ಬೇಸಿಗೆ ಎಂದ ತಕ್ಷಣ ಪ್ರತಿಯೊಬ್ಬರೂ ಕೂಡ ಆ ಒಂದು ಸಂದರ್ಭದಲ್ಲಿ ಹಪ್ಪಳ ಸಂಡಿಗೆ ಇಂತಹ ಕೆಲವೊಂದು ಪದಾರ್ಥಗಳನ್ನು ಮಾಡಿಟ್ಟು ಕೊಳ್ಳುವಂತಹ ಸಮಯ ಎಂದೇ ತಿಳಿದುಕೊಂಡಿದ್ದಾರೆ. ಆದರೆ ಈ ಒಂದು ಸಂದರ್ಭದಲ್ಲಿ ನಾವು ಕೆಲವೊಂದಷ್ಟು ತಂಪಾಗಿರುವಂತಹ ಆಹಾರ ಪದಾರ್ಥಗಳನ್ನು ಸಹ ಮಾಡಿಕೊಂಡು ಸೇವನೆ ಮಾಡಬಹುದು.
ಹಾಗಾದರೆ ಬೇಸಿಗೆಯ ಸಂದರ್ಭದಲ್ಲಿ ತಂಪಾಗಿರುವಂತಹ ಐಸ್ ಕ್ರೀಮ್ ಅನ್ನು ನಾವೇ ಹೇಗೆ ಸುಲಭವಾಗಿ ಕೇವಲ ಮೂರೇ ಮೂರು ಪದಾರ್ಥ ಬಳಕೆ ಮಾಡಿಕೊಂಡು ಹೇಗೆ ಅಂಗಡಿಗಳಲ್ಲಿ ಸಿಗುವಂತಹ ಐಸ್ ಕ್ರೀಮ್ ನಂತೆಯೇ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.
ಇದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಯಾವ ವಿಧಾನ ಅನುಸರಿಸುವುದರ ಮೂಲಕ ಐಸ್ ಕ್ರೀಮ್ ಮನೆಯಲ್ಲಿಯೇ ತಯಾರಿಸಿ ಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಅಕ್ಷಯ ತೃತೀಯ ಹಬ್ಬಕ್ಕೆ ಯಾರು ಈ 5 ಮಹಾ ರೆಮಿಡಿ ಮಾಡಿಕೊಳ್ಳುವರೋ ವರ್ಷ ತುಂಬುವುದರಲ್ಲಿ ದೊಡ್ಡ ಶ್ರೀಮಂತರಾಗ್ತಾರೆ.!
ಬೇಸಿಗೆಯ ಸಂದರ್ಭದಲ್ಲಿ ನಾವು ಎಲ್ಲಿ ನೋಡಿದರೂ ಕೂಡ ನಮ್ಮ ಕಣ್ಣಿಗೆ ಮಾವಿನ ಹಣ್ಣು ಕಾಣಿಸುತ್ತಿರುತ್ತದೆ. ಇಂತಹ ಒಂದು ಮಾವಿನ ಹಣ್ಣನ್ನು ಉಪಯೋಗಿಸಿಕೊಂಡು ಈ ದಿನ ಐಸ್ ಕ್ರೀಮ್ ಅನ್ನು ಹೇಗೆ ಮಾಡುವುದು ಎನ್ನುವುದನ್ನು ತಿಳಿಯೋಣ. ಮೊದಲು ಈ ಒಂದು ಮಾವಿನ ಹಣ್ಣಿನ ಐಸ್ ಕ್ರೀಮ್ ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ತಿಳಿಯೋಣ.
* ಒಂದು ಲೀಟರ್ ಹಾಲು
* ಸಕ್ಕರೆ
* ಮಾವಿನ ಹಣ್ಣು
ಈ ಮೂರು ಪದಾರ್ಥ ಇದ್ದರೆ ಸಾಕು ಮಾವಿನ ಹಣ್ಣಿನ ಐಸ್ ಕ್ರೀಮ್ ಅನ್ನು ನಾವೇ ನಮ್ಮ ಮನೆಯಲ್ಲಿ ಸುಲಭವಾಗಿ ಕಡಿಮೆ ಸಮಯದಲ್ಲಿ ತಯಾರಿಸಬಹುದು.
ಈ ಸುದ್ದಿ ಓದಿ:- ಕೆಟ್ಟು ಹೋದ ಹಾಲನ್ನು ಸರಿಪಡಿಸುವ ಸೀಕ್ರೆಟ್, ಟೀ,ಕಾಫಿ ಏನ್ ಬೇಕಾದ್ರು ಮಾಡಬಹುದು.!
ಮಾಡುವ ವಿಧಾನ :- ಮೊದಲು ಗಟ್ಟಿಯಾಗಿರುವಂತಹ ಹಸುವಿನ ಹಾಲು ಅಥವಾ ಎಮ್ಮೆಯ ಹಾಲನ್ನು ತೆಗೆದುಕೊಳ್ಳಬೇಕು ಅದನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ ಯಾವುದೇ ರೀತಿಯ ನೀರನ್ನು ಮಿಶ್ರಣ ಮಾಡದೆ ಅದನ್ನು ಚೆನ್ನಾಗಿ ಸಣ್ಣ ಉರಿಯಲ್ಲಿ ಕುದಿಸಿಕೊಂಡು ಅದರಲ್ಲಿ ಯಾವುದೇ ರೀತಿಯ ಕೆನೆ ಬರದ ಹಾಗೆ ಅದನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳುತ್ತಾ ಒಂದು ಲೀಟರ್ ಹಾಲು ಅರ್ಧ ಲೀಟರ್ ಆಗುವ ತನಕ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.
ನಂತರ ಆ ಒಂದು ಹಾಲಿಗೆ ಸಕ್ಕರೆಯನ್ನು ಹಾಕಿ ಕರಗಿಸಿಕೊಳ್ಳಬೇಕು ಆನಂತರ ಅದನ್ನು ತಣ್ಣಗಾಗಲ್ಲ ಬಿಡಬೇಕು ತಣ್ಣಗಾದ ನಂತರ ಮಾವಿನ ಹಣ್ಣನ್ನು ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಹಾಲಿನ ಜೊತೆ ಹಾಕಿ ಮಿಶ್ರಣ ಮಾಡಿ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕು.
ಈ ಸುದ್ದಿ ಓದಿ:- ಮನೆಯಲ್ಲಿ ಜಿರಳೆ ಇದ್ದರೆ ಹೀಗೆ ಮಾಡಿ.!
ಈ ರೀತಿ ರುಬ್ಬಿಕೊಂಡಂತಹ ಮಿಶ್ರಣವನ್ನು ಚೆನ್ನಾಗಿ ಮತ್ತೆ ಮಿಕ್ಸ್ ಮಾಡಿಕೊಂಡು ಐಸ್ ಕ್ರೀಮ್ ಹದ ಬರುವ ಹಾಗೆ ಮಾಡಿಕೊಳ್ಳಬೇಕು. ಆನಂತರ ನಿಮ್ಮ ಮನೆಯಲ್ಲಿ ಐಸ್ ಕ್ರೀಂ ಮಾಡುವ ಟ್ರೇ ಗಳು ಇದ್ದರೆ ಅದರ ಒಳಗಡೆ ಹಾಕಿ ಅದನ್ನು ಫ್ರೀಜರ್ ನಲ್ಲಿ ಐದರಿಂದ ಹತ್ತು ನಿಮಿಷ ಬಿಟ್ಟರೆ ಸಾಕು ರುಚಿಯಾದಂತಹ ಮಾವಿನ ಹಣ್ಣಿನ ಜ್ಯೂಸ್ ಅನ್ನು ಸುಲಭವಾಗಿ ನೀವೇ ತಯಾರಿಸಬಹುದು.
ಐಸ್ ಕ್ರೀಮ್ ಮಾಡುವ ಟ್ರೇ ಇಲ್ಲದೆ ಇದ್ದರೂ ಸಹ ನೀವು ಅದನ್ನು ಸಣ್ಣ ಸಣ್ಣದಾಗಿರುವಂತಹ ಲೋಟಕ್ಕೆ ಹಾಕಿ ಅದಕ್ಕೆ ಕಟ್ಟಿಗೆಯ ಚಮಚವನ್ನು ಹಾಕಿ ಫ್ರೀಜರ್ ನಲ್ಲಿ ಇಟ್ಟರೂ ಸಹ ನೀವು ಐಸ್ ಕ್ರೀಮ್ ಅನ್ನು ತಯಾರಿಸಬಹುದು.
ಈ ಸುದ್ದಿ ಓದಿ:- ಈ ವಸ್ತು ನಿಮ್ಮ ಬಳಿ ಇದ್ರೆ ಸಾಕು ಹಣ ನಿಮ್ಮನ್ನು ಹುಡುಕಿ ಬರುತ್ತೆ.!
ಹೀಗೆ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಸುಲಭವಾಗಿ ಬೇಸಿಗೆಯಲ್ಲಿ ನಿಮ್ಮ ಮಕ್ಕಳಿಗೆ ತಂಪಾಗಿರುವಂತಹ ಹಾಗೂ ರುಚಿ ಯಾಗಿರುವಂತಹ ಆರೋಗ್ಯಕರವಾಗಿರುವಂತಹ ಐಸ್ ಕ್ರೀಮ್ ಅನ್ನು ನೀವು ತಯಾರಿಸಿ ಕೊಡಬಹುದು ಬದಲಿಗೆ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಮಿಕಲ್ ಐಸ್ ಕ್ರೀಮ್ ಅನ್ನು ಕೊಡಿಸುವುದು ತುಂಬಾ ಕೆಡುಕು ಆದ್ದರಿಂದ ಇದನ್ನು ನೀವೇ ನಿಮ್ಮ ಮನೆಯಲ್ಲಿ ತಯಾರಿಸಿ ಕೊಡುವುದು ಉತ್ತಮ.