Home Entertainment ವೇದ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ನಟಿಸುವುದಕ್ಕೆ ನಟಿ ಶ್ವೇತಾ ಚಂಗಪ್ಪ ಪಡೆದ ಸಂಭಾವನೆ ಎಷ್ಟು ಗೊತ್ತಾ.?

ವೇದ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ನಟಿಸುವುದಕ್ಕೆ ನಟಿ ಶ್ವೇತಾ ಚಂಗಪ್ಪ ಪಡೆದ ಸಂಭಾವನೆ ಎಷ್ಟು ಗೊತ್ತಾ.?

0
ವೇದ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ನಟಿಸುವುದಕ್ಕೆ ನಟಿ ಶ್ವೇತಾ ಚಂಗಪ್ಪ ಪಡೆದ ಸಂಭಾವನೆ ಎಷ್ಟು ಗೊತ್ತಾ.?

 

ಶ್ವೇತಾ ಚಂಗಪ್ಪ ಇನ್ ವೇದ ಸಿನಿಮಾ

ನಟಿ ಶ್ವೇತಾ ಚಂಗಪ್ಪ(Shwetha Changapa) ಅವರು ಡಾ. ಶಿವರಾಜ್ ಕುಮಾರ್(Shiva Rajkumar) ಅವರ 125 ಸಿನಿಮಾ ಆದಂತಹ ವೇದ(Vedha) ಸಿನಿಮಾದಲ್ಲಿ ಪ್ರಮುಖ ಒಂದರಲ್ಲಿ ಅಭಿನಯಿಸಿದ್ದಾರೆ. ವೇದ ಸಿನಿಮಾ ಬಿಡುಗಡೆಯಾಗಿ ಒಂದು ವಾರವಾಗಿದ್ದು ಕರ್ನಾಟಕದಾದ್ಯಂತ ಅದ್ದೂರಿ ಪ್ರದರ್ಶನ ಕಾಣುತ್ತಿದೆ ವಿಶೇಷ ಏನೆಂದರೆ ಕರ್ನಾಟಕವನ್ನು ಹೊರತುಪಡಿಸಿ ಹೊರ ರಾಜ್ಯವಾದಂತಹ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿಯೂ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಶಿವಣ್ಣ ಅವರ ಮಾಸ್ ಲುಕ್ ನೋಡಿದಂತಹ ಎಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಶ್ವೇತಾ ಚಂಗಪ್ಪ ಹಾಗೂ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಹಾಗೂ ಗಾನವಿ ಲಕ್ಷ್ಮಣ್ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಬಹುತೇಕರು ತಮ್ಮ ಪಾತ್ರಕ್ಕೆ ಜೀವ ತುಂಬಿ ಅದಕ್ಕೆ ಒಳ್ಳೆಯ ಬೆಲೆ ನೀಡಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿ ಬಂದ ಕಾರಣ ಎಲ್ಲೆಡೆ ವಿಜಯದ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಶಿವರಾಜ್ ಕುಮಾರ್ ಅವರ(Shiva Rajkumar 125th Cinema) 125 ಸಿನಿಮಾ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವುದು ವಿಶೇಷ.

ಮೊದಲಿನಿಂದಲೂ ಕೂಡ ಒಂದು ನಿರ್ಮಾಣ ಸಂಸ್ಥೆಯನ್ನು ತೆರೆಯಬೇಕು ಎಂಬ ಆಸೆ ಗೀತಾ ಅವರ ಮನಸ್ಸಿನಲ್ಲಿ ಇತ್ತು ಇದಕ್ಕೆ ಸಾತ್ ನೀಡುವುದಕ್ಕೆ ಶಿವರಾಜ್ ಕುಮಾರ್ ಅವರು ಮುಂದಾಗುತ್ತಾರೆ. ಅಷ್ಟೇ ಅಲ್ಲದೆ ಗೀತಾ ಪಿಕ್ಚರ್ಸ್(Geetha Pitchers) ಬ್ಯಾನರ್ ಅಡಿಯಲ್ಲಿ ಅವರದ್ದೇ ಆದ ಸಿನಿಮಾ ಮೊದಲಿಗೆ ರಿಲೀಸ್ ಆಗಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಅದರಂತೆ ಶಿವರಾಜಕುಮಾರ್ ಅವರ 125ನೇ ಸಿನಿಮಾ ಗೀತಾ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾಗಿದೆ.

ಇನ್ನೂ ಈ ಸಿನಿಮಾದಲ್ಲಿ ಇರುವ ಶ್ವೇತಾ ಚಂಗಪ್ಪ ಅವರು ಆಂಕರಿಂಗ್ ಆಗಿ ಸದ್ಯಕ್ಕೆ ಝೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಸೂಪರ್ ಕಿಂಗ್ಸ್ ಎಂಬ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದಾರೆ. ಆಂಕರಿಂಗ್ ಜೊತೆ ಜೊತೆಯಲ್ಲಿ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಏಕೆಂದರೆ ಶ್ವೇತ ಚಂಗಪ್ಪ ಅವರು ದರ್ಶನ್ ಅಭಿನಯದ ಸಿನಿಮಾದಲ್ಲಿ ನಟನೆ ಮಾಡಿದನ್ನು ಬಿಟ್ಟರೆ ಮತ್ಯಾವ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಮಾಸ್ ರಗಡ್ ಲುಕ್ ನಲ್ಲಿ ಅಭಿನಯ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಇನ್ನು ನಟಿ ಶ್ವೇತಾ ಚಂಗಪ್ಪ ಅವರು ವೇದ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ಅಭಿನಯಿಸಿದಕ್ಕೆ ಪಡೆದುಕೊಂಡಂತಹ ಸಂಭವನೆ ವೈರಲ್ ಆಗಿದೆ ಹೌದು. ನಟಿ ಶ್ವೇತಾ ಚಂಗಪ್ಪ ಅವರು ವೇದಾ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಬರೋಬ್ಬರಿ 10 ಲಕ್ಷ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರಂತೆ. ಇನ್ನು ಈ ವಿಚಾರ ತಿಳಿಯುತ್ತಿದ್ದ ಹಾಗೆ ನಟಿ ಶ್ವೇತ ಚಂಗಪ್ಪ ಅವರು ಅಭಿನಯಿಸಿದಂತಹ ಆ ಪಾತ್ರಕ್ಕೆ 10 ಲಕ್ಷ ಅಲ್ಲ 20 ಲಕ್ಷ ಕೊಟ್ಟರೂ ಕೂಡ ಕಡಿಮೆ ಅಂತ ಹೇಳಿದ್ದಾರೆ. ಇನ್ನು ವೇದ ಸಿನಿಮಾದ ಕ್ಲೈಮಾಕ್ಸ್ ಎಂಡ್ ಆಗುವುದಿಲ್ಲ ಬದಲಿಗೆ ವೇದ ಪಾರ್ಟ್ 2 ಸಿನಿಮಾ ಕೂಡ ಬರುತ್ತದೆ ಎಂಬುದನ್ನು ಈ ಸಿನಿಮಾದ ಸ್ವಿಕೆಯಲ್ಲಿ ನಾವು ನೋಡಬಹುದಾಗಿದೆ.

ಮುಂದಿನ ವರ್ಷ ವೇದ ಪಾರ್ಟ್ 2 ಚಿತ್ರೀಕರಣ ನಡೆಯಲ್ಲಿದ್ದು ಅಲ್ಲಿಯೂ ಕೂಡ ನಟಿ ಶ್ವೇತ ಚಂಗಪ್ಪ ಅವರು ಅಭಿನಯಿಸಿಲಿದ್ದಾರೆ ಸದ್ಯಕ್ಕೆ ನಟಿ ಶ್ವೇತಾ ಚಂಗಪ್ಪ ಅವರು ಕಿರುತರ ಜೊತೆಗೆ ಬೆಳ್ಳಿತೆರೆಯ ನಂಟು ಬೆಳೆಸಿಕೊಂಡಿದ್ದಾರೆ. ಇನ್ನಷ್ಟು ಸಿನಿಮಾದಲ್ಲಿ ಅಭಿನಯಿಸಲಿ ಉತ್ತಮ ಪಾತ್ರದಲ್ಲಿ ಕಾಣಿಸಿಕೊಳ್ಳಲಿ ಎಂಬುವುದಷ್ಟೇ ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here