ಬೇಸಿಗೆಯಲ್ಲಿ ನಾವು ಯಾವುದೇ ಆಹಾರ ಪದಾರ್ಥವನ್ನು ಹೆಚ್ಚಿನ ಸಮಯದವರೆಗೆ ಬಿಸಿ ಮಾಡದೆ ಹಾಗೆ ಇಟ್ಟರೆ ಅದು ಹುಳಿಯಾಗುತ್ತದೆ ಅದೇ ರೀತಿಯಾಗಿ ನಾವು ಹಾಲನ್ನು ಸಹ ಬೆಳಗ್ಗೆ ಮಧ್ಯಾಹ್ನ ಹಾಗೂ ಸಂಜೆ ಬಿಸಿ ಮಾಡದೆ ಇದ್ದರೆ ಆ ಹಾಲು ಕೆಟ್ಟು ಹೋಗುತ್ತದೆ. ಕೆಲ ವೊಂದಷ್ಟು ಜನ ಕೆಟ್ಟ ಹೋದಂತಹ ಹಾಲನ್ನು ಮೊಸರು ಮಾಡಿಕೊಳ್ಳುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಅದನ್ನು ಆಚೆ ಬಿಸಾಕುತ್ತಾರೆ.
ಆದರೆ ಈ ರೀತಿಯಾದಂತಹ ಹಾಲನ್ನು ಇನ್ನು ಮುಂದೆ ಬಿಸಾಡುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಅದನ್ನು ಸರಿಪಡಿಸಿ ಅದನ್ನು ಮತ್ತೆ ನೀವು ಕಾಫಿ ಟೀ ಮಾಡುವುದಕ್ಕೆ ಬಳಸಬಹುದು. ಹಾಗಾದರೆ ಯಾವ ಒಂದು ಪದಾರ್ಥವನ್ನು ಇದಕ್ಕೆ ಹಾಕುವುದರಿಂದ ಕೆಟ್ಟು ಹೋದಂತಹ ಹಾಲನ್ನು ಸರಿಪಡಿಸಬಹುದು ಮತ್ತೆ ಅದನ್ನು ಹೇಗೆ ಪುನರ್ ಬಳಕೆ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಈ ಸುದ್ದಿ ಓದಿ:- ವಿವಾಹ ಪ್ರಮಾಣ ಪತ್ರ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
* ಅಂಗಡಿಯಿಂದ ನಾವು ಹಾಲಿನ ಪ್ಯಾಕೆಟ್ ಅನ್ನು ತಂದು ಅದರಲ್ಲಿ ಸ್ವಲ್ಪ ಪ್ರಮಾಣದ ಹಾಲನ್ನು ಬಳಕೆ ಮಾಡಿ ಮತ್ತೆ ಸ್ವಲ್ಪ ಹಾಲನ್ನು ಪ್ಯಾಕೆಟ್ ನಲ್ಲಿ ಬಿಟ್ಟು ಅದನ್ನು ಬಿಸಿ ಮಾಡದೆ ಮರೆತಿರುತ್ತೇವೆ ಅದನ್ನು ಮಧ್ಯಾಹ್ನದ ಸಮಯದಲ್ಲಿ ಬಿಸಿ ಮಾಡಲು ಇಟ್ಟಾಗ ಅದು ಕೆಟ್ಟು ಹೋಗುತ್ತದೆ ಅಂತಹ ಒಂದು ಸಂದರ್ಭದಲ್ಲಿ ಈಗ ನಾವು ಹೇಳುವ ಈ ಒಂದೇ ಒಂದು ಪದಾರ್ಥವನ್ನು ಅದಕ್ಕೆ ಹಾಕಿ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿದರೆ ಸಾಕು ಕೆಟ್ಟು ಹೋಗುತ್ತಿರುವಂತಹ ಹಾಲನ್ನು ಸರಿಪಡಿಸಬಹುದು.
ಹಾಗಾದರೆ ಆ ಒಂದು ಪದಾರ್ಥ ಯಾವುದು ಒಡೆದು ಹೋಗುವಂತಹ ಹಾಲನ್ನು ಸರಿಪಡಿಸುವಂತಹ ಗುಣ ಯಾವುದಕ್ಕೆ ಇದೆ ಎಂದು ನೋಡುವುದಾದರೆ. ನಾವು ಕೆಲವೊಂದಷ್ಟು ಅಡುಗೆಗೆ ಉಪಯೋಗಿಸುವಂತಹ ಅಡುಗೆ ಸೋಡಾ ಹೌದು, ಅಡುಗೆ ಸೋಡವನ್ನು ಬಳಸುವುದರ ಮೂಲಕ ಕೆಟ್ಟು ಹೋಗುತ್ತಿರುವಂತಹ ಹಾಲನ್ನು ಸರಿಪಡಿಸಬಹುದು.
ಅದು ಹೇಗೆ ಎಂದು ನೋಡುವುದಾದರೆ ಮೊದಲು ಹಾಲನ್ನು ಪಾತ್ರೆಗೆ ಹಾಕಿದ ತಕ್ಷಣ ಅದು ತಳ ಹಿಡಿಯುವಾಗ ಅದು ಕೆಟ್ಟು ಹೋಗುತ್ತಿರುತ್ತದೆ ಅಂತಹ ಒಂದು ಸಂದರ್ಭದಲ್ಲಿ ಚಿಟಿಕೆ ಅಡಿಗೆ ಸೋಡವನ್ನು ಆ ಒಂದು ಹಾಲಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಮಿಶ್ರಣ ಮಾಡಿದ ತಕ್ಷಣವೇ ಕೆಟ್ಟು ಹೋಗುತ್ತಿರುವಂತಹ ಹಾಲು ಸರಿಹೋಗುತ್ತದೆ. ತಳ ಹಿಡಿಯುವುದಿಲ್ಲ ಈ ರೀತಿ ಮಾಡಿದಂತಹ ಹಾಲನ್ನು ಚೆನ್ನಾಗಿ ಕುದಿ ಬರುವ ಹಾಗೆ ಬಿಸಿ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ.!
ಹೀಗೆ ಮೇಲೆ ಹೇಳಿದ ವಿಧಾನವನ್ನು ಅನುಸರಿಸುವುದರ ಮೂಲಕ ಕೆಟ್ಟು ಹೋಗುತ್ತಿರುವಂತಹ ಹಾಲನ್ನ ತಕ್ಷಣದಲ್ಲಿಯೇ ಸರಿಪಡಿಸಿಕೊಳ್ಳುವುದರ ಮೂಲಕ ಮತ್ತೆ ನೀವು ಆ ಒಂದು ಹಾಲನ್ನು ಉಪಯೋಗಿಸಿಕೊಂಡು ಟಿ ಕಾಫಿ ಹಾಲು ಮಾಡಿಕೊಂಡು ಸೇವನೆ ಮಾಡಬಹುದು ಬದಲಿಗೆ ಅದನ್ನು ಆಚೆ ಬಿಸಾಡುವ ಅವಶ್ಯಕತೆ ಇರುವುದಿಲ್ಲ.
ಹಾಗಾಗಿ ಯಾರೆಲ್ಲ ಕೆಟ್ಟ ಹೋಗುತ್ತಿರುವಂತಹ ಹಾಲನ್ನು ಬಿಸಾಕುತ್ತಿರುತ್ತಾರೋ ಅವರು ಇಂತಹ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಹಾಲನ್ನು ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಪ್ರತಿಯೊಬ್ಬ ಮನೆಯಲ್ಲಿರುವ ಮಹಿಳೆಯು ಕೂಡ ಇಂತಹ ಕೆಲವೊಂದಷ್ಟು ಕಿಚನ್ ಟಿಪ್ಸ್ ಗಳನ್ನು ತಿಳಿದುಕೊಂಡಿರುವುದು ಹಾಗೂ ಅನುಸರಿಸುವುದು ತುಂಬಾ ಒಳ್ಳೆಯದು.
ಇದರಿಂದ ನಾವು ಯಾವುದೇ ಆಹಾರ ಪದಾರ್ಥವನ್ನು ವೇಸ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಅದನ್ನು ಹೇಗೆ ಸರಿಪಡಿಸಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಮನೆಯಲ್ಲಿ ಜಿರಳೆ ಇದ್ದರೆ ಹೀಗೆ ಮಾಡಿ.!
https://youtu.be/QDLfSo0qWzw?si=05OIaj7gusqIcG4J