ನಮ್ಮ ಬಳಿ ಹಣವಿದ್ದಾಗ ನಮ್ಮ ಸ್ನೇಹಿತರು ಬಂಧುಗಳು ಪರಿಚಯಸ್ಥರು ಸಾಲ ಕೇಳುತ್ತಾರೆ ಅವರ ಕಷ್ಟವನ್ನು ನೋಡಲಾಗದೆ ನಾವು ನಮ್ಮ ಕೈಲಾದಷ್ಟು ಹಣ ಸಹಾಯ ಮಾಡಿರುತ್ತೇವೆ ಆದರೆ ಅವರು ವಾಪಸ್ಸು ಕೊಡುತ್ತೇನೆ ಎಂದು ಹೇಳಿದ ಸಮಯದ ಎರಡರಷ್ಟಾದರೂ ಕೆಲವೊಮ್ಮೆ ಅವರು ಮಾತಿಗೆ ತಕ್ಕ ಹಾಗೆ ನಡೆದುಕೊಳ್ಳುವುದಿಲ್ಲ.
ಸಣ್ಣಪುಟ್ಟ ಹಣವಾಗಿದ್ದರೆ ಸುಮ್ಮನೆ ಆಗಬಹುದು ಆದರೆ ದೊಡ್ಡ ಮೊತ್ತದ ಹಣ ಕೊಟ್ಟು ಬಿಡುತ್ತೇವೆ ಮತ್ತು ನಾವು ಅದನ್ನು ನಮ್ಮ ಜೀವನದ ಯಾವುದೋ ಒಂದು ಮುಖ್ಯ ಉದ್ದೇಶಕ್ಕಾಗಿ ಇಟ್ಟುಕೊಂಡಿರುತ್ತೇವೆ. ಹೀಗೆ ನಾವು ಕಷ್ಟಪಟ್ಟು ದುಡಿದಿಟ್ಟಿದ್ದ ಹಣವನ್ನು ಹಾಗೆ ಬಿಡಲು ಮನಸ್ಸು ಇರುವುದಿಲ್ಲ ಆಗ ನೀವು ಕೊಟ್ಟ ಹಣ ಒಳ್ಳೆಯ ರೀತಿಯಲ್ಲಿ ನಿಮಗೆ ಆದಷ್ಟು ಬೇಗ ಬಂದು ಸೇರಬೇಕು ಎಂದರೆ ನಾವು ಹೇಳುವ ಈ ಸರಳ ವಿಧಾನದಲ್ಲಿ ಒಂದು ಚಿಕ್ಕ ಉಪಾಯ ಮಾಡಿ ಸಾಕು.
ಈ ಆಚರಣೆಯನ್ನು ಬುಧವಾರದ ದಿನ ರಾತ್ರಿ ಹೊತ್ತು ಅಡುಗೆ ಮನೆಯಲ್ಲಿ ಮಾಡಬೇಕು. ಅಡುಗೆ ಮನೆಯಲ್ಲಿ ಮಾಡಬೇಕಾದ ಕಾರಣ ಅಡುಗೆ ಮನೆ ಕ್ಲೀನ್ ಆಗಿರಬೇಕಾದದ್ದು ಅಷ್ಟೇ ಮುಖ್ಯ. ರಾತ್ರಿ ಊಟ ಆದ ಮೇಲೆ ಅಡುಗೆಮನೆಯನ್ನು ಸ್ವಚ್ಛಗೊಳಿಸಿ ಅಡುಗೆ ಮಾಡಿದ ಪಾತ್ರೆಗಳು ಹಾಗೂ ಊಟ ಮಾಡಿದ ಪಾತ್ರೆಗಳನ್ನು ತೊಳೆದು ಇಡಬೇಕು.
ಈ ಸುದ್ದಿ ಓದಿ:- ಮಹಿಳೆಯರಿಗೆ ಸಿಹಿ ಸುದ್ದಿ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಕೇವಲ ರೂ.100 ಮಾತ್ರ.!
ಈ ಪೂಜೆ ಮಾಡುವ ದಿನ ಮಾತ್ರ ಅಲ್ಲದೆ ಪ್ರತಿದಿನವೂ ಕೂಡ ಊಟ ಮಾಡಿದ ಪಾತ್ರೆಗಳನ್ನು ತೊಳೆದು ಇಟ್ಟೇ ಮಲಗಬೇಕು ಆಗ ಹಣಕಾಸಿನ ಸಮಸ್ಯೆಗಳು ಉಂಟಾಗುವುದಿಲ್ಲ. ಯಾಕೆಂದರೆ ಅಡುಗೆಮನೆ ಸ್ವಚ್ಛವಾಗಿದ್ದರೆ ರಾತ್ರಿ ಹೊತ್ತು ಲಕ್ಷ್ಮಿ ದೇವಿಯು ಸಂಚಾರಕ್ಕೆ ಬಂದಾಗ ಆ ಮನೆಯ ಶುದ್ಧತೆ ಹಾಗೂ ಸ್ವಚ್ಛತೆ ನೋಡಿ ಆಶೀರ್ವದಿಸಿ ಹೋಗುತ್ತಾರೆ ಈ ರೀತಿ ಆಶೀರ್ವಾದ ಪಡೆದ ಮನೆಗಳಲ್ಲಿ ಧನ ಹಾಗೂ ಧಾನ್ಯಕ್ಕೆ ಕೊರತೆ ಇರುವುದಿಲ್ಲ ಎಂದು ನಂಬಲಾಗುತ್ತದೆ.
ಹೀಗೆ ಅಡುಗೆ ಮನೆ ಶುದ್ಧ ಮಾಡಿಕೊಂಡ ಮೇಲೆ ಗೋಧಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿಣ ಪುಡಿ ಮಿಕ್ಸ್ ಮಾಡಿ ದೀಪದ ರೀತಿ ಮಾಡಿಕೊಳ್ಳಬೇಕು. ಈ ಗೋಧಿ ಹಿಟ್ಟಿನ ದೀಪಕ್ಕೆ ಸಾಸಿವೆ ಎಣ್ಣೆಯನ್ನು ಹಾಕಬೇಕು ಮತ್ತು ಈ ದೀಪವನ್ನು ತಾಯಿ ಮಹಾಲಕ್ಷ್ಮಿ ಸ್ವರೂಪ ಎಂದುಕೊಂಡು ಅರಿಶಿಣ ಕುಂಕುಮ ಹೂಗಳಿಂದ ಅಲಂಕರಿಸಬೇಕು.
ಮತ್ತು ಈ ದೀಪಕ್ಕೆ ಸಾಸಿವೆ ಎಣ್ಣೆಯನ್ನು ಹಾಕಬೇಕು ನೆನಪಿರಲಿ ಶುದ್ಧವಾದ ಸಾಸಿವೆ ಎಣ್ಣೆ ಬಿಟ್ಟು ಬೇರೆ ಯಾವುದೇ ಎಣ್ಣೆಯನ್ನು ಹಾಕಬಾರದು. ನಂತರ ಹತ್ತಿಯನ್ನು ಇಟ್ಟು ಅಡುಗೆ ಮನೆ ಮಸಾಲೆ ಡಬ್ಬಿಯಲ್ಲಿರುವ ಐದು ಲವಂಗಗಳನ್ನು ತೆಗೆದುಕೊಂಡು ಇದಕ್ಕೆ ಹಾಕಿ. ನೀವು ತೆಗೆದುಕೊಳ್ಳುವ ಲವಂಗವು ಚೆನ್ನಾಗಿರಬೇಕು, ಮುರಿದಿರಬಾರದು ಹುಳುಕಾಗಿರುವ ಲವಂಗಗಳನ್ನು ತೆಗೆದುಕೊಳ್ಳಬೇಡಿ.
ಈ ಸುದ್ದಿ ಓದಿ:-ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!
ಈಗ ದೀಪ ಹಚ್ಚಿ ತಾಯಿ ಮಹಾಲಕ್ಷ್ಮಿಯನ್ನು ನಿಮ್ಮ ಹಣಕಾಸಿನ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳಿ ಮತ್ತು ನೀವು ಯಾರಿಗೆ ಹಣ ನೀಡುತ್ತರೋ ಅವರಿಗೆ ಒಳ್ಳೆಯ ಬುದ್ದಿ ಕೊಟ್ಟು ಅವರೇ ಬಂದು ಹಣ ವಾಪಸ್ ಕೊಡುವಂತೆ ಮಾಡಿ ಎಂದು ಪ್ರಾರ್ಥಿಸಿಕೊಳ್ಳಿ ಕೊನೆಗೆ ಒಂದು ಶಕ್ತಿಶಾಲಿ ಮಂತ್ರವನ್ನು 11 ಬಾರಿ ಪಠಿಸಬೇಕು.
ಇದಾದ ಮೇಲೆ ದೀಪವನ್ನು ತಿರುಗಿ ನೋಡದೆ ಬಂದು ಮಲಗಬೇಕು ನೀವು ಇಡುವಾಗಲೇ ಗ್ಯಾಸ್ ಬಳಿ ಆಗಲಿ ಕಿಟಕಿ ಬಳಿ ಆಗಲಿ ಅಪಾಯದ ಸ್ಥಳದಲ್ಲಿ ಇಡಬಾರದು. ಹುಷಾರಾಗಿ ತೊಂದರೆ ಇಲ್ಲದ ಸ್ಥಳದಲ್ಲಿ ಇಟ್ಟು ಸುಮ್ಮನಾಗಬೇಕು, ಮರು ದಿನ ಬೆಳಿಗ್ಗೆ ಎದ್ದ ಮೇಲೆ ದೀಪ ರಾತ್ರಿಯೆಲ್ಲ ಉರಿದು ಉಳಿದ ಭತ್ತಿ ಹಾಗೂ ಲವಂಗ ಮಾತ್ರ ಅಲ್ಲಿ ಉಳಿದಿರುತ್ತದೆ.
ಇದನ್ನು ತೆಗೆದುಕೊಂಡು ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು ಅಥವಾ ಯಾರು ತುಳಿಯದ ಸ್ಥಳದಲ್ಲಿ ಹಾಕಬೇಕು ಅಥವಾ ಹರಿಯುವ ನೀರಿನಲ್ಲಿ ಬಿಟ್ಟರೆ ಇನ್ನು ಶ್ರೇಷ್ಠ. ಹೀಗೆ ಮಾಡಿದರೆ ಕೆಲವರಿಗೆ ಈ ರೀತಿ ಒಂದು ದಿನ ಮಾಡಿದರೆ ಅವರು ಕೊಟ್ಟಿದ್ದ ಹಣ ವಾಪಸ್ ಬರುತ್ತದೆ ಇನ್ನು ಕೆಲವರಿಗೆ ಏಳು ಬುಧವಾರಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ.
ಈ ಸುದ್ದಿ ಓದಿ:-ನೀವು ಕೇಳಿದ್ದನ್ನೆಲ್ಲ ದೇವರು ಕೊಡಬೇಕು ಎಂದರೆ ಈ ರೀತಿ ಪ್ರಾರ್ಥಿಸಿ
ನಂಬಿಕೆಯಿಂದ ಪ್ರತಿ ಬುಧವಾರ ಈ ಆಚರಣೆ ಮಾಡಿ ಖಂಡಿತ ಹಣ ವಾಪಸ್ ಬರುತ್ತದೆ.
ಮಂತ್ರ:
“ಓಂ ಹಾ ಹಿ ಹೌಂ ಹೈಂ ಹಂ
ಮಮಧನ ಪ್ರಾಪ್ತಿ ಗೃಹಕ”