ಆರೋಗ್ಯವಾಗಿ ಬದುಕಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇದೆ ಅದರಲ್ಲೂ ಈಗಿನ ಕಾಲದಲ್ಲಿ BP, ಶುಗರ್, ಥೈರಾಯ್ಡ್, PCOD, ಇನ್ಫಾರ್ಟಿಲಿಟಿ, ಓಬೆಸಿಟಿ ಪ್ರತಿಯೊಬ್ಬರನ್ನು ಭಾಧಿಸುತ್ತಿದೆ. ಇವುಗಳಿಂದ ದೂರವಾಗಿ ಆರೋಗ್ಯವಾಗಿ ಜೀವಿಸಬೇಕು ಎಂದರೆ ಅದು ನಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿಯಲ್ಲಿ ಅಡಗಿದೆ.
ನಾವು ತಿನ್ನುವ ಆಹಾರದ ಮೂಲಕ ನಮ್ಮ ದೇಹಕ್ಕೆ ಸೇರುವ ಪೋಷಕಾಂಶಗಳ ಕಾರಣದಿಂದಾಗಿ ನಮ್ಮ ದೇಹಕ್ಕೆ ಶಕ್ತಿ ಬರುತ್ತದೆ. ಆದರೆ ಕೆಲವೊಮ್ಮೆ ಇವುಗಳಲ್ಲಿ ವ್ಯತ್ಯಾಸವಾದಾಗ ಆ ಪ್ರಕಾರವಾಗಿ ಹಾರ್ಮೋನ್ ವೇರಿಯೇಶನ್ ಕೂಡ ಹಾಕಿ ನಾವು ಈ ಮೇಲೆ ತಿಳಿಸಿದ ದೇಹದ ಡಿಸ್ಆರ್ಡರ್ಗಳಿಗೆ ತುತ್ತಾಗುತ್ತೇವೆ.
ಇದಕ್ಕೆಲ್ಲ ಸುಲಭ ಪರಿಹಾರ ಏನೆಂದರೆ ಉಪವಾಸ ಮಾಡುವುದು ಉಪವಾಸದಲ್ಲೂ ಕೂಡ ಹಲವು ರೀತಿ ಇದೆ ಕೆಲವರು ಭಕ್ತಿಯಿಂದ ಉಪವಾಸ ಮಾಡಿದರೆ, ಕೆಲವರು ಆರೋಗ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಕೆಲವರು ಹೋರಾಟ ಸತ್ಯಾಗ್ರಹ ಅಥವಾ ಮನೆಯಲ್ಲಿ ಜಗಳಗಳಾದ ಊಟ ಬಿಡುತ್ತಾರೆ.
ಇವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಂಟರಿಮೆಂಟ್ ಫಾಸ್ಟಿಂಗ್ ಎನ್ನುವುದು ಬಹಳ ಫೇಮಸ್ ಆಗಿದೆ. ಹಲವರು ಇದನ್ನು ಆಚರಿಸುತ್ತಾರೆ. ಅದರಲ್ಲೂ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಮಾತ್ರವಲ್ಲದೆ ಕಾಯಿಲೆಗಳನ್ನು ಗುಣ ಮಾಡಿಕೊಳ್ಳಬೇಕು ಎನ್ನುವವರು ಕೂಡ ಇದನ್ನು ಆಚರಿಸುತ್ತಾರೆ.
ಉಪವಾಸ ಮಾಡುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಕೂಡ ಕಂಟ್ರೋಲ್ ಮಾಡಬಹುದು ಎನ್ನುವುದು ಇತ್ತೀಚಿನ ಸಂಶೋಧನೆಗಳಲ್ಲಿ ಪತ್ತೆಯಾಗಿದೆ. ಹಾಗಾದರೆ ಇಂಟರಿಮೆಂಟ್ ಫಾಸ್ಟಿಂಗ್ ಎನ್ನುವುದನ್ನು ಹೇಗೆ ಆಚರಿಸುವುದು ಎನ್ನುವುದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ ನೋಡಿ.
ಸಾಮಾನ್ಯವಾಗಿ ನಾವೆಲ್ಲರೂ ಕೂಡ ಬೆಳಗ್ಗೆ ಎದ್ದ ಕೂಡಲೇ ಬೆಡ್ ಕಾಫಿ ಕುಡಿಯುತ್ತೇವೆ, ಆಮೇಲೆ ಟಿಫನ್ ಮಾಡಿ ಕಾಫಿ ಟೀ ಕುಡಿಯುತ್ತೇವೆ. ಮಧ್ಯದಲ್ಲಿ ಏನಾದರೂ ತಿನ್ನುತ್ತೇವೆ ಮತ್ತೆ ಮಧ್ಯಾನದ ಲಂಚ್ ನಲ್ಲಿ ಊಟ ಮಾಡಿ ಸಂಜೆ ಸಮಯ ಸ್ನಾಕ್ಸ್ ತೆಗೆದುಕೊಳ್ಳುತ್ತೇವೆ, ರಾತ್ರಿ ಊಟ ಮಾಡಿ ಆಮೇಲೆ ಕೂಡ ಹಾಲು ಹಣ್ಣು ಸೇವಿಸಿ ಮಲಗುತ್ತೇವೆ.
ಇವುಗಳಲ್ಲಿ ನಾವು ಯಾವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತೇವೆ ಎನ್ನುವುದು ನಮ್ಮ ದೇಹದ ಆರೋಗ್ಯವನ್ನು ನಿರ್ಧರಿಸುತ್ತದೆ. ಯಾಕೆಂದರೆ ನಾವು ತಿನ್ನುವ ಅಂಶಗಳನ್ನು ಹೆಚ್ಚಾಗಿ ಕಾರ್ಬೋಹೈಡ್ರೇಟ್ಸ್ ಇರುತ್ತದೆ, ಇದು ದೇಹದಲ್ಲಿ ಗ್ಲುಕೋಸ್ ಹೆಚ್ಚು ಸ್ಟೋರ್ ಮಾಡುತ್ತದೆ.
ಆದರೆ ದೇಹಕ್ಕೆ ಈಗ ನಾವು ಸೇವಿಸುತ್ತಿರುವಷ್ಟು ಪ್ರಮಾಣದ ಗ್ಲುಕೋಸ್ ಅವಶ್ಯಕತೆ ಇರುವುದಿಲ್ಲ ಅದೆಲ್ಲ ಒಂದು ಕಡೆ ಸ್ಟೋರ್ ಆಗಿರುತ್ತದೆ ಇದರಿಂದಲೇ ಫ್ಯಾಟಿ ಲಿವರ್, ಒಬೆಸಿಟಿ, ಡಯಾಬಿಟೀಸ್ ಇನ್ನಿತರ ಕಾಯಿಲೆಗಳು ಬರುವುದು. ಹಾಗಾಗಿ ಇದು ತಪ್ಪಾದ ಕ್ರಮ ಇದನ್ನು ತಪ್ಪಿಸಿ ಉಪವಾಸದ ರೀತಿಯಲ್ಲಿ 16 ಗಂಟೆಗಳ ಕಾಲ ಹೊಟ್ಟೆಯನ್ನು ಖಾಲಿ ಇಡುವುದು ಇಂಟರ್ನೆಟ್ ಫಾಸ್ಟಿಂಗ್.
ಈ ರೀತಿ ಮಾಡುವುದರಿಂದ ದೇಹದಿಂದ ವರ್ಷಾನುಗಟ್ಟಲೆ ಸ್ಟೋರ್ ಆಗಿರುವ ಎಲ್ಲಾ ಫ್ಯಾಟ್ ಹಾಗೂ ಗ್ಲುಕೋಸ್ ಖರ್ಚಾಗುತ್ತದೆ. ಜೀವಕೋಶಗಳಿಗೆ ಹೊಸ ಚೈತನ್ಯ ಬರುತ್ತದೆ. ಹೀಗಾಗಿ ನಾವು ವಯಸ್ಸಿಗಿಂತ ಕಿರಿಯರಾಗಿ ಕಾಣುತ್ತೇವೆ. ಎಲ್ಲ ರೀತಿಯ ಹಾರ್ಮೋನ್ಸ್ ವೇರಿಯೇಷನ್ ಸರಿ ಹೋಗುತ್ತದೆ.
BP, ಶುಗರ್ ಕಂಟ್ರೋಲ್ ಗೆ ಬರುತ್ತದೆ ಮತ್ತು ತೂಕ ಇಳಿಸಿಕೊಳ್ಳುವುದು ಸರಾಗ 16 ಗಂಟೆಗಳ ಕಾಲ ಹೇಗೆ ಖಾಲಿ ಇರುವುದು ಎಂದರೆ ನಾವು ಯಾವುದೇ ಆಹಾರವನ್ನು ಸೇವಿಸಿದರು 8 ಗಂಟೆ ಒಳಗಡೆ ತಿನ್ನಬೇಕು. ಉದಾಹರಣೆಗೆ ಬೆಳಿಗ್ಗೆ 10 ಗಂಟೆಗೆ ಟಿಫನ್ ಮಾಡಿದರೆ ಸಂಜೆ 6ರ ಒಳಗೆ ನಿಮ್ಮ ಊಟದ ಪ್ಲಾನಿಂಗ್ ಮುಗಿದಿರಬೇಕು.
ಅಷ್ಟು ಸಮಯ ನೀವು ಬರೀ ನೀರನ್ನು ಮಾತ್ರ ಕುಡಿಯಬೇಕು. ಇದರ ಜೊತೆಗೆ ಅಂದರೆ ಫ್ಯಾಟ್ಸ್ ಅಂಶ ಹೇರಳವಾಗಿರುವ ಪದಾರ್ಥಗಳನ್ನು ಸೇವಿಸಿ Keto diet ಮಾಡಿದರೆ ಇದರ ದುಪ್ಪಟ್ಟು ಫಲ ಬೇಗ ಸಿಗುತ್ತದೆ. ಆರಂಭದಲ್ಲಿ ಎಲ್ಲರಿಗೂ ಇದು ಬಹಳ ಕ’ಷ್ಟ ಆದರೆ ಅಭ್ಯಾಸವಾದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.