Sunday, June 4, 2023
HomeEntertainmentAshwini Watch : ಸರಳತೆಗೆ ಹೆಸರುವಾಸಿಯಾಗಿರುವ ಅಪ್ಪು ಪತ್ನಿ ಅಶ್ವಿನಿ ಧರಿಸಿರುವ ಈ ವಾಚ್ ಬೆಲೆ...

Ashwini Watch : ಸರಳತೆಗೆ ಹೆಸರುವಾಸಿಯಾಗಿರುವ ಅಪ್ಪು ಪತ್ನಿ ಅಶ್ವಿನಿ ಧರಿಸಿರುವ ಈ ವಾಚ್ ಬೆಲೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.

 

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರೀತಿಸಿ ಕೈಹಿಡಿದ ಧರ್ಮಪತ್ನಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುಟುಂಬವನ್ನು ಬಹಳ ಪ್ರೀತಿಸುತ್ತಿದ್ದರು ಅಣ್ಣಂದಿರು, ಅಣ್ಣನ ಮಕ್ಕಳು, ಅತ್ತಿಗೆ ಹೀಗೆ ಹಿಡಿ ಕುಟುಂಬವನ್ನು ಮನದಲ್ಲೇ ತುಂಬಿಕೊಂಡಿದ್ದ ಅವರು ಮಡದಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.

ಸಮಯ ಸಿಕ್ಕಾಗಲಿಲ್ಲ ಪತ್ನಿ ಹಾಗೂ ಮಕ್ಕಳನ್ನು ವಿದೇಶಕ್ಕೆ ಪ್ರವಾಸ ಕರೆದುಕೊಂಡು ಹೋಗುತ್ತಿದ್ದರು. ಪ್ರತಿನಿತ್ಯವೂ ಕೂಡ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದರು ಮತ್ತು ಮಡದಿಯ ವಿಚಾರದಲ್ಲಂತೂ ಯಾವುದೇ ಕಾರ್ಯಕ್ರಮಕ್ಕೆ ಹೋದರು ಜೊತೆಗೆ ಕರೆದುಕೊಂಡು ಹೋಗುವುದು, ಪತ್ನಿಯ ಹುಟ್ಟುಹಬ್ಬದ ಸೇರಿದಂತೆ ಮದುವೆ ವಾರ್ಷಿಕೋತ್ಸವ ಇತ್ಯಾದಿ ಸಂಗತಿಗಳನ್ನು ಕೂಡ ನೆನಪಿನಲ್ಲಿಟ್ಟುಕೊಂಡು ಆಚರಿಸಿ ಉಡುಗೊರೆ ಕೊಡುವುದು, ಹೀಗೆ ಒಬ್ಬ ಆದರ್ಶ ಪತಿಯಾಗಿ ಆದರ್ಶ ತಂದೆಯಾಗಿ ಬದುಕಿದರು.

ಸಿನಿಮಾ ಇಂಡಸ್ಟ್ರಿಯಲ್ಲೇ ಮಾದರಿ ಕುಟುಂಬ ಎಂದರೆ ಅದು ರಾಜವಂಶ. ಆದರೆ ಈ ವಂಶದ ಕೀರ್ತಿ ಕಲಶದ ಮೇಲೆ ಯಾರ ಕಣ್ಣು ಬಿತ್ತೋ ಏನೋ ಪುನೀತ್ ರಾಜಕುಮಾರ್ ಅವರು ಅಕಾಲಿಕ ಮೃತ್ಯುವಿಗೆ ಈಡಾಗಿ ಪ್ರೀತಿಯ ಮಡದಿ ಮತ್ತು ಮಕ್ಕಳನ್ನು ಹಾಗೂ ಅಣ್ಣಂದಿರನ್ನು ಅಗಲಿದ್ದಾರೆ. ಅವರ ಈ ಸಾವು ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಮಾತ್ರ ಅಲ್ಲದೆ ಇಡೀ ಕರ್ನಾಟಕದ ಪ್ರತಿಯೊಬ್ಬರ ಮನದ ದುಃಖವಾಗಿದೆ.

ಇನ್ನೂ ಕೂಡ ಕನ್ನಡಿಗರೆಲ್ಲರೂ ಆ ನೋವಿನಿಂದ ಚೇತರಿಸಿಕೊಳ್ಳದೆ ಒದ್ದಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದಂತಹ ಅದೃಷ್ಟ ವ್ಯಕ್ತಿ ಎನ್ನಬಹುದು. ಅತಿ ಚಿಕ್ಕ ವಯಸ್ಸಿನಲ್ಲಿ ಅವರಿಗೆ ಅಭಿನಯ ಎನ್ನುವುದು ರಕ್ತಗತವಾಗಿ ಬಂದಿದ್ದ ಕಾರಣ ಬಾಲ್ಯದಲ್ಲಿಯೇ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡ ಭಾಗ್ಯವಂತ.

ಬೆಳೆದ ಮೇಲೂ ಕೂಡ ಪುನೀತ್ ರಾಜಕುಮಾರ್ ಅವರು ಆಯ್ದುಕೊಳ್ಳುತ್ತಿದ್ದ ಸಿನಿಮಾ ಕಥೆಗಳು ಸಮಾಜಕ್ಕೆ ಸಂದೇಶವಾಗಿ ಇರುತ್ತಿತ್ತು. ಸಿನಿಮಾ ಮಾತ್ರವಲ್ಲದೇ ಅವರು ಸಾಮಾಜಿಕ ಕಾರ್ಯಗಳಲ್ಲಿ ಜನಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅಪ್ಪು ಅವರ ಮೇಲೆ ಜನರಿಗೆ ಇಷ್ಟು ಪ್ರೀತಿ ಗೌರವ ಉಂಟಾಗಲು ಕಾರಣವಾಗಿದೆ.

ರೈತರ ಬಗ್ಗೆ ಅನಾಥರ ಬಗ್ಗೆ ಹಾಗೂ ನೊಂದ ಹೆಣ್ಣು ಮಕ್ಕಳ ಪಾಲಿಗೆ ದೈವದಂತಿದ್ದರು ಪುನೀತ್ ರಾಜಕುಮಾರ್. ಈಗ ಅವರ ಅನುಪಸ್ಥಿತಿಯಲ್ಲಿ ಅವರೆಲ್ಲಾ ಕೆಲಸ ಕಾರ್ಯಗಳನ್ನು ಅಶ್ವಿನಿ ಪುನೀತ್ ಅವರೇ ನೋಡಿಕೊಳ್ಳುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪಿ ಆರ್ ಕೆ ಪ್ರೊಡಕ್ಷನ್ ಸ್ಥಾಪಿಸಿ ಆ ಮೂಲಕ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಪ್ರಯತ್ನ ಮಾಡಿದ್ದರು.

ಈಗ ಆ ಹೊಣೆಯನ್ನು ಕೂಡ ಅಶ್ವಿನ್ ಅವರ ಹೊತ್ತಿದ್ದು ಅಷ್ಟೇ ಅಚ್ಚುಕಟ್ಟಾಗಿ ಪುನೀತ್ ಅವರ ಎಲ್ಲಾ ಕನಸುಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪುನೀತ್ ಅವರು ಇರುವಷ್ಟು ದಿನ ಕ್ಯಾಮರಾ ಮುಂದೆ ಕಾಣಿಸಿಕೊಳ್ಳದೆ ಮಾತನಾಡದೆ ಮನೆಯಿಂದ ಆಚೆ ಬರದೇ ಇದ್ದ ಅಶ್ವಿನಿ ಅವರು ಇದೀಗ ಗಟ್ಟಿಗಿತ್ತಿಯಂತೆ ಅಪ್ಪು ಅವರ ಹೆಸರುಳಿಸುವ ಕಾರಣದಿಂದ ಅವರೆಲ್ಲಾ ಜವಾಬ್ದಾರಿಯನ್ನು ಹೇಗಲಿಗೇರಿಸಿಕೊಂಡಿದ್ದಾರೆ.

ಇವರ ಈ ಪ್ರಯತ್ನಕ್ಕೆ ಇಡಿ ಕುಟುಂಬವೇ ಸಪೋರ್ಟ್ ಮಾಡುತ್ತಿದೆ ಇತ್ತೀಚೆಗೆ ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದುಬಾರಿ ವಾಚ್ ಅನ್ನು ಧರಿಸುತ್ತಿದ್ದಾರೆ. ಈಗ ಎಲ್ಲಾ ಕಡೆ ಅವರ ವಾಚ್ ನ ಬೆಲೆಯು ಬಗ್ಗೆ ಚರ್ಚೆ ಆಗುತ್ತಿದೆ. ಪ್ರತಿಷ್ಠಿತ ರೋಲೆಕ್ಸ್ ಕಂಪನಿಯ ವಾಚನ್ನು ಇವರು ಧರಿಸುತ್ತಿದ್ದು ಇದರ ಬೆಲೆ ಬರೋಬ್ಬರಿ 10 ಲಕ್ಷ ರೂ ಆಗಿದೆ.