ನಾನು ಬೇರೆಯವರ ರೀತಿ ಸಿನಿಮಾ ಪೈರಸಿ ಆಯ್ತು ಎಂದು ಅಳುತ್ತಾ ಕೂರುವವಳು ಅಲ್ಲ ಎಂದು ಪರೋಕ್ಷವಾಗಿ ಆ ನಿರ್ಮಾಪಕಿಗೆ ಟಾಂಗ್ ಕೊಟ್ಟರಾ ಕ್ರಾಂತಿ ಪ್ರೊಡ್ಯೂಸರ್. ದರ್ಶನ್ (Darshan) ಅವರ ಕ್ರಾಂತಿ (Kranthi) ಸಿನಿಮಾ ಇದೆ ಜನವರಿ 26ರಂದು ರಿಲೀಸ್ ಆಗಿತ್ತು. ಕಳೆದ ಎರಡು ತಿಂಗಳ ಹಿಂದೆಯೇ ಚಿತ್ರದ ಪ್ರಚಾರ ಕಾರ್ಯಕ್ಕೆ ಇಳಿದಿದ್ದ ಇಡೀ ತಂಡ ಇಂದು ಎಂಟು ದಿನಗಳ ಬಳಿಕ ಸಿನಿಮಾ ನೂರು ಕೋಟಿ ಕಲೆಕ್ಷನ್ ದಾಟಿದ ಸಂಭ್ರಮದಲ್ಲಿದೆ.
ಇದರ ವಿಶೇಷವಾಗಿ ಸ್ಪೆಷಲ್ ಸಕ್ಸಸ್ ಮೀಟ್ (Success meet) ಕೂಡ ಅರೆಂಜ್ ಮಾಡಿದ್ದ ತಂಡ ಹಲವು ವಿಷಯಗಳನ್ನು ಈ ಬಾರಿಯೂ ಹಂಚಿಕೊಂಡಿತ್ತು. ಮಾತಿಗಿಳಿದ ಚಿತ್ರದ ನಿರ್ಮಾಪಕರಾದ ಶೈಲಜಾ ನಾಗ್ (Producer Shylaja nag) ಅವರು ಕ್ರಾಂತಿ ಸಿನಿಮಾದ ಬಗ್ಗೆ ಹಾಗೂ ಸಿನಿಮಾ ಸಕ್ಸಸ್ ಗೆ ಕಾರಣ ಆದವರ ಬಗ್ಗೆ ಹಾಗೂ ಸಿನಿಮಾ ಗಳಿಸಿರುವ ಕಲೆಕ್ಷನ್ ಬಗ್ಗೆ ಮಾತನಾಡುತ್ತಾ ಪೈರಸಿ ಪರಿಣಾಮದ ಬಗ್ಗೆ ಕೂಡ ಮಾತನಾಡಿದರು.
ಕ್ರಾಂತಿ ಚಿತ್ರದ ಕಲಾವಿದರಾದ ನಾಯಕ ನಟ ದರ್ಶನ್, ನಾಯಕಿ ರಚಿತಾ ರಾಮ್, ನಿಮಿಕಾ, ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್ ಸೇರಿದಂತೆ ಎಲ್ಲರೂ ಮಾತನಾಡಿದರು. ಹಾಗೆಯೇ ನಿರ್ದೇಶಕರಾದ ಸುರೇಶ್, ಹರಿಕೃಷ್ಣ ಮತ್ತು ನಿರ್ಮಾಪಕಿಯಾದ ಶೈಲಜಾ ನಾಗ್ ಅವರೂ ಸಹ ಮಾತನಾಡಿದರು. ಮಾತನಾಡುವಾಗ ನಿರ್ಮಾಪಕಿಯಾಗಿ ತಮ್ಮ ಜವಾಬ್ದಾರಿ ಮೆರೆದರು. ಈ ಸಿನಿಮಾದ ಜವಾಬ್ದಾರಿ ಸಿನಿಮಾ ಶುರುವಾದ ದಿನದಿಂದ ರಿಲೀಸ್ ಆಗುವ ತನಕ ಇತ್ತು.
ನನ್ನ ಜವಾಬ್ದಾರಿಯಲ್ಲಿ ಹೆಗಲಾದ ಪ್ರತಿಯೊಬ್ಬರಿಗೂ ಕೂಡ ಧನ್ಯವಾದಗಳು. ನಮ್ಮ ಸಿನಿಮಾದ ಎಲ್ಲಾ ಕಲಾವಿದರುಗಳು, ತಂತ್ರಜ್ಞರು, ಮ್ಯೂಸಿಕ್ ಡೈರೆಕ್ಟರ್, ಲಿರಿಕ್ಸ್ ಬರೆದವರು, ಲೈಟ್ ಬಾಯ್ ಇಂದ ಹಿಡಿದು ಊಟದ ವ್ಯವಸ್ಥೆ ಮಾಡಿದ ಪ್ರತಿಯೊಬ್ಬರ ತನಕ ಕೂಡ ಎಲ್ಲರಿಗೂ ಧನ್ಯವಾದಗಳು. ಹಾಡುಗಳ ರಿಲೀಸ್ ಮಾಡುವ ಸಮಯದಲ್ಲಿ ನಮ್ಮ ಸಹಕಾರಕ್ಕೆ ನಿಂತಿದ್ದ ದರ್ಶನ್ ಅವರ ಎಲ್ಲಾ ಅಪಾರ ಅಭಿಮಾನಿ ಬಳಗ ಹಾಗೂ ನಮಗೆ ಸಹಾಯ ಮಾಡಿ ಎಲ್ಲಾ ಕಡೆ ವ್ಯವಸ್ಥೆ ಮಾಡಿಕೊಟ್ಟ ದರ್ಶನ ಅವರ ಆತ್ಮೀಯರಿಗೂ ಕೂಡ ಧನ್ಯವಾದಗಳು.
ಮತ್ತೆ ಈ ಸಿನಿಮಾದ ವಿತರಣೆ ಕೆಲಸ ಮಾಡಿ ಕರ್ನಾಟಕದಾದ್ಯಂತ ಕ್ರಾಂತಿ ತಲುಪಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು. ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿದ ಅವರು ನಮ್ಮ ಚಿತ್ರ ಅನೇಕರ ಮೇಲೆ ಪ್ರಭಾವ ಬೀರಿ ಹಲವರು ಟ್ವೀಟ್ ಮಾಡಿ ಅದರ ಬಗ್ಗೆ ಮಾತನಾಡುತ್ತಿದ್ದಾರೆ. ತಾವು ಸಹ ಸಿನಿಮಾ ನೋಡಿ ಇಂಥ ವಿಷಯಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಬಯಸಿದ್ದೇವೆ ಎನ್ನುವುದನ್ನು ಹಂಚಿಕೊಳ್ಳುತ್ತಿದ್ದಾರೆ.
ಇಷ್ಟಾದರೆ ಸಿನಿಮಾ ಗೆದ್ದಿದೆ ಎಂದು ನಾನು ಭಾವಿಸುತ್ತೇನೆ. ಅದರ ಜೊತೆ ಸಿನಿಮಾಗೆ ದುಡ್ಡು ಹಾಕಿದವರಿಗೂ ಒಂದಿಷ್ಟು ಹಣ ಕೈಸೇರಬೇಕು ಅದು ಕೂಡ ಆಗಿದೆ. ಹಾಗಾಗಿ ನಾವು ನನ್ನ ಪ್ರಕಾರ ಗೆದ್ದಿದ್ದೇವೆ ಎಂದು ಹೇಳಿ ಸಿನಿಮಾ ಫೈರಸಿ ಬಗ್ಗೆ ಕೂಡ ಮಾತನಾಡಿದ್ದಾರೆ. ಆಂಟಿ ಪೈರಸಿ (anti pyracy) ಕೆಲಸ ಮಾಡುತ್ತಿರುವವರು ಹಗಲು ರಾತ್ರಿ ನಮಗಾಗಿ ಶ್ರಮ ಪಟ್ಟಿದ್ದಾರೆ ಆದರೆ ಎಲ್ಲಾ ಸಿನಿಮಾಗಳು ಕೂಡ ಇದೊಂದು ದೊಡ್ಡ ಯುದ್ಧ.
ನಾನು ಬೇರೆಯವರ ರೀತಿ ಸಿನಿಮಾ ಪೈರಸಿ ಆಯ್ತು ಎಂದು ಅಳುವವಳು ಅಲ್ಲ ,ಧೈರ್ಯವಾಗಿ ಎಲ್ಲವನ್ನು ಎದುರಿಸುತ್ತೇನೆ. ಆದರೂ ಆ ಪರಿಸ್ಥಿತಿಯಿಂದ ನಮ್ಮನ್ನು ಕಾಪಾಡಿದ ಆಂಟಿ ಪೈರಸಿ ಟೀಮ್ ಗೆ ಧನ್ಯವಾದಗಳು ಎಂದು ಅವರನ್ನು ನೆನೆಸಿಕೊಂಡಿದ್ದಾರೆ. ಈ ಹಿಂದೆ ಸುದೀಪ್ (Sudeep) ಅವರ ಪೈಲ್ವಾನ್ (Pylwan) ಸಿನಿಮಾ ಪೈರಸಿ ಆಗಿ ನಿರ್ಮಾಪಕಿ ಸ್ವಪ್ನಕೃಷ್ಣ (Swapna krishna) ಅವರು ಅದಕ್ಕೆ ಕಾರಣ ಆಗಿದವರಿಗೆ ಕಣ್ಣೀರು ಹಾಕಿ ಶಾಪ ಹಾಕಿದ್ದರು. ಅವರಿಗೆ ಟಾಂಗ್ ನೀಡುವ ಸಲುವಾಗಿ ಶೈಲಜಾ ನಾಗ್ ಈ ಮಾತುಗಳಾಡಿದರಾ ಎನ್ನುವ ಅನುಮಾನಗಳು ಹಲವರನ್ನು ಕಾಡುತ್ತಿದೆ.