ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬಾಳೆಹಣ್ಣನ್ನು ಸದಾ ಕಾಲ ತರುತ್ತೇವೆ ಆದರೆ ಅದನ್ನು ಹೆಚ್ಚಿನ ದಿನಗಳ ಕಾಲ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕೆಲವೊಂದಷ್ಟು ಜನ ದಿನ ಅಂಗಡಿಗಳಿಂದ ಖರೀದಿ ಮಾಡಿ ತರುತ್ತಾರೆ. ಆದರೆ ಪ್ರತಿನಿತ್ಯ ಅಂಗಡಿಗೆ ಹೋಗಿ ಬಾಳೆ ಹಣ್ಣನ್ನು ತರಬೇಕು ಎಂದು ಕೆಲವೊಂದಷ್ಟು ಜನ ಹೋಗುವುದೇ ಇಲ್ಲ.
ಆದರೆ ಇನ್ನು ಮುಂದೆ ಪ್ರತಿನಿತ್ಯ ಬಾಳೆಹಣ್ಣನ್ನು ತರುವಂತಹ ಅವಶ್ಯಕತೆ ಇರುವುದಿಲ್ಲ. ಒಮ್ಮೆಲೆ 1 ಕೆಜಿ 2 ಕೆಜಿ ತಂದರೆ ಅದನ್ನು 15 ರಿಂದ 20 ದಿನಗಳವರೆಗೆ ಹಾಳಾಗದಂತೆ ಫ್ರೆಶ್ ಆಗಿ ಇಡಬಹುದು. ಹೌದು ಈಗ ನಾವು ಹೇಳುವಂತಹ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರ ಮೂಲಕ.
ನೀವು ಬಾಳೆಹಣ್ಣನ್ನು ಸರಿ ಸುಮಾರು 15 ರಿಂದ 20 ದಿನಗಳವರೆಗೆ ಇಡಬಹುದಾಗಿದೆ. ಸಾಮಾನ್ಯವಾಗಿ ಕೆಲವೊಂದಷ್ಟು ಮನೆಗಳಲ್ಲಿ ಬಾಳೆಹಣ್ಣು ಹಾಳಾಗುತ್ತದೆ ಎನ್ನುವ ಉದ್ದೇಶದಿಂದ ಹಣ್ಣಿನ ರಸಾಯನ ವನ್ನು ಹಾಗೂ ಕೆಲವೊಂದು ಪದಾರ್ಥಗಳನ್ನು ಮಾಡುವುದರ ಮೂಲಕ ಅದನ್ನು ಬೇಗ ಖಾಲಿ ಮಾಡುತ್ತಾರೆ.
ಆದರೆ ಇನ್ನು ಮುಂದೆ ಇಂತಹ ವಿಧಾನಗಳನ್ನು ಅನುಸರಿಸುವ ಅವಶ್ಯಕತೆ ಇರುವುದಿಲ್ಲ ಹೌದು. ಬಾಳೆಹಣ್ಣನ್ನು 15 ರಿಂದ 20 ದಿನಗಳವರೆಗೆ ಇಟ್ಟುಕೊಂಡು ನೀವು ಸೇವನೆ ಮಾಡಬಹುದು. ಹಾಗಾದರೆ ಆ ಟಿಪ್ಸ್ ಗಳು ಯಾವುದು ಹಾಗೂ ಅದನ್ನು ಯಾವ ವಿಧಾನದಲ್ಲಿ ಅನುಸರಿಸುವುದರ ಮೂಲಕ ಹಾಗೂ ಫ್ರಿಡ್ಜ್ ನಲ್ಲಿ ಯಾವ ರೀತಿಯಾಗಿ ಇಡುವುದರ ಮೂಲಕ ಅದನ್ನು ಹೆಚ್ಚು ದಿನಗಳವರೆಗೆ ಇಡಬಹುದು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
* ಸಾಮಾನ್ಯವಾಗಿ ಪ್ರತಿಯೊಬ್ಬರು ಗಮನಿಸಬೇಕಾದಂತಹ ಅಂಶ ಏನು ಎಂದರೆ ನೀವು ಬಾಳೆಹಣ್ಣನ್ನು ಕೊಳ್ಳುವುದಕ್ಕೂ ಮುಂಚೆ ಬಾಳೆ ಹಣ್ಣಿನ ತೊಟ್ಟು ಹಸಿರಾಗಿರುವುದನ್ನು ನೋಡಿ ಅವುಗಳನ್ನು ಖರೀದಿ ಮಾಡಿ ಇವುಗಳನ್ನು ಹೆಚ್ಚು ದಿನಗಳವರೆಗೆ ಇಟ್ಟುಕೊಳ್ಳಬಹುದು ಹಾಗೂ ಇದು ಬೇಗ ಹಾಳಾಗುವುದಿಲ್ಲ.
* ಒಂದು ಅಗಲವಾದ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಇಟ್ಟು ಬಾಳೆಹಣ್ಣಿನ ತೊಟ್ಟನ್ನು ನೀರಿನಲ್ಲಿ ಸೋಕುವ ಹಾಗೆ ಇಡಬೇಕು. ಈ ರೀತಿ ಇಡುವುದ ರಿಂದ ಬಾಳೆಹಣ್ಣನ್ನು ಹೆಚ್ಚು ದಿನಗಳವರೆಗೆ ಇಟ್ಟುಕೊಳ್ಳಬಹುದು.
* ಫ್ರಿಡ್ಜ್ ನಲ್ಲಿ ಬಾಳೆಹಣ್ಣನ್ನು ಇಡುತ್ತಿದ್ದರೆ ಒಂದು ಪೇಪರ್ ಕವರ್ ನಲ್ಲಿ ಬಾಳೆಹಣ್ಣು ಹಾಗೂ ಕೆಲವೊಂದಷ್ಟು ಹಣ್ಣುಗಳು ಹಾಗೂ ನಿಂಬೆಹಣ್ಣು ಇವುಗಳನ್ನು ಹಾಕುವುದರಿಂದ ಬಾಳೆಹಣ್ಣು ಬೇಗ ಹಣ್ಣಾಗುವುದಿಲ್ಲ ಹಾಗೂ ಹೆಚ್ಚು ದಿನಗಳವರೆಗೆ ಇರುತ್ತದೆ.
* ಸಾಮಾನ್ಯವಾಗಿ ಈ ಮಾಹಿತಿ ಎಲ್ಲರಿಗೂ ತಿಳಿದಿರುತ್ತದೆ ಎಂದೇ ಹೇಳ ಬಹುದು ಅದೇನೆಂದರೆ ಬಾಳೆಹಣ್ಣನ್ನು ಒಂದು ದಾರದ ಸಹಾಯದಿಂದ. ಕಟ್ಟಿ ಅದನ್ನು ಒಂದು ನೇತು ಹಾಕುವುದರಿಂದ ಬಾಳೆಹಣ್ಣು ಬೇಗ ಹಣ್ಣಾಗುವುದಿಲ್ಲ ಹಾಗೂ ಹೆಚ್ಚು ದಿನಗಳವರೆಗೆ ಬರುತ್ತದೆ.
* ಬಾಳೆಹಣ್ಣಿನ ತೊಟ್ಟಿಗೆ ಅಲ್ಯೂಮಿನಿಯಂ ಫಾಯಿಲ್ ಪೇಪರ್ ಅನ್ನು ಸುತ್ತಿರಬೇಕು ಈ ಪೇಪರ್ ಇಲ್ಲದವರು ಪ್ಲಾಸ್ಟಿಕ್ ಕವರ್ ಅನ್ನು ಸುತ್ತಿ ಫ್ರಿಡ್ಜ್ ನಲ್ಲಿ ಇಡುವುದರಿಂದ ಬಾಳೆಹಣ್ಣು ಬೇಗ ಹಣ್ಣಾಗುವುದಿಲ್ಲ ಹಾಗೂ ಹೆಚ್ಚು ದಿನಗಳವರೆಗೆ ಚೆನ್ನಾಗಿರುತ್ತದೆ.
* ಫ್ರಿಡ್ಜ್ ಇಲ್ಲದೆ ಇರುವವರು ಒಂದು ಕಾಟನ್ ಬಟ್ಟೆಯನ್ನು ಸ್ವಲ್ಪ ತೇವ ಮಾಡಿ ಗಾಳಿ ಆಡುವ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಹಾಕಿ ಒಳಗಡೆ ಬಾಳೆಹಣ್ಣನ್ನು ಇಟ್ಟು ತೇವದ ಬಟ್ಟೆಯಿಂದ ಮುಚ್ಚಿಡುವುದ ರಿಂದ ಬಾಳೆಹಣ್ಣು 10 ರಿಂದ 15 ದಿನಗಳವರೆಗೆ ಇರುತ್ತದೆ. ಈ ರೀತಿ ಮಾಡುವುದರಿಂದಲೂ ಕೂಡ ಬಾಳೆಹಣ್ಣು ಹೆಚ್ಚು ಹಾಳಾಗುವುದಿಲ್ಲ.