ಅಮೂಲ್ಯ ಅವರು ಬಾಲನಟಿ ಇರುವಾಗಲೇ ಚಿತ್ರರಂಗಕ್ಕೆ ಕಾಲಿಟ್ಟವರು ಹೌದು ಲಾಲಿ ಹಾಡು ಎಂಬ ಸಿನಿಮಾದಲ್ಲಿ ನಾಯಕ ದರ್ಶನ್ ಅವರ ಜೊತೆ ತೆರೆಯನ್ನು ಹಂಚಿಕೊಳ್ಳುವುದರ ಮೂಲಕ ಮೊಟ್ಟಮೊದಲಗೆ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ಹಲವು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಆದರೆ ಇವರು ಪೂರ್ಣ ಪ್ರಮಾಣದ ನಾಯಕಿ ನಟಿಯಾಗಿ ಗುರುತಿಸಿಕೊಂಡಿದ್ದು ಚೆಲುವಿನ ಚಿತ್ತಾರ ಎಂಬ ಸಿನಿಮಾದಲ್ಲಿ. ಹೌದು ಕೇವಲ ತನ್ನ ಹದಿನಾರನೇ ವಯಸ್ಸಿಗೆ ಹೀರೋಯಿನ್ ಆಗಿ ಗುರುತಿಸಿಕೊಂಡರು ತದನಂತರ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಗಜಕೇಸರಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಚೆಲುವಿನ ಚಿತ್ತಾರ, ಶ್ರಾವಣಿ ಮತ್ತು ಸುಬ್ರಮಣ್ಯ.
ನೆನಪಿರಲಿ ಪ್ರೇಮ್ ಅವರ ಜೊತೆ ಮಳೆ ಸಿನಿಮಾ, ದುನಿಯಾ ವಿಜಯ್ ಅವರ ಜೊತೆ ಮಾಸ್ತಿಗುಡಿ ಸಿನಿಮಾ ಹೀಗೆ ಕನ್ನಡದ ಬಹುತೇಕ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ನಟನೆಯ ಉತುಂಗ ಶಿಖರದಲ್ಲಿ ಇರುವಾಗಲಿಯೇ ನಟಿ ಅಮೂಲ್ಯ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ನಡುವೆ ಗಾಸಿಪ್ ಒಂದು ಪ್ರಾರಂಭವಾಗುತ್ತದೆ. ಇವರಿಬ್ಬರ ನಡುವೆ ಪ್ರೀತಿ ಪ್ರೇಮ ಇದೆ ಎಂಬ ವಿಚಾರ ಹೊರಬರುತ್ತದೆ ಆದರೆ ನಿಜಕ್ಕೂ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು. ಈ ಒಂದು ವಿವಾದದಿಂದ ಹೊರಬರಬೇಕು ಎಂಬ ಕಾರಣಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬೆಂಗಳೂರಿನಲ್ಲಿ ವಾಸವಾಗಿ ಇರುವಂತಹ ಜಗದೀಶ್ ಎಂಬುವ ರಾಜಕಾರಣಿ ಮತ್ತು ಬಿಸಿನೆಸ್ ಮ್ಯಾನ್ ಅವರನ್ನು ಅಮೂಲ್ಯ ಅವರಿಗೆ ತೋರಿಸಿ ಇವರಿಬ್ಬರಿಗೂ ಮದುವೆ ಮಾಡಿಸುತ್ತಾರೆ.
ಮದುವೆಯಾದ ಒಂದೆರಡು ವರ್ಷ ನಟಿ ಅಮೂಲ್ಯ ಅವರು ಚಿತ್ರರಂಗದಲ್ಲಿ ಕಾಣಿಸದೆ ಇಲ್ಲದೆ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ. ಯಾವುದೇ ವಿಚಾರವನ್ನಾಗಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಆ ವಿಚಾರವನ್ನು ಮುಟ್ಟಿಸುತ್ತಾರೆ. ಇನ್ನು ಅಮೂಲ್ಯ ಅವರು ಇನ್ಸ್ಟಾಗ್ರಾಮ್ ಅಲ್ಲಿ ಆಗಾಗ ಅಪ್ಲೋಡ್ ಮಾಡುವಂತಹ ವಿಡಿಯೋಗಳು ಹೆಚ್ಚು ಜನ ಮನ್ನಣೆಯನ್ನು ಗಳಿಸಿಕೊಳ್ಳುತ್ತದೆ. ಸದ್ಯಕ್ಕೆ ಅಮೂಲ್ಯ ಅವರು ಕಳೆದ ನಾಲ್ಕು ತಿಂಗಳ ಹಿಂದೆ ಎಷ್ಟೇ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ ಎಲ್ಲಿಯೂ ಕೂಡ ತಮ್ಮ ಮಕ್ಕಳ ಫೋಟೋವನ್ನು ಅಮೂಲ್ಯ ಆಗಲಿ ಅಥವಾ ಅವರ ಪತಿಯಾಗಲಿ ರಿವೀಲ್ ಮಾಡಿರಲಿಲ್ಲ.
ಆದರೆ ಇದೇ ಮೊದಲ ಬಾರಿಗೆ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಅವರು ವಿಶೇಷವಾದಂತಹ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ ಈ ಫೋಟೋ ಶೂಟ್ ನಲ್ಲಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಇಬ್ಬರೂ ಅವಳಿ ಮಕ್ಕಳ ಜೊತೆ ಫೋಟೋವನ್ನು ತೆಗೆಸಿಕೊಂಡು ಅದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಈ ಫೋಟೋ ಬಹಳನೆ ಮನಮೋಹಕವಾಗಿದ್ದು ಇಬ್ಬರು ಮುದ್ದು ಮಕ್ಕಳು ಕೂಡ ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಈ ಮುದ್ದು ಮಕ್ಕಳನ್ನು ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ ಅಷ್ಟೇ ಅಲ್ಲದೆ ದೃಷ್ಟಿಯನ್ನು ಕೂಡ ಬೀಳುತ್ತದೆ ಅಷ್ಟು ಸುಂದರವಾಗಿದ್ದರೆ ಮಕ್ಕಳ ಮುಖವನ್ನು ನೋಡಿದರೆ ಮನಸ್ಸಿನಲ್ಲಿ ಒಂದು ರೀತಿಯಾದಂತಹ ಆನಂದ ಉಂಟಾಗುತ್ತದೆ ಅಂತ ಹಿರಿಯರು ಹೇಳುತ್ತಾರೆ. ಆ ಅನುಭವ ಈ ವಿಡಿಯೋ ನೋಡಿದರೆ ನಿಮಗೆ ತಿಳಿಯುತ್ತದೆ ಈ ಮಕ್ಕಳನ್ನು ನೋಡಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.