ಮಿಥುನ ರಾಶಿ ಒಂದು ಶಿಶ್ರೋದಯ ರಾಶಿ ಅಂದರೆ ತಲೆ ಮೊದಲಾಗಿ ಹುಟ್ಟುವಂತದ್ದು ಅಂತ ಹೇಳಬಹುದು. ಈ ರಾಶಿಯು ಒಂದು ಗಾಳಿ ತತ್ವದ ರಾಶಿ ಆಗಿರುತ್ತದೆ. ಈ ರಾಶಿಯ ಅದೃಷ್ಟ ದಿಕ್ಕು ಪಶ್ಚಿಮ ದಿಕ್ಕು. ಈ ರಾಶಿಯ ಅಧಿಪತಿ ಬುಧ. ಕಾಲಪುರುಷ ಕುಂಡಳಿಯ ಪ್ರಕಾರ ಬುಧನಿಗೆ ರಾಜಕುಮಾರನ ಸ್ಥಾನವನ್ನು ಕೊಡುತ್ತಾರೆ. ಬುಧನ ಅಧಿಪತ್ಯ ಇರುವುದ ರಿಂದ ಇವರಿಗೆ ಮಾತೆ ಒಂದು ಬಂಡವಾಳ ಎಂದೇ ಹೇಳಬಹುದು.
ಇನ್ನೊಂದು ಅರ್ಥದಲ್ಲಿ ಹೇಳಬೇಕು ಎಂದರೆ ಇವರ ಜೀವನದಲ್ಲಿ ಇವರ ಮಾತು ಬಹಳ ಮುಖ್ಯವಾದಂತಹ ಪಾತ್ರವನ್ನು ವಹಿಸುತ್ತದೆ ಎಂದೇ ಹೇಳಬಹುದು. ಈ ರಾಶಿಯವರು ಸೂರ್ಯಾಸ್ತದ ಸಮಯದ ನಂತರ ಹೆಚ್ಚು ಕ್ರಿಯಾಶೀಲವಾಗಿ ಇರುತ್ತಾರೆ ಅಂದರೆ ಆಕ್ಟಿವ್ ಆಗಿ ಇರುತ್ತಾರೆ ಎಂದೇ ಹೇಳಬಹುದು.
ಈ ಸುದ್ದಿ ನೋಡಿ:- ಮಹಿಳೆಯರಿಗೆ 3 ಲಕ್ಷ ಬಡ್ಡಿ ಇಲ್ಲದೆ ಲೋನ್.!
ಇನ್ನು ಬುಧನ ಅಧಿಪತ್ಯದಲ್ಲಿ ಇರುವ ಕಾರಣ ಹಾಗೂ ಮೂರನೇ ಮನೆಯಾಗಿದ್ದರಿಂದ ಇವರು ಮೊದಲೇ ಹೇಳಿದಂತೆ ಮಾತುಗಾರರಾಗಿರು ತ್ತಾರೆ. ಇನ್ನು ಮಿಥುನ ರಾಶಿಯವರ ಜಾತಕದಲ್ಲಿ ಶುಕ್ರ ಒಳ್ಳೆ ಸ್ಥಾನದಲ್ಲಿ ಇದ್ದು ಅವನೇನಾದರೂ ಬುಧನಿಗೆ ಹೊಂದಿಕೊಂಡಿದ್ದರೆ ಇವರು ಒಂದೇ ರೀತಿಯ ಅವಮಾನಿಸುವಂತಹ ಗುಣ ಸ್ವಭಾವವನ್ನು ಹೊಂದಿರುವ ರೀತಿ ಮಾತನಾಡುವ ಹಾಗೆ ಕಾಣಿಸುತ್ತದೆ.
ಹೌದು ಬೇರೆಯವರಿಗೆ ಇವರ ಮಾತುಕತೆಯ ವೈಖರಿ ಅದೇ ರೀತಿಯಾಗಿ ಕಾಣಿಸುತ್ತದೆ ಆದರೆ ಶುಕ್ರ ಏನಾದರೂ ಒಳ್ಳೆಯ ಜಾಗದಲ್ಲಿ ಇದ್ದು ಯಾವುದೇ ಕೆಟ್ಟ ದೃಷ್ಟಿಗಳು ಬೀಳದಿದ್ದರೆ ಮತ್ತು ಬುಧನ ಜೊತೆ ಸಂಬಂಧ ಹೊಂದಿದ್ದರೆ ಇವರು ಅಲ್ಲಿರುವಂತಹ ಪ್ರತಿಯೊಬ್ಬರ ಜೊತೆ ತುಂಬಾ ಅದ್ಭುತವಾಗಿ ಮಾತನಾಡುತ್ತಾರೆ. ಅಂದರೆ ಈ ಒಂದು ಸಂದರ್ಭದಲ್ಲಿ ಅವರು ಪ್ರತಿಯೊಬ್ಬರ ಜೊತೆಯೂ ಕೂಡ ಸರಾಗವಾಗಿ ನಿರ್ಭಯದಿಂದ ಮಾತನಾಡುತ್ತಾರೆ.
ಈ ಸುದ್ದಿ ನೋಡಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||
ಈ ಒಂದು ಸಂದರ್ಭದಲ್ಲಿ ಇವರ ಮಾತುಕತೆಯ ವೈಖರಿ ತುಂಬಾ ಬದಲಾಗಿರುತ್ತದೆ ಅದು ಹುಡುಗ ಆಗಿರಬಹುದು ಹುಡುಗಿ ಆಗಿರ ಬಹುದು ಇವರ ಸುತ್ತಮುತ್ತ ಇರುವಂತಹ ಪ್ರತಿಯೊಬ್ಬರನ್ನು ಕೂಡ ಬಹಳ ಪ್ರೀತಿ ವಿಶ್ವಾಸದಿಂದ ಬಹಳ ಗೌರವದಿಂದ ಮಾತನಾಡಿಸುವುದರ ಮೂಲಕ ಅತಿ ಹೆಚ್ಚಿನ ಸ್ನೇಹವನ್ನು ಬೆಳೆಸಿಕೊಳ್ಳುತ್ತಾರೆ.
* ಅದೇ ರೀತಿಯಾಗಿ ಮಿಥುನ ರಾಶಿಯಲ್ಲಿ ಬುಧ ಒಳ್ಳೆಯ ಜಾಗದಲ್ಲಿ ಇದ್ದರೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಇಲ್ಲದೆ ಇದ್ದರೆ ಇವರು ಕಂಪ್ಯೂಟರ್ ನಲ್ಲಿ ಏನಾದರೂ ಕೆಲಸ ಮಾಡುತ್ತಿದ್ದರೆ ಇವರ ಆ ಒಂದು ಕೆಲಸ ಅತಿ ವೇಗವಾಗಿ ನಡೆಯುತ್ತದೆ ಮತ್ತು ಇವರು ಯಾವುದೇ ಒಂದು ವಿಷಯ ಹೇಳಿದರೂ ಕೂಡ ಅದನ್ನು ತಕ್ಷಣವೇ ತಿಳಿದುಕೊಳ್ಳುವಂತಹ ಅದ್ಭುತವಾದ ಶಕ್ತಿಯನ್ನು ಹೊಂದಿರುತ್ತಾರೆ.
ಈ ಸುದ್ದಿ ನೋಡಿ:- ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||
ಹಾಗೂ ಅದನ್ನು ತಕ್ಷಣವೇ ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಅತಿ ಹೆಚ್ಚಿನ ಬುದ್ಧಿವಂತಿಕೆಯನ್ನು ತೋರಿಸುತ್ತಾರೆ. ಇವರ ಈ ಬುದ್ಧಿವಂತಿಕೆಯ ಗುಣ ಇವರನ್ನು ಉನ್ನತವಾದ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಯಾರಾದರೂ ಇವರಿಗೆ ತೊಂದರೆ ಕೊಡುವುದಕ್ಕೆ ಬಂದರೆ ಇವರ ಮಾತಿನ ಮುಖಾಂತರವೇ ಅವರಿಗೆ ಬುದ್ಧಿ ಕಲಿಸುವಂತಹ ಚತುರ್ಯತೆಯನ್ನು ಹೊಂದಿರುತ್ತಾರೆ.
* ಹಾಗೂ ಇವರು ತಮ್ಮ ಸುತ್ತಮುತ್ತ ಯಾರೇ ಇದ್ದರೂ ಕೂಡ ಅವರ ಜೊತೆ ಅತಿ ಬೇಗನೆ ಹೊಂದಿಕೊಳ್ಳುವಂತಹ ಸ್ವಭಾವದವರಾಗಿದ್ದು ಅವರ ಜೊತೆ ಬಹಳ ಪ್ರೀತಿ ವಿಶ್ವಾಸದಿಂದ ಇರುತ್ತಾರೆ. ಯಾವುದೇ ಸಂದರ್ಭದಲ್ಲೂ ಕೂಡ ಸಮಯಕ್ಕೆ ಸರಿಯಾದಂತಹ ಒಳ್ಳೆಯ ತೀರ್ಮಾನವನ್ನು ತೆಗೆದುಕೊಳ್ಳುವಂತಹ ಶಕ್ತಿ ಇವರಲ್ಲಿ ಇರುತ್ತದೆ ಇದು ಅವರಿಗೆ ಒಂದು ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಇವರು ಯಾರ ಜೊತೆಯೂ ಕೂಡ ಮಾತನಾಡದೆ ಗಂಟು ಮುಖ ಹಾಕಿ ಕೊಂಡು ಇರುವುದಿಲ್ಲ ಎಲ್ಲರೊಟ್ಟಿಗೆ ಸಮಾನವಾಗಿ ಇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.