ಗಂಡ ಹೆಂಡತಿ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಲೇಬಾರದು.!

 

* ಗಂಡ ಹೆಂಡತಿ ಜಗಳದ ನಂತರ ಪರಸ್ಪರ ಒಬ್ಬರಿಗೊಬ್ಬರು ಮಾತು ಬಿಡುತ್ತಾರೆ ಆದರೆ ಅದು ತಪ್ಪು. ಇಬ್ಬರ ನಡುವೆ ಯಾರು ತಪ್ಪು ಮಾಡಿದರೂ ಪರಸ್ಪರ ಕ್ಷಮೆಯಾಚಿಸಿ ಮುಂದೆ ಹೋಗುವುದು ಒಳ್ಳೆಯದು. ಇದರಿಂದ ನಿಮ್ಮಿಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಹೆಚ್ಚಾಗುತ್ತದೆ ಬದಲಿಗೆ ನಡೆದಿರುವಂತಹ ಕೆಟ್ಟ ಸಂದರ್ಭವನ್ನು ಪದೇಪದೇ ನೆನಪಿಸಿಕೊಳ್ಳುತ್ತಾ ಇದ್ದರೆ ನಿಮ್ಮ ಜೀವನದಲ್ಲಿ ಮತ್ತಷ್ಟು ಬಿರುಕು ಹೆಚ್ಚಾಗುತ್ತದೆ ಆದ್ದರಿಂದ ಏನೇ ಜಗಳ ನಡೆದರೂ ಕೂಡ ಅದನ್ನು ಮರೆತು ಮುಂದಿನ ಜೀವನ ನಡೆಸುವುದು ಒಳ್ಳೆಯದು.

* ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಬಂದಾಗ ಮೊಬೈಲ್ ನಲ್ಲಿ ಸ್ಟೇಟಸ್‌ ಹಾಕಲು ಹೋಗಬೇಡಿ ಯಾಕೆಂದರೆ ಗಂಡ ಹೆಂಡತಿ ನಡುವೆ ಮೂರನೇ ಅವರು ಪ್ರವೇಶ ಮಾಡಬಾರದು. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ ಹೊರತು ಪರಿಹಾರವಾಗುವುದಿಲ್ಲ ಯಾವುದೇ ಸಂದರ್ಭ ಬಂದರೂ ಕೂಡ ನಾವು ಅದನ್ನು ಬೇರೆಯವರ ಮುಂದೆ ತೋರ್ಪಡಿಸಿಕೊಳ್ಳಬಾರದು ಕೆಲವೊಂದಷ್ಟು ವಿಷಯಗಳನ್ನು ಆದಷ್ಟು ನಾವು ಮುಚ್ಚಿಟ್ಟುಕೊಳ್ಳುವುದು ತುಂಬಾ ಒಳ್ಳೆಯದು ಇಲ್ಲವಾದರೆ ನಾವೇ ನಮ್ಮ ಸಮಸ್ಯೆಯನ್ನು ನಮ್ಮ ಬಳಿ ಕರೆದುಕೊಂಡು ಬಂದಂತೆ ಆಗುತ್ತದೆ.

* ಪತಿ-ಪತ್ನಿಯರಲ್ಲಿ ಮುಖ್ಯವಾಗಿ ನಂಬಿಕೆ ಇರಬೇಕು ಯಾವ ಸಂಬಂಧ ದಲ್ಲಿ ನಂಬಿಕೆ ಎನ್ನುವುದು ಇರದೇ ಅನುಮಾನ ಬರುತ್ತದೆಯೋ ಅಂತಹ ಸಂಬಂಧವನ್ನು ಎಷ್ಟೇ ಸರಿಪಡಿಸಿದರು ಹೊಂದಿಕೊಂಡು ಹೋಗುವುದು ಕಷ್ಟವಾಗುತ್ತದೆ.
* ಸತಿ ಆಗಿರಲಿ ಅಥವಾ ಪತಿಯೇ ಆಗಿರಲಿ ಅವರನ್ನು ಇನ್ನೊಬ್ಬರಿಗೆ ಹೋಲಿಸಿ ಮಾತನಾಡಬಾರದು ಇದರಿಂದ ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

* ಪತಿ – ಪತ್ನಿಯರು ತಮ್ಮ ರಹಸ್ಯವನ್ನು ತಾವು ತಮ್ಮಲ್ಲೇ ಇಟ್ಟುಕೊಳ್ಳದೆ ಮೂರನೇಯವರಿಗೆ ಹೇಳಿದರೆ ಮುಂದೆ ಅವಮಾನವನ್ನು ಎದುರಿಸ ಬೇಕಾಗುತ್ತದೆ. ಹಾಗಾಗಿ ಇದು ದಾಂಪತ್ಯದಲ್ಲಿ ಬಿರುಕನ್ನು ಮೂಡಿಸಬಹುದು ಹಾಗೂ ಬೇರೆಯವರು ನಿಮ್ಮ ಕೆಲವೊಂದಷ್ಟು ರಹಸ್ಯ ಮಾಹಿತಿಗಳನ್ನು ತಿಳಿದುಕೊಂಡು ಮತ್ತೆ ಕೆಲವೊಂದಷ್ಟು ಜನರಿಗೆ ಹೇಳಬಹುದು ಇದರಿಂದ ನಿಮ್ಮ ಸಂಸಾರದಲ್ಲಿ ನೀವೇ ಬಿರುಕು ತಂದುಕೊಂಡಂತೆ ಆಗುತ್ತದೆ ಆದಷ್ಟು ನಿಮ್ಮ ರಹಸ್ಯಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳುವುದು ಸೂಕ್ತ.

* ಗಂಡನ ಕಷ್ಟದಲ್ಲಿ ಹೆಂಡತಿ, ಹೆಂಡತಿಯ ಕಷ್ಟದಲ್ಲಿ ಗಂಡ ಯಾವತ್ತು ಬಿಟ್ಟುಕೊಡದೆ ಪರಸ್ಪರ ಜೊತೆಗೆ ನಿಂತರೆ ಮುಂದೆ ಕಷ್ಟ ಇದ್ದರೂ ಸುಖವಿದ್ದರೂ ಅಂತಹ ಸಂಬಂಧ ಯಾವುದೇ ಕಾರಣಕ್ಕೂ ಹಾಳಾಗುವುದಿಲ್ಲ.
* ಪತಿ-ಪತ್ನಿಯರಿಬ್ಬರೂ ತಮ್ಮ ಆದಾಯವನ್ನು ನೋಡಿಕೊಂಡು ಖರ್ಚು ಮಾಡುವುದು ಮುಖ್ಯವಾಗಿರುತ್ತದೆ. ಇಬ್ಬರೂ ಯಾವಾಗಲೂ ಇನ್ನೊಬ್ಬರ ಜೀವನವನ್ನು ನೋಡಿ ತಾವು ಬದುಕಲು ಹೋಗಬಾರದು.

* ಗಂಡ ಆಗಿರಲಿ ಹೆಂಡತಿ ಆಗಿರಲಿ ಹೆಚ್ಚಾಗಿ ಅವರನ್ನು ಕಂಟ್ರೋಲ್ ಅಲ್ಲಿ ಇಟ್ಟುಕೊಳ್ಳಲು ಹೋಗಬಾರದು. ಎಷ್ಟೊತ್ತಿಗೆ ಏಳಬೇಕು ಇವರ ಬಳಿ ಮಾತ್ರ ಮಾತನಾಡಬೇಕು, ಏನು ಕೆಲಸ ಮಾಡಬೇಕು ಕುಟುಂಬದಲ್ಲಿ ಯಾರೊಂದಿಗೆ ಹೇಗಿರಬೇಕು ಎಂದು ಹೆಚ್ಚಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಹೋಗಬಾರದು.

* ವೈವಾಹಿಕ ಜೀವನದಲ್ಲಿ ಒಬ್ಬರಿಗೊಬ್ಬರು ಸುಳ್ಳು ಹೇಳುವುದು ಮೋಸ ಮಾಡುವುದು ಅಥವಾ ಯಾವುದೋ ಒಂದು ದೊಡ್ಡ ಸತ್ಯವನ್ನು ಮುಚ್ಚಿಡುವುದು ಹೀಗೆ ಮಾಡಲು ಹೋಗಬೇಡಿ ಇದರಿಂದ ಸಂಸಾರವೇ ಹಾಳಾಗಬಹುದು ಎಚ್ಚರವಿರಲಿ.
* ಗಂಡ ಹೆಂಡತಿ ಕೋಪದಿಂದ ದೂರವಿದ್ದರೆ ಒಳ್ಳೆಯದು. ಒಂದು ವೇಳೆ ಸಣ್ಣ ಪುಟ್ಟ ಕೋಪಗಳಿದ್ದರೆ ಮೌನವಾಗಿರುವುದು ಉತ್ತಮ. ಇದು ಸಂಬಂಧವನ್ನು ಕಾಪಾಡುತ್ತದೆ.

* ಗಂಡ ಹೆಂಡತಿ ಆದವರಲ್ಲಿ ಏನೇ ಸಮಸ್ಯೆ ಇದ್ದರೂ ಗಂಡನಾಗಲಿ, ಹೆಂಡತಿಯಾಗಲಿ ಇನ್ನೊಬ್ಬರ ಮುಂದೆ ಅವರನ್ನು ಅವಮಾನ ಮಾಡಿ ಮಾತನಾಡಬಾರದು. ಇಬ್ಬರು ಕುಳಿತುಕೊಂಡು ಬಗೆಹರಿಸಿಕೊಳ್ಳುವುದು ಉತ್ತಮ.

Leave a Comment

WhatsApp Group Join Now
Telegram Group Join Now