ಬೆಳ್ಳಿಯ ಆಭರಣಗಳು ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ದೋಷಗಳನ್ನು ಕೂಡ ಪರಿಹರಿಸುತ್ತವೆ. ಬೆಳ್ಳಿಯು ಶುಕ್ರ ಹಾಗೂ ಚಂದ್ರಗ್ರಹಕ್ಕೆ ಸಂಬಂಧಪಟ್ಟ ಧಾತುಗಳಾಗಿವೆ. ಶುಕ್ರ ಗ್ರಹವು ಸಿರಿ ಸಂಪತ್ತು ಸುಖ ಸಮೃದ್ಧಿ ಕೊಡುವ ಗ್ರಹವಾಗಿದ್ದರೆ ಚಂದ್ರ ಗ್ರಹವು ಮನಸ್ಸಿನ ಕಾರಕವಾಗಿದ್ದು ಶಾಂತಿ ಮತ್ತು ನೆಮ್ಮದಿಯನ್ನು ಕೊಡುತ್ತದೆ.
ಪುರಾಣಗಳ ಮಾಹಿತಿ ಪ್ರಕಾರ ಬೆಳ್ಳಿಯು ಶಿವನ ಕಣ್ಣುಗಳಿಂದ ಉತ್ಪತ್ತಿ ಆದದ್ದಾಗಿದೆ ಹಾಗಾಗಿ ಯಾವ ವ್ಯಕ್ತಿಗಳು ಬೆಳ್ಳಿಯನ್ನು ಬಳಸುತ್ತಾರೆ ಅಥವಾ ಧರಿಸುತ್ತಾರೆ ಅವರಿಗೆ ಮಹಾದೇವನ ಅನುಗ್ರಹ ಮತ್ತು ತಾಯಿ ಪಾರ್ವತಿಯ ಆಶೀರ್ವಾದ ಖಂಡಿತವಾಗಿಯೂ ಸಿಗುತ್ತದೆ ಎಂದು ನಂಬಲಾಗುತ್ತದೆ.
ಹಾಗಾಗಿ ಬೆಳ್ಳಿಯನ್ನು ಅಲಂಕಾರ ಉದ್ದೇಶದಿಂದ ಧರಿಸುವುದು ಮಾತ್ರವಲ್ಲದೆ ಗ್ರಹದೋಷಗಳ ಪರಿಹಾರಕ್ಕಾಗಿ ಮತ್ತು ಬಲಕ್ಕಾಗಿ ಕೂಡ ಧರಿಸಲಾಗುತ್ತದೆ. ಸಾಮಾನ್ಯವಾಗಿ ಆಭರಣಗಳಲ್ಲಿ ಬೆಳ್ಳಿಯ ಉಂಗುರಗಳನ್ನು ಧರಿಸುತ್ತಾರೆ. ಈ ರೀತಿ ಬೆಳ್ಳಿಯ ಉಂಗುರಗಳನ್ನು ಹಾಕಿಕೊಳ್ಳುವುದರಿಂದ ಸಿಗುವ 9 ಲಾಭಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!
ಬೆಳ್ಳಿಯ ಉಂಗುರ ಧರಿಸಬೇಕು ಎನ್ನುವ ಕಾರಣಕ್ಕೆ ಅಂಗಡಿಯಿಂದ ತಂದು ನೇರವಾಗಿ ಹಾಕಿ ಕೊಂಡರೆ ಯಾವ ಫಲವೂ ಸಿಗುವುದಿಲ್ಲ. ಅದಕ್ಕೆ ಸಂಸ್ಕಾರ ಕೊಡುವುದು ಕೂಡ ಅಷ್ಟೇ ಮುಖ್ಯ, ಸರಿಯಾದ ವಿಧಾನದಲ್ಲಿ ಇದನ್ನು ಬಳಸಿದರೆ ಮಾತ್ರ ಇದಕ್ಕಿರುವ ಪೂರ್ಣ ಶಕ್ತಿಯ ಫಲ ನಮಗೆ ದೊರೆಯುವುದು.
ಹಾಗಾಗಿ ನೀವು ಬೆಳ್ಳಿಯ ಉಂಗುರವನ್ನು ಖರೀದಿಸಿ ತಂದ ತಕ್ಷಣ ಧರಿಸುವ ಮೊದಲು 24 ಗಂಟೆಗಳ ಕಾಲ ಗೋಮೂತ್ರದಲ್ಲಿ ನೆನೆಸಿಡಬೇಕು ಹೀಗೆ ಮಾಡುವುದರಿಂದ ಇದರಲ್ಲಿರುವ ನಕರಾತ್ಮಕತೆ ಹಾಗೂ ಅಶುದ್ಧತೆಯು ಹೊರಟು ಹೋಗುತ್ತದೆ. ಗೋಮೂತ್ರ ಇಲ್ಲದೆ ಇದ್ದರೆ ಗಂಗಾ ಜಲದಲ್ಲಿ ಕೂಡ ನೆನೆಸಿಡಬಹುದು ಈ ರೀತಿ ಮಾಡಿ ಧರಿಸುವುದರಿಂದ ಇದರ ಶಕ್ತಿಯು ಜಾಗೃತವಾಗುತ್ತದೆ ಮತ್ತು ಧರಿಸುವವರಿಗೆ ಅದರ ಶುಭಫಲಗಳು ಸಂಪೂರ್ಣವಾಗಿ ಸಿಗುತ್ತದೆ.
ಬೆಳ್ಳಿ ಬಳಕೆಯ ಪ್ರಯೋಜನಗಳು:-
* ಬೆಳ್ಳಿಯನ್ನು ಉಂಗುರ ವಾಗಿ ಸದಾ ಕೈ ಗೆ ಹಾಕಿಕೊಳ್ಳುವುದರಿಂದ ಮನಸ್ಸಿನ ಚಂಚಲತೆ ಕಡಿಮೆಯಾಗಿ ಮನಸ್ಸು ಶಾಂತವಾಗಿರುತ್ತದೆ
* ಬೆಳ್ಳಿ ಉಂಗುರ ಧರಿಸುವುದರಿಂದ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ, ಧೈರ್ಯ ಹಾಗೂ ಸುಜ್ಞಾನ ಬರುತ್ತದೆ
* ಕಫ, ಆರ್ಥರೈಟಿಸ್, ಕೀಲು ನೋವು ಮೂಳೆ ನೋವು ಇಂತಹ ಸಮಸ್ಯೆಗಳು ಇದ್ದರೂ ಕೂಡ ಬೆಳ್ಳಿ ಆಭರಣ ಧಾರಣೆಯಿಂದ ಇವುಗಳಿಗೆ ಪರಿಹಾರ ಸಿಗುತ್ತದೆ.
* ಶರೀರದ ವಾತ ಪಿತ್ತ ಕಫ ಈ ಮೂರು ಗುಣಗಳನ್ನು ಕಂಟ್ರೋಲ್ ಮಾಡುವ ಶಕ್ತಿ ಬೆಳ್ಳಿಗಿದೆ
* ಸಾಧ್ಯವಾದರೆ ಬೆಳ್ಳಿ ಉಂಗುರ ಖರೀದಿಸಿದ ಮೇಲೆ 24 ಗಂಟೆ ಶಿವಲಿಂಗಕ್ಕೆ ಸ್ಪರ್ಶಿಸಿ ಇಡಿ, ಆಗ ಇನ್ನಷ್ಟು ಸಿದ್ಧಿಯಾಗುತ್ತದೆ. ಈ ರೀತಿ ಮಾಡಿ ಧರಿಸುವುದರಿಂದ ಇನ್ನು ಹೆಚ್ಚಿನ ಬಲ ಬರುತ್ತದೆ. ಅಕಾಲಿಕ ಮೃ’ತ್ಯು ಭಯ ಇದ್ದರೆ, ಅ’ಪ’ಘಾ’ತದ ಭ’ಯ ಕಾಡುತ್ತಿದ್ದರೆ ನಿವಾರಣೆಯಾಗುತ್ತದೆ.
* ಯಾವಾಗಲು ಬೆಳ್ಳಿಯ ಉಂಗುರವನ್ನು ಕಿರು ಬೆರಳಿಗೆ ಧರಿಸಬೇಕು.
ಈ ಸುದ್ದಿ ಓದಿ:- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!
* ಬೆಳ್ಳಿ ಉಂಗುರ ಧರಿಸುವುದು ಮಾತ್ರವಲ್ಲದೆ ಬೆಳ್ಳಿ ತಟ್ಟೆ, ಲೋಟ ಚಮಚ ಇವುಗಳನ್ನು ಕೂಡ ಪ್ರತಿನಿತ್ಯ ಬಳಸುವುದು ಕೂಡ ಆರೋಗ್ಯದ ದೃಷ್ಟಿಯಲ್ಲಿ ಬಹಳ ಒಳಿತು ಮಾಡುತ್ತದೆ. ಬೆಳ್ಳಿಯು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಧಾತು ಆಗಿದೆ ಹೀಗಾಗಿ ಆಗಿನ ಕಾಲದಲ್ಲಿ ಬೆಳ್ಳಿಯ ತಟ್ಟಿಯಲ್ಲಿ ಊಟ ಬಡಿಸುತ್ತಿದ್ದರು. ಎಲ್ಲರಿಗೂ ಕೊಳ್ಳುವ ಶಕ್ತಿ ಇಲ್ಲದೆ ಇರುವುದರಿಂದ ಬೆಳ್ಳಿ ಉಂಗುರ ಧರಿಸಿ ಊಟ ಮಾಡುವುದರಿಂದ ಅದರ ಕೆಲ ಅಂಶವಾದರೂ ದೇಹಕ್ಕೆ ಸೇರಿ ಆರೋಗ್ಯಕ್ಕೆ ಒಳಿತಾಗುತ್ತದೆ.