ನನ್ ಅತ್ರ ಸಿನಿಮಾ ಮಾಡಿಸ್ಕೊಂಡು ಎಷ್ಟು ಜನ ದುಡ್ಡು ಕೊಡ್ದೆ ನಾಮ ಹಾಕಿದ್ದಾರೆ ಗೊತ್ತ.? ಇಂಡಸ್ಟ್ರಿಯ ಬಂಡವಾಳ ಬಯಲು ಮಾಡಿದ ನಟ ಶ್ರೀನಗರ ಕಿಟ್ಟಿ.

 

ಶ್ರೀನಗರ ಕಿಟ್ಟಿ ಅವರು ಬಹಳ ಗ್ಯಾಪ್ ತೆಗೆದುಕೊಂಡು ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅವರ ಗೌಳಿ ಎನ್ನುವ ಚಿತ್ರ ರಿಲೀಸ್ ಗೆ ರೆಡಿ ಆಗಿದ್ದು ಇದು ಅವರ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ಆಗಿದೆ. ಶ್ರೀನಗರ ಕಿಟ್ಟಿ ಅವರು ಒಂದು ರೀತಿ ಆರಕ್ಕೇರದ ಮೂರಕ್ಕಿಳಿಯದ ನಟ ಎಂದೇ ಹೇಳಬಹುದು. ಯಾಕೆಂದರೆ ಇವರ ಒಂದು ಫಿಲಂ ಸೂಪರ್ ಹಿಟ್ ಆಗುತ್ತದೆ ನಂತರ ಬರುವ ನಾಲ್ಕೈದು ಸಿನಿಮಾಗಳು ಜನರಿಗೆ ಸೌಂಡ್ ಮಾಡುವುದೇ ಇಲ್ಲ.

ಆದರೂ ಕೂಡ ಇವರು ಇಂಡಸ್ಟ್ರಿಯಲ್ಲಿ ಬಹಳ ಬಿಝಿ ಇರುತ್ತಾರೆ. ಇಷ್ಟೆಲ್ಲ ಅವಕಾಶಗಳು ಇದ್ದಮೇಲೆ ಅವರು ಬಹಳ ದೊಡ್ಡ ಮಾಡಿರುತ್ತಾರೆ ಎನ್ನುವುದೇ ಇಲ್ಲರ ಅಭಿಪ್ರಾಯ ಆದರೆ ಅವನು ದುಡ್ಡು ಮಾಡುವುದಕ್ಕಿಂತ ಒಳ್ಳೊಳ್ಳೆ ಸಿನಿಮಾ ಕೊಟ್ಟಿದ್ದಾರೆ ಎಂದು ಹೇಳಬಹುದು. ಅವರ ಹಿಟ್ ಸಿನಿಮಾಗಳಾದ ಗಿರಿ, ಇಂತಿ ನಿನ್ನ ಪ್ರೀತಿಯ, ಸವಾರಿ, ಸಂಜು ಮತ್ತು ಗೀತಾ, ಬಹುಪರಾಕ್ ಹುಡುಗರು ಇದೆಲ್ಲಾ ಒಂದು ತೂಕ.

ಆದರೆ ಥಿಯೇಟರ್ ಅಲ್ಲಿ ಸದ್ದು ಮಾಡದೆ ಫ್ಲಾಫ್ ಎನಿಸಿಕೊಂಡ ಒಲವೇ ಜೀವನ ಲೆಕ್ಕಾಚಾರ, ಮತ್ತೆ ಮುಂಗಾರು, ಟೋನಿ, ಕಿಲಾಡಿ ಕಿಟ್ಟಿ ಈ ಸಿನಿಮಾಗಳ ತೂಕವೇ ಬೇರೆ. ಪ್ರಚಾರವಿಲ್ಲದೆಯೋ ಅಥವಾ ಮತ್ತಿತರ ಕಾರಣಗಳಿಂದ ಈ ಸಿನಿಮಾಗಳು ಅಂದುಕೊಂಡಷ್ಟು ಗಳಿಕೆ ಮಾಡದೇ ಸೋತಿರಬಹುದು. ಆದರೆ ಈ ಚಿತ್ರಗಳ ಕಥೆಗಳು ಕೂಡ ಅತ್ಯದ್ಭುತವಾಗಿವೆ ಸದಾ ಸಿನಿಮಾಗಳಲ್ಲಿ ಪ್ರಯೋಗಾತ್ಮಕವಾಗಿಯೇ ತಮ್ಮನ್ನು ಇವರ ತೊಡಗಿಸಿಕೊಂಡಿದ್ದಾರೆ ಎಂದರೇ ತಪ್ಪಲ್ಲ.

ಪ್ರತಿ ಬಾರಿ ಕೂಡ ಒಂದೇ ರೀತಿ ಪಾತ್ರ ಅಥವಾ ಒಂದೇ ರೀತಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಎಲ್ಲ ಶೇಡಲ್ಲಿಯೂ ಕಾಣಿಸಿಕೊಂಡಿದ್ದಾರೆ. ಧೋನಿ ಮತ್ತು ಬಾಲ್ ಪೆನ್ ಸಿನಿಮಾಗಳನ್ನು ಅನುಭವ ಇಲ್ಲದೆ ನಿರ್ಮಾಣ ಮಾಡಿ ಕೈ ಸಹ ಸುಟ್ಟುಕೊಂಡಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಸಹ ಅವರ ಈ ಎರಡು ದಶಕದ ಸಿನಿ ಜರ್ನಿ ಬಗ್ಗೆ ಕೇಳಿದರೆ ನನಗೆ ತೃಪ್ತಿ ಇದೆ ಎನ್ನುತ್ತಾರೆ.

ಸಾಕಷ್ಟು ಅನುಭವಗಳನ್ನು ಪಡೆದಿದ್ದೇನೆ ಸಾಕಷ್ಟು ಕಲಿತಿದ್ದೇನೆ ಇನ್ನು ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಹೇಳುವ ಇವರು ಇಷ್ಟು ವರ್ಷದಲ್ಲಿ ಗಳಿಸಿದೆ ಹಣದ ಲೆಕ್ಕ ಕೇಳಿದರೆ ಇನ್ನು ಎಷ್ಟೋ ಸಿನಿಮಾಗಳಿಂದ ಹಣವೇ ಬಂದಿಲ್ಲ, ಯಾಕೆಂದರೆ ಅವರು ಸಹ ನಾನು ರೀತಿ ಸಂಕಷ್ಟಗಳ ಸಿಲುಕಿ ಹಾಕಿಕೊಂಡಿದ್ದಾರೆ. ಅವರು ನಿಷ್ಠೆಯಿಂದ ತಂದು ಕೊಟ್ಟರೆ ಖುಷಿಯಾಗಿ ತೆಗೆದುಕೊಳ್ಳುತ್ತೇನೆ, ಇಲ್ಲದಿದ್ದರೆ ಅವರ ಕಾಲರ್ ಹಿಡಿದು ವಸೂಲಿ ಮಾಡುವ ತನ ನನ್ನದಲ್ಲ ಎಂದು ಹೇಳುತ್ತಾರೆ.

ಮತ್ತು ಮುಂದಿನ ಸಿನಿಮಾಗಳ ಬಗ್ಗೆ ಕೇಳಿದರೆ ಈ ಕಾಲದಲ್ಲಿ ಏನು ಟ್ರೆಂಡ್ ಇದೆ ಆ ರೀತಿ ಸಿನಿಮಾ ಮಾಡಿದರೆ ಮಾತ್ರ ಅದು ವರ್ಕ್ ಆಗುತ್ತದೆ. ಗಳಿಕೆ ವಿಚಾರದಿಂದ ಹಿಡಿದು ಪ್ರದರ್ಶನ ಜನರ ಇಂಟರೆಸ್ಟ್ ಎಲ್ಲ ವಿಷಯಗಳಲ್ಲೂ ಸಹ ಇಂಡಸ್ಟ್ರಿಯಲ್ಲಿ ಸಾಕಷ್ಟು ಬದಲಾಗಿದೆ. ಈಗ ಒಂದು ಹಿಟ್ ಸಿನಿಮಾ ಕೊಡಬೇಕು ಎಂದರೆ ನಿರ್ಮಾಪಕರು ನಿರ್ದೇಶಕರು ಕಥೆ ಇಂಪ್ಯಾಕ್ಟ್ ಮತ್ತು ಹೀರೋ ಎಲ್ಲರೂ ಸಹ ಮುಖ್ಯ ಆಗುತ್ತಾರೆ. ಹೀಗೆ ಜನ ಏನು ಕೇಳುತ್ತಾರೋ ಅದನ್ನು ಕೊಟ್ಟಾಗ ಮಾತ್ರ ಅದು ವರ್ಕೌಟ್ ಆಗುತ್ತದೆ. ಅದನ್ನು ಬಿಟ್ಟು ನಾವಿನ್ನು ಅದೇ ಹಳೇ ಕಾಲದ ರೀತಿ ಇದ್ದರೆ ಅದು ರೀಚ್ ಆಗುವುದೇ ಇಲ್ಲ. ಔಟ್ ಆಫ್ ದ ಬಾಕ್ಸ್ ಎಂದಿಗೂ ಔಟ್ ಆಫ್ ದ ಬಾಕ್ಸ್ ಆಗಿಯೇ ಉಳಿದುಕೊಳ್ಳುತ್ತದೆ ಎನ್ನುತ್ತಾರೆ.

Leave a Comment