ತಾಯಿ ಮಹಾಲಕ್ಷ್ಮಿಯು ನಮ್ಮ ಜೀವನಕ್ಕೆ ಸಂಪತ್ತು ಸಮೃದ್ಧಿಯನ್ನು ಕೊಡುವ ದೇವತೆಯಾಗಿದ್ದಾರೆ. ಲಕ್ಷ್ಮಿ ಅನುಗ್ರಹವಾದ ಮನೆಯಲ್ಲಿ ಐಶ್ವರ್ಯಕ್ಕೆ ಕೊರತೆ ಇರುವುದಿಲ್ಲ, ಧನಾ ಧಾನ್ಯಕ್ಕೆ ಕಷ್ಟಗಳು ಬರುವುದಿಲ್ಲ, ಇಷ್ಟೆಲ್ಲ ಅನುಕೂಲತೆ ಇರುವ ಮನೆಯಲ್ಲಿ ಸಹಜವಾಗಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ಹಾಗಾಗಿ ಎಲ್ಲರೂ ತಾಯಿ ಲಕ್ಷ್ಮಿ ಕೃಪೆಗಾಗಿ ಪ್ರಾರ್ಥಿಸುತ್ತಾರೆ ಮಹಾಲಕ್ಷ್ಮಿ ಒಲಿಯುವುದು ಎಷ್ಟು ಕಷ್ಟವೋ ಒಲಿದ ಮೇಲೆ ಆಕೆಯನ್ನು ಜೋಪಾನ ಮಾಡಿ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಯಾಕೆಂದರೆ ಶುದ್ಧತೆ ಇಲ್ಲದ ಕಡೆಯಲ್ಲಿ ಮತ್ತು ಧರ್ಮ ಮಾರ್ಗ ಅನುಸರಿಸಿದವರ ಜೊತೆಯಲ್ಲಿ ಚಂಚಲೆಯಾದ ಲಕ್ಷ್ಮಿ ಇರಲಾರರು.
ಹಾಗಾಗಿ ಮಹಾಲಕ್ಷ್ಮಿಯ ಅನುಗ್ರಹ ಪಡೆಯುವುದು ಹೇಗೆ ಮತ್ತು ಯಾವ ವಿಧಾನಗಳಿಂದ ಶಾಶ್ವತವಾಗಿ ಆಕೆಯ ಆಶೀರ್ವಾದ ಪಡೆದುಕೊಳ್ಳಬಹುದು ಎನ್ನುವುದಕ್ಕೆ ಕೆಲ ಸಲಹೆಗಳನ್ನು ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇದ್ದರೆ ಈ ಸರಳ ಪರಿಹಾರ ಮಾಡಿ.!
* ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು, ಮಹಾಲಕ್ಷ್ಮಿ ಅನುಗ್ರಹ ಆಗಬೇಕು ಎಂದರೆ ಈ ರೀತಿ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿಕೊಂಡು ಮನೆ ಮುಂದೆ ರಂಗೋಲಿ ಇಟ್ಟು ತುಳಸಿ ಗಿಡಕ್ಕೆ ನೀರು ಅರ್ಪಿಸಿ ದೇವರ ಕೋಣೆಯಲ್ಲಿ ದೀಪ ಹಚ್ಚಿ, ಮನೆ ಕೆಲಸ ಆರಂಭಿಸಬೇಕು. ಮನೆ ಮಕ್ಕಳೇ ಆಗಲಿ ಗಂಡಸರೇ ಆಗಲಿ ಇದೇ ಸಮಯದಲ್ಲಿ ಎದ್ದು ತಮ್ಮ ದಿನ ನಿತ್ಯದ ಚಟುವಟಿಕೆಗೆ ಬೇಕಾದ ತಯಾರಿ ಮಾಡಿಕೊಳ್ಳಬೇಕು ಹೀಗೆ ಬೆಳಗ್ಗೆ ಬೇಗ ಏಳುವವರ ಕಡೆಗೆ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ.
* ಈ ರೀತಿ ಆಲಸ್ಯ ಬಿಟ್ಟು ಏಳುವುದರ ಜೊತೆಗೆ ಆಲಸ್ಯ ಬಿಟ್ಟು ಆದಷ್ಟು ಬೇಗ ದಿನನಿತ್ಯ ಚಟುವಟಿಕೆಗಳಲ್ಲಿ ಚುರುಕಾಗಿ ಪಾಲ್ಗೊಳ್ಳಬೇಕು. ಎದ್ದ ತಕ್ಷಣ ಹಾಸಿಗೆ ಮಡಿಸದೆ ಇರುವುದು, ಸ್ನಾನ ಇತ್ಯಾದಿ ಮಾಡದೆ ಆಹಾರ ಸೇವಿಸುವುದು, ಮನೆ ಕಸ ಗುಡಿಸದೆ ಅಡುಗೆ ಮಾಡುವುದು ಇಂತಹ ತಪ್ಪುಗಳನ್ನು ಮಾಡುವುದರಿಂದ ಲಕ್ಷ್ಮಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ
* ಅಡುಗೆ ಹೆಚ್ಚಾಗಿ ಮಾಡಿ ಆಹಾರ ಪದಾರ್ಥಗಳನ್ನು ವೇಸ್ಟ್ ಮಾಡಿ ಕಸದ ಬುಟ್ಟಿಗೆ ಹಾಕುವುದು. ಮನೆಯಲ್ಲಿರುವ ಉಪ್ಪು, ಅಕ್ಕಿ, ಅಡಿಕೆ, ಅರಿಶಿಣ, ಧಾನ್ಯಗಳು ಎಲ್ಲವೂ ಲಕ್ಷ್ಮೀ ಸ್ವರೂಪ ಇದರ ಬಗ್ಗೆ ಗೌರವ ತೋರದೆ ಎಲ್ಲೆಂದರಲ್ಲಿ ಕಸದ ರೀತಿ ಹಾಕುವುದು ಅವುಗಳನ್ನು ತುಳಿದು ಓಡಾಡುವುದು ಇಂಥ ತಪ್ಪು ಮಾಡುವುದರಿಂದ ಕೂಡ ಲಕ್ಷ್ಮಿಯು ಒಲಿಯುವುದಿಲ್ಲ.
ಈ ಸುದ್ದಿ ಓದಿ:- ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?
* ಅಡುಗೆ ಮನೆಯು ತಾಯಿ ಮಹಾಲಕ್ಷ್ಮಿಗೆ ದೇವರ ಕೋಣೆಯಷ್ಟೇ ಇಷ್ಟವಾದ ಜಾಗ. ಇಲ್ಲಿ ಮೈಲಿಗೆ ಇರಬಾರದು, ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ವ್ಯವಸಿತವಾಗಿ ಅಚ್ಚುಕಟ್ಟಾಗಿ ಜೋಡಿಸಿ ಇಟ್ಟುಕೊಳ್ಳಬೇಕು. ಅಡುಗೆ ಆದ ತಕ್ಷಣ ಸ್ಟವ್ ಮತ್ತು ಊಟ ಆದ ತಕ್ಷಣ ಎಲ್ಲ ಪಾತ್ರೆಗಳನ್ನು ನೀಟಾಗಿ ತೊಳೆದು ಇಡಬೇಕು.
ರಾತ್ರಿ ಸಮಯ ಊಟ ಮಾಡಿ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಸ್ವಚ್ಛ ಮಾಡದೇ ಹಾಗೆ ಮಲಗಿ ಬೆಳಗ್ಗೆ ಎದ್ದು ಕ್ಲೀನ್ ಮಾಡುವ ಅಭ್ಯಾಸ ಹಲವರಿಗೆ ಇರುತ್ತದೆ ನೀವು ಈ ರೀತಿ ಮಾಡುತ್ತಿದ್ದರೆ ಮಹಾಲಕ್ಷ್ಮಿ ನಿಮಗೆ ಒಲಿಯುವುದಿಲ್ಲ
* ಹಣವನ್ನು ಗೌರವ ಕೊಟ್ಟು ನೋಡಿಕೊಳ್ಳುವುದು ಮತ್ತು ಹಿತಮಿತವಾಗಿ ಬೇಕಿದ್ದಕ್ಕೆ ಮಾತ್ರ ಖರ್ಚು ಮಾಡುವುದು ಇದು ಬಹಳ ಮುಖ್ಯವಾದ ವಿಚಾರ. ಯಾರು ಹಣಕ್ಕೆ ಗೌರವ ಕೊಡುವುದಿಲ್ಲ ಅಂತವರ ಕಡೆ ತಾಯಿ ಮಹಾಲಕ್ಷ್ಮಿ ಉಳಿಯುವುದಿಲ್ಲ.
ಈ ಸುದ್ದಿ ಓದಿ:- ಸಾಲ ಬಾಧೆಯಿಂದ ನರಳುತ್ತಿರುವವರು ಮಂಗಳವಾರ ಈ ಉಪಾಯವನ್ನು ಮಾಡಿದರೆ ಸಾಕು, ಕೋಟಿ ಸಾಲ ಇದ್ದರೂ ತೀರುತ್ತದೆ.
* ಬೆಳಗ್ಗೆ ಮಾತ್ರವಲ್ಲದೆ ಸಂಜೆ ಸಮಯ ಕೂಡ ದೇವರಿಗೆ ದೀಪ ಹಚ್ಚಬೇಕು. ಯಾವ ಮನೆಯಲ್ಲಿ ಸದಾಕಾಲ ಮಹಾಲಕ್ಷ್ಮಿ ಆರಾಧನೆ ನಡೆಯುತ್ತದೆ ಅಲ್ಲಿ ತಾಯಿ ಲಕ್ಷ್ಮಿದೇವಿ ಶಾಶ್ವತವಾಗಿ ನೆಲೆಸುತ್ತಾರೆ
* ಮನೆಯ ಸ್ವಚ್ಛತೆ ಮಾತ್ರವಲ್ಲದೆ ಮನಸ್ಸಿನ ಸ್ವಚ್ಛತೆಯು ಕೂಡ ಅಷ್ಟೇ ಮುಖ್ಯ. ಮನಸ್ಸಿನಲ್ಲಿ ಸದಾ ಬೇರೆಯವರ ಬಗ್ಗೆ ಕೆಟ್ಟದ್ದು ಯೋಚನೆ ಮಾಡುವುದು ಬೇರೆಯವರಿಗೆ ತೊಂದರೆ ಕೊಡಲು ಯೋಚನೆ ಮಾಡುವುದು ಅಥವಾ ಮನೆಯಲ್ಲಿ ಯಾವಾಗಲೂ ಗಲಾಟೆ ಮಾಡುವುದು ಕೆಟ್ಟ ಶಬ್ದಗಳನ್ನು ಉಪಯೋಗಿಸಿ ಮಾತನಾಡುವುದು ಹಿರಿಯರಿಗೆ ಗೌರವ ಕೊಡದೆ ಮಾತನಾಡುವುದು ಇಂತಹ ತಪ್ಪುಗಳನ್ನು ಮಾಡಿದರೆ ಕೂಡ ಲಕ್ಷ್ಮಿ ಅಲ್ಲಿದ್ದ ಹೊರಟು ಹೋಗುತ್ತಾರೆ.