Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಗಟ್ಟಿಮೇಳ ಸೀರಿಯಲ್ ಅಧಿತಿ ಹಾಗೂ ಪಾರು ಸೀರಿಯಲ್ ಪ್ರೀತಮ್ ಮದುವೆ ಸಂಭ್ರಮ, ಮದುವೆಗೆ ಯಾರೆಲ್ಲಾ ಬಂದಿದ್ರು...

ಗಟ್ಟಿಮೇಳ ಸೀರಿಯಲ್ ಅಧಿತಿ ಹಾಗೂ ಪಾರು ಸೀರಿಯಲ್ ಪ್ರೀತಮ್ ಮದುವೆ ಸಂಭ್ರಮ, ಮದುವೆಗೆ ಯಾರೆಲ್ಲಾ ಬಂದಿದ್ರು ನೋಡಿ.

ಸಿದ್ದುಮೂಲಿಮನಿ ಪ್ರಿಯಾ ಜೆ ಆಚಾರ್ ಮದುವೆ

ಈ ವರ್ಷ ಕನ್ನಡ ಸಿನಿಮಾ ಇಂಡಸ್ಟ್ರಿಯ ಅನೇಕ ತಾರೆಗಳು ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕೆಲವು ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಹಸೆಮಣೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವರ್ಷದ ಆರಂಭದಿಂದಲೇ ಶುಭ ಪೂಂಜ ಅವರ ಮದುವೆ ನಡೆದಿತ್ತು, ಇತ್ತೀಚೆಗೆ ನಟಿ ಅಧಿತಿ ಪ್ರಭುದೇವ ಅವರು ಕೂಡ ಮದುವೆ ಆಗಿದ್ದಾರೆ.

ನೆನ್ನೆ ಅಷ್ಟೇ ಅಭಿಷೇಕ್ ಅಂಬರೀಶ್ ಅವರ ಎಂಗೇಜ್ಮೆಂಟ್ ಅವಿವಾ ಬಿದಪ್ಪ ಅವರೊಂದಿಗೆ ನಡೆದಿದೆ. ಮತ್ತು ಕೆಲವರು ತಮ್ಮ ಜೊತೆ ಕೆಲಸ ಮಾಡಿದ ತಾರೆಯರನ್ನೇ ಬಾಳ ಸಂಗಾತಿ ಆಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರನ್ನು ಉದಾಹರಣೆಯಾಗಿ ಮಾಡಬಹುದು.

ಬೆಳ್ಳಿ ಪರದೆ ಕಲಾವಿದರು ಮಾತ್ರವಲ್ಲದೆ ಕಿರುತೆರೆ ಕಲಾವಿದರಲ್ಲೂ ಹಲವರು ಈ ವರ್ಷ ಮದುವೆ ಮತ್ತು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದರಲ್ಲೂ ಅನೇಕರು ತಮ್ಮ ವೃತ್ತಿಯವರನ್ನೇ ಆರಿಸಿಕೊಂಡು ಕೈ ಹಿಡಿಯುತ್ತಿದ್ದಾರೆ. ಈ ಸಾಲಿನಲ್ಲಿ ಈ ವರ್ಷ ಕಿರುತೆರೆ ಕಲಾವಿದರಲ್ಲಿ ಮದುವೆಯಾದವರ ಹೆಸರನ್ನು ಹೇಳುವುದಾದರೆ.

ಸಾಗರ್ ಪುರಾಣಿಕ್, ರಶ್ಮಿ ಪ್ರಭಾಕರ್, ಐಶ್ವರ್ಯ ಸಾಲಿಮಠ ಮತ್ತು ತೇಜಸ್ವಿನಿ ಪ್ರಕಾಶ್ ಮುಂತಾದವರನ್ನು ಹೆಸರಿಸಬಹುದು. ವರ್ಷದ ಅಂತ್ಯದಲ್ಲಿ ಮತ್ತಿಬ್ಬರು ಕಲಾವಿದರು ಎಂಗೇಜ್ಮೆಂಟ್ ಮಾಡಿಕೊಂಡು ಎಲ್ಲರಿಗೂ ಶಾ-ಕ್ ನೀಡಿದ್ದಾರೆ.

ಯಾರು ಕೂಡ ಇವರಿಬ್ಬರೂ ಮದುವೆ ಆಗುತ್ತಾರೆ ಎಂದು ಊಹಿಸಲೇ ಇಲ್ಲ. ಕನ್ನಡ ಕಿರುತೆರೆಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಜನರ ಜನಮನ್ನಣೆ ಗಳಿಸಿ ಜೀ ಕನ್ನಡ ವಾಹಿನಿಗೆ ಅತ್ಯುತ್ತಮ ಟಿ ಆರ್ ಪಿ ತಂದು ಕೊಡುತ್ತಿರುವ ಎರಡು ಹಿಟ್ ಧಾರಾವಾಹಿಗಳಾದ ಗಟ್ಟಿಮೇಳ ಮತ್ತು ಧಾರಾವಾಹಿಯ ಇಬ್ಬರು ಕಲಾವಿದರುಗಳು ಪ್ರೀತಿಸಿ ಮದುವೆಯಾಗುತ್ತಿದ್ದಾರೆ.

ಗಟ್ಟಿಮೇಳ ಧಾರವಾಹಿ ನಾಯಕಿ ಅಮೂಲ್ಯ ಅವರ ತಂಗಿಯ ಪಾತ್ರ ಮಾಡಿರುವ ಅಧಿತಿ ಅವರು ತಮ್ಮ ಬಜಾರಿ ಪಾತ್ರದಿಂದ ಧಾರಾವಾಹಿಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ತಿಂಡಿಪೋತಿ ಸೋಂಬೆರಿ ಹುಡುಗಿ ಅಧಿತಿ ಆಗಿ ಕಾಣಿಸಿಕೊಂಡಿರುವ ಪೂಜಾ ಜೆ ಆಚಾರ್ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ಆದಿತ್ಯನ ತಮ್ಮ ಪ್ರೀತು ಆಗಿ ಅಭಿನಯಿಸಿರುವ ಸಿದ್ದು ಮೂಲಿಮನಿ ಅವರನ್ನು ಮದುವೆ ಆಗುತ್ತಿದ್ದಾರೆ.

ಗುರು ಹಿರಿಯರ ಸಮ್ಮುಖದೊಂದಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರ ನಡುವೆ ಅದ್ದೂರಿಯಾಗಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು, ಕಾರ್ಯಕ್ರಮಕ್ಕೆ ಅನೇಕ ಕಲಾವಿದರು ಬಂದು ಹರಸಿ ಹೋಗಿದ್ದರು. ಇದೀಗ ಇಬ್ಬರ ಮದುವೆ ತಯಾರಿ ಕೂಡ ಜೋರಾಗಿದ್ದು ಫ್ರೀ ವೆಡ್ಡಿಂಗ್ ಶೂಟ್ ಅಲ್ಲಿ ಭಾಗಿಯಾಗಿದ್ದಾರೆ.

ಈ ಪ್ರೀ ವೆಡ್ಡಿಂಗ್ ಶೂಟ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು ನೋಡಿದವರೆಲ್ಲರೂ ಯಾವುದೇ ಸಿನಿಮಾ ಸೀನಿಗಿಂತ ಕೂಡ ಇದು ಕಡಿಮೆ ಏನಿಲ್ಲ ಎಂದು ಹಾಡಿ ಹೊಗಳುತ್ತಿದ್ದಾರೆ. ವೆಸ್ಟರ್ನ್ ಕಾಸ್ಟ್ಚೂಮ್ ಅಲ್ಲಿ ಇಬ್ಬರು ಕೂಡ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಅಪ್ಸರೆ ಅಂತೆ ಕಾಣುತ್ತಿರುವ ಅಧಿತಿಗೆ ಮನ್ಮತನಂತಹ ಪ್ರೀತು ಜೋಡಿಯಾಗುತ್ತಿದ್ದು ಇವರಿಬ್ಬರ ಜೋಡಿ ಎಲ್ಲರಿಗೂ ಇಷ್ಟ ಆಗಿದೆ.

ಈಗಾಗಲೇ ಪ್ರೀತು ಅಲಿಯಾಸ್ ಸಿದ್ದು ಮೂಲಿಮನಿ ಅವರು ಸಿನಿಮಾ ಇಂಡಸ್ಟ್ರಿಗೆ ಕೂಡ ಕಾಲಿಟ್ಟಿದ್ದು ಅನೇಕ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ರಂಗಿತರಂಗ ಮತ್ತು ವಿಕ್ರಂತ್ ರೋಣ ಅಂತಹ ಸಿನಿಮಾಗಳಲ್ಲೂ ಕೂಡ ಪ್ರಮುಖ ಪಾತ್ರ ನಿರ್ವಹಿಸಿರುವ ಖ್ಯಾತಿ ಇವರಿಗಿದೆ. ಮತ್ತು ಇವರಿಬ್ಬರು ಜೋಡಿಯಾಗಿಯೇ ಹೊಸ ಆಲ್ಬಮ್ ಸಾಂಗ್ ಅಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಆ ಹಾಡು ಕೂಡ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿ ಇದೆ. ಇಬ್ಬರಿಗೂ ಕೂಡ ವಯಕ್ತಿಕ ಮತ್ತು ವೃತ್ತಿ ಜೀವನ ಎರಡರಲ್ಲೂ ಶುಭವಾಗಲಿ ಎಂದು ಹರಸೋಣ.