ಕೆಲಸ ಬಿಟ್ಟು ಬಿಡಿ ವರ್ಷಕ್ಕೆ 5 ಸಿನಿಮಾ ಕೊಡ್ತೀನಿ ಅಂತ S.ನಾರಯಣ್ ಹೇಳಿದ್ರು ಆದ್ರೆ ಮುಂದೆ ಆಗಿದ್ದೆ ಬೇರೆ. ಸೂರ್ಯವಂಶ ಸಿನಿಮಾ ಚಿತ್ರೀಕರಣದಲ್ಲಿ ಆದ ಅನುಭವ ಬಿಚ್ಚಿಟ್ಟ ನಟ ಸುರೇಶ್
ಎಂ.ಎನ್ ಸುರೇಶ್ ಎನ್ನುವ ಕನ್ನಡ ಚಿತ್ರರಂಗದ ಕಲಾವಿದ ಎಂದರೆ ತಿಳಿಯದೆ ಹೋಗಬಹುದು ಆದರೆ ಮೂಗು ಸುರೇಶ್ ಎಂದು ಇವರ ಹೆಸರು ಹೇಳಿದ ತಕ್ಷಣ ಇವರ ಉದ್ದನೆಯ ಮೂಗಿನ ಮುಖ ನೆನಪಾಗುತ್ತದೆ. ಮೂಗು ಸುರೇಶ್ ಎಂದೇ ಕನ್ನಡ ಚಲನಚಿತ್ರದಲ್ಲಿ ಹೆಸರು ಮಾಡಿರುವ ಇವರು ಪೋಷಕ ಪಾತ್ರಧಾರಿಯಾಗಿ, ಹಾಸ್ಯ ಕಲಾವಿದನಾಗಿ, ಕಿರುತೆರೆ ಧಾರಾವಾಹಿಗಳ ಪಾತ್ರದಾರಿಯಾಗಿ ಕನ್ನಡಿಗರ ಮನೆ ಮಾತಾಗಿದ್ದಾರೆ. ಇವರು ಹಾಗೂ ದೊಡ್ಡಣ್ಣ ಅವರ ಕಾಂಬಿನೇಷನ್ನ ಸೂರ್ಯವಂಶ ಚಿತ್ರದ ಸೀನ್ ಗಳನ್ನು ಕನ್ನಡಿಗರು ಎಂದು ಸಹ ಮರೆಯಲು ಸಾಧ್ಯವಿಲ್ಲ….