ಮನೆಯ ಮುಖ್ಯ ದ್ವಾರಕ್ಕೆ ಅಲಂಕಾರಕ್ಕಾಗಿ ತಳಿರು ತೋರಣಗಳನ್ನು ಹಾಕುತ್ತೇವೆ, ಹಾಗೆಯೇ ಡೋರ್ ಮ್ಯಾಟ್ ಕೂಡ ಹಾಕುತ್ತೇವೆ. ಮಾರ್ಕೆಟ್ ನಲ್ಲಿ ಕಣ್ಣಿಗೆ ಕಾಣುವ ಅಂದವಾದ ಡಿಸೈನ್ ಇರುವ ಆಕರ್ಷಕ ಬಣ್ಣವುಳ್ಳ ಮ್ಯಾಟ್ ಗಳನ್ನು ತಂದು ಮನೆ ಚೆನ್ನಾಗಿ ಕಾಣಲಿ ಎಂದು ಹಾಕುತ್ತೇವೆ. ಆದರೆ ನಿಯಮಗಳಿಲ್ಲದೆ ತಪ್ಪಾದ ರೀತಿಯಲ್ಲಿ ಡೋರ್ ಮ್ಯಾಟ್ ಹಾಕುವ ಕಾರಣದಿಂದ ಈ ಸಮಸ್ಯೆ ಹೆಚ್ಚಾಗುತ್ತದೆ. ಏಕೆಂದರೆ ಮನೆಯ ಮುಖ್ಯದ್ವಾರ ಮನೆಗೆ ಅದೃಷ್ಟ ಮತ್ತು ದುರಾದೃಷ್ಟವನ್ನು ಒಳಗೆ ತರುವ ಮಾರ್ಗವಾಗಿದೆ.
ಹಾಗಾಗಿ ಮನೆಗೆ ಲಕ್ಷ್ಮೀ ಬರಬೇಕು ಎಂದರು ಸಮಸ್ಯೆ ಬರಬೇಕು ಎಂದರೂ ಕೂಡ ಅದು ನಾವು ಮನೆ ಮುಖ್ಯ ದ್ವಾರದಲ್ಲಿ ಮಾಡುವ ತಪ್ಪುಗಳಿಂದಲೇ ಬರುವುದು. ಬಾಗಿಲಿಗೆ ಹಾಕುವ ಡೋರ್ ಮ್ಯಾಟ್ ಏನೆಲ್ಲಾ ಕಷ್ಟ ಕಷ್ಟಗಳಿಗೆ ಕಾರಣ ಆಗುತ್ತದೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ನೋಡಿ.
● ಮನೆಯ ಮುಖ್ಯದ್ವಾರಕ್ಕೆ ಅನೇಕರು WELCOME ಅಥವಾ ಸುಸ್ವಾಗತ ಎನ್ನುವ ಅಕ್ಷರಗಳಿರುವ ಡೋರ್ ಮ್ಯಾಟ್ ಹಾಕುತ್ತಾರೆ, ಈ ರೀತಿ ಹಾಕುವುದು ತಪ್ಪು. ನೀವು ಒಳ್ಳೆಯ ಕಾರಣದಿಂದ ಅತಿಥಿಗಳಿಗೆ ಅಥವಾ ಮನೆಗೆ ಅದೃಷ್ಟ ಲಕ್ಷ್ಮಿಗೆ ವೆಲ್ಕಮ್ ಎಂದು ಹಾಕಿರಬಹುದು ಆದರೆ ಅದೃಷ್ಟದ ಹಿಂದೆಯೇ ದುರಾದೃಷ್ಟ ಸಮಸ್ಯೆಗಳು ನೆಗೆಟಿವ್ ಎನರ್ಜಿ ಗಳಿಗೂ ಅದು ಸ್ವಾಗತ ಕೋರುವುದದಿಂದ ಅವುಗಳು ಕೂಡ ಬರುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ವೆಲ್ಕಮ್ ಎಂದು ಬರೆಯುವುದು ಅಥವಾ ಈ ರೀತಿ ಇರುವ ಡೋರ್ ಮ್ಯಾಟ್ ಹಾಕಬಾರದು.
● ಕೈ ಮುಗಿದಿರುವ ಸಂಕೇತ ತೋರಿಸುವಂತಹ ಡೋರ್ ಮ್ಯಾಟ್ ಗಳನ್ನು ಕೂಡ ಮುಖ್ಯ ದ್ವಾರಗಳಿಗೆ ಹಾಕಬಾರದು, ಇದು ಪಂಚಭೂತಗಳನ್ನು ಪ್ರತಿನಿಧಿಸುವ ನಮಸ್ಕಾರ ಮುದ್ರೆಗೆ ಮಾಡುವ ಅಪಚಾರ ಆಗುತ್ತದೆ. ಇದರಿಂದಲೇ ಕಷ್ಟಗಳು ಬರುತ್ತವೆ.
● ಕಡು ಬಣ್ಣಗಳಿರುವ ಡೋರ್ ಮ್ಯಾಟ್ ಗಳನ್ನು ಯಾವುದೇ ಕಾರಣಕ್ಕೂ ಮನೆಯ ಮುಖ್ಯ ದ್ವಾರಗಳಿಗೆ ಹಾಕಬಾರದು. ಯಾಕೆಂದರೆ, ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನವಗ್ರಹಗಳಿಗೆ ಬಣ್ಣಗಳನ್ನು ಕೂಡ ಹೋಲಿಕೆ ಮಾಡುತ್ತೇವೆ. ಹಾಗಾಗಿ ಒಂದೊಂದು ಬಣ್ಣವು ಒಂದೊಂದು ಗ್ರಹವನ್ನು ಸೂಚಿಸುವುದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಆದಷ್ಟು ತಿಳಿ ಬಣ್ಣಗಳಾದ ತಿಳಿ ಮೆರೂನ್, ಅದು, ಆಫ್ ವೈಟ್ ಅಥವಾ ಗ್ರೇ ಬಣ್ಣಗಳು ಇರುವ ಮ್ಯಾಟ್ ಗಳನ್ನು ಹಾಕಬಹುದು.
● ಯಾವುದೇ ಕಾರಣಕ್ಕೂ ಮನೆಯ ಮುಖ್ಯದ್ವಾರಕ್ಕೆ ಪ್ಲಾಸ್ಟಿಕ್ ಇಂದ ಮಾಡಿದ ಡೋರ್ ಮ್ಯಾಟ್ ಗಳನ್ನು ಹಾಕಬಾರದು. ಏಕೆಂದರೆ ಇದಕ್ಕೆ ಯಾವುದೇ ನೆಗೆಟಿವ್ ಎನರ್ಜಿಯನ್ನು ಎಳೆದುಕೊಳ್ಳುವ ಶಕ್ತಿ ಇರುವುದಿಲ್ಲ. ಇದು ಎಲ್ಲಾ ನೆಗೆಟಿವ್ ಎನರ್ಜಿಯನ್ನು ನೇರವಾಗಿ ಮನೆ ಒಳಗೆ ಪ್ರವೇಶ ಮಾಡಲು ಬಿಡುವುದರಿಂದ ಅದನ್ನು ಹಾಕಿ ಪ್ರಯೋಜನ ಇರುವುದಿಲ್ಲ ಹಾಗಾಗಿ ಸಾಧ್ಯವಾದಷ್ಟು ತೆಂಗಿನ ನಾರಿನಿಂದ ಮಾಡಿದ ಡೋರ್ ಮ್ಯಾಟ್ ಗಳನ್ನು ಹಾಕಿ.
● ಹಾಗೆ ನೀವೇನಾದರೂ ಹೊರಗಡೆ ಹೋಗಿ ಮನೆಗೆ ಬಂದಾಗ ಕನಿಷ್ಠ ಒಂದು ನಿಮಿಷ ಆದರೂ ಡೋರ್ ಮ್ಯಾಟ್ ಮೇಲೆ ನಿಲ್ಲಿ ಆಗ ನಿಮ್ಮ ಜೊತೆ ಮನೆಗೆ ಎಂಟ್ರಿ ಅಥವಾ ನೆಗೆಟಿವ್ ಎನರ್ಜಿಯನ್ನು ಅಲ್ಲೇ ತಡೆಯುತ್ತದೆ. ಆದರೆ ಡೋರ್ ಮ್ಯಾಟ್ ಕೆಳಗೆ 2-3 ಎಸಳು ಬೆಳ್ಳುಳ್ಳಿ ಹಾಕಿದಾಗ ಮಾತ್ರ ಅದು ವರ್ಕ್ ಆಗುತ್ತದೆ. ಅದಕ್ಕೆ ಇನ್ನು ಮುಂದೆ ಈ ರೀತಿ ವಿಚಾರಗಳಲ್ಲಿ ಎಚ್ಚರವಾಗಿರಿ, ಸಮಸ್ಯೆಯಿಂದ ಹೊರಬನ್ನಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.