ಸುವರ್ಣ ನ್ಯೂಸ್ ಚಾನೆಲ್ ಗೆ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್, ಅಭಿಮಾನಿಗಳ ಅಬ್ಬರಕ್ಕೆ ನಡುಗಿ ಪೋಲಿಸರ ಸಾಹಯ ಪಡೆಯುತ್ತಿರುವ ಚಾನೆಲ್. ಇಷ್ಟಲ್ಲಾ ಗಲಾಬೆಗೆ ಕಾರಣವೇನು ಗೊತ್ತ.?

ಸುವರ್ಣ ನ್ಯೂಸ್ ಚಾನೆಲ್ ಸ್ಟುಡಿಯೋ ಮುತ್ತಿಗೆ ಹಾಕಿದ ದರ್ಶನ್ ಫ್ಯಾನ್ಸ್ ಕನ್ನಡ ಸುದ್ದಿ ಮಾಧ್ಯಮಗಳು (Media) ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ನಡುವಿನ ಗಲಾಟೆ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಆದರೆ ನೆನ್ನೆಯಿಂದ ಹೊಸದಾಗಿ ದರ್ಶನ್ ಹಾಗೂ ಮೀಡಿಯಾ ಕುರಿತ ವಿಡಿಯೋ ಒಂದು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ವಿಡಿಯೋದಲ್ಲಿ ಸುವರ್ಣ ನ್ಯೂಸ್ ಚಾನೆಲ್ ನ (Suvarna NEWS Channel) ಸಿಬ್ಬಂದಿ ಮಾತನಾಡಿರುವ ಮಾತುಗಳಿಗೆ ಇಂದು ದರ್ಶನ್ ಗಜಪಡೆ ಆ ಚಾನೆಲ್ ಸ್ಟುಡಿಯೋ ಮುತ್ತಿಗೆ ಹಾಕುವ ಹಾಗೆ, ಅವರ ಸ್ಟುಡಿಯೋ ಎದುರು ಕುಳಿತು ಪ್ರತಿಭಟನೆ ಮಾಡುವ ಮಟ್ಟಕ್ಕೆ ವಿಷಯ ವಿಪರೀತಕ್ಕೆ ತಿರುಗಿದೆ.

ಅಷ್ಟಕ್ಕೂ ಏನಿದು ಕಾಂಟ್ರವರ್ಸಿ ಎಂದು ನೋಡುವುದಾದರೆ ಮೊನ್ನೆ ಸುವರ್ಣ ನ್ಯೂಸ್ ಚಾನೆಲ್ ಗೆ ಒಂದು ಗಿಫ್ಟ್ ಬಾಕ್ಸ್ ಬಂದಿತ್ತು. ಸಿಬ್ಬಂದಿಗಳೆಲ್ಲ ಸೇರಿ ಹಾಗೆ ಓಪನ್ ಮಾಡುತ್ತಿರುವಾಗ ಒಳಗೆ ಏನಿರಬಹುದು ಎನ್ನುವ ಕುತೂಹಲ ಎಲ್ಲರನ್ನು ಕಾಡುತ್ತಿತ್ತು. ಹಾಗಾಗಿ ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದರು. ಒಬ್ಬರು ಅದರಲ್ಲಿ ಕ್ರಾಂತಿ ಸಿನಿಮಾ ಟಿಕೆಟ್ ಇರಬಹುದು ನಮಗಾಗಿ ಯಾರಾದರೂ ಕಳುಹಿಸಿದ್ದಾರಾ ಎಂದು ಕೇಳಿದರೆ ಮತ್ತೊಬ್ಬರು ಇಲ್ಲ ದರ್ಶನ್ ಅವರ ತಲೆ ಬಂದಿರಬಹುದಾ ಅನಿಸುತ್ತದೆ ಎಂದು ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಮತ್ತೊಬ್ಬಾತ ಇಲ್ಲ ಚಪ್ಪಲಿ ಬಂದಿದೆ ಅಂತ ಹೇಳಿ ದರ್ಶನ್ ಅವರ ಹೊಸಪೇಟೆ ವಿವಾದಕ್ಕೆ ವಿಷಯ ಅಂಟಿಸಿ ತಮಾಷೆ ಮಾಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳೆಲ್ಲಾ ಸಿಡಿದೆದ್ದರೂ ಇದರ ಪರಿಣಾಮ ಅರಿತ ಚಾನೆಲ್ ನ ಹಿರಿಯ ನಿರೂಪಕ ಎನಿಸಿಕೊಂಡ ಜಯ ಪ್ರಕಾಶ್ (Jaya Prakash) ಅವರು ಮತ್ತೊಂದು ವಿಡಿಯೋ ಮಾಡಿ ಎಂದಿಗೂ ಸಹ ನಾವು ಯಾರ ತಂಟೆಗೂ ಹೋಗುವುದಿಲ್ಲ,

ಯಾರನ್ನು ನೋಯಿಸುವುದಿಲ್ಲ ಆದರೆ ಅದ್ಯಾವುದೋ ವಿಷಘಳಿಗೆ ಆ ರೀತಿ ಮಾತುಗಳು ಬಂದು ಬಿಟ್ಟವು, ದಯವಿಟ್ಟು ಇದನ್ನು ಇಲ್ಲಿಗೆ ಬಿಡಿ ನಮ್ಮನ್ನು ಈ ಬಾರಿ ಕ್ಷಮಿಸಿ ಎಂದು ವಿನಯ ಪೂರ್ವಕವಾಗಿ ಕ್ಷಮೆ ಕೇಳಿದರು. ಆದರೂ ಸಹ ದರ್ಶನ್ ಅಭಿಮಾನಿಗಳಿಗೆ ಇಷ್ಟಕ್ಕೆ ಸಮಾಧಾನ ಆಗಿಲ್ಲ ಯಾಕೆಂದರೆ ಒಬ್ಬ ಸ್ಟಾರ್ ನಟ ಹಾಗೂ ಒಬ್ಬ ಕನ್ನಡದ ಹೆಮ್ಮೆಯ ಕಲಾವಿದನ ಸಾವನ್ನು ಬಯಸುವ ಮಟ್ಟಕ್ಕೆ ನಾಗರಿಕ ಸಮಾಜದ ಜವಾಬ್ದಾರಿ ಹೊತ್ತ ಪತ್ರಿಕ ಮಾಧ್ಯಮದ ಸಿಬ್ಬಂದಿ ಮಾತನಾಡುತ್ತಾರೆ ಎಂದರೆ ಅದು ಅವರು ಆ ಸ್ಥಾನದಲ್ಲಿ ಇರಲು ಯೋಗ್ಯರಲ್ಲ ಎನ್ನುವುದನ್ನು ತೋರಿಸುತ್ತದೆ.

ಹಾಗಾಗಿ ದರ್ಶನ್ ಅಭಿಮಾನಿಗಳು ಇಂದು ಸುವರ್ಣ ನ್ಯೂಸ್ ಚಾನೆಲ್ ಸ್ಟುಡಿಯೋ ಬಳಿ ಹೋಗಿ ಪ್ರತಿಭಟನೆ ಮಾಡಿದ್ದಾರೆ. ಅವರ ಕೂಗು ಏನಿತ್ತು ಎಂದು ಕೇಳುವುದಾದರೆ ಸುವರ್ಣ ನ್ಯೂಸ್ ಚಾನೆಲ್ ಅನ್ನೇ ಬ್ಯಾನ್ ಮಾಡಬೇಕು ಎಂದು ಅಭಿಮಾನಿಗಳು ಕೂಗು ಹಾಕಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಇನ್ನಷ್ಟು ಜನ ಸೇರುವ ಮೊದಲು ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನವನ್ನು ಸಹ ಮಾಡಿದ್ದಾರೆ.

ಆದರೆ ಇದು ಇಷ್ಟಕ್ಕೆ ನಿಲ್ಲುವ ಮಟ್ಟಕ್ಕೆ ಕಾಡುತ್ತಿಲ್ಲ ಇಡೀ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಂಬರ್ ಒನ್ ನಟ ಆಗಿರುವ ದರ್ಶನ್ ಅವರ ವಿಷಯಕ್ಕೆ ಹೋದರೆ ಅಭಿಮಾನಿಗಳು ಸುಮ್ಮನೆ ಬಿಡುವುದಿಲ್ಲ. ಅದಕ್ಕೆ ತಕ್ಕ ಪಾಠ ಕಲಿಸಿಯೇ ತೀರುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಆಗುವ ಹಂತಕ್ಕೆ ತಲುಪುವ ಎಲ್ಲ ಸಾಧ್ಯತೆಗಳು ಇದೆ. ಆದರೆ ಇಂದು ಪೊಲೀಸರ ಅನುಮತಿ ಇಲ್ಲದೆ ಪ್ರತಿಭಟನೆಗೆ ಹೋಗಿದ್ದ ಕಾರಣ ಶಾಂತಿಯುತವಾಗಿ ನಡೆದುಕೊಂಡಿದ್ದಾರೆ. ಮುಂದೆ ಇದು ಇನ್ಯಾವ ವಿಕೋಪಕ್ಕೆ ತಿರುಗುತ್ತದೆ ಎಂದು ನೋಡಬೇಕಾಗಿದೆ. ಈ ದಿನದ ಪ್ರತಿಭಟನೆಯಲ್ಲಿ ಮಹಿಳಾ ಅಭಿಮಾನಿಗಳು ಸಹ ಹೋರಾಟಕ್ಕಿಳಿದು ಧರಣಿಗೆ ಕೂತಿದ್ದನ್ನು ನಾವು ಕಾಣಬಹುದು.

Leave a Comment