ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೃಷ್ಣ ಸಿನಿಮಾ ಮಾಡುವಾಗ ಆದ ಅನುಭವಗಳ ಬಗ್ಗೆ ಹೇಳಿಕೊಂಡ ನಟಿ ಶರ್ಮಿಳಾ ಮಾಂಡ್ರೆ ಕಣ್ ಕಣ್ಣ ಸಲಿಗೆ, ನೀನು ಬಂದ ಮೇಲೆ ತಾನೆ ಇಷ್ಟು ಚೆಂದ ಈ ಬಾಳು, ಒಂದು ಸುಳ್ಳಾದರು ನುಡಿ ಹೆಣ್ಣೇ ಈ ಹಾಡುಗಳು ಕನ್ನಡದ ಎವರ್ಗ್ರೀನ್ ಹಾಡುಗಳು. ಈ ಹಾಡುಗಳು ಕೇಳುಗರನ್ನು ಮಾತ್ರವಲ್ಲದೆ ನೋಡುಗರನ್ನೂ ಕೂಡ ತನ್ನತ್ತ ಸೆಳೆಯುತ್ತದೆ. ಇದಕ್ಕೆ ಕಾರಣ ಅಪ್ಸರೆಯಂತೆ ಈ ಹಾಡುಗಳಲ್ಲಿ ಕಾಣಿಸಿಕೊಂಡಿರುವ ನಟಿ ಶರ್ಮಿಳಾ ಮಾಂಡ್ರೆ.
ಶರ್ಮಿಳಾ ಮಾಂಡ್ರೆ ಅವರು ಸುಮಾರು ಎರಡು ದಶಕಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯ ರಾಗಿದ್ದಾರೆ. ಇತ್ತೀಚೆಗೆ ಅವರ ಗಾಳಿಪಟ 2 ಸಿನಿಮಾ ಕೂಡ ಬಿಡುಗಡೆ ಆಗಿದೆ. ಈ ಸಮಯದಲ್ಲಿ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ಇವರು 16 ವರ್ಷದ ಹಿಂದೆ ಅವರು ಮಾಡಿದ ಕೃಷ್ಣ ಸಿನಿಮಾದ ಬಗ್ಗೆ ಹಾಗೂ ಆ ಸಮಯದಲ್ಲಿ ಆದ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸಜನಿ ಸಿನಿಮಾ ನನ್ನ ಮೊದಲ ಸಿನಿಮಾ, ಮ್ಯೂಸಿಕಲ್ ಆಗಿ ಸಿನಿಮಾ ಹೆಸರು ಮಾಡಿದರೂ ನಾವಂದು ಕೊಂಡ ದೊಡ್ಡ ಹಿಟ್ ಪಡೆಯಲಿಲ್ಲ. ಆದರೂ ನನ್ನನ್ನು ಸಾಕಷ್ಟು ಜನ ಗುರುತಿಸಿದರು. ನನಗೆ ಮುಂದಿನ ಅವಕಾಶಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು, ಆ ಸಮಯದಲ್ಲಿ ಕೃಷ್ಣ ಸಿನಿಮಾದ ನಿರ್ಮಾಪಕರಾದ ರಮೇಶ್ ಯಾದವ್ ಮತ್ತು ನಿರ್ದೇಶಕರಾದ ಶ್ರೀಧರ್ ಅವರು ನನ್ನನ್ನು ಭೇಟಿಯಾದರು. ನಮ್ಮ ಮನೆಯಲ್ಲಿ ಸಜನಿ ಸಿನಿಮಾದಲ್ಲಿ ಲಂಡನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಿಯಾ ಕೃಷ್ಣ ಸಿನಿಮಾದ ಪಾತ್ರ ಹಳ್ಳಿ ಹುಡುಗಿ ಪಾತ್ರ ನಿನ್ನಿಂದ ಆಗುತ್ತದೆಯಾ ಎಂದು ಹೇಳುತ್ತಿದ್ದರು.
ಆದರೂ ಕೂಡ ನಿರ್ದೇಶಕರು ಇಲ್ಲ ಇವರಿಗೆ ಆ ಸ್ಕಿಲ್ ಇದೆ, ಖಂಡಿತ ಈ ಪಾತ್ರ ಹಿಟ್ ಆಗುತ್ತದೆ ಎಂದು ಭರವಸೆ ತುಂಬಿಸಿ ನನ್ನನ್ನು ಆ ಪಾತ್ರಕ್ಕೆ ಹಾಕಿಕೊಂಡರು. ಅಂದುಕೊಂಡ ರೀತಿಯೇ ಕೃಷ್ಣ ಸಿನಿಮಾ ನನಗೆ ಒಳ್ಳೆ ಹೆಸರು ತಂದು ಕೊಟ್ಟಿತು. ನಾನು ಬೆಂಗಳೂರಿನಲ್ಲಿಯೇ ಬೆಳೆದಿದ್ದರಿಂದ ಹಳ್ಳಿಗಳ ಬಗ್ಗೆ ಹಳ್ಳಿಯಲ್ಲೇ ಇದ್ದು ವಾಸವಿದ್ದ ಬಗ್ಗೆ ಗೊತ್ತಿರಲಿಲ್ಲ. ಹಳ್ಳಿ ಎಂದರೆ ಯಾವಾಗಾದರೂ ಮೈಸೂರಿಗೆ ಅಥವಾ ಕೂರ್ಗ್ ಗೆ ಹೋಗಿ ಬರುತ್ತಿದ್ದ ನೆನಪು ಇರುತ್ತಿತ್ತು.
ಆದರೆ ಕೃಷ್ಣ ಸಿನಿಮಾದಲ್ಲಿ ನಟಿಸುವಾಗ ಹಳ್ಳಿಯಲ್ಲಿ ಬದುಕಿದ ಅನುಭವ ಸಿಕ್ಕಿತ್ತು. ಹಳ್ಳಿ ಸನ್ನಿವೇಶದ ಚಿತ್ರೀಕರಣ ನಡೆಯುವಾಗ ನಾವು ಚಿತ್ರದುರ್ಗದಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಆ ಸಮಯದಲ್ಲಿ ಅಲ್ಲಿ ಹೆಸರಾಂತ ಹೋಟೆಲ್ ಗಳು ಇರಲಿಲ್ಲ ಒಂದು ಗೆಸ್ಟ್ ಹೌಸ್ ಇಲ್ಲಿ ನಾವೆಲ್ಲಾ ಇದ್ದೆವು. ಅಲ್ಲಿ ಬಿಸಿ ನೀರಿನ ವ್ಯವಸ್ಥೆ ಕೂಡ ಇರಲಿಲ್ಲ, ಎಲ್ಲೋ ಕಾಯಿಸಿ ಬಕೆಟ್ಗಳಲ್ಲಿ ತುಂಬಿಸಿ ತಂದುಕೊಡುತ್ತಿದ್ದರು. ಅಕ್ಷರಶಃ ನಾವು 30 ದಿನಗಳ ಶೂಟಿಂಗ್ ಅಲ್ಲಿ 30 ದಿನಗಳು ಹಳ್ಳಿಗರ ರೀತಿಯೇ ಬದುಕಿದೆವು.
ನನ್ನ ಜೀವನ ಪೂರ್ತಿ ಆ ಸವಿ ನೆನಪು ಇರುತ್ತದೆ. ಈಗ ವ್ಯಾನಿಟಿ ಬ್ಯಾಗ್ ಇರುತ್ತದೆ ಆದರೆ ಕೃಷ್ಣ ಸಿನಿಮಾದ ಸಮಯದಲ್ಲಿ ಬೆಟ್ಟದ ಮೇಲೆಲ್ಲಾ ಶೂಟಿಂಗ್ ಮಾಡುವಾಗ ನಾವು ಡ್ರೆಸ್ ಚೇಂಜ್ ಮಾಡಬೇಕು ಎಂದರೆ ದೂರದಲ್ಲಿ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡು ಬರುತ್ತಿದ್ದೆವು. ಎಲ್ಲವೂ ಅಷ್ಟು ಸರಳವಾಗಿತ್ತು. ನೆಟ್ ವರ್ಕ್ ಇರುತ್ತಿರಲಿಲ್ಲ, ಆಂಡ್ರಾಯ್ಡ್ ಫೋನ್ ಇರಲಿಲ್ಲ, ಸೋಶಿಯಲ್ ಮೀಡಿಯಾ ಇರಲಿಲ್ಲ ಆ ಕಾರಣಕ್ಕಾಗಿ ಆಕ್ಟಿಂಗ್ ಅಲ್ಲಿ ಇನ್ನೂ ಚೆನ್ನಾಗಿ ನಾವು ಇನ್ವೋಲ್ ಆಗಿರುತ್ತಿದ್ದೆವು. ಈಗ ಆಶ್ಚರ್ಯ ಆಗುವಷ್ಟು ಎಲ್ಲವೂ ಬದಲಾಗಿ ಹೋಗಿದೆ, ಎಂದು ತಮ್ಮ ಆ ದಿನಗಳನ್ನು ನೆನೆದು ಹೇಳಿಕೊಂಡಿದ್ದಾರೆ.