75 ದಿನ ಪೈಟಿಂಗ್ ಸೀನ್ ಮಾಡ್ದೆ, 25 ದಿನ ಸಾಂಗ್ ಶೂಟ್ ಮಾಡ್ದೆ ಅಂತ ಹೇಳೋ ಶೋಕಿ ನನ್ಗೂ ಇಲ್ಲ, ದರ್ಶನ್ ಗೂ ಇಲ್ಲ. ಯಾವ ಸಿನಿಮಾದ ಬಗ್ಗೆ ಗೊತ್ತಾ ಇವರು ಮಾತನಾಡಿದ್ದು.?
ಶೈಲಜಾ ನಾಗ್ ಹಾಗೂ ಬಿ ಸುರೇಶ್ ಅವರು ನಿರ್ಮಾಣ ಮಾಡಿ ನಿರ್ದೇಶನ ಮಾಡುತ್ತಿರುವ ಕ್ರಾಂತಿ ಈ ವರ್ಷದ ಬಹು ನಿರೀಕ್ಷಿತ ಚಿತ್ರ. ಇದೇ ಜನವರಿ 26ರಂದು ಈ ವರ್ಷದ ಪ್ರಥಮ ಸ್ಟಾರ್ ಸಿನಿಮಾ ಆಗಿ ರಿಲೀಸ್ ಆಗುತ್ತಿರುವ ಕ್ರಾಂತಿ ಸಿನಿಮಾದ ಬಗ್ಗೆ ಈಗಾಗಲೇ ಹೈಪ್ ಕ್ರಿಯೇಟ್ ಆಗಿದೆ. ದಿನೇ ದಿನೇ ನಾನಾ ವಿಷಯಗಳಿಂದ ಕ್ರಾಂತಿ ಕುರಿತ ಕುತೂಹಲ ಹೆಚ್ಚಾಗುತ್ತಿದ್ದು ಇದೀಗ ಟ್ರೈಲರ್ ಕೂಡ ರಿಲೀಸ್ ಮಾಡಲಾಗಿದೆ. ಹಲವು ದಿನಗಳಿಂದ ಈ ಸಿನಿಮಾದ ನಾಯಕ ನಟ ಚಾಲೆಂಜಿಂಗ್…