ವಿವಾಹವಾದ ನಂತರ ಪ್ರತಿಯೊಬ್ಬರೂ ಕೂಡ ತಮ್ಮ ಮದುವೆಯನ್ನು ನೋಂದಣಿ ಮಾಡಿಸಬೇಕು. ಯಾಕೆಂದರೆ ಮುಂದಿನ ದಿನಗಳಲ್ಲಿ ಹಲವಾರು ಕಾರಣಕ್ಕಾಗಿ ಈ ಒಂದು ದಾಖಲೆಗಳನ್ನು ಕೇಳುತ್ತಾರೆ. ಹಾಗಾಗಿ ಮದುವೆ ಆದ ಆರು ತಿಂಗಳ ಒಳಗೆ ಅಥವಾ ಸಾಧ್ಯವಾದಷ್ಟು ಬೇಗ ವಿವಾಹ ಪ್ರಮಾಣ ಪತ್ರ (Marriage Certificate) ಪಡೆದುಕೊಳ್ಳಬೇಕು.
ಈ ಮೊದಲು ತಮ್ಮ ವ್ಯಾಪ್ತಿಗೆ ಬರುವ ವಿವಾಹ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ಕೊಟ್ಟು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಈ ಪ್ರಮಾಣ ಪತ್ರ ಪಡೆಯುತ್ತಿದ್ದರು ಆದರೆ ಈಗ ಇದನ್ನು ಆನ್ಲೈನ್ ನಲ್ಲಿ ಕೂಡ ಪಡೆಯಬಹುದಾಗಿದೆ. ಕಾವೇರಿ 2.0 ತಂತ್ರಾಂಶದ (Kaveri 2.0) ಮೂಲಕವಾಗಿ ಮ್ಯಾರೇಜ್ ಸರ್ಟಿಫಿಕೇಟ್ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಯಾವ ರೀತಿ ಅಪ್ಲೈ ಮಾಡಬೇಕು ಮತ್ತು ಏನಿಲ್ಲ ದಾಖಲೆಗಳು ಬೇಕು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಯಾವಾಗಲೂ ಆರಾಮಾಗಿ ನೆಮ್ಮದಿ ಆಗಿರಬೇಕಾ.? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!
ಬೇಕಾಗುವ ದಾಖಲೆಗಳು:-
* ವಧು ಮತ್ತು ವರರು ಜೋಡಿಯಾಗಿ ತೆಗೆಸಿರುವ ಭಾವಚಿತ್ರ
* ಮದುವೆಯ ಇನ್ವಿಟೇಶನ್ ಕಾರ್ಡ್
* ಜನ್ಮ ದಿನಾಂಕದ ಪುರಾವೆಗಾಗಿ (ಜನನ ಪ್ರಮಾಣ ಪತ್ರ / TC / ಪಾನ್ ಕಾರ್ಡ್ / ಪಾಸ್ಪೋರ್ಟ್ / ವೋಟರ್ ಐಡಿ ಇತ್ಯಾದಿಗಳಲ್ಲಿ ಯಾವುದಾದರೂ ಒಂದು)
* ವಿಳಾಸ ಪುರಾವೆಗಾಗಿ (ಆಧಾರ್ ಕಾರ್ಡ್ / ಪ್ಯಾನ್ ಕಾರ್ಡ್/ ಅಥವಾ ವೋಟರ್ ಐಡಿ ಇತ್ಯಾದಿಗಳಲ್ಲಿ ಯಾವುದಾದರೂ ಒಂದು)
* ಸಾಕ್ಷಿಗಳ ಸಹಿ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* https://kaveri.karnataka.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ
* ಮೊದಲಿಗೆ ರಿಜಿಸ್ಟರ್ ಮಾಡಿ ಈಗಾಗಲೇ ರಿಜಿಸ್ಟರ್ ಆಗಿದ್ದರೆ ಲಾಗಿನ್ (Login) ಕ್ಲಿಕ್ ಮಾಡಿ ಐಡಿ ಮತ್ತು ಪಾಸ್ವರ್ಡ್ ಕ್ಯಾಪ್ಚ ಕೋಡ್ ಎಂಟ್ರಿ ಮಾಡಿ ಲಾಗಿನ್ ಆಗಿ
* ಸ್ಕ್ರೀನ್ ಮೇಲೆ ಮದುವೆ ನೋಂದಣಿ ಪ್ರಮಾಣ ಪತ್ರ ಎನ್ನುವ ಆಪ್ಶನ್ ಕಾಣುತ್ತದೆ ಅದನ್ನು ಸೆಲೆಕ್ಟ್ ಮಾಡಿ ಮುಂದುವರೆಯಿರಿ
* ವಧು ಹಾಗೂ ವರರ ವೈಯುಕ್ತಿಕ ವಿವರಗಳನ್ನು ಕೇಳಲಾಗುತ್ತದೆ ಈ ಎಲ್ಲಾ ಆಪ್ಷನ್ಗಳಲ್ಲಿ ವಧುವಿನ ಹೆಸರು, ವಯಸ್ಸು, ತಂದೆಯ ಹೆಸರು, ಆಕೆಯ ವಾಸ ಸ್ಥಳ, ಹೋಬಳಿ, ತಾಲೂಕು ಜಿಲ್ಲೆ, ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಹಾಗೆ ವರನ ವಿವರವನ್ನು ಭರ್ತಿ ಮಾಡಿ.
ಈ ಸುದ್ದಿ ಓದಿ:- ಪ್ರತಿ ದಿನ ಈ ಹೂವು ಲಕ್ಷ್ಮಿ ದೇವಿ ಫೋಟೋ ಮುಂದೆ ಇಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ಇರುತ್ತಾಳೆ.!
* ವಿವಾಹ ನಡೆದ ಸ್ಥಳ ಹಾಗೂ ಅದಕ್ಕೆ ಸಂಬಂಧಿಸಿದಂತೆ ವಿವರ ಭರ್ತಿ ಮಾಡಲು ಸೂಚಿಸಲಾಗಿರುತ್ತದೆ. ಅದರಲ್ಲಿ ವಿವಾಹದ ದಿನಾಂಕ ಮತ್ತು ವಿವಾಹ ನಡೆದ ಸ್ಥಳದ ವಿಳಾಸ ಎಲ್ಲವನ್ನು ಸರಿಯಾಗಿ ಭರ್ತಿ ಮಾಡಿ
* ಕೇಳಿರುವ ಫಾರ್ಮೆಟ್ ನಲ್ಲಿ ಪೂರಕ ದಾಖಲೆಗಳನ್ನು ಹಾಗೂ ಫೋಟೋ ಇತ್ಯಾದಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ವಿವಾಹ ನೋಂದಣಿ ಪ್ರಮಾಣ ಪತ್ರ ಪಡೆದುಕೊಳ್ಳಲು ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ ಆನ್ಲೈನ್ ಮೂಲಕ ನೀವು ಈ ಶುಲ್ಕವನ್ನು ಪಾವತಿ ಮಾಡಬಹುದು
* ಒಂದು ವೇಳೆ ವಿವಾಹವು ಕರ್ನಾಟಕದಿಂದ ಹೊರಗೆ ಬೇರೆ ರಾಜ್ಯಗಳಲ್ಲಿ ಆಗಿದ್ದರೆ ಅಫಿಡವಿಟ್ ಸಲ್ಲಿಸಬೇಕಿರುತ್ತದೆ.
ಈ ಸುದ್ದಿ ಓದಿ:- ಒಡೆದ ಪ್ಲಾಸ್ಟಿಕ್ ಮಗ್ ಬಕೆಟ್ ಪಾತ್ರೆಗಳನ್ನು ಜೋಡಿಸಿ ಕೇವಲ 1 ಚಮಚ ಉಪ್ಪಿನಿಂದ.!
* ಸಹಿ ಅವಶ್ಯಕತೆ ಇರುತ್ತದೆ, ಇ-ಸೈನ್ ವಿಧಾನದಲ್ಲಿ ವಧು, ವರ ಪೋಷಕರು ಹಾಗೂ ಸಾಕ್ಷಿಗಳ ಸಹಿ ತೆಗೆದುಕೊಳ್ಳಲಾಗುತ್ತದೆ ಇದಾದ ಮೇಲೆ ನಿಮಗೆ ಒಂದು ಅಕ್ನಾಲಜಿಮೆಂಟ್ ಲೆಟರ್ ಕೊಡಲಾಗುತ್ತದೆ.
* ನೀವು ಅದರಲ್ಲಿರುವ ಅರ್ಜಿ ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಮೂಲಕ ಸರ್ಟಿಫಿಕೇಟ್ ಅನುಮೋದನೆ ಆಗಿದೆಯೇ ಎನ್ನುವುದನ್ನು ಪರೀಶೀಲಿಸಿಕೊಳ್ಳಬಹುದು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಅನುಮೋದಿಸಿದ ನಂತರ ನಿಮಗೆ ವಿವಾಹ ನೋಂದಣಿ ಪ್ರಮಾಣ ಪತ್ರ ಸಿಗುತ್ತದೆ.
https://youtu.be/IkQD6VZnAGI?si=C9cL6PsRVXkxuUwu