Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಗಾಯಕ ಹೇಮಂತ್ ಮಗನ ನಾಮಕರಣ ಶಾಸ್ತ್ರಕ್ಕೆ ಯಾರೆಲ್ಲ ಸೆಲೆಬ್ರಿಟಿಗಳು ಬಂದಿದ್ರು ನೋಡಿ, ಮುದ್ದಿನ ಮಗನಿಗೆ ಇಟ್ಟಿರುವ ಹೆಸರೇನು ಗೊತ್ತಾ.?

Posted on November 14, 2022November 14, 2022 By Kannada Trend News No Comments on ಗಾಯಕ ಹೇಮಂತ್ ಮಗನ ನಾಮಕರಣ ಶಾಸ್ತ್ರಕ್ಕೆ ಯಾರೆಲ್ಲ ಸೆಲೆಬ್ರಿಟಿಗಳು ಬಂದಿದ್ರು ನೋಡಿ, ಮುದ್ದಿನ ಮಗನಿಗೆ ಇಟ್ಟಿರುವ ಹೆಸರೇನು ಗೊತ್ತಾ.?

 

ಕನ್ನಡದ ಹೆಮ್ಮೆಯ ಹಿನ್ನೆಲೆ ಗಾಯಕ ಹೇಮಂತ್ ಕುಮಾರ್ ಅವರು ವಿಚ್ಛೇದನವಾದ 13 ವರ್ಷಗಳ ಬಳಿಕ 2021 ರಲ್ಲಿ ಮರು ಮದುವೆ ಆದರು. ಕೃತಿಕಾ ಎನ್ನುವವರನ್ನು ಕೈಹಿಡಿದ ಹೇಮಂತ್ ಕುಮಾರ್ ಅವರು ಇದೀಗ ವೈಯಕ್ತಿಕ ಜೀವನದಲ್ಲಿ ಬಹಳ ಸಂತೋಷದಿಂದ ಇದ್ದಾರೆ. ಸಾಂಸಾರಿಕ ಜೀವನದಲ್ಲಿ ಹೊಸ ಅಧ್ಯಾಯ ಬರೆದಿರುವ ಹೇಮಂತ್ ಕುಮಾರ್ ಅವರ ಕುಟುಂಬಕ್ಕೆ ಮತ್ತೊಬ್ಬ ಸದಸ್ಯರ ಆಗಮನ ವಾಗಿದೆ.

ಗಂಡು ಮಗುವಿನ ಆಗಮನವು ದಂಪತಿಗಳ ಖುಷಿಯನ್ನು ಇಮ್ಮಡಿಗೊಳಿಸಿದ್ದು ಇದೀಗ ಅದ್ದೂರಿಯಾಗಿ ಮಗನ ನಾಮಕರಣ ಕಾರ್ಯಕ್ರಮವನ್ನು ಕೂಡ ಹೇಮಂತ್ ಕುಮಾರ್ ದಂಪತಿ ಮಾಡಿದ್ದಾರೆ. ಈ ಕಾರ್ಯಕ್ರಮದ ಸಂಬಂಧಿತ ಫೋಟೋ ಒಂದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಹೇಮಂತ್ ಅವರು ಅದಕ್ಕೆ ಕೆಲ ಅಡಿ ಬರಹವನ್ನು ಬರೆದಿದ್ದಾರೆ.

ಎಲ್ಲರಿಗೂ ನಮಸ್ಕಾರ, ನಮ್ಮ ಮನೆಯರಸನ ನಾಮಕರಣ ಕಾರ್ಯಕ್ರಮವು ದೈವಾನುಗ್ರಹದಿಂದ ಎಲ್ಲಾ ಹಿರಿಯರ, ಬಂಧು ಮಿತ್ರರ, ಚಿತ್ರರಂಗದ ತಾರೆಯರ ಸಮ್ಮುಖದಲ್ಲಿ ನೆರವೇರಿದೆ. ನಮ್ಮ ಪುತ್ರನಿಗೆ ಶ್ರೇಯಾಂಕ್ ಎಂದು ನಾಮಕರಣ ಮಾಡಿದ್ದೇವೆ. ನಿಮ್ಮೆಲ್ಲರ ಉಪಸ್ಥಿತಿ ನಮ್ಮ ಮನ ತುಂಬಿಸಿದೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಚಿರಋಣಿ ಇಂತಿ ನಿಮ್ಮ ಹೇಮಂತ್ ಮತ್ತು ಕೃತಿಕಾ ಎಂದು ಪತ್ನಿ ಹಾಗೂ ಮಗುವಿನ ಜೊತೆಗೆ ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ಮಗನ ಹೆಸರು ತುಂಬಾ ಚೆನ್ನಾಗಿದೆ ನಿಮ್ಮ ಜೀವನದಲ್ಲಿ ಮತ್ತಷ್ಟು ಖುಷಿ ಸಂತೋಷ ಎಲ್ಲಾ ತುಂಬಿ ಬರಲಿ ಎಂದು ಹಾರೈಸಿದ್ದಾರೆ. ಹಾಗೂ ಮಗುವಿಗೂ ಕೂಡ ದೇವರು ಆಯಸ್ಸು ಆರೋಗ್ಯ ಶ್ರೇಯಸ್ಸನ್ನು ಕೊಡಲಿ ಎಂದು ಅನೇಕ ಅಭಿಮಾನಿಗಳು ಮತ್ತು ನೆಟ್ಟಿಗರು ಕಮೆಂಟಲ್ಲಿ ಮಗುವಿಗೂ ಕೂಡ ಆಶೀರ್ವದಿಸಿದ್ದಾರೆ.

ಹೇಮಂತ್ ಕುಮಾರ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಹೆಮ್ಮೆಯ ಗಾಯಕರಲ್ಲಿ ಒಬ್ಬರು. ದಕ್ಷಿಣ ಕನ್ನಡದ ಗಾಯಕರುಗಳಲ್ಲಿ ಮೊದಲ ಬಾರಿಗೆ ಫಿಲಂ ಫೇರ್ ಅವಾರ್ಡ್ ಪಡೆದ ಗಾಯಕ ಎಂದರೆ ಅದು ಹೇಮಂತ್ ಕುಮಾರ್. ಬಾಲ್ಯದಿಂದಲೇ ಹೇಮಂತ್ ಅವರಿಗೆ ಸಂಗೀತದ ಬಗ್ಗೆ ಆಕರ್ಷಣೆ ಇತ್ತು. ಇವರ ತಾಯಿಯೂ ಕೂಡ ಸಂಗೀತಗಾರರಾಗಿದ್ದರಿಂದ ಅವರೇ ಮೊದಲ ಗುರುವಾಗಿ ಇವರ ಸಂಗೀತ ಅಭ್ಯಾಸಕ್ಕೆ ನೆರವಾದರು.

ಬೆಂಗಳೂರಿನ ರಾಮಯ್ಯ ಇನ್ಸ್ಟಿಟ್ಯೂಟ್ ಅಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದರು ಕೂಡ ಹೇಮಂತ್ ಅವರಿಗೆ ಸಂಗೀತದ ಬಗ್ಗೆ ಹೆಚ್ಚು ಒಲವು ಇತ್ತು. ಹೀಗಾಗಿ ಶಿಕ್ಷಣ ಮುಗಿದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಧನೆ ಮಾಡುವ ಸಲುವಾಗಿ ಹಂಸಲೇಖ ಅವರೊಂದಿಗೆ ಅಸಿಸ್ಟೆಂಟ್ ಆಗಿ ಸೇರಿಕೊಂಡರು. ಹಂಸಲೇಖ ಅವರ ಪ್ರೀತಿಯ ಹಾಗೂ ಆತ್ಮೀಯ ಶಿಷ್ಯನಾಗಿರುವ ಹೇಮಂತ್ ಕುಮಾರ್ ಅವರು ಈವರೆಗೆ ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಅದರಲ್ಲೂ ದರ್ಶನ್ ಸಿನಿಮಾದ ಹಾಡುಗಳು ಹೇಮಂತ್ ಅವರ ಹಾಡುಗಾರಿಕೆ ಇಲ್ಲದೆ ಪೂರ್ತಿ ಆಗುವುದೇ ಇಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ದರ್ಶನ್ ಅವರಿಗೆ ಹೇಮಂತ್ ಅವರ ವಾಯ್ಸ್ ಸೂಟ್ ಆಗುತ್ತದೆ. ಜೊತೆಗೆ ಕುಹೂ ಕುಹೂ ಕೋಗಿಲೆ ಎನ್ನುವ ಉದಯ ಟಿವಿಯ ಕಾರ್ಯಕ್ರಮದಲ್ಲಿ ಮತ್ತು ಜೀ ಕನ್ನಡ ವಾಹಿನಿಯ ಗಾನಸುಧ ಮತ್ತು ಸರಿಗಮಪ ಕಾರ್ಯಕ್ರಮಗಳನ್ನು ಕೂಡ ಹೇಮಂತ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಸಿನಿಮಾದಲ್ಲೂ ಕೂಡ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿ ಕೊಳ್ಳುತ್ತಿರುವ ಹೇಮಂತ್ ಕುಮಾರ್ ಅವರು ರಮೇಶ್ ಅರವಿಂದ್ ಅವರ 100 ಎನ್ನುವ ಸಿನಿಮಾದಲ್ಲೂ ಕೂಡ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.

Entertainment Tags:Hemabth singer
WhatsApp Group Join Now
Telegram Group Join Now

Post navigation

Previous Post: ಪಡ್ಡೆ ಹುಡುಗುರ ನಿದ್ದೆ ಕೆಡಿಸುವಂತಿದೆ ನಟ ಪ್ರಜ್ವಲ್ ಹೆಂಡತಿ ರಾಗಿಣಿ ಮಾಡಿರುವ ಈ ಹಾಟ್ ಡ್ಯಾನ್ಸ್.
Next Post: Ashwini Watch : ಸರಳತೆಗೆ ಹೆಸರುವಾಸಿಯಾಗಿರುವ ಅಪ್ಪು ಪತ್ನಿ ಅಶ್ವಿನಿ ಧರಿಸಿರುವ ಈ ವಾಚ್ ಬೆಲೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore