ಪುನೀತ್ ರಾಜ್ ಕುಮಾರ್ (Puneeth raj kumar) ಈ ಹೆಸರು ಆಕಾಶ, ಭೂಮಿ, ಸೂರ್ಯ, ಚಂದ್ರ ಇರುವವರೆಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತದೆ. ಅಣ್ಣಾವ್ರ ವಂಶದ ಕುಡಿಯಾಗಿ ಭೂಮಿಗೆ ಬಂದ ಈ ಪರಮಾತ್ಮ ಇಂದು ಅಭಿಮಾನಿಗಳ ದೇವವವಾಗಿದ್ದಾರೆ, ಹಾಗೂ ಕರ್ನಾಟಕದ ಕೋಟ್ಯಾಂತರ ಮಂದಿಯ ಮನಸ್ಸಿನಲ್ಲಿ ಪೂಜೆ ಮಾಡಿಸಿಕೊಳ್ಳುವ ದೈವವಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಸಮಾಜ ಸೇವೆಗೆ ಅವರಿಗೆ ಎಷ್ಟು ಪ್ರಶಸ್ತಿ ಬಂದರೂ ಕಡಿಮೆಯೇ.
ಅವರ ಮ.ರ.ಣೋ.ತ್ತ.ರವಾಗಿ ಮೈಸೂರು ವಿಶ್ವವಿದ್ಯಾಲಯವು (Mysore University) ಗೌರವ “ಡಾಕ್ಟರೇಟ್” (Doctorate) ನೀಡಿ ಗೌರವಿಸಿತು, ಇದಾದ ಬಳಿಕ ಕಳೆದ ವರ್ಷ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಕರ್ನಾಟಕ ಸರ್ಕಾರವು (Karnataka government) ಪುನೀತ್ ರಾಜಕುಮಾರ್ ಅವರಿಗೆ “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಇದೀಗ ನೆನ್ನೆ ಅಷ್ಟೇ ಮತ್ತೊಂದು ಪ್ರೀತಿಯ ಕಾಣಿಕೆ ಅಪ್ಪುವ ಹೆಸರಿಗೆ ಸಂದಿದೆ.
ಬೆಂಗಳೂರಿನ ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಸೇರುವ 12 ಕಿಲೋಮೀಟರ್ ಉದ್ದದ ರಿಂಗ್ ರೋಡ್ ಗೆ ಡಾಕ್ಟರ್ ಪುನೀತ್ ರಾಜಕುಮಾರ್ ರಸ್ತೆ (Puneeth raj kumar road) ಎಂದು ಹೆಸರಿಡಲಾಗಿದೆ. ಇದರ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅದ್ದೂರಿಯಿಂದ ಮಾಡಿದರು. ಕನ್ನಡ ಚಲನಚಿತ್ರ ಮಂಡಳಿ ಜೊತೆ ಸರ್ಕಾರವು ಜೊತೆಗಿದ್ದು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಎಂದಿನಂತೆ ಡಾಕ್ಟರ್ ರಾಜಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಅಂಬರೀಶ್, ವಸಿಷ್ಠ ಸಿಂಹ ಇನ್ನೂ ಮುಂತಾದ ಅನೇಕ ಕಲಾವಿದರು ಎಲ್ಲರೂ ಸೇರಿ ಕಾರ್ಯಕ್ರಮವನ್ನು ನಡೆಸಿ ಅಪ್ಪು ಹೆಸರಿಗೆ ಗೌರವ ತಂದರು. ಇದೀಗ ಸುಮಲತಾ ಅಂಬರೀಶ್ (Sumalatha Ambarish) ಅವರು ವಿಷಯದ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಪ್ಪು ಹೆಸರನ್ನು ಹನ್ನೆರಡು ಕಿಲೋಮೀಟರ್ ರಿಂಗ್ ರಸ್ತೆಗೆ ಇಡುವ ಸರ್ಕಾರದ ನಿರ್ಧಾರವನ್ನು ಹೃದಯಪೂರ್ವಕವಾಗಿ ಪ್ರಶಂಸಿಸುವೆ. ಅಪ್ಪು ನಮ್ಮೆಲ್ಲರ ಹೃದಯಕ್ಕೂ ಹತ್ತಿರವಾಗಿದ್ದವರು. ಈಗ ನಮ್ಮ ಮನೆಗೂ ಬಂದಿದ್ದಾರೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಕಂದಾಯ ಮಂತ್ರಿಗಳಾದ ಆರ್ ಅಶೋಕ್ ಮತ್ತು ಕನ್ನಡ ಚಲನಚಿತ್ರ ಮಂಡಳಿಯ ಸರ್ವರಿಗೂ ಧನ್ಯವಾದಗಳು ಎಂದು ಆ ರಸ್ತೆಯ ಫೋಟೋ ಜೊತೆ ಅಪ್ಪು ಫೋಟೋವನ್ನು ಕೂಡ ಸೇರಿಸಿ ಟ್ವೀಟ್ ಮಾಡಿದ್ದಾರೆ.
ಪುನೀತ್ ರಾಜಕುಮಾರ್ ಅವರು ಸುಮಲತಾ ಅವರಿಗೆ ಬಹಳ ಆತ್ಮೀಯರಾಗಿದ್ದರು. ಸುಮಲತಾ ಅಂಬರೀಶ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದ್ದೆ ಪಾರ್ವತಮ್ಮ ರಾಜಕುಮಾರ್ ಅವರು. ರಾಜ್ ಕುಮಾರ್ ಅವರ ರವಿಚಂದ್ರ ( Ravichandra) ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುವ ಮೂಲಕ ಸುಮಲತಾ ಅಂಬರೀಶ್ ಅವರು ಕನ್ನಡ ಚಿತ್ರರಂಗಕ್ಕೆ ಬಂದರು. ಹಲವು ವೇದಿಕೆಗಳಲ್ಲಿ ಈ ಕುರಿತು ಅವರು ಧನ್ಯವಾದ ಸಲ್ಲಿಸಿದ್ದಾರೆ.
ಮತ್ತು ಅಪ್ಪು ಅವರ ಜೊತೆಗಿದ್ದ ಅನುಬಂಧದ ಬಗ್ಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅಪ್ಪು ಅವರು ಬಾಲ್ಯದಲ್ಲಿ ಸುಮಲತಾ ಅಂಬರೀಶ್ ಅವರನ್ನು ನೋಡಿ ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದರಂತೆ. ಅಪ್ಪು ಅವರು ಅವರ ಸಾ.ವಿ.ನ ಹಿಂದಿನ ದಿನವೂ ಕೂಡ ಎಲ್ಲರೂ ಸೇರಿ ಮಾಡಿದ್ದ ಪಾರ್ಟಿಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಗಣೇಶ್ ಜೊತೆ ಸೇರಿ ನಾ ನಿನ್ನ ಆಸೆ ಕಂಡು ಬೆರಗಾಗಿ ಮೂಕನಾದೆ ಹಾಡನ್ನು ಹಾಡಿದ್ದರು. ಅಪ್ಪುಅನ್ನು ಕಳೆದುಕೊಂಡು ಅತೀವ ದುಃಖ ಅನುಭವಿಸುತ್ತಿರುವ ಆತ್ಮೀಯರಲ್ಲಿ ಸುಮಲತಾ ಅಂಬರೀಶ್ ಅವರು ಕೂಡ ಒಬ್ಬರಾಗಿದ್ದಾರೆ.