ಪುರಾಣದಲ್ಲಿ ಅದೃಷ್ಟದ ಬಗ್ಗೆ ಸ್ಪಷ್ಟ ವಿವರಣೆ ಇದ್ದು ಇದು ನಮ್ಮ ನಂಬಿಕೆಯ ಮೇಲೆ ಆಧಾರಿತವಾಗಿದೆ ಅಂತ ಹೇಳಲಾಗಿದೆ. ಆದರೆ ಕೆಲವು ವಸ್ತುಗಳನ್ನು ನಮ್ಮ ಬಳಿ ಇಟ್ಟುಕೊಳ್ಳುವುದರಿಂದ ಅದೃಷ್ಟ ಒಲಿಯುವ ಸಾಧ್ಯತೆ ಇರುತ್ತದೆ ಅಂತ ಹೇಳಲಾಗುತ್ತದೆ. ಈ ಅಚ್ಚರಿ ಸಂಗತಿ ನಿಮಗೆ ತಿಳಿದಿದೆಯಾ? ಕೆಲವೊಮ್ಮೆ ಕೆಲವು ವಸ್ತುಗಳ ದರ್ಶನ ವಾದರೂ ನಿಮಗೆ ಅದೃಷ್ಟ ಒಲಿಯುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ ಇಂತಹ ಅಚ್ಚರಿಯ ವಿಷಯವನ್ನು ಈ ದಿನ ತಿಳಿಯೋಣ.
ಈ ವಸ್ತುಗಳನ್ನು ದಾರಿಯಲ್ಲಿ ನೋಡುವುದು ಒಳ್ಳೆಯ ಸಂಕೇತ ಎಂದು ಹೇಳಲಾಗಿದೆ. ನೀವು ಮನೆಯಿಂದ ಕೆಲಸಕ್ಕೆ ಹೊರಟಂತಹ ಸಂದರ್ಭದಲ್ಲಿ ಶಂಖ, ನಾಣ್ಯ ಕುದುರೆ ಇವುಗಳು ದಾರಿಯಲ್ಲಿ ಕಂಡು ಬಂದರೆ ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ದಾರಿಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ನೋಡುವುದು ಅಥವಾ ಸ್ವಸ್ತಿಕ ಚಿನ್ಹೆ ಗುರುತಿರುವಂತಹ ಯಾವುದೇ ವಸ್ತು ಕಂಡರೂ ಕೂಡ ಅದು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ.
ಇಂತಹ ಮಂಗಳಕರ ವಸ್ತುಗಳನ್ನು ನೋಡಿದರೆ ನೀವು ಹೋಗುವಂತಹ ಕೆಲಸ ನೂರಕ್ಕೆ ನೂರರಷ್ಟು ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ರೀತಿ ಹಲವು ಬಾರಿ ನಾವು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಕೆಲವು ವಸ್ತುಗಳು ಸಿಕ್ಕಿದರೆ ಅದು ಕೂಡ ನಮ್ಮ ಅದೃಷ್ಟದ ಸಂಕೇತ ಎಂದು ಹೇಳುತ್ತಾರೆ ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮಿ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ರಸ್ತೆಯಲ್ಲಿ ಬಿದ್ದಿರುವಂತಹ ಹಣವನ್ನು ನೋಡಿಯೂ ನೋಡದಂತೆ ಹೋದರೆ ತಾಯಿ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ. ಹಾಗಾಗಿ ರಸ್ತೆಯಲ್ಲಿ ಸಿಕ್ಕಂತಹ ಹಣಕ್ಕೆ ನಾವು ಅ ಗೌರವ ತೋರಿಸ ಬಾರದು ಬದಲಿಗೆ ಅದನ್ನು ಯಾವುದೇ ಕೆಲಸಕ್ಕೂ ಖರ್ಚು ಮಾಡದೆ ಅದನ್ನು ನಿಮ್ಮ ಜೊತೆ ಇಟ್ಟುಕೊಳ್ಳುವುದರಿಂದ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ.
ದಾರಿಯಲ್ಲಿ ಹಣ ನಿಮಗೆ ಸಿಕ್ಕರೆ ತಾಯಿ ಲಕ್ಷ್ಮಿ ದೇವಿ ನಿಮ್ಮ ಮೇಲೆ ಕೃಪೆ ತೋರಿಸಿದ್ದಾಳೆ ಎಂದು ಅರ್ಥ ಜೀವನದಲ್ಲಿ ಆರ್ಥಿಕ ಸಮಸ್ಯೆ ಯಿಂದ ಬಳಲುತ್ತಿರುವವರಿಗೆ ತಮ್ಮ ಆರ್ಥಿಕ ಸಮಸ್ಯೆ ಇನ್ನೇನು ಕೆಲವೇ ದಿನಗಳಲ್ಲಿ ದೂರವಾಗುತ್ತದೆ ಎನ್ನುವುದರ ಸಂಕೇತವು ಕೂಡ ಇದಾಗಿದೆ. ನಿಮಗೆ ರಸ್ತೆಯಲ್ಲಿ ಅಥವಾ ಎಲ್ಲಿಯಾದರೂ ಪೂಜಾ ಸಾಮಗ್ರಿಗಳು ಸಿಕ್ಕರೆ ಅದು ಕೂಡ ನಿಮಗೆ ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ. ದೇವಾನುದೇವತೆಗಳು ನಿಮ್ಮ ಮೇಲೆ ಪ್ರಸನ್ನ ರಾಗಿದ್ದಾರೆ ಎಂಬ ಅರ್ಥ ಇದಾಗಿರುತ್ತದೆ.
ಹಾಗಾಗಿ ದೇವರ ಸಾಮಾಗ್ರಿಗಳು ನಿಮಗೆ ಸಿಕ್ಕರೆ ಅದು ಕೆಟ್ಟದ್ದಲ್ಲ ಒಳ್ಳೆಯದು ಎಂದು ಕೂಡ ಹೇಳಲಾಗುತ್ತದೆ. ನೀವು ಮನೆಯಿಂದ ಹೊರಬಂದ ತಕ್ಷಣ ಕಬ್ಬಿನ ರಾಶಿಯನ್ನು ನೋಡಿದರೆ ಅದು ತುಂಬಾ ಮಂಗಳಕರವಾದ ಸಂಕೇತ. ಇದು ನಿಮ್ಮ ಮುಂದಿನ ಜೀವನದಲ್ಲಿ ಸುಖ ಸಂತೋಷ ಹಾಗೂ ನೆಮ್ಮದಿಯ ಜೀವನವನ್ನು ನಡೆಸುತ್ತೀರಿ ಎನ್ನುವು ದರ ಸಂಕೇತ ಇದಾಗಿರುತ್ತದೆ. ಗಣೇಶನ ಚಿತ್ರ ಅಥವಾ ವರ್ಣ ಚಿತ್ರವನ್ನು ಉಡುಗೊರೆಯಾಗಿ ಸ್ವೀಕರಿಸುವುದು ತುಂಬಾ ಮಂಗಳಕರವಾಗಿದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ.
ಭಗವಾನ್ ಗಣೇಶನ ಕೃಪೆಯಿಂದ ಜೀವನದ ಎಲ್ಲ ತೊಂದರೆಗಳು ಕೂಡ ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಬೆಳ್ಳಿಯು ಅತ್ಯಂತ ಪರಿಶುದ್ಧ ಲೋಹಗಳಲ್ಲಿ ಒಂದಾಗಿದೆ ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿ ಯಿಂದ ಮಾಡಿದ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಮತ್ತು ಸ್ವೀಕರಿಸುವುದು ತುಂಬಾ ಶುಭ ತರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.