ಲೈವ್ ನಲ್ಲಿ ಬಂದು ರಿಕ್ವೆಸ್ಟ್ ಮಾಡುತ್ತಿರುವ ಸುಧಾರಾಣಿ(Sudharani) ಕಾರಣವೇನು ಗೊತ್ತಾ? ಸೋಶಿಯಲ್ ಮೀಡಿಯ ಬಂದ ಮೇಲೆ ಲೈವ್ ಎನ್ನುವ ಪದ ಹೆಚ್ಚು ಜನಪ್ರಿಯವಾಗುತ್ತಿದೆ. ಇಂದು ಜನ ತಮ್ಮ ವಿಷಯವನ್ನು ಎಲ್ಲರಿಗೂ ತಿಳಿಸಲು ಮೊದಲಿನಂತೆ ಎಲ್ಲೂ ಹರಸಾಹಸ ಪಡ ಬೇಕಾಗಿಲ್ಲ. ಸೋಶಿಯಲ್ ಮೀಡಿಯಾಗೆ ಬಂದು ಲೈವ್ ಮಾಡಿದರೆ ಸಾಕು ಕ್ಷಣಮಾತ್ರದಲ್ಲೇ ವೈರಲ್ ಆಗಿ ಸುದ್ದಿ ಎಲ್ಲಾ ಕಡೆ ಮುಟ್ಟುತ್ತದೆ.
ಹಾಗಾಗಿ ಸಾಮಾನ್ಯರೇ ಇರಲಿ ಸೆಲೆಬ್ರಿಟಿಗಳೇ ಇರಲಿ ಆಗಾಗ ವಿಶೇಷ ವಿಷಯದ ಬಗ್ಗೆ ಎಲ್ಲರಿಗೂ ಸುದ್ದಿ ಮುಟ್ಟಿಸಬೇಕು ಎಂದರೆ ಈಝಿಯಾಗಿ ಲೈವ್ ಗೆ ಬಂದು ಬಿಡುತ್ತಾರೆ. ಈಗ ಎಲ್ಲರಂತೆ ಹಿರಿಯ ನಟಿ ಸುಧಾರಾಣಿ ಅವರು ಸಹ ಲೈವ್ ಅಲ್ಲಿ ಬಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಸುಧಾರಾಣಿ ಅವರು ಈಗಲೂ ಸಹ ಸಿನಿಮಾ ಹಾಗೂ ಕಿರುತೆರೆಯಲ್ಲಿ ಬಹಳ ಬೇಡಿಕೆ ಇರುವ ನಟಿ.
ಒಂದಾದರ ಮೇಲೆ ಒಂದರಂತೆ ಕಿರುತೆರೆಯಲ್ಲಿ ಇವರ ಧಾರಾವಾಹಿಗಳು ಬರುತ್ತವೆ ಇರುತ್ತವೆ. ರಥಸಪ್ತಮಿ, ಜೊತೆ ಜೊತೆಯಲಿ ಈಗ ಶ್ರೀರಸ್ತು ಶುಭಮಸ್ತು ಹೀಗೆ ಒಂದಲ್ಲ ಒಂದು ಧಾರಾವಾಹಿಗಳು ಇವರನ್ನು ಜನರಿಗೆ ಹತ್ತಿರವಾಗಿಸುತ್ತಿವೆ. ಇದರ ಜೊತೆಗೆ ಸಿನಿಮಾಗಳಲ್ಲೂ ಕೂಡ ಸುಧಾರಾಣಿ ಅವರು ಬಿಝಿ ಆಗಿರುತ್ತಾರೆ. ಪೋಷಕ ಪಾತ್ರಗಳಲ್ಲಿ ಈಗಿನ ಹೀರೋಗಳಿಗೆ ಅಮ್ಮ ಆಗಿ ಮಿಂಚುತ್ತಿರುವ ಸುಧಾರಾಣಿ ಅವರು ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ ಆಗಿ ಇರುತ್ತಾರೆ.
ತಮ್ಮ ಮನೆಯ ವಿಶೇಷ ಸಂದರ್ಭಗಳ ಪ್ರಯುಕ್ತ ಅಥವಾ ಮನೆಯಲ್ಲಿ ಆಚರಿಸುವ ಹಬ್ಬ ಆಚರಣೆಗಳ ಕುರಿತು ಮತ್ತು ಇನ್ನಿತರ ವಿಷಯಗಳ ಕುರಿತು ಪೋಸ್ಟ್ಗಳನ್ನು ಹಾಕಿ ಅಭಿಮಾನಿಗಳ ಜೊತೆಗೆ ಕಷ್ಟ ಸುಖವನ್ನು ಹಂಚಿಕೊಳ್ಳುತ್ತಾರೆ. ಇದೀಗ ಮೊದಲ ಬಾರಿಗೆ ಅವರು ಲೈವ್ ಅಲ್ಲಿ ಬಂದು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ತಮ್ಮ ದುಃಖವನ್ನು ಹೇಳಿಕೊಳ್ಳುತ್ತಿರುವ ಜೊತೆಗೆ ತಮಗೆ ಸಹಾಯ ಮಾಡಬೇಕು ಎಂದು ಎಲ್ಲರಲ್ಲೂ ಮನವಿ ಸಹಾ ಸಲ್ಲಿಸುತ್ತಿದ್ದಾರೆ.
ಅಷ್ಟಕ್ಕೂ ನಟಿ ಸುಧಾರಾಣಿ ಅವರಿಗೆ ಬಂದಿರುವ ಕಷ್ಟವಾದರೆ ಏನು ಎಂದರೆ ಅವರ ಮನೆಯಲ್ಲಿ ಗಂಗಮ್ಮ ಎನ್ನುವ ಹೆಸರಿನ ಪುಟ್ಟ ನಾಯಿಮರಿ ಇತ್ತು. ಈ ನಾಯಿಮರಿ ಅನ್ನು ಸುಧಾರಣಿ ಅವರು ಬಹಳ ಹಚ್ಚಿಕೊಂಡಿದ್ದರಂತೆ. ಸುಧಾರಣೆಯವರು ಮಾತ್ರ ಅಲ್ಲದೆ ಅವರ ಕುಟುಂಬದ ಎಲ್ಲ ಸದಸ್ಯರ ಜೊತೆ ನಾಯಿ ಚೆನ್ನಾಗಿ ಹೊಂದಿಕೊಂಡಿದ್ದಂತೆ.
ಅದಕ್ಕೆ ಎಲ್ಲರೂ ಪ್ರೀತಿಯಿಂದ ಗಂಗಮ್ಮ ಎಂದು ಕರೆಯುತ್ತಿದ್ದರಂತೆ, ಇದೀಗ 15 ದಿನಗಳಿಂದ ಗಂಗಮ್ಮ ಕಾಣೆಯಾಗಿತ್ತು ಅದು ಎಲ್ಲರಿಗೂ ದುಃಖವನ್ನುಂಟು ಮಾಡಿದೆ. ಅದರ ಸಲುವಾಗಿ ಈಗಾಗಲೇ ನಾಯಿಗಳನ್ನು ಸಾಕುವ ತಾಣ ಪೊಲೀಸ್ ದೂರು ಹೀಗೆ ಹಲವು ಪ್ರಯತ್ನ ಮಾಡಿ ಏನಾಗಿದೆ ಎಂದು ಕಂಡು ಹಿಡಿಯಲು ನೋಡಿದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ. ಹಾಗಾಗಿ ಇದಕ್ಕೆ ಲೈವ್ ಬಂದರೆ ಒಳ್ಳೆ ಉಪಾಯ ಎಂದು ನಟಿ ಸುಧಾರಾಣಿ ಅವರ ಈ ರೀತಿ ಬಂದಿದ್ದಾರೆ.
ಲೈವ್ ಅಲ್ಲಿ ಬಂದು ತಮ್ಮ ನಾಯಿಯ ಮರಿಯ ಕುರಿತು ವಿಷಯ ತಿಳಿಸಿ ದಯವಿಟ್ಟು ಯಾರಾದರೂ ನಮ್ಮ ನಾಯಿ ಮರಿ ಕುರಿತು ಸುಳಿವು ಸಿಕ್ಕರೆ ಮಾಹಿತಿ ಕೊಡಿ. ಅಲ್ಲದೆ ಬಿಬಿಎಂಪಿ ಅವರು ಏನಾದರೂ ನಾಯಿಗಳನ್ನು ಶಿಫ್ಟ್ಯಾ ಮಾಡುವಾಗ ನಮ್ಮ ಗಂಗಮ್ಮ ನಿಮ್ಮ ಬಳಿ ಸೇರಿದೆ ಎಂದು ದಯವಿಟ್ಟು ನೋಡಿ ವಿಚಾರಿಸಿ. ಈಗಾಗಲೇ ನಾನು ಸಾಕಷ್ಟು ಅಲೆದಾಡಿದ್ದೇನೆ ಈಗಲೂ ಹುಡುಕಾಡುತ್ತಿದ್ದೇನೆ. ಕುಟುಂಬಸ್ಥರೆಲ್ಲರೂ ತುಂಬಾ ನೋವಿನಲ್ಲಿ ಇದ್ದೇವೆ. ದಯವಿಟ್ಟು ನಮ್ಮ ನಾಯಿಮರಿ ನಮಗೆ ಸಿಗುವಂತೆ ಮಾಡಿ ಎಂದು ಕೇಳಿಕೊಂಡಿದ್ದಾರೆ.