Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ, ಭವಿಷ್ಯದಲ್ಲಿ ಚಿತ್ರರಂಗನ ಆಳೋ ದೊರೆ ಆಗ್ತಾನೆ ಎಂದು ಭವಿಷ್ಯ...

ನನ್ನ ಮೊಮ್ಮಗ ಸೂಪರ್ ಸ್ಟಾರ್ ಆಗ್ತಾನೆ, ಭವಿಷ್ಯದಲ್ಲಿ ಚಿತ್ರರಂಗನ ಆಳೋ ದೊರೆ ಆಗ್ತಾನೆ ಎಂದು ಭವಿಷ್ಯ ನುಡಿದ ಸುಂದರ್ ರಾಜ್

.

ಕನ್ನಡದ ಹಿರಿಯ ಕಲಾವಿದರಾದ ಸುಂದರ್ ರಾಜ್ ಪ್ರಮೀಳಾ ಜೋಷಾಯಿ ಅವರ ಇಡೀ ಕುಟುಂಬ ತಮ್ಮ ಜೀವನವನ್ನು ಕನ್ನಡ ಕಲಾದೇವಿಯ ಸೇವೆಗಾಗಿ ಮುಡುಪಾಗಿಟ್ಟಿದ್ದಾರೆ. ಅವರ ಕುಟುಂಬದ ಎಲ್ಲಾ ಸದಸ್ಯರು ಕೂಡ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುಂದರ್ ರಾಜ್ ಅವರು ನಾಯಕನಟನಾಗಿ, ಖಳನಾಯಕನಾಗಿ ಈಗ ಪೋಷಕ ಪಾತ್ರಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರೆ.

ಪತ್ನಿ ಪ್ರಮೀಳ ಜೋಷಾಯಿ ಅವರು ಸಹ ಆರಂಭದ ದಿನಗಳಲ್ಲಿ ನಾಯಕಿಯಾಗಿ ಈಗ ಪೋಷಕ ಪಾತ್ರದಲ್ಲಿ ಬಹಳ ಬೇಡಿಕೆ ಇರುವ ನಟಿ ಆಗಿದ್ದಾರೆ. ಇವರಿಬ್ಬರ ಒಬ್ಬಳೇ ಮುದ್ದಿನ ಮಗಳು ಮೇಘನ ರಾಜ್ ಕೂಡ ಕನ್ನಡ ಮಾತ್ರ ಅಲ್ಲದೆ ಮಲಯಾಳಂ ಚಿತ್ರರಂಗದಲ್ಲೂ ಸ್ಟಾರ್ ಹೀರೋಯಿನ್. ತಮಿಳು ಮತ್ತು ತೆಲುಗು ಹೀಗೆ ಬಹು ಭಾಷೆಗಳಲ್ಲಿ ನಟಿಸಿರುವ ಮೇಘನ ರಾಜ್ ಅವರು ಕೈ ಹಿಡಿದಿದ್ದು ಕೂಡ ಸ್ಟಾರ್ ಹೀರೋವನ್ನೇ.

ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾದ ಮೇಘನಾ ರಾಜ್ ಅವರು ಅತಿ ಕಡಿಮೆ ಸಮಯದಲ್ಲಿ ತಮ್ಮ ದಾಂಪತ್ಯ ಜೀವನದ ಆನಂದವನ್ನು ಕಳೆದುಕೊಂಡರು. ಅನಿರೀಕ್ಷಿತವಾಗಿ ಅವರ ಜೀವನದಲ್ಲಿ ನಡೆದ ಆ ದುರ್ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅವರಿಗೆ ಅವರ ಮಗನೇ ಈಗ ಬದುಕು ಭಾವನೆ ಮತ್ತು ಭರವಸೆ ಆಗಿದ್ದಾರೆ.

ಅರ್ಜುನ್ ಸರ್ಜಾ ಕುಟುಂಬದ ಕುಡಿ ಆಗಿದ್ದ ಚಿರಂಜೀವಿ ಸರ್ಜಾ ಅವರೇ ಮೇಘನ ಮಗನಾಗಿ ಅಂದರೆ ರಾಯನ್ ಸರ್ಜಾ ಆಗಿ ಮತ್ತೆ ಹುಟ್ಟಿದ್ದಾರೆ ಎನ್ನುವುದು ಅವರ ಕುಟುಂಬದ ನಂಬಿಕೆ. ಚಿರಂಜೀವಿ ಸರ್ಜಾ ಅವರ ಕುಟುಂಬ ಸಹಾ ಕಲಾವಿದರ ಕುಟುಂಬ. ಶಕ್ತಿಪ್ರಸಾದ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ, ಐಶ್ವರ್ಯ ಸರ್ಜಾ, ಆಶಾ ಹೀಗೆ ಇವರೆಲ್ಲರೂ ಸಹ ಕನ್ನಡ ಸಿನಿಮಾ ರಂಗದ ಹೆಸರಾಂತ ನಾಯಕರುಗಳು ಮತ್ತು ನಾಯಕಿ ರಾಗಿ ಗುರುತಿಸಿಕೊಂಡಿದ್ದಾರೆ.

ಹೀಗಾಗಿ ಮೇಘಾನ ಆಗಲಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಾಗಲಿ ಮೀಡಿಯಾದ ಮುಂದೆ ಹೋದಾಗ ಮೊದಲಿಗೆ ಕೇಳುತ್ತಿದ್ದ ಪ್ರಶ್ನೆ ರಾಯನ್ ಸರ್ಜಾ ಕೂಡ ಸಿನಿಮಾಗಳಲ್ಲಿ ಅಭಿನಯಿಸುತ್ತಾರ ಎಂದು ಈ ಮೊದಲು ಮೇಘನಾ ರಾಜ್ ಅವರನ್ನು ಸಾಕಷ್ಟು ಬಾರಿ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಆಗೆಲ್ಲಾ ಮೇಘ ನಾರಾಜ್ ಅವರು ನನ್ನ ಮಗ ಇನ್ನೂ ಚಿಕ್ಕವನು ಅವನು ಸೆಲೆಬ್ರಿಟಿ ಮಗ ಎನ್ನುವ ಕಾರಣಕ್ಕೆ ಅವನ ಜೀವನದ ಸಣ್ಣ ಸಣ್ಣ ಸಂಗತಿಗಳನ್ನು ಮಿಸ್ ಮಾಡಿಕೊಳ್ಳಬಾರದು.

ಒಬ್ಬ ಸಾಮಾನ್ಯ ಹುಡುಗನಂತೆ ಅವನು ಬೆಳೆಯಬೇಕು ಮತ್ತು ತನಗೆ ಬೇಕಾದ ವಿದ್ಯಾಭ್ಯಾಸವನ್ನು ಮೊದಲು ಪಡೆಯಬೇಕು ಆನಂತರ ಸಿನಿಮಾ ಆಗಲಿ ಅಥವಾ ಇನ್ಯಾವುದೇ ರಂಗದಲ್ಲಾಗಲಿ ಅವನು ತೊಡಗಿಕೊಳ್ಳಲಿ. ಅವನು ಯಾವುದನ್ನು ಆಯ್ದುಕೊಂಡರು ಸಹ ನಮ್ಮ ಸಪೋರ್ಟ್ ಅವನಿಗೆ ಇದ್ದೇ ಇರುತ್ತದೆ. ಈಗಾಗಲೇ ನಮ್ಮ ಕುಟುಂಬದ ಎಲ್ಲರೂ ಕಲಾವಿದರೆ ಆಗಿರುವುದರಿಂದ ಅವನು ಕೂಡ ಸಿನಿಮಾ ಆಯ್ದುಕೊಂಡರೂ ನಮ್ಮದೇನೂ ಅಡ್ಡಿಯಿಲ್ಲ ಎಂದಿದ್ದರು.

ಇದೀಗ ಸುಂದರ್ ರಾಜ್ ಅವರು ಮೊಮ್ಮಗನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಸುನಾಮಿ ಕಿಟ್ಟಿ ಅವರ ಸಿನಿಮಾ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇವರನ್ನು ಕೂಡ ಮೊಮ್ಮಗನ ಬಗ್ಗೆ ಪ್ರಶ್ನಿಸಲಾಗಿದೆ. ಆಗ ಅವರು ನಮ್ಮ ಕುಟುಂಬ ಹಾಗೂ ನನ್ನ ಮಗಳ ಕುಟುಂಬದ ಎಲ್ಲರೂ ಕಲಾವಿದರೇ ಆಗಿರುವುದರಿಂದ ನನ್ನ ಮೊಮ್ಮಗ ಕೂಡ ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಲಿದ್ದಾನೆ ಎಂದು ಮೊಮ್ಮಗನ ಮೇಲಿನ ಪ್ರೀತಿಯಿಂದ ಹೇಳಿದ್ದಾರೆ.

ಸದ್ಯಕ್ಕೆ ಸುಂದರ್ ರಾಜ್ ಅವರು ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕೆಲವು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವು ಅಭಿಮಾನಿಗಳು ಈಗಲೇ ಮಗುವಿನ ಬಗ್ಗೆ ಇಷ್ಟೊಂದು ಭರವಸೆ ಬೇಡ ಆತ ಮೊದಲು ವಿದ್ಯಾವಂತನಾಗಿ ಬೆಳೆದು ದೊಡ್ಡವನಾಗಲಿ. ಪ್ರತಿಭೆ ಮತ್ತು ಕಲೆ ಎಂಬುದು ಇದ್ದರೆ ಖಂಡಿತವಾಗಿಯೂ ಹೀರೋ ಆಗುತ್ತಾನೆ ಅಲ್ಲಿಯವರೆಗೂ ಪ್ರಚಾರ ಮಾಡುವುದು ಬೇಡ ಎಂದು ಹಿತ ಮಾತನಾಡಿದರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.