ರೈತರಿಗೆ ಈಗಾಗಲೇ ಸಾಕಷ್ಟು ಸಮಸ್ಯೆಗಳಿವೆ. ನಮ್ಮ ದೇಶದಲ್ಲಿ ಕೃಷಿ ಒಂದು ಸವಾಲು ಎಂದೇ ಹೇಳಬಹುದು. ಯಾಕೆಂದರೆ ಇದು ವ್ಯವಸಾಯ ಮಳೆ ಜೊತೆ ಆಡುವ ಜೂಜಾಟ ಮಾತ್ರವಲ್ಲದೆ ಪ್ರತಿನಿತ್ಯವೂ ನೂರಾರು ಸಮಸ್ಯೆಗಳನ್ನು ಒಳಗೊಂಡ ಹೋರಾಟವಾಗಿದೆ.
ಅಕಾಲಿಕ ಮಳೆ, ಅಕಾಲಿಕ ವಾತಾವರಣ ವ್ಯತ್ಯಾಸ, ಕ್ರಿಮಿಕೀಟಗಳಿಂದ ಸಮಸ್ಯೆ. ಹೆಚ್ಚುತ್ತಿರುವ ರಾಸಾಯನಿಕ ಬಳಕೆಗಳಿಂದ ಭೂಮಿ ಫಲವತ್ತತೆ ಕುಸಿಯುತ್ತಿರುವುದು, ಕುಟುಂಬದಲ್ಲಿ ಜಮೀನು ವರ್ಗೀಕರಣವಾಗಿ ಹಿಡುವಳಿ ಚಿಕ್ಕದಾಗುತ್ತಿರುವುದು ಇದರ ಪರಿಣಾಮವಾಗಿ ಅಕ್ಕಪಕ್ಕದ ರೈತರೊಡನೆ ವಿನಾಕಾರಣ ವೈ ಮನಸು ಹೀಗೆ ಹೇಳುತ್ತಾ ಹೋದರೆ ಈ ಪಟ್ಟಿ ಮುಗಿಯುವುದೇ ಇಲ್ಲ.
ಆದರೆ ಸಾಧ್ಯವಾದಷ್ಟು ಸರ್ಕಾರದಿಂದ ಕೃಷಿ ಸೌಲತ್ತುಗಳನ್ನು ಒದಗಿಸಿಕೊಡುವ ನೆರವು ದೊರಕಿಸಿಕೊಡುವ ಕ್ರಮಗಳಾಗುತ್ತಿವೆ. ಹೀಗೆ ಮುಂದುವರೆದು ಈಗ ಸರ್ಕಾರವು ರೈತರಿಗೆ ಆಸ್ತಿ ವಿಚಾರವಾಗಿ ಕೂಡ ಅನುಕೂಲವಾಗುವಂತಹ ಕೆಲವು ನಿಯಮಗಳು ಜಾರಿಗೆ ತಂದು ಸಮಾಧಾನ ಪಡಿಸಿದೆ.
ಈ ಸುದ್ದಿ ಓದಿ:- ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!
ಅಕ್ಕ ಪಕ್ಕದಲ್ಲಿ ಜೊತೆ ವಿನಾಕಾರಣ ವೈ ಮನಸ್ಸಿಗೆ ಕಾರಣವಾಗುತ್ತಿರುವ ಕಾಲು ದಾರಿ, ಬಂಡಿ ದಾರಿ ಕುರಿತು ಕೂಡ ಒಂದು ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಹೋಗಲು ರೈತರಿಗೆ ಬಂಡಿ ದಾರಿ ಅಥವಾ ಕಾಲು ದಾರಿ ಬಿಡುವ ಅವಶ್ಯಕತೆ ಇದ್ದೇ ಇರುತ್ತದೆ. ರೈತನಿಗೆ ತನ್ನ ಜಮೀನಿಗೆ ಪ್ರತಿನಿತ್ಯ ಹೋಗಿ ಬರಲು ಹಾಗೂ ಆತ ಬೆಳೆದ ಬೆಳೆಗಳನ್ನು ಸಾಗಾಣೆ ಮಾಡಲು ಈ ರೀತಿ ದಾರಿಗಳ ಅವಶ್ಯಕತೆ ಇದ್ದೇ ಇರುತ್ತದೆ.
ಕೆಲವೊಮ್ಮೆ ರೈತರು ಹೊಂದಾಣಿಕೆಯಿಂದ ಈ ಬಗ್ಗೆ ನಡೆದುಕೊಳ್ಳುತ್ತಾರೆ ಕೆಲವೊಮ್ಮೆ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪ ಆದಾಗ ಅಥವಾ ತಮ್ಮ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದಾಗ ಹೊಸದಾಗಿ ಬಂದವರು ಅಥವಾ ತಂದೆ ತಾತನ ಕಾಲದಲ್ಲಿ ಬಂಡಿ ದಾರಿ ಕಾಲುದಾರಿಗೆ ರಸ್ತೆ ಬಿಟ್ಟು ಈಗ ಅದು ಸ್ವಂತ ಪ್ರಾಪರ್ಟಿ ಎಂದು ಅಕ್ವೈರ್ ಮಾಡಿಕೊಂಡು ಜಾಗ ಬಿಡದೆ ಈ ದಾರಿ ವಿಷವಾಗಿ ಗಲಾಟೆ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.
ಈ ದಾರಿ ಸಮಸ್ಯೆಗಳು ಕೆಲವೊಮ್ಮೆ ಗ್ರಾಮದಲ್ಲಿಯೇ ಇತ್ಯರ್ಥವಾದರೆ ಇನ್ನೂ ಕೆಲವೊಮ್ಮೆ ಕೈ ಮೀರಿದ ಹಂತಕ್ಕೆ ಬೆಳೆದು ವಿನಾಕಾರಣ ಮತ್ತೆ ಕೋರ್ಟು ಕಚೇರಿ ಎಂದು ಅಳೆಯುವ ಹಂತಕ್ಕೂ ಹೋಗಿರುವ ಉದಾಹರಣೆಗಳು ಇವೆ. ಇದಕ್ಕೆಲ್ಲ ಒಂದು ಪರ್ಮನೆಂಟ್ ಸೊಲ್ಯೂಷನ್ ಹುಡುಕುವ ಉದ್ದೇಶದಿಂದ ಸರ್ಕಾರವು ಈ ಭೂ ಸ್ವಾಧೀನ ನಿಯಮಗಳನ್ನು ಬದಲಾಯಿಸಿದೆ.
ಈ ಸುದ್ದಿ ಓದಿ:- ಒಂದೇ ಒಂದು ಸೀರೆ ಇದ್ದರೆ ಸಾಕು, ನಿಮ್ಮ ಮನೆಯ ಅಂದ ಹೆಚ್ಚಿಸುವ ಬಾಗಿಲ ತೋರಣ ರೆಡಿ ಮಾಡಬಹುದು.!
ಹೊಸದಾಗಿ ಬಂದಿರುವ ಈ ನಿಯಮ ಈ ರೀತಿ ರೈತರ ಮಧ್ಯೆ ಇರುವ ದಾರಿ ಸಮಸ್ಯೆಯನ್ನು ಬಗೆಹರಿಸಲಿದೆ ಎನ್ನುವ ನಂಬಿಕೆ ಇಡಲಾಗಿದೆ. ಅಷ್ಟಕ್ಕೂ ಸರ್ಕಾರ ಮಾಡಿರುವ ಕಾನೂನು ಏನೆಂದರೆ ಯಾವುದೇ ವ್ಯಕ್ತಿಯು ಈಗಾಗಲೇ ಆ ಗ್ರಾಮದಲ್ಲಿ ಬಂಡಿದಾರಿ /0 ಕಾಲುದಾರಿಗೆ ಎಂದು ರಸ್ತೆ ಬಿಟ್ಟುಕೊಟ್ಟು ಆಗಿದ್ದರೆ ಮತ್ತೆ ಅದನ್ನು ಪ್ರೈವೇಟ್ ಪ್ರಾಪರ್ಟಿ ಎಂದು ವಶಪಡಿಸಿಕೊಳ್ಳುವಂತಿಲ್ಲ.
ಇದು ಆತನ ಸ್ವಂತ ಜಮೀನು ಆಗಿದ್ದರು ಅಥವಾ ಸರ್ಕಾರದ ಜಮೀನು ಆಗಿದ್ದರೂ ಕೂಡ ಇದು ಇನ್ನು ಮುಂದೆ ಸಾರ್ವಜನಿಕ ಬಳಕೆಗೆ ಬಳಕೆಯಾಗುತ್ತದೆ ಎಂದು ಹೊಸ ನಿಯಮದ ಪ್ರಕಾರ ತಿಳಿಸಲಾಗಿದೆ. ಒಂದು ವೇಳೆ ಅಕ್ಕಪಕ್ಕದ ರೈತರು ಯಾರಿಂದಲೇ ಆಗಲಿ ಈ ರೀತಿಯ ಸಮಸ್ಯೆಗಳನ್ನು ಮತ್ತೆ ಎದುರಿಸುವಂತೆ ಆದರೆ ಅವರು ಕಾನೂನಿನ ನೆರವು ಪಡೆದುಕೊಂಡು.
ತಮಗಿರುವ ಬಂಡಿದಾರಿ ಹಾಗೂ ಕಾಲುದಾರಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಸರ್ಕಾರದ ಈ ನಿಯಮದಿಂದ ಸಾಕಷ್ಟು ರೈತರಿಗೆ ಅನುಕೂಲವಾಗುವುದಂತೂ ಗ್ಯಾರಂಟಿ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.