ಮನೆ ಎಂದ ಮೇಲೆ ಅಲ್ಲಿ ಹಲವಾರು ಕ್ರಿಮಿಕೀಟಗಳು ಕೆಲವೊಂದಷ್ಟು ಜಿರಳೆಗಳು ಪಲ್ಲಿಗಳು ಇವೆಲ್ಲವೂ ಕೂಡ ಇರುವುದು ಸರ್ವೇಸಾಮಾನ್ಯ ಆದರೆ ಇವುಗಳನ್ನು ನಾವು ದೂರ ಮಾಡುವುದಕ್ಕೆ ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ಉಪ ಯೋಗಿಸಿ ಅವುಗಳನ್ನು ದೂರ ಮಾಡುತ್ತಿರುತ್ತೇವೆ.
ಆದರೆ ಯಾವುದೇ ಕಾರಣಕ್ಕೂ ಆ ರೀತಿಯಾದಂತಹ ತಪ್ಪು ವಿಧಾನವನ್ನು ಅನುಸರಿಸ ಬಾರದು ಏಕೆ ಎಂದರೆ ಆ ಒಂದು ಕೆಮಿಕಲ್ ಪದಾರ್ಥದಲ್ಲಿ ಹಲವಾರು ರೀತಿಯ ವಿಷಕಾರಿ ಪದಾರ್ಥಗಳು ಇರುವುದರಿಂದ ಅದೇನಾದರೂ ಬೇರೆ ಆಹಾರ ಪದಾರ್ಥದ ಮೇಲೆ ಬಿದ್ದು ಅದನ್ನು ನಾವು ತಿಂದರೆ ನಮ್ಮ ಆರೋಗ್ಯದ ಮೇಲೆ ಅದು ಅತಿ ಹೆಚ್ಚಿನ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ.
ಈ ಸುದ್ದಿ ಓದಿ:- ಈ ವಸ್ತು ನಿಮ್ಮ ಬಳಿ ಇದ್ರೆ ಸಾಕು ಹಣ ನಿಮ್ಮನ್ನು ಹುಡುಕಿ ಬರುತ್ತೆ.!
ಆದ್ದರಿಂದ ಅವುಗಳನ್ನು ಉಪಯೋಗಿಸುವುದು ತಪ್ಪು ಅದರಲ್ಲೂ ಮಕ್ಕಳು ಇರುವಂತಹ ಮನೆಯಲ್ಲಿ ಇಂತಹ ವಿಧಾನ ಅನುಸರಿಸುವುದು ದೊಡ್ಡ ತಪ್ಪು ಬದಲಿಗೆ ಕೆಲವೊಂದಷ್ಟು ಸಮಸ್ಯೆಗಳನ್ನು ಅಂದರೆ ನಮ್ಮ ಮನೆಯಲ್ಲಿ ಕೆಲವೊಂದಷ್ಟು ಟಿಪ್ಸ್ ಗಳನ್ನು ನಾವು ಅನುಸರಿಸುವುದರಿಂದ ಯಾವುದೇ ರೀತಿಯಾದಂತಹ ತೊಂದರೆ ಇಲ್ಲದೆ ಸುಲಭವಾಗಿ ನಾವು ಆ ಒಂದು ಸಮಸ್ಯೆಗೆ ಪರಿಹಾರ ಎನ್ನುವುದನ್ನು ನಾವೇ ಮಾಡಿಕೊಳ್ಳಬಹುದು.
ಹಾಗಾದರೆ ಈ ದಿನ ಅಡುಗೆ ಮನೆಯ ವಿಚಾರವಾಗಿ ಹಾಗೂ ಮನೆಯಲ್ಲಿ ಯಾವ ಕೆಲವೊಂದು ಕೆಲಸಗಳನ್ನು ಹೇಗೆ ಸುಲಭವಾಗಿ ಮಾಡಬಹುದು ಹಾಗೂ ಅದನ್ನು ನಾವು ಹೇಗೆ ಮಾಡುವುದರಿಂದ ಆ ಕೆಲಸ ನಮಗೆ ಪ್ರಯೋಜನಕಾರಿಯಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತೆ ಅಡುಗೆ ಮನೆಯ ಕೆಲವೊಂದಷ್ಟು ಟಿಪ್ಸ್ ಗಳನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಈ ಸುದ್ದಿ ಓದಿ:- ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
* ಈಗ ಅತಿ ಹೆಚ್ಚು ಬಿಸಿಲು ಇರುವುದರಿಂದ ಗಿಡಗಳಿಗೆ ಎಷ್ಟೇ ನೀರು ಹಾಕಿದರೂ ಅದು ಬೇಗನೆ ಹೀರಿಕೊಳ್ಳುತ್ತದೆ ಅಂದರೆ ಹೆಚ್ಚಿನ ಸಮಯ ದವರೆಗೆ ಗಿಡದ ಬುಡದಲ್ಲಿ ನೀರಿನ ಅಂಶ ಇರುವುದಿಲ್ಲ. ಇದರಿಂದ ಗಿಡಗಳು ಬೇಗನೆ ಒಣಗುತ್ತಿರುತ್ತದೆ ಆದರೆ ಇದಕ್ಕೆ ಪರಿಹಾರವಾಗಿ ನಾವು ಕಾಯಿಯನ್ನು ಬಿಡಿಸುವಂತಹ ಗುಂಜು ಇದನ್ನು ನಿಮ್ಮ ಗಿಡದ ಬುಡಕ್ಕೆ ಹಾಕಿ ಅದರ ಮೇಲೆ ನೀರನ್ನು ಹಾಕುವುದರಿಂದ ಗಿಡದ ಬುಡದಲ್ಲಿ ಹೆಚ್ಚಿನ ಸಮಯದವರೆಗೆ ನೀರಿನ ಅಂಶ ಇರುತ್ತದೆ.
ನೀರನ್ನು ಹೀರಿ ಕೊಳ್ಳುವಂತಹ ಶಕ್ತಿ ಆ ಒಂದು ಕಾಯಿ ಗುಂಜಿಗೆ ಇರುವುದರಿಂದ ಇದನ್ನು ನಿಮ್ಮ ಗಿಡದ ಬುಡಗಳಿಗೆ ಹಾಕಿ ನೀರನ್ನು ಹಾಕುವುದು ತುಂಬಾ ಒಳ್ಳೆಯದು. ಸಾಮಾನ್ಯವಾಗಿ ನಾವು ನಮ್ಮ ಕಾಲುಗಳಲ್ಲಿ ಉಂಟಾದಂತಹ ಬಿರುಕುಗಳನ್ನು ದೂರ ಮಾಡುವುದಕ್ಕೆ ಹಲವಾರು ಕ್ರೀಮ್ ಗಳನ್ನು ಹಚ್ಚುತ್ತೇವೆ.
ಈ ಸುದ್ದಿ ಓದಿ:- ಕನ್ನಡಿ ಇಲ್ಲಿ ಇಟ್ಟು ನೋಡಿ ಅದೃಷ್ಟ ಬದಲಾಗುತ್ತೆ.!
ಅದರ ಬದಲು ಒಂದು ಬಕೆಟ್ ನಲ್ಲಿ ಉಗುರು ಬೆಚ್ಚಗಿನ ನೀರನ್ನು ಹಾಕಿ ಅದಕ್ಕೆ ಒಂದರಿಂದ ಎರಡು ಚಮಚ ಕಲ್ಲುಪ್ಪನ್ನು ಹಾಕಿ ಚೆನ್ನಾಗಿ ಕರಗಿಸಿಕೊಳ್ಳಬೇಕು ಆನಂತರ 10 ನಿಮಿಷ ನಿಮ್ಮ ಕಾಲುಗಳನ್ನು ಅದರಲ್ಲಿ ಇಟ್ಟು ಆನಂತರ ನಿಮ್ಮ ಕಾಲನ್ನು ಚೆನ್ನಾಗಿ ತೊಳೆದು ವಿಕ್ಸ್ ಬೇಬಿ ರಬ್ ಅನ್ನು ಹಾಕುವುದರಿಂದ ನಿಮ್ಮ ಒಡೆದ ಕಾಲು ಅಂದರೆ ಕಾಲುಗಳಲ್ಲಿ ಇರುವಂತಹ ಬಿರುಕುಗಳು ಕಡಿಮೆಯಾಗುತ್ತಾ ಬರುತ್ತದೆ.
* ಜಿರಳೆಗಳನ್ನು ಓಡಿಸುವುದಕ್ಕೆ ಮೊದಲು ಸ್ವಲ್ಪ ಪ್ರಮಾಣದ ಬೇವಿನ ಸೊಪ್ಪನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಆನಂತರ ಅದಕ್ಕೆ 1 ರಿಂದ 2 ಚಮಚ ಗೋಧಿ ಹಿಟ್ಟು ಹಾಗೂ 1 ಚಮಚ ಟೀ ಪುಡಿ ಹಾಗೂ 2 ಚಮಚ ಬೋರಿಕ್ ಆಸಿಡ್ ಪೌಡರ್ ಹಾಗೂ ಚಿಟಿಕೆ ಅಡುಗೆ ಸೋಡಾ ಇಷ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಜಿರಳೆ ಓಡಾಡುವ ಸ್ಥಳಕ್ಕೆ ಇಡುವುದರಿಂದ ಅದನ್ನು ಜಿರಳೆ ತಿನ್ನುವುದರಿಂದ ಅದು ಸಾಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.