Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentMeghana Raj: ಮಗುನ ತಂದೆ-ತಾಯಿ ಬಳಿ ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘಾನ ಮೋಜು ಮಸ್ತಿ ಮಾಡುಳುತ್ತಿದ್ದಾಳೆ...

Meghana Raj: ಮಗುನ ತಂದೆ-ತಾಯಿ ಬಳಿ ಬಿಟ್ಟು ಥೈಲ್ಯಾಂಡ್ ನಲ್ಲಿ ಮೇಘಾನ ಮೋಜು ಮಸ್ತಿ ಮಾಡುಳುತ್ತಿದ್ದಾಳೆ ಎಂದವರಿಗೆ ಸುಂದರ್ ರಾಜ್ ಖಡಕ್ ಆಗಿ ಹೇಳಿದ್ದೇನು ಗೊತ್ತ.?

ನಟಿ ಮೇಘನಾ ರಾಜ್ ಜೀವನದಲ್ಲಿ ನಡೆಯಬಾರದ ಕಹಿ ಘಟನೆ ಒಂದು ನಡೆದು ಹೋಗಿದೆ. ಹತ್ತು ವರ್ಷಗಳ ಕಾಲ ಪ್ರೀತಿಸಿ, ಪರಸ್ಪರ ಅರ್ಥ ಮಾಡಿಕೊಂಡು ಎರಡು ಕುಟುಂಬಗಳ ಒಪ್ಪಿಗೆಯ ಮೇಲೆ ಕೈ ಹಿಡಿದಿದ್ದ ಪ್ರೇಮಿಯನ್ನು ಮದುವೆ ಆದ ಎರಡೇ ವರ್ಷಗಳಲ್ಲಿ ಮೇಘನಾ ಕಳೆದುಕೊಂಡಿದ್ದಾರೆ ಚಿರಂಜೀವಿ ಸರ್ಜಾ ಅವರು ಇದ್ದಕ್ಕಿದ್ದ ಹಾಗೆ ಅಕಾಲಿಕ ಮೃ.ತ್ಯು.ವಿ.ಗೆ ಈಡಾದರು ಆ ಸಮಯದಲ್ಲಿ ಮೇಘನಾ ರಾಜ್ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು.

ಈ ಸಾ.ವ.ನ್ನು ಕಂಡು ಹಾಗೂ ಮೇಘನಾ ರಾಜ್ ಅವರ ಅಂದಿನ ಪರಿಸ್ಥಿತಿ ಕಂಡು ಇಡೀ ಕರುನಾಡೆ ಮರುಗಿತ್ತು. ಈಗಲೂ ಸಹ ಮೇಘನಾ ರಾಜ್ ಅವರ ಕುರಿತ ಸುದ್ದಿಗಳನ್ನು ಓದುವಾಗ ಎಷ್ಟೋ ಹೆಣ್ಣು ಮಕ್ಕಳ ಕಣ್ಣಾಲಿ ತುಂಬುತ್ತದೆ. ಇಡೀ ಕರುನಾಡಿಗೆ ಒಂದೇ ಆಸೆ ಮೇಘನಾ ರಾಜ್ ತಮ್ಮ ಬಾಳಲ್ಲಿ ಆದ ಕಹಿ ಘಟನೆಯಿಂದ ಆದಷ್ಟು ಬೇಗ ಹೊರಬರಲಿ ಮೊದಲಿನಂತೆ ಲವಲವಿಕೆಯಿಂದ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳ ಮೂಲಕ ಕಾಣಿಸಿಕೊಳ್ಳಲಿ ಎಂದು.

ಅದಕ್ಕೆ ತಕ್ಕ ಹಾಗೆ ಮೇಘನಾ ರಾಜ್ ಅವರಿಗೆ ಕನ್ನಡದ ಜೊತೆ ಮಲಯಾಳಂ ಚಿತ್ರರಂಗದಲ್ಲೂ ಕೂಡ ಬಹಳ ಬೇಡಿಕೆ ಇದೆ. ಇದಲ್ಲದೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ ಅಲ್ಲೂ ಕೂಡ ಆಗಾಗ ಆಫರ್ ಗಳು ಬರುತ್ತವೆ. ಆದರೆ ಚಿರಂಜೀವಿ ಅವರ ಅಗಲಿಕೆಯ ನಂತರ ಮೇಘನಾ ರಾಜ್ ಅವರು ಮಾನಸಿಕವಾಗಿ ಬಹಳ ಕುಗ್ಗಿ ಹೋಗಿದ್ದರು.

ಅಲ್ಲದೆ ಮಗುವಿನ ಷೋಷಣೆಗೆ ಸಮಯ ಮೀಸಲಾಗಿಟ್ಟಿದ್ದ ಇವರು ತಮ್ಮ ಮಗುವಿಗೆ ಒಂದು ವರ್ಷ ಆದ ಬಳಿಕವಷ್ಟೇ ಕ್ಯಾಮರ ಎದುರಿಸುತ್ತೇನೆ ಎಂದು ಹೇಳಿಕೊಂಡಿದ್ದರು. ಆ ಮಾತಿನಂತೆಯೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು. ಈಗ ಒಳ್ಳೊಳ್ಳೆ ಕಥೆಗಳು ಇವರನ್ನು ಹುಡುಕಿ ಬರುತ್ತಿರುವ ಕಾರಣ ಮತ್ತೆ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ನಿರ್ಧಾರ ಮಾಡಿದ್ದಾರೆ.

ಇದರ ನಡುವೆ ಚಿರಂಜೀವಿ ಅವರ ಸಾ.ವಿ.ನ ನೋವು ಇನ್ನೂ ಇವರನ್ನು ಕಾಡುತ್ತಿದೆ ಹಾಗಾಗಿ ಇವರಿಬ್ಬರು ಒಟ್ಟಿಗೆ ಓಡಾಡಿದ್ದ ಜಾಗದಲ್ಲೆಲ್ಲಾ ಮತ್ತೆ ಸಮಯ ಕಳೆಯಲು ಇವರು ಬಯಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ತಮ್ಮ ಗೆಳತಿಯರೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಮೇಘನಾ ರಾಜ್ ಹೋಗಿದ್ದಾರೆ. ಯಾವ ವಿಷಯವನ್ನು ಹಂಚಿಕೊಳ್ಳದ ಅವರು ಸ್ನೇಹಿತರೊಂದಿಗೆ ಕಳೆದ ಸುಂದರ ಕ್ಷಣಗಳ ಫೋಟೋವನ್ನು ಇನ್ಸ್ಟಾಗ್ರಾಮಲ್ಲಿ ಶೇರ್ ಮಾಡಿದ್ದರು.

ತಕ್ಷಣವೇ ಸೋಶಿಯಲ್ ಮೀಡಿಯಾ ಗಳಲ್ಲಿ ತಂದೆ ತಾಯಿ ಬಳಿ ಮಗು ಬಿಟ್ಟು ಮೇಘನಾ ಮಜಾ ಮಾಡಲು ಥೈಲ್ಯಾಂಡ್ ಗೆ ಹೋಗಿದ್ದಾರೆ ಎಂದು ಶೀರ್ಷಿಕೆ ಕೊಟ್ಟು ಬರೆದಿದ್ದಾರೆ. ಇದನ್ನು ಕಂಡ ಅವರ ತಂದೆ ಸುಂದರ್ ರಾಜ್ ಈ ಬಗ್ಗೆ ಕಿಡಿ ಕಾಡಿದ್ದಾರೆ ನೆನ್ನೆ ಮಕ್ಕಳ ದಿನಾಚರಣೆ ಪ್ರಯುಕ್ತ ಕನ್ನಡ ಚಲನಚಿತ್ರ ಮಂಡಳಿಯು ಬಾಲ ಕಲಾವಿದರಾಗಿ ಕನ್ನಡದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಏರ್ಪಡಿಸಿತ್ತು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮೇಘನಾ ಅವರ ತಂದೆ ಸುಂದರ್ ರಾಜ್ ಅವರು ಮಾತನಾಡುವಾಗ ಇತರ ವಿಷಯಗಳ ಜೊತೆಗೆ ಈ ವಿಷಯವನ್ನು ಸಹ ಹೇಳಿಕೊಂಡು ಹೆಣ್ಣೆತ್ತ ತಂದೆಯ ಮನದ ನೋವನ್ನು ಹೊರಹಾಕಿದ್ದಾರೆ. ಅವಳ ಬಾಳಲ್ಲಿ ಆದ ಕಹಿ ಘಟನೆಯಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದೇವೆ. ಈ ರೀತಿಯಲ್ಲಾ ಶೀರ್ಷಿಕೆ ಕೊಟ್ಟು ಬರೆಯುತ್ತಿರುವುದು ನಮ್ಮ ಭಾವನೆಗಳ ಮೇಲೆ ಮನಸ್ಸಿನ ಮೇಲೆ ತುಂಬಾ ದುಷ್ಪರಿಣಾಮ ಬೀರಲಿದೆ ಎಂದು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.