ಸಿಂಹಾದ್ರಿಯ ಸಿಂಹ ಕನ್ನಡಿಗರಿಂದ ಸಾಹಸಸಿಂಹ ಎಂದು ಕರೆಸಿಕೊಂಡ ಡಾ. ವಿಷ್ಣುವರ್ಧನ್ ಅವರ ವೃತ್ತಿ ಜೀವನದ ಅತ್ಯುತ್ತಮ ಚಿತ್ರ. ವಿಷ್ಣುವರ್ಧನ್ ಅವರು ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳು. ಕೊನೆ ಕೊನೆಗೆ ಅವರು ಮಾಡಿದಂತಹ ರಾಜ ಗಾಂಭೀರ್ಯದ ಪಾತ್ರಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರಿಗೆ ಇಷ್ಟ ಆಗಿತ್ತು. ಕೋಟಿಗೊಬ್ಬ, ಜಮೀನ್ದಾರು, ರಾಜನರಸಿಂಹ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ, ಆಪ್ತರಕ್ಷಕ ಈ ಸಿನಿಮಾಗಳಲ್ಲಿ ವಿಷ್ಣುವರ್ಧನ್ ಅವರ ಮುಖದಲ್ಲಿ ಹೆಸರಿಗೆ ತಕ್ಕ ಹಾಗೆ ಮಹಾರಾಜನ ಲುಕ್ ಎದ್ದು ಕಾಣುತ್ತಿತ್ತು.
ಅದರಲ್ಲೂ ವಿಷ್ಣುವರ್ಧನ್ ಅವರು ತ್ರಿಪಾತ್ರದಲ್ಲಿ ಅಭಿನಯಿಸಿದ್ದ ಸಿಂಹಾದ್ರಿಯ ಸಿಂಹ ಸಿನಿಮಾವಂತೂ ಈಗ ರೀ ರಿಲೀಸ್ ಮಾಡಿದರೂ ಕೂಡ ಸೂಪರ್ ಹಿಟ್ ಆಗಿ ರನ್ ಆಗುವಂತಹ ಸಿನಿಮಾ. ವಿಷ್ಣುವರ್ಧನ್, ಭಾನುಪ್ರಿಯ, ಮೀನಾ, ಅಭಿಜಿತ್, ಶಿವರಾಂ, ಉಮಾಶ್ರೀ, ರಮೇಶ್ ಭಟ್, ಸಿರಿ ಹೀಗೆ ಬಹುದೊಡ್ಡ ತಾರಾ ಬಳಗವನ್ನೇ ಹೊಂದಿದ್ದ ಚಿತ್ರ ಸಿಂಹಾದ್ರಿಯ ಸಿಂಹ ಚಿತ್ರದ ಚಿತ್ರಕಥೆ ಹಾಗೂ ಸೂಪರ್ ಹಿಟ್ ಹಾಡುಗಳ ಕಾರಣದಿಂದಾಗಿ ಅದಕ್ಕೆ ಇನ್ನಷ್ಟು ವೈಭೋಗ ಹೆಚ್ಚಾಗಿತ್ತು.
ಹೀಗೆ ಒಂದು ಮ್ಯೂಸಿಕಲ್ ಹಿಟ್ ಹಾಗೂ ರಿಚ್ ವಿಷುವಲೈಝ್ ಇದ್ದ ಸಿಂಹಾದ್ರಿಯ ಸಿಂಹ ಸಿನಿಮಾವನ್ನು ಅಷ್ಟು ಗ್ರಾಂಡ್ ಆಗಿ ನಿರ್ದೇಶನ ಮಾಡಿದವರು ಎಸ್ ನಾರಾಯಣ್ ಅವರು. ಈ ಸಿನಿಮಾಗೆ ತಕ್ಕನಾದ ಬಂಡವಾಳ ಸುರಿದು ಅದಕ್ಕೆ ಸಾತ್ ನೀಡಿದವರು ವಿಷ್ಣುವರ್ಧನ್ ಅವರ ಬಹಳ ಆತ್ಮೀಯರಾದ ವಿಜಯಕುಮಾರ್ ಅವರು. ಈ ಸಿನಿಮಾ ರಿಮೇಕ್ ಸಿನಿಮಾ ಆಗಿದ್ದರೂ ಕೂಡ ಕನ್ನಡದ ನೇಟಿವಿಟಿಗೆ ತಕ್ಕಹಾಗೆ ಇದನ್ನು ಬದಲಾಯಿಸಿ ತೆರೆಗೆ ತಂದಿದ್ದರು.
ಕನ್ನಡದ ಬಗ್ಗೆ ಒಂದು ಹಾಡು ಕೂಡ ಇದ್ದ ಈ ಸಿನಿಮಾವನ್ನು ಕನ್ನಡಿಗರು ಮೆಚ್ಚಿ ಅಪ್ಪಿಕೊಂಡಿದ್ದರು. ಈ ಸಿನಿಮಾಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಗೆ ಮನಸೋತ ಚಿತ್ರತಂಡ ಸಿಂಹಾದ್ರಿಯ ಸಿಂಹ ಸೀಕ್ವೆಲ್ ಮಾಡಬೇಕು ಎಂದು ನಿರ್ಧರಿಸಿತು. ವಿಷ್ಣುವರ್ಧನ್ ಅವರು ಸಹ ಅದಕ್ಕೆ ಒಪ್ಪಿಕೊಂಡಿದ್ದರು. ವಿಜಯ ಕುಮಾರ್ ಅವರು ಬಂಡವಾಳ ಹೂಡಲು ತಯಾರಿದ್ದರು, ಎಸ್ ನಾರಾಯಣ್ ಅವರು ಸಹ ಅದಕ್ಕೆ ಚಿತ್ರಕಥೆ ರೆಡಿ ಮಾಡಿಕೊಂಡಿದ್ದರು.
ಆದರೆ ಅದು ಸೆಟ್ಟೇರುವ ಮುನ್ನವೇ ವಿಷ್ಣುವರ್ಧನ್ ಅವರು ಬಹಳ ಬೇಗ ನಮ್ಮನ್ನೆಲ್ಲ ಅ’ಗ’ಲಿ ಹೋದರು. ಆನಂತರ ಈ ಕನಸು ಹಾಗೆ ಉಳಿಯುವುದು ಬೇಡ ವಿಷ್ಣುವರ್ಧನ್ ಅವರ ನೆನಪಿಗಾಗಿ ಇದನ್ನು ಸ್ವಲ್ಪ ಮಾರ್ಪಾಡಿಸಿ ಮಾಡೋಣ ಎಂದು ಸುದೀಪ್ ಅವರಿಗೆ ಆಫರ್ ನೀಡಲಾಗಿತ್ತು. ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ವಿಷ್ಣುವರ್ಧನ್ ಅವರು ಇಲ್ಲ ಎನ್ನುವ ನೋವನ್ನು ಮರೆಸುತ್ತಿರುವ ಅವರ ಛಾಯೆ ಉಳ್ಳ ನಟ ಎಂದರೆ ಸುದೀಪ್.
ಅದನ್ನು ಇಂಡಸ್ಟ್ರಿ ಹಾಗೂ ಕನ್ನಡದ ಜನತೆ ಕೂಡ ಒಪ್ಪಿಕೊಂಡಿದ್ದಾರೆ. ವಿಷ್ಣುವರ್ಧನ್ ಹಾಗೂ ಸುದೀಪ್ ಅವರ ನಡುವೆ ವಿವರಿಸಲಾಗದಂತಹ ಒಂದು ವಿಶೇಷ ಅನುಬಂಧ ಇದೆ. ಇದೇ ಕಾರಣಕ್ಕೆ ಸುದೀಪ್ ಅವರು ಸಹ ಈ ಸಿನಿಮಾಕ್ಕೆ ಒಪ್ಪಿಕೊಂಡಿದ್ದರು. ಆದರೆ ಇದರ ನಿರ್ಮಾಣದ ಹೊಣೆ ಹೊತ್ತಿದ್ದ ವಿಜಯಕುಮಾರ್ ಅವರು ಸಹ ತೀರಿಕೊಂಡ ಕಾರಣ ಸಿನಿಮಾ ತಯಾರಾಗಲಿಲ್ಲ. ಇಂದಿಗೂ ಇದರ ಕಥೆ ಎಸ್ ನಾರಾಯಣ್ ಅವರ ಬಳಿ ಇದೆ. ಆದಷ್ಟು ಬೇಗ ಮತ್ತೊಬ್ಬ ನಿರ್ಮಾಪಕ ಸಿಕ್ಕಿ, ಸಿನಿಮಾ ಮುಂದುವರೆಯುವಂತಾಗಲಿ ಎನ್ನುವುದು ಕನ್ನಡಿಗರ ಆಶಯ.