಹೇಳುವುದು ಒಂದು ಪ್ರಕಾರವಾದರೆ ಮನುಷ್ಯ ಹುಟ್ಟಿದ ದಿನಾಂಕವನ್ನು ನೋಡಿ ಸಂಖ್ಯಾಶಾಸ್ತ್ರ ಮೂಲಕ ಆತನ ವ್ಯಕ್ತಿತ್ವ ಹಾಗೂ ಹೋಗುಗಳ ಬಗ್ಗೆ ಹೇಳಲಾಗುತ್ತದೆ ಅದೇ ರೀತಿ ಹುಟ್ಟಿದ ದಿನಾಂಕ ನಕ್ಷತ್ರದ ಆಧಾರದ ಮೇಲೆ ಕೂಡ ಭವಿಷ್ಯವನ್ನು ಊಹೆ ಮಾಡಲಾಗುತ್ತದೆ.
ಇದೆಲ್ಲವನ್ನು ಮೀರಿ ಮತ್ತೊಂದು ಬಗೆಯ ಶಾಸ್ತ್ರ ಇದೆ. ಇದರಲ್ಲಿ ಮನುಷ್ಯನ ಆಕಾರ, ವಿಕಾರ ಆತನ ದೇಹದ ಅಂಗಗಳ ಲಕ್ಷಣಗಳ ಆಧಾರದ ಮೇಲೆ ಅವರ ಅದೃಷ್ಟ ಮತ್ತು ದುರಾದೃಷ್ಟವನ್ನು ಅಳೆಯಲಾಗುತ್ತದೆ ಇದನ್ನು ಸಾಮೂದ್ರಿಕ ಶಾಸ್ತ್ರ ಎಂದು ಹೇಳುತ್ತಾರೆ. ಮನುಷ್ಯನ ಮೈ ಮೇಲಿರುವ ಮಚ್ಚೆಗಳು ಅಥವಾ ಆತನ ಕೈಕಾಲುಗಳ ಲಕ್ಷಣಗಳು ಮುಖಲಕ್ಷಣ ಕೈ ಬೆರಳುಗಳು ಕೂದಲು ಇದೆಲ್ಲದರ ಆಧಾರದ ಮೇಲೆ ಭವಿಷ್ಯ ಹೇಳಲಾಗುತ್ತದೆ.
ಹಿಂದಿನ ಕಾಲದಲ್ಲಿ ಇದನ್ನು ಬಲವಾಗಿ ನಂಬಲಾಗುತ್ತಿತ್ತು, ಅದರಲ್ಲೂ ಹೆಣ್ಣು ಮಕ್ಕಳ ವಿಚಾರದಲ್ಲಿ ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಯಾಕೆಂದರೆ ಹೆಣ್ಣು ಮಗು ಎಂದರೆ ಒಂದು ಮನೆಯಲ್ಲಿ ಹುಟ್ಟಿ ಮತ್ತೊಂದು ಮನೆಯನ್ನು ಬೆಳಗುವ ಅದೃಷ್ಟ ಲಕ್ಷ್ಮಿ. ಹಾಗಾಗಿ ಈ ರೀತಿ ಅದೃಷ್ಟದ ಕಳೆಗಳನ್ನು ಹೊಂದಿರುವ ಹೆಣ್ಣು ಮಕ್ಕಳು ಸೊಸೆಯಾಗಿ ಬಂದರೆ ಆ ಮನೆ ಬೆಳಗುತ್ತದೆ ವಂಶದ ಕೀರ್ತಿ ಪಸರಿಸುತ್ತದೆ ಎಂದು ನಂಬಿಕೆ.
ಆ ಹೆಣ್ಣು ಮಗುವಿನ ಮುಖಲಕ್ಷಣ, ಧ್ವನಿ, ಕೈಕಾಲು, ಕಾಲು ಬೆರಳು, ನಡೆಯುವ ಲಕ್ಷಣ ನೋಡಿ ಹೆಣ್ಣನ್ನು ಆರಿಸುತ್ತಿದ್ದರು. ಈಗಿನ ಕಾಲದಲ್ಲಿ ಈ ರೀತಿ ಲೆಕ್ಕಾಚಾರ ಹಾಕುವವರ ಸಂಖ್ಯೆ ಕಡಿಮೆ ಆಗಿದ್ದರೂ ಕೂಡ ಸಾಮುದ್ರಿಕ ಶಾಸ್ತ್ರ ಸಂಪೂರ್ಣವಾಗಿ ಸುಳ್ಳಲ್ಲ ಇದನ್ನು ಪರೀಕ್ಷೆ ಮಾಡಲು ಈಗ ನಾವು ಹೇಳುವ ಈ ಒಂದು ವಿಚಾರವನ್ನು ಗಮನಿಸಿ ನೋಡಿ ಸಾಕು.
ಈ ಶಾಸ್ತ್ರ ಹೇಳುವ ಪ್ರಕಾರ ಹೆಣ್ಣು ಮಕ್ಕಳ ಕಾಲು ಬೆರಳಿನಲ್ಲಿ ಹೆಬ್ಬೆರಳಿಗಿಂತ ಪಕ್ಕದ ಬೆರಳು ಅಂದರೆ ಕಾಲುಂಗುರದ ಬೆರಳು ಯಾರಿಗೆ ಉದ್ದವಾಗಿರುತ್ತದೆ ಆ ಮಹಿಳೆಯರು ಬಹಳ ಧೈರ್ಯವಂತರು ಮತ್ತು ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಇವರಿಗೆ ಹಣಕಾಸಿನ ಕೊರತೆ ಬರುವುದಿಲ್ಲ ಅಥವಾ ಯಾವುದೇ ಏರುಪೇರು ಬಂದರು ಅದನ್ನೆಲ್ಲ ಮೆಟ್ಟಿ ನಿಲ್ಲುವಂತಹ ಬುದ್ಧಿಶಕ್ತಿ ಇವರಿಗೆ ಇರುತ್ತದೆ.
ಜ್ಞಾನದಲ್ಲಿ ತಿಳುವಳಿಕೆಯಲ್ಲಿ ಗುಣದಲ್ಲಿ ಮಾತುಕತೆಯಲ್ಲಿ ಇವರಿಗೆ ಇವರೇ ಸಾಟಿ. ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು ಕೂಡ ಯಾರ ಪ್ರಭಾವವೂ ಇವರ ಮೇಲೆ ಬೀಳುವುದಿಲ್ಲ. ಯಾಕೆಂದರೆ ಇವರು ಅದೇ ರೀತಿಯಾಗಿ ನೇರ ನುಡಿಯಲ್ಲಿ ಬದುಕಿರುತ್ತಾರೆ. ಇಂತಹ ಹೆಣ್ಣು ಮಗಳನ್ನು ಪತ್ನಿಯಾಗಿ ಪಡೆದ ಪತಿಯೇ ಪುಣ್ಯವಂತ. ಯಾಕೆಂದರೆ ಈಕೆ ಒಬ್ಬ ಪರಿಪೂರ್ಣ ಪತ್ನಿಯಾಗಿ ಸಂಸಾರವನ್ನು ಸರಿದಾರಿಯಾಗಿ ನಡೆಸಿಕೊಂಡು ಹೋಗುತ್ತಾರೆ.
ಇವರು ಕುಟುಂಬದ ಮೇಲೆ ಹೆಚ್ಚು ಕಾಳಜಿ ಹೊಂದಿರುತ್ತಾರೆ, ಪತಿ ಏಳಿಗೆ ಬಗ್ಗೆ ಮಕ್ಕಳನ್ನು ಸರಿಯಾಗಿ ಬೆಳೆಸುವುದರ ಬಗ್ಗೆ ಕುಟುಂಬದ ಗೌರವವನ್ನು ಕಾಪಾಡುವ ಬಗ್ಗೆ ಸದಾ ಎಚ್ಚರಿಕೆಯಿಂದ ಇರುತ್ತಾರೆ. ಯಾವ ಕೆಲಸ ಮಾಡಿದರೆ ಏನು ಪ್ರತಿಫಲ ಸಿಗುತ್ತದೆ ಎನ್ನುವ ಮುಂದಾಲೋಚನೆಯಿಂದ.
ನಿರ್ಧಾರ ಕೈಗೊಳ್ಳುವುದರಿಂದ ಜೀವನದಲ್ಲಿ ಬಹುತೇಕ ಸಮಸ್ಯೆಗಳು ಇವರಿಗೆ ಕಡಿಮೆ ಮತ್ತು ಸದಾ ಹೊಸತನಕ್ಕೆ ಹಾಗೂ ಒಳ್ಳೆಯದಕ್ಕೆ ದುಡಿಯುವ ಇವರ ಮನಸ್ಸು ಮನೆಯಲ್ಲಿ ಎಲ್ಲರನ್ನು ಚಟುವಟಿಕೆಯಿಂದ ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಇವರ ಅಣತಿಯಂತೆ ಪತಿ ಹಾಗೂ ಮಕ್ಕಳು ನಡೆದರೆ ಆ ಸಂಸಾರ ಆನಂದ ಸಾಗರವಾಗಿರುತ್ತದೆ.