Sunday, May 28, 2023
HomeEntertainmentನಟಿ ಅಮೂಲ್ಯ ಮಕ್ಕಳ ನಾಮಕರಣಕ್ಕೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಮಕ್ಕಳಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ...

ನಟಿ ಅಮೂಲ್ಯ ಮಕ್ಕಳ ನಾಮಕರಣಕ್ಕೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಮಕ್ಕಳಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ಕುತ್ತಿಗೆಗೆ ಹಾಕ್ತಿರೋ ವೈರಲ್ ವಿಡಿಯೋ ನೋಡಿ.

 

ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಚಲುವಿನ ಚಿತ್ತಾರ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ್ದರು. ಆದರೆ ಇದಕ್ಕೂ ಮೊದಲು ಇವರು ಕಿರುತೆರೆಯ ಧಾರಾವಾಹಿಗಳಲ್ಲಿ ಮತ್ತು ಅನೇಕ ಕನ್ನಡ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ದರ್ಶನ್ ಅವರ ಲಾಲಿ ಹಾಡು, ಸುದೀಪ್ ಅವರ ಚಂದು, ಮಹಾರಾಜ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿ ಅಮೂಲ್ಯ ಅವರು ಬಾಲ ನಟಿಯಾಗಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ನಾಯಕ ನಟಿಯಾಗಿ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಕಾಣಿಸಿಕೊಂಡ ಮೇಲೆ ಈಕೆ ಯಶಸ್ಸಿನಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಸತತವಾಗಿ ಈಕೆ ಕಾಣಿಸಿಕೊಂಡ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಅವರ ಕಾಂಬಿನೇಷನ್ ನಲ್ಲಿ ಚೆಲುವಿನ ಚಿತ್ತಾರ, ಶ್ರಾವಣಿ ಸುಬ್ರಹ್ಮಣ್ಯ, ಖುಷಿ ಖುಷಿಯಾಗಿ, ಮುಗುಳುನಗೆ ಸಿನಿಮಾಗಳು ಬಂದಿವೆ. ಈ ನಾಲ್ಕು ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ಅಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದು ಚಂದನವನದ ಜನಪ್ರಿಯ ಜೋಡಿ ಆಗಿ ಇವರಿಬ್ಬರು ಹೆಸರುವಾಸಿಯಾಗಿದ್ದಾರೆ.

ವೈಯಕ್ತಿಕವಾಗಿ ಕೂಡ ಇವರಿಬ್ಬರ ನಡೆದ ಉತ್ತಮ ಸ್ನೇಹವಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಅಮೂಲ್ಯ ಅವರಿಗೆ ಹುಡುಗನನ್ನು ನೋಡಿ ಮದುವೆ ಮಾಡಿದ್ದರು. ರಾಜರಾಜೇಶ್ವರಿ ನಗರ ಕ್ಷೇತ್ರದ ಕಾರ್ಪೊರೇಟರ್ ಆಗಿರುವ ಜಿಎಚ್ ರಾಮಚಂದ್ರ ಮಗನಾದ ಜಗದೀಶ್ ಆರ್ ಚಂದ್ರ ಅವರ ಜೊತೆ 2017ರಲ್ಲಿ ಅಮೂಲ್ಯ ಅವರ ವಿವಾಹವು ನಡೆಯಿತು. ತಮ್ಮ ವೃತ್ತಿ ಜೀವನದಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್ ಮೂಲಕ ಗುರುತಿಸಿಕೊಳ್ಳುತ್ತಿದ್ದ ನಟಿ ಅಮೂಲ್ಯ ಅವರು ಅತಿ ಚಿಕ್ಕ ವಯಸ್ಸಿಗೆ ವೈವಾಹಿಕ ಜೀವನದ ಕಡೆ ಕೂಡ ಮುಖ ಮಾಡಿದರು.

ಈ ಮೂಲಕ ತಾನು ಸಿನಿಮಾಗಳಲ್ಲಿ ಮಾತ್ರ ಅಲ್ಲ ನಿಜ ಜೀವನವನ್ನು ಕೂಡ ಅಷ್ಟೇ ಅತ್ಯುತ್ತಮವಾಗಿ ಜವಾಬ್ದಾರಿಗಳನ್ನು ನಡೆಸಿಕೊಂಡು ಹೋಗುತ್ತೇನೆ ಎನ್ನುವುದನ್ನು ನಿರೂಪಿಸಿದ್ದರು. ಮದುವೆ ಆದ ಕೆಲವು ವರ್ಷಗಳಲ್ಲಿ ಈಡೀ ಕರ್ನಾಟಕದ ಖುಷಿಪಡುವ ಸುದ್ದಿ ನೀಡಿದ ಇವರು ಇದೇ ವರ್ಷ ಶಿವರಾತ್ರಿ ಹಬ್ಬದ ದಿನದಂದು ಅವಳಿಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಸಿನಿಮಾರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡು ವೈಯಕ್ತಿಕ ಜೀವನದಲ್ಲಿ ಖುಷಿಯಾಗಿದ್ದ ಇವರು ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಬಹಳ ಆಕ್ಟಿವ್ ಆಗಿದ್ದರು.

ರಾಜಕೀಯ ಸಂಬಂಧ ಪಟ್ಟ ಹಾಗೆ ಹಾಗೂ ತಮ್ಮ ಪರ್ಸನಲ್ ಲೈಫಿಗೆ ಸಂಬಂಧಪಟ್ಟ ಹಾಗೆ ಅಭಿಮಾನಿಗಳ ಜೊತೆ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಮಕ್ಕಳಾದ ಮೇಲಂತೂ ಅವರಿಗಾಗಿ ಸಮಯ ಮೀಸಟ್ಟಿರುವ ಅಮೂಲ್ಯ ಅವರು ಇಬ್ಬರು ಮಕ್ಕಳವನ್ನು ಸುಧಾರಿಸುವಲ್ಲಿ ಸಾಕಾಗಿ ಹೋಗಿದ್ದಾರೆ. ಈ ನಡುವೆ ಮಕ್ಕಳ ಜೊತೆ ಫೋಟೋಶೂಟ್ ಮಾಡಿಸಿ ಅದನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಕಳೆದ ವಾರ ತಮ್ಮ ಅವಳಿ ಮಕ್ಕಳಿಗೆ ಅಥರ್ವ ಮತ್ತು ಆಧವ್ ಎಂದು ನಾಮಕರಣ ಮಾಡಿದ ಇವರು ಇಂದು ತಮ್ಮ ಚಿತ್ರರಂಗದ ಸ್ನೇಹಿತರಿಗಾಗಿ ಕಾರ್ಯಕ್ರಮ ಒಂದನ್ನು ಏರ್ಪಡಿಸಿದ್ದರು.

ಈ ಕಾರ್ಯಕ್ರಮಕ್ಕೆ ಕಿರುತೆರೆಯ ಹಾಗೂ ಸಿನಿಮಾ ಇಂಡಸ್ಟ್ರಿಯ ಅನೇಕ ಗಣ್ಯರು ಬಂದು ಮಕ್ಕಳಿಗೆ ಹಾಗೂ ಅಮೂಲ್ಯ ದಂಪತಿಗೆ ಹರಸಿ ಹಾರೈಸಿದ್ದಾರೆ. ಗೀತಾ ಧಾರಾವಾಹಿ ಖ್ಯಾತಿಯ ಭವ್ಯ ಗೌಡ, ಕನ್ನಡದ ಜನಪ್ರಿಯ ನಿರೂಪಕಿ ಚೈತ್ರ ವಾಸುದೇವನ್, ನಮ್ ಏರಿಯಾಲಿ ಒಂದಿನ ಸಿನಿಮಾ ಖ್ಯಾತಿಯ ನಟಿ ಮೇಘನಾ ಗಾವ್ಕರ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಅಮೂಲ್ಯ ಅವರ ಕುಟುಂಬದ ಎಲ್ಲಾ ಕಾರ್ಯಕ್ರಮವನ್ನು ಮುಂದೆ ನಿಂತು ನಡೆಸಿಕೊಡುವ ಗೋಲ್ಡನ್ ದಂಪತಿಗಳೇ ಈ ಕಾರ್ಯಕ್ರಮದಲ್ಲೂ ಮಿಂಚುತ್ತಿದ್ದರು.

ಅಮೂಲ್ಯ ಅವರಿಗೆ ಬಹಳ ಆಪ್ತರಾಗಿರುವ ದರ್ಶನ್ ಅವರು ಸಹಾ ಬಂದು ಶುಭ ಹಾರೈಸಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಕ್ಕಳಿಗೆ ಭರ್ಜರಿ ಉಡುಗೊರೆಯನ್ನೇ ತಂದಿದ್ದಾರೆ. ಹೌದು ಅವಳಿ ಮಕ್ಕಳು ಇಬ್ಬರಿಗೂ ಕೂಡ ಚಿನ್ನದ ಸರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಮಗುವಿಗೆ ಚಿನ್ನದ ಸರ ಹಾಕುತ್ತಿರುವಂತಹ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೃರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.