Home Entertainment ಸಂತಸದ ಸುದ್ದಿ ಹಂಚಿಕೊಂಡ ಹಾಸ್ಯ ನಟ ಸಾಧುಕೋಕಿಲ, ಸಾಧು ಅಭಿಮಾನಿಗಳು ತಪ್ಪದೇ ಇದನ್ನು ನೋಡಿ.

ಸಂತಸದ ಸುದ್ದಿ ಹಂಚಿಕೊಂಡ ಹಾಸ್ಯ ನಟ ಸಾಧುಕೋಕಿಲ, ಸಾಧು ಅಭಿಮಾನಿಗಳು ತಪ್ಪದೇ ಇದನ್ನು ನೋಡಿ.

0
ಸಂತಸದ ಸುದ್ದಿ ಹಂಚಿಕೊಂಡ ಹಾಸ್ಯ ನಟ ಸಾಧುಕೋಕಿಲ, ಸಾಧು ಅಭಿಮಾನಿಗಳು ತಪ್ಪದೇ ಇದನ್ನು ನೋಡಿ.

ಸಾಧು ಕೋಕಿಲ ಅದ್ಭುತ ಹಾಸ್ಯಗಾರ, ಪೋಷಕ ನಟ, ಸಂಗೀತ ನಿರ್ದೇಶಕ, ಬರಹಗಾರ, ಹಾಡುಗಾರ, ಕೀಬೋರ್ಡ್ ಪ್ಲೇಯರ್, ಹೀಗೆ ಸಾಕಷ್ಟು ಪ್ರತಿಭೆಯನ್ನು ಒಳಗೊಂಡಿರುವ ಕಲಾವಿದ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಸಾಧುಕೋಕಿಲ ಅವರ ಹಾಸ್ಯ ನಿಮ್ಮೆಲ್ಲರನ್ನು ನಕ್ಕು ನಗಿಸುವಂತೆ ಮಾಡುತ್ತದೆ ಸಾಧುಕೋಕಿಲ ಇರುವಂತಹ ಸಿನಿಮಾ ಎಲ್ಲವು ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸದ್ದು ಮಾಡುತ್ತದೆ. ಇನ್ನು ಸಾಧು ಕೋಕಿಲ ಅವರು ಹೀರೋಗಳಿಗಿಂತಲೂ ಕೂಡ ಹೆಚ್ಚು ಹೆಚ್ಚು ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಸಾಧುಕೋಕಿಲ ಅವರ ಡೇಟ್ ಸಿಗುವುದೇ ವಿರಳ ಸಾಧು ಅವರು ಒಂದು ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡುತ್ತಿದ್ದಾರೆ ಅಂದರೆ ಆ ಸಿನಿಮಾ ಭಾಗಶಹ ಗೆದ್ದಂತೆಯೇ ಲೆಕ್ಕ .

ಇಲ್ಲಿಯವರೆಗೂ ಕೂಡ ಸುಮಾರು 20 ಅಧಿಕ ಸಿನಿಮಾದಲ್ಲಿ ಹಾಸ್ಯ ಮತ್ತು ಪೋಷಕ ಪಾತ್ರದಲ್ಲಿ ನಟನೆ ಮಾಡಿದ್ದಾರೆ ಸುಮಾರು ಹತ್ತಕ್ಕೂ ಅಧಿಕ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ರಕ್ತ ಕಣ್ಣೀರು ಎಂಬ ಸಿನಿಮಾ ಗೆ ಮ್ಯೂಸಿಕ್ ಕಂಪೋಸರ್ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇದಕ್ಕೂ ಮೊದಲು ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಆದರೆ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ ಸಿನಿಮಾ ಅಂದರೆ ಅದು ರಕ್ತ ಕಣ್ಣೀರು ಅಂತಾನೆ ಹೇಳಬಹುದು. ಈ ಸಿನಿಮಾದ ನಂತರ ಎದೆಗಾರಿಕೆ, ಅಮ್ಮ ಐ ಲವ್ ಯು, ಇನ್ನು ಮುಂತಾದ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದರೆ. ಇನ್ನು ಸಾಧುಕೋಕಿಲ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು ಅವರು ಕೂಡ ಸಂಗೀತದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಕಾರಣ ಸಂಗೀತ ತರಬೇತಿಯನ್ನು ಸ್ವತಃ ಸಾಧುಕೋಕಿಲ ಅವರೇ ನೀಡುತ್ತಿದ್ದಾರೆ.

ಇದಿಷ್ಟು ಕೂಡ ಸಾಧುಕೋಕಿಲ ಅವರ ವೈಯಕ್ತಿಕ ವಿಚಾರ ಆದರೆ ಇದೀಗ ಸಾಧುಕೋಕಿಲ ಅವರು ಮತ್ತೊಂದು ಸಂತಸದ ಸುದ್ದಿಯನ್ನು ತಮ್ಮ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಹೌದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮತ್ತು ಸ್ಟಾರ್ ನಟ ನಟಿಯರು ತಮ್ಮ ಜೀವನದಲ್ಲಿ ಹಾಗೂ ಹೋಗು ಎಲ್ಲಾ ಘಟನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ತಮ್ಮ ಅಭಿಮಾನಿಗಳೊಟ್ಟಿಗೆ ತಮ್ಮ ಸಿನಿಮಾದ ಅಪ್ಡೇಟ್ಸ್ ಗಳನ್ನು ಕೂಡ ಹಂಚಿಕೊಳ್ಳುತ್ತಾರೆ .ಇನ್ನು ಈ ಕಾಲದಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಮಾಡಿದವರು ಯಾರಿದ್ದಾರೆ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಕೂಡ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ ನಮ್ಮ ಜೀವನದ ಒಂದು ಭಾಗಶಹ ಅಂಶವಾಗಿದೆ.

ಸಾಮಾನ್ಯ ಜನರು ಸೋಶಿಯಲ್ ಮೀಡಿಯಾವನ್ನು ಬಳಕೆ ಮಾಡುತ್ತಿಲ್ಲ ಅಂದರೆ ನಾವು ನಂಬಬಹುದು ಆದರೆ ಸೆಲೆಬ್ರಿಟಿಗಳು ಕೂಡ ಸೋಶಿಯಲ್ ಮೀಡಿಯಾವನ್ನು ಬಳಸುವುದಿಲ್ಲ ಎಂದರೆ ನೀವು ನಂಬುತ್ತೀರಾ.? ಖಂಡಿತವಾಗಿಯೂ ಕೂಡ ಇದನ್ನು ನಂಬುವುದಕ್ಕೆ ಸ್ವಲ್ಪ ಕಷ್ಟ ಸಾಧ್ಯವಾಗಬಹುದು ಆದರೂ ಕೂಡ ಇದು ಸತ್ಯ. ಹೌದು ಸಾಧು ಕೋಕಿಲ ಅವರು ಇಲ್ಲಿಯವರೆಗೂ ಯಾವುದೇ ರೀತಿಯಾದಂತಹ ಸೋಶಿಯಲ್ ಮೀಡಿಯಾವನ್ನು ಬಳಕೆ ಮಾಡುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾ ಅಕೌಂಟನ್ನು ಕ್ರಿಯೇಟ್ ಮಾಡಿದ್ದಾರೆ. ಹೌದು ಇನ್ಸ್ಟಾಗ್ರಾಂ ಫೇಸ್ಬುಕ್ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಸದಾಗಿ ಕ್ರಿಯೇಟ್ ಮಾಡಿದ್ದಾರೆ.

ಈ ಒಂದು ಖಾತೆಯ ಮುಖಾಂತರ ತಮ್ಮ ಅಭಿಮಾನಿಗಳಿಗೆ ತಮ್ಮ ದಿನಚರಿ ಹಾಗೂ ಸಿನಿಮಾದ ಅಪ್ಡೇಟ್ಸ್ ಅನ್ನು ಇನ್ನು ಮುಂದೆ ನಾನು ನೀಡುತ್ತೇನೆ ಎಂದು ಸಾಧುಕೋಕಿಲ ಅವರು ವಿಡಿಯೋ ಒಂದನ್ನು ಮಾಡಿ ಅದನ್ನು ತಮ್ಮ ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದಂತಹ ಸಾಧುಕೋಕಿಲ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸಾಧುಕೋಕಿಲ ಅವರು ನಿಜಕ್ಕೂ ಗ್ರೇಟ್ ಅಂದಿದ್ದಾರೆ ಏಕೆಂದರೆ ಇಷ್ಟು ವರ್ಷಗಳ ಕಾಲ ಸೋಶಿಯಲ್ ಮೀಡಿಯಾದಿಂದ ದೂರ ಇದ್ದು ಇದೀಗ ತಮ್ಮ ಅಭಿಮಾನಿಗಳ ಬಾಂಧವ್ಯವನ್ನು ಬೆಸೆಯುವ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾಗೆ ಬಂದಿರುವುದು. ಸಾಧು ಕೋಕಿಲ ಅವರು ಅಫಿಶಿಯಲ್ ಆಗಿ ತಾವು ಇನ್ನು ಮುಂದೆ ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡುತ್ತೇನೆ ಎಂದು ಹೇಳಿರುವಂತಹ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

LEAVE A REPLY

Please enter your comment!
Please enter your name here