ಶಿವರಾಜಕುಮಾರ್ ಅವರು 2007ರಲ್ಲಿ ಹೊಸದಾಗಿ ಒಂದು ಮನೆಯನ್ನು ಕಟ್ಟಿಸುತ್ತಾರೆ ಇದೇ ಮೊಟ್ಟಮೊದಲ ಬಾರಿಗೆ ಡಾಕ್ಟರ್ ರಾಜಕುಮಾರ್ ಕುಟುಂಬದಲ್ಲಿ ಮನೆ ಕಟ್ಟಿಸಿದಂತವರು. ಏಕೆಂದರೆ ಈಗಾಗಲೇ ಡಾಕ್ಟರ್ ರಾಜಕುಮಾರ್ ಅವರು ಹಲವಾರು ಮನೆಯನ್ನು ಖರೀದಿ ಮಾಡಿದ್ದಾರೆ ಆದರೆ ಸ್ವಂತವಾಗಿ ಯಾವ ಮನೆಯೂ ಕೂಡ ಕಟ್ಟಿರಲಿಲ್ಲ. ಹಾಗಾಗಿ 2007ನೇ ಇಸ್ವಿಯಲ್ಲಿ ಶಿವಣ್ಣ ಅವರು ಮನೆ ಕಟ್ಟಿದ್ದ ಹೆಗ್ಗಳಿಕೆ ಕೀರ್ತಿ ಇವರಿಗೆ ಸಲ್ಲುತ್ತದೆ ಈ ಮನೆಗೆ ಸುಮಾರು ಒಂದುವರೆ ಎಕರೆ ಎಷ್ಟು ವಿಸ್ತೀರ್ಣವನ್ನು ಹೊಂದಿದೆ. ತಮ್ಮ ಅಭಿರುಚಿಗೆ ತಕ್ಕಂತೆ ಡಾಕ್ಟರ್ ಶಿವರಾಜ್ ಕುಮಾರ್ ಅವರು ಈ ಮನೆಯನ್ನು ಕಟ್ಟಿದ್ದಾರೆ. ಇದಕ್ಕೂ ಮೊದಲು ಸದಾಶಿವನಗರದಲ್ಲಿ ಇರುವಂತಹ ದೊಡ್ಡ ಮನೆಯಲ್ಲಿಯೇ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಶಿವಣ್ಣ ಅವರು ಮೂರು ಜನ ಒಟ್ಟಾಗಿ ಇದ್ದರು ಆದರೆ.
ಶಿವಣ್ಣ ಅವರಿಗೆ ಅವರ ಮಾವ ಆದಂತಹ ಬಂಗಾರಪ್ಪನವರು ಕತ್ತರಗುಪ್ಪೆ ಸಮೀಪದಲ್ಲಿ ಒಂದು ಸೈಟನ್ನು ನೀಡುತ್ತಾರೆ ಪಾರ್ವತಮ್ಮ ಮತ್ತು ಡಾಕ್ಟರ್ ರಾಜಕುಮಾರ್ ಅವರ ಅಪ್ಪಣೆಯನ್ನು ಪಡೆದ ನಂತರ ಈ ಜಾಗದಲ್ಲಿ ಮನೆಯನ್ನು ಕಟ್ಟಲು ಮುಂದಾಗುತ್ತಾರೆ. ಹಾಗಾಗಿ ಶಿವಣ್ಣ ಅವರು ಅದ್ದೂರಿ ಮನೆಯನ್ನು ಕಟ್ಟಿ ಆ ಮನೆಯ ಗೃಹಪ್ರವೇಶ ಕಾರ್ಯವನ್ನು ನೆರವೇರಿಸುತ್ತಾರೆ. ಈ ಮನೆಗೆ ಶ್ರೀ ಮುತ್ತು ಎಂಬ ಹೆಸರನ್ನು ಕೂಡ ನಾಮಕರಣ ಮಾಡುತ್ತಾರೆ ಇದು ಡಾಕ್ಟರ್ ರಾಜಕುಮಾರ್ ಅವರ ಮೊದಲ ಹೆಸರು. ಈ ಮನೆಯ ಗೃಹಪ್ರವೇಶ ಕಾರ್ಯಕ್ಕೆ ರಾಜ್ ಕುಮಾರ್ ಕುಟುಂಬದವರು ಸೇರಿದಂತೆ ಹಲವಾರು ಗಣ್ಯಾದಿ ಗಣ್ಯರು ಭಾಗವಹಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಹೊಸ ಮನೆಗೆ ಹೋದ ನಂತರ 2009 ನೇ ಇಸ್ವಿಯಲ್ಲಿ ಸದಾಶಿವನಗರದಲ್ಲಿ ಇದ್ದಂತಹ ಡಾಕ್ಟರ್ ರಾಜಕುಮಾರ್ ಅವರ ಮನೆಯನ್ನು ಡೆಮಾಲಿಶ್ ಮಾಡಿಸಲಾಗುತ್ತದೆ.
ತದನಂತರ ಅದೇ ಜಾಗದಲ್ಲಿ ಎರಡು ಭವ್ಯ ಬಂಗಲೆಯನ್ನು ಕಟ್ಟಲಾಗುತ್ತದೆ ಒಂದರಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಮತ್ತೊಂದರಲ್ಲಿ ಪುನೀತ್ ರಾಜಕುಮಾರ್ ಅವರು ಸದ್ಯಕ್ಕೆ ವಾಸ ಮಾಡುತ್ತಿದ್ದಾರೆ. ಈ ಮನೆ ಇಟಾಲಿಕ್ ಸ್ಟೈಲ್ ನಲ್ಲಿ ಇದ್ದು ಬಹಳ ಮನಮೋಹಕವಾಗಿ ವಿನ್ಯಾಸ ಮಾಡಲಿದೆ ಶಿವರಾಜ್ ಕುಮಾರ್ ಅವರು ಸ್ವಲ್ಪ ದೂರ ಉಳಿದಿದ್ದಾರೆ. ಆದರೆ ಪುನೀತ್ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಇಬ್ಬರೂ ಕೂಡ ಒಂದೇ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ಪಾರ್ವತಮ್ಮನವರು ರಾಘವೇಂದ್ರ ರಾಜಕುಮಾರ್ ಅವರ ಬಳಿ ಮನವಿ ಮಾಡಿಕೊಂಡಿದ್ದರಂತೆ. ಯಾವುದೇ ಕಾರಣಕ್ಕೂ ಕೂಡ ನೀನು ಅಪ್ಪು ಅನ್ನು ಬಿಟ್ಟು ಬೇರೆ ಹೋಗಬಾರದು ಅಂತ ಇದೇ ಕಾರಣಕ್ಕಾಗಿ ಒಂದೇ ಜಾಗದಲ್ಲಿ ಎರಡು ಮನೆಯನ್ನು ಕಟ್ಟಿದ್ದಾರಂತೆ.
ಇನ್ನು ಶಿವರಾಜ್ ಕುಮಾರ್ ಅವರು ಹೊಸ ಮನೆಯನ್ನು ಕಟ್ಟಿದಾಗ ಆ ಎಲ್ಲಾ ಕೆಲಸವನ್ನು ಅಪ್ಪು ಅವರೇ ನೋಡಿಕೊಂಡಿದ್ದರಂತೆ ಅಪ್ಪು ಅವರ ಹೊಸ ಮನೆಯ ಗೃಹಪ್ರವೇಶದ ಕಾರ್ಯದಲ್ಲೂ ಕೂಡ ಮುಂದೆ ನಿಂತುಕೊಂಡು ಎಲ್ಲವನ್ನು ಕೂಡ ನಡೆಸಿಕೊಟ್ಟದ್ದು ನಮ್ಮ ಅಪ್ಪು. ಎಲ್ಲರೂ ಕೂಡ ಸಂಭ್ರಮಾಚರಣೆಯಿಂದ ಮಿಂಚುತ್ತಿದ್ದರೆ ನಮ್ಮ ಅಪ್ಪು ಮಾತ್ರ ಸರಳತೆಯಿಂದ ಬಂದವರನ್ನು ಹೋದವರನ್ನು ಗಮನಿಸಿಕೊಳ್ಳುತ್ತಿದ್ದಾರೆ. ಈ ಸರಳತೆಯ ಸಾಹುಕಾರನಿಗೆ ನಾವೆಲ್ಲರೂ ಒಂದು ಸಲಾಂ ಹೊಡೆಯಲೇಬೇಕು ಈತ ಕೇವಲ ಸಮಾಜ ಸೇವೆ ಮಾಡಿಲ್ಲ ಸಿನಿಮಾಗಳನ್ನು ಮಾತ್ರ ಮಾಡಿಲ್ಲ ಇದರ ಹೊರತಾಗಿ ಕುಟುಂಬಕ್ಕೆ ಒಳ್ಳೆಯ ಆತ್ಮೀಯ ಸದಸ್ಯನಾಗಿ ತನ್ನ ಜವಾಬ್ದಾರಿಯನ್ನು ಹೆಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಧ್ಯಕ್ಕೆ ಶಿವಣ್ಣ ಅವರ ಮನೆಯ ಗೃಹಪ್ರವೇಶ ಕಾರ್ಯದಲ್ಲಿ ಪುನೀತ್ ಅವರು ಇದ್ದಂತಹ ಈ ಸರಳತೆಯ ವಿಡಿಯೋ ನೋಡಿದರೆ ಎಂತವರಾದರೂ ಕೂಡ ಮೆಚ್ಚಿಕೊಳ್ಳುತ್ತಾರೆ. ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಹಾಗೂ ಈ ಮಾಹಿತಿಯನ್ನು ಲೈಕ್ ಕೊಟ್ಟು ಶೇರ್ ಮಾಡಿ ಧನ್ಯವಾದಗಳು ಸ್ನೇಹಿತರೆ.