Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?

Posted on February 16, 2023 By Kannada Trend News No Comments on ಎರಡು ಪಕ್ಷದವರು ಮನೆಗೆ ಬಂದಿದ್ದು & ರಾಜಕೀಯ ಮಾತುಕತೆ ಆಗಿದ್ದು ನಿಜ ಸತ್ಯ ಒಪ್ಪಿಕೊಂಡ ಕಿಚ್ಚ. ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಗೊತ್ತ.?

 

ಕೆಲ ದಿನಗಳಿಂದ ಕರ್ನಾಟಕದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರ ರಾಜಕೀಯ ಎಂಟ್ರಿ (Politics entry) ಕುರಿತ ಚರ್ಚೆ ಜೋರಾಗಿ ನಡೆಯುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಕುರಿತು ಹಲವು ಸುದ್ದಿಗಳು ಹಬ್ಬಿದ್ದು, ಎಲ್ಲಾ ಕಡೆ ರಮ್ಯಾ (Ramya) ಅವರ ಕಡೆಯಿಂದ ಕಾಂಗ್ರೆಸ್ ಪಾಳಯಕ್ಕೆ (Congress Party offer) ಸುದೀಪ್ ಅವರನ್ನು ಎಳೆದುಕೊಳ್ಳಲು ಗಾಳ ಹಾಕಿಸಲಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದೆ.

ಇದರ ಸತ್ಯಾಂಶದ ಬಗ್ಗೆ ಹಲವರಲ್ಲಿ ಅನುಮಾನ ಇತ್ತು ನಂತರದಲ್ಲಿ ಡಿಕೆ ಶಿವಕುಮಾರ್ (D.K Shivakumar) ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ (meet) ಮಾಡಿದ್ದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿತು. ಇದರ ಬಗ್ಗೆ ಇಷ್ಟು ದಿನ ಎಷ್ಟು ಮಾತುಗಳು ಬರುತ್ತಿದ್ದರು, ಈವರೆಗೆ ಇದರ ಕುರಿತು ಪಕ್ಷವಾಗಲಿ ಅಥವಾ ಸುದೀಪ್ ಅವರಾಗಲಿ ಮಾತನಾಡಿರಲಿಲ್ಲ. ಈಗ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ರಾಜಕೀಯ ನಾಯಕರುಗಳು ತಮ್ಮನ್ನು ಭೇಟಿ ಆಗಿರುವುದರ ಕುರಿತು ಮೌನ ಮುರಿದಿದ್ದಾರೆ.

ಇದರ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರು ನಾನು ಒಬ್ಬ ಸೆಲೆಬ್ರಿಟಿ ರಾಜಕೀಯ ನಾಯಕರುಗಳು ನನ್ನನ್ನು ಭೇಟಿ ಆಗಲು ಬಂದಿದ್ದು ನಿಜ. ಆ ಮಾತನ್ನು ಸುಳ್ಳು ಎಂದು ಹೇಳಿ ನಾನು ತೇಲಿಸಲು ಆಗುವುದಿಲ್ಲ ರಾಜಕೀಯದ ವಿಷಯವಾಗಿ ಕೂಡ ಮಾತುಕತೆ ಆಯಿತು. ಈಗ ಅವರಿಗೆ ನನ್ನ ಮೇಲೆ ನಂಬಿಕೆ ಬಂದಿದೆ ಎರಡು ಪಕ್ಷಗಳ ಕಡೆಯಿಂದಲೂ ಆಫರ್ ಕೂಡ ಇದೆ. ಆದರೆ ನನಗೆ ಬಸವರಾಜ್ ಬೊಮ್ಮಾಯಿ, ಸುಧಾಕರ್, ರಮ್ಯಾ, ಡಿಕೆ ಶಿವಕುಮಾರ್ ಹೀಗೆ ಎಲ್ಲರೊಡನೆ ಒಳ್ಳೆಯ ಬಾಂಧವ್ಯವಿದೆ.

ಹಾಗಾಗಿ ಎರಡು ಪಕ್ಷದಲ್ಲಿ ಒಳ್ಳೆಯ ಸ್ನೇಹಿತರು ಇರುವುದರಿಂದ ಗೊಂದಲದಲ್ಲಿದ್ದೇನೆ. ಸದ್ಯಕ್ಕೆ ನಾನು ಇನ್ನು ಈ ಕುರಿತು ಏನು ನಿರ್ಧಾರ ತೆಗೆದುಕೊಂಡಿಲ್ಲ, ಈ ರೀತಿ ಇದ್ದಾಗ ನಿರ್ಧಾರ ತೆಗೆದುಕೊಳ್ಳುವುದು ಕೂಡ ಬಹಳ ಕಷ್ಟ ಆಗುತ್ತದೆ ಎಂದಿದ್ದಾರೆ. ರಾಜಕೀಯದ ಕುರಿತ ಖಂಡಿತವಾಗಿ ಎಮೋಷನ್ಸ್ ಇದೆ, ಆದರೆ ಅದರ ಜೊತೆ ನಿರ್ಧಾರವನ್ನು ಸೇರಿಸೋಕೆ ಆಗುವುದಿಲ್ಲ. ನಾನು ರಾಜಕೀಯಕ್ಕೆ ಬರುವುದು ಬೇಡ ಎನ್ನುವುದು ಜನರ ಅಭಿಪ್ರಾಯ ಆಗಿರಬಹುದು.

ಒಳ್ಳೆಯದನ್ನು ಮಾಡಬೇಕು ಎನ್ನುವ ಮನಸಿದ್ದರೆ ಅದಕ್ಕೆ ಪವರ್ ಬೇಕು ಎನ್ನುವ ಯಾವ ನಿಯಮಗಳು ಇಲ್ಲ. ಶೀಘ್ರವೇ ಇದರ ಕುರಿತು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಅದಕ್ಕಾಗಿ ಸಮಯ ಬೇಕು ಎಂದು ಸಹ ನುಡಿದಿದ್ದಾರೆ. ಸುದೀಪ್ ಅವರು ರಾಜಕೀಯಕ್ಕೆ ಬರುತ್ತಿದ್ದಾರೆ ಎನ್ನುವ ಮಾತು ಬರುತ್ತಿದ್ದಂತೆ ಹೆಚ್ಚಿನ ಜನ ಅವರು ರಾಜಕೀಯಕ್ಕೆ ಬರುವುದು ಬೇಡ ಎಂದೇ ಅಭಿಪ್ರಾಯ ಪಟ್ಟಿದ್ದರು. ಈ ವಿಷಯದ ಕುರಿತು ಕಾಮೆಂಟ್ ನೀಡಿದವರಲ್ಲಿ ಹೆಚ್ಚಿನ ಮತ ಸುದೀಪ್ ಅವರು ರಾಜಕೀಯಕ್ಕೆ ಬರುವುದು ಬೇಡ ಎನ್ನುವುದಾಗಿತ್ತು.

ಹಾಗಾಗಿ ಇದನ್ನೆಲ್ಲ ಗಮನಿಸಿರುವ ಸುದೀಪ್ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಎಲ್ಲರಿಗೂ ಕುತೂಹಲ ಉಂಟಾಗಿದೆ. ಸದ್ಯದಲ್ಲೇ ಮುಂದಿನ ತಿಂಗಳಿನಲ್ಲಿ ಕರ್ನಾಟಕದಲ್ಲಿ ಎಲೆಕ್ಷನ್ ಬರಲಿದೆ, ಹಾಗಾಗಿ ಸುದೀಪ್ ಅವರು ಏನಾದರೂ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಲು ನಿರ್ಧರಿಸಿದರೆ ಶೀಘ್ರವೇ ಅದರ ಕುರಿತು ಎಲ್ಲರಿಗೂ ಮಾಹಿತಿ ಸಿಗಲಿದೆ. ಆದರೆ ಕಿಚ್ಚ ಸುದೀಪ್ ಅವರು ಚುನಾವಣೆ ಕುರಿತ ಯಾವ ಚಟುವಟಿಕೆಗಳಲ್ಲಿಯೂ ಈವರೆಗೆ ಕಾಣಿಸಿಕೊಂಡಿಲ್ಲ.

ಬದಲಾಗಿ ಕರ್ನಾಟಕ ಚಲನಚಿತ್ರ ಕಪ್ (KCC) ಎನ್ನುವ ಕ್ರಿಕೆಟ್ ಲೀಗ್ (Cricket league) ಅಲ್ಲಿ ತಂಡದ ನಾಯಕನಾಗಿ ಗೆಲ್ಲುವ ಕಸರತ್ತು ನಡೆಸುತ್ತಿದ್ದಾರೆ. ಅವರ ಮುಂದಿನ ನಡೆ ಏನು ಎನ್ನುವುದನ್ನು ಕಾದು ನೋಡೋಣ ನಿಮ್ಮ ಪ್ರಕಾರ ಸುದೀಪ್ ಯಾವ ಪಕ್ಷವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ.? ತಪ್ಪದೆ ಕಾಮೆಂಟ್ ಮೂಲಕ ಉತ್ತರಿಸಿ

Viral News Tags:Kiccha sudeep, Sudeep
WhatsApp Group Join Now
Telegram Group Join Now

Post navigation

Previous Post: ಕಾಂತಾರ ಸಿನಿಮಾದ ಅಭಿನಯಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಟ ರಿಷಬ್ ಶೆಟ್ಟಿ ಕಾಂತರಾ ಸಿನಿಮಾ ಸಕ್ಸಸ್ ಗೆ ಮತ್ತೊಂದು ಗರಿ.
Next Post: ಶಿವಣ್ಣ ಮಾಡಿರೋ ಈ ದಾಖಲೆ ನಾ ಮುರಿಯೋಕೆ ಯಾವ ನಟನಿಂದಲೂ ಸಾಧ್ಯವಿಲ್ಲ. ಶಿವಣ್ಣನನ್ನು ಹೊಗಳುವ ಭರದಲ್ಲಿ ಇತರೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಪ್ರಥಮ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore