ನಟಿ ಅಮೂಲ್ಯ ಮಕ್ಕಳ ನಾಮಕರಣಕ್ಕೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಮಕ್ಕಳಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ಕುತ್ತಿಗೆಗೆ ಹಾಕ್ತಿರೋ ವೈರಲ್ ವಿಡಿಯೋ ನೋಡಿ.
ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಚಲುವಿನ ಚಿತ್ತಾರ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದ್ದರು. ಆದರೆ ಇದಕ್ಕೂ ಮೊದಲು ಇವರು ಕಿರುತೆರೆಯ ಧಾರಾವಾಹಿಗಳಲ್ಲಿ ಮತ್ತು ಅನೇಕ ಕನ್ನಡ ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ದರ್ಶನ್ ಅವರ ಲಾಲಿ ಹಾಡು, ಸುದೀಪ್ ಅವರ ಚಂದು, ಮಹಾರಾಜ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿ ಅಮೂಲ್ಯ ಅವರು ಬಾಲ ನಟಿಯಾಗಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ನಟಿಯಾಗಿ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಕಾಣಿಸಿಕೊಂಡ ಮೇಲೆ ಈಕೆ ಯಶಸ್ಸಿನಲ್ಲಿ…