ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಬ್ಬ ಸಾರ್ಥಕ ಮನುಷ್ಯನ ಜೀವನ ಯಾವ ರೀತಿ ಇರಬೇಕು ಎಂದು ಬದುಕಿ ಬಾಳಿ ತೋರಿಸಿ ಹೋದವರು. ಮನುಷ್ಯನಾಗಿ ಹುಟ್ಟಿ ದೇವರಾಗಿ ಬದುಕಿ ಎಲ್ಲರ ಕಣ್ತೆರೆಸಿ ಹೋದವರು. ಅಣ್ಣಾವ್ರು ಎಂತಹ ಸರಳ ಜೀವಿ ಎನ್ನುವುದು ಎಲ್ಲರಿಗೂ ಗೊತ್ತು ಅಲ್ಲದೆ ಕರ್ನಾಟಕ, ಕನ್ನಡ ಮತ್ತು ಅಭಿಮಾನಿಗಳು ಎಂದರೆ ಅಣ್ಣಾವ್ರ ಹೃದಯ ಹೇಗೆ ಮಿಡಿಯುತ್ತಿತ್ತು ಅವರ ಪ್ರತಿರೂಪದಂತೆ ದೊಡ್ಡ ಮನೆಯ ಕಿರಿಯ ರಾಜಕುಮಾರ ಕೂಡ ಅಭಿಮಾನಿಗಳಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿ ಇಟ್ಟು ಎಲ್ಲ ಸೆಲೆಬ್ರಿಟಿಗಳಿಗೂ ಕೂಡ ಮಾದರಿಯಾದರು.
ಬಲಗೈಲಿ ಮಾಡಿದ ಸಹಾಯ ಎಡಗೈಗೂ ತಿಳಿಯಬಾರದು ಎನ್ನುವ ಮಾತನ್ನು ಅಕ್ಷರಶಃ ಪಾಲಿಸಿದ ಈ ಮಹಾವ್ಯಕ್ತಿಯ ವಿಶಾಲ ಹೃದಯದ ಆಳ ಅಗಲ ಎಷ್ಟಿತ್ತು ಎನ್ನುವುದು ಅವರ ಸಾವಿನ ನಂತರವೇ ಬೆಳಕಿಗೆ ಬಂದಿದ್ದು. ಪುನೀತ್ ರಾಜಕುಮಾರ್ ಅವರು ತಮ್ಮ ದುಡಿಮೆಯ ಬಹುತೇಕ ಭಾಗವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಿದ್ದರು ಹಾಗೂ ಕರ್ನಾಟಕದ ರೈತರಿಗಾಗಿ ಉಚಿತವಾಗಿ ನಂದಿನಿ ಹಾಲಿನ ಪ್ರಚಾರ ಕೆಲಸ ಮಾಡುತ್ತಿದ್ದರು ಮತ್ತು ತಾವು ಬೇರೆ ಸಿನಿಮಾಗಳಿಗಾಗಿ ಹಾಡಿದ ದುಡ್ಡಿನಲ್ಲಿ ಮತ್ತು ಅವರು ಜಾಹಿರಾತುಗಳಲ್ಲಿ ಅಭಿನಯಿಸಿದ ಬಂದ ಹಣದಿಂದ ಒಂದು ರೂಪಾಯಿಯನ್ನು ಕೂಡ ಸ್ವಂತಕ್ಕಾಗಿ ಬಳಸದೆ ಎಲ್ಲವನ್ನು ಬಡವರ ಸೇವೆಗೆ ಮೀಸಲಿಟ್ಟಿದ್ದರು.
ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಅನೇಕ ಗೋಶಾಲೆ, ವೃದ್ಧಾಶ್ರಮ ಮುಂತಾದಕ್ಕೆಲ್ಲಾ ತಪ್ಪದೆ ದೇಣಿಗೆ ನೀಡುತ್ತಿದ್ದರು. ಪ್ರಮುಖವಾಗಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಬಹಳ ಕಾಳಜಿ ತೋರುತ್ತಿದ್ದ ಪುನೀತ್ ರಾಜಕುಮಾರ್ ಅವರು ಹೆಣ್ಣು ಮಕ್ಕಳು ನಮ್ಮ ಅಮ್ಮನ ರೀತಿ ವಿದ್ಯೆಯಲ್ಲಿ ಹಾಗೂ ಹಣದಲ್ಲಿ ಸದೃಢರಾಗಿರಬೇಕು. ಈಗಿನ ಕಾಲದಲ್ಲಿ ಎಲ್ಲರಿಗೂ ಕೆಲಸ ಮಾಡುವ ಅನಿವಾರ್ಯತೆ ಇರುವುದರಿಂದ ಹೆಣ್ಣು ಮಕ್ಕಳು ಬಹಳ ಸ್ಟ್ರಾಂಗ್ ಇರಬೇಕು ಎಂದು ಹೇಳುತ್ತಿದ್ದರು.
ಮೈಸೂರಿನಲ್ಲಿ ಶಕ್ತಿ ಧಾಮ ಎನ್ನುವ ಆಶ್ರಮದಲ್ಲಿ ಇರುವ ಸಾವಿರಾರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ವಸತಿ ಆಹಾರ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ಪುನೀತ್ ರಾಜಕುಮಾರ್ ಅವರು ವಹಿಸಿಕೊಂಡಿದ್ದರು. ಸಮಯ ಮಾಡಿಕೊಂಡು ಆಗಾಗ ಮಕ್ಕಳ ಜೊತೆ ಕಾಲ ಕಳೆದು ತಮ್ಮ ಮನೆ ಮಕ್ಕಳಂತೆ ಎಲ್ಲರನ್ನೂ ಕಾಣುತ್ತಿದ್ದರು. ಇಂದು ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಆ ಮಕ್ಕಳ ನಿಜಕ್ಕೂ ಮತ್ತೊಮ್ಮೆ ಅನಾಥರ ರೀತಿ ಆಗಿದ್ದಾರೆ.
ಆದರೆ ಇದಕ್ಕೆ ಎಡೆ ಮಾಡಿಕೊಡದೆ ಮತ್ತಷ್ಟು ಜನ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮೈಸೂರಿನ ಶಕ್ತಿಧಾಮದ ವಿಷಯ ತಿಳಿಯುತ್ತಿದ್ದಂತೆ ತಮಿಳುನಾಡು ಖ್ಯಾತ ನಟ ವಿಶಾಲ್ ಅವರು ಮುಂದೆ ಬಂದು ಇನ್ನು ಮುಂದೆ ಪುನೀತ್ ರಾಜಕುಮಾರ್ ಅವರಂತೆ ನಾನು ಈ ಶಕ್ತಿಧಾಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಶಿವಣ್ಣ ಮತ್ತು ಗೀತಕ್ಕ ಸದ್ಯಕ್ಕೆ ನಾವು ಈ ಕೆಲಸ ಮಾಡಿಕೊಂಡು ಹೋಗುತ್ತೇವೆ ಆದರೆ ಸಮಯ ಬಂದರೆ ನಿಮ್ಮ ಸಹಾಯ ಕೇಳುತ್ತೇವೆ ಎಂದು ಹೇಳಿದ್ದರು.
ಇದೀಗ ಮೊನ್ನೆ ನಟ ವಿಶಾಲ್ ಅವರು ಮೈಸೂರಿಗೆ ಹೋಗಿ ಶಕ್ತಿಧಾಮಕ್ಕೆ ಭೇಟಿ ಕೊಟ್ಟು ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ನನಗೆ ಶಿವಣ್ಣ ಅವರು ಅವಕಾಶ ಮಾಡಿಕೊಡಬೇಕು ನಾನು ಕೂಡ ಇದರ ಒಂದು ಭಾಗವಾಗುತ್ತೇನೆ. ಯಾವುದೇ ಪರಿಸ್ಥಿತಿ ಬಂದರೂ ನಾನು ನನ್ನ ಮನೆ ಕಟ್ಟಲು ಇಟ್ಟಿರುವ ಹಣವನ್ನು ಬೇಕಾದರೂ ಶಕ್ತಿಧಾಮಕ್ಕಾಗಿ ಕೊಡುತ್ತೇನೆ, ಇಲ್ಲಿಗೆ ಬಂದರೆ ನನಗೆ ದೇವಸ್ಥಾನಕ್ಕೆ ಬಂದ ರೀತಿ ಅನುಭವ ಆಗುತ್ತದೆ ಎಂದು ಹೇಳಿದ್ದಾರೆ. ವಿಶಾಲ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.