ಕೇಂದ್ರ ಸರ್ಕಾರ ರೈತನಿಗಾಗಿ (Government Schemes for Farmers ) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ (PMKSY) ಮೂಲಕ ವಾರ್ಷಿಕವಾಗಿ 6,000 ಸಹಾಯಧನವನ್ನು 3 ಕಂತುಗಳಲ್ಲಿ ತಲಾ ನಾಲ್ಕು ತಿಂಗಳ ಅಂತರದಲ್ಲಿ ದೇಶದಾದ್ಯಂತ ಇರುವ ಎಲ್ಲಾ ಸಣ್ಣ ಹಾಗೂ ಅತಿ ಸಣ್ಣ ರೈತರ ಪಡೆಯುತ್ತಿದ್ದಾರೆ.
ರೈತರನ್ನು ಆರ್ಥಿಕವಾಗಿ ಸದೃಢನಾಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ ರೈತರ ವೃದ್ಯಾಪ್ಯದ ಬಗ್ಗೆ ಕೂಡ ಚಿಂತನೆ ನಡೆಸಿ ರೈತನು ಕೂಡ ಅಸಂಘಟಿತ ವಲಯದಲ್ಲಿ ದುಡಿಯುವಂತಹ ಕಾರ್ಮಿಕನಾಗಿರುವುದರಿಂದ ಆತನಿಗೆ ವಯಸ್ಸಾದ ಬಳಿಕ ಕೃಷಿ ಅಥವಾ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಶಕ್ತಿ ಇಲ್ಲದೆ ಇದ್ದಾಗ ಹಣಕಾಸಿಗಾಗಿ ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು ಎನ್ನುವ ಕಾರಣಕ್ಕಾಗಿ ಕಿಸಾನ್ ಮನ್ ದನ್ ಯೋಜನೆಯನ್ನು (Kisan Mandan Scheme) ಕೂಡ ಕೇಂದ್ರ ಸರ್ಕಾರ ಘೋಷಿಸಿದೆ.
ಕಿಸಾನ್ ಮನ್ ದನ್ ಯೋಜನೆಯ ಮೂಲಕ ದೇಶದ ಸಣ್ಣ ಹಾಗೂ ಅತಿ ಸಣ್ಣ ರೈತರು ದುಡಿಯುವ ವಯಸ್ಸಿನಲ್ಲಿ ಒಂದು ಚಿಕ್ಕ ಮೊತ್ತದ ಹಣವನ್ನು ಉಳಿತಾಯ ಮಾಡಿ ವೃದ್ಯಾಪದಲ್ಲಿ ಪ್ರತಿ ತಿಂಗಳು ಪೆನ್ಷನ್ (Pension) ಬರುವ ರೀತಿ ಸೌಲಭ್ಯ ಪಡೆಯಬಹುದು. ಕಿಸಾನ್ ಮನ್ ದನ್ ಯೋಜನೆಯ ಮತ್ತೊಂದು ವಿಶೇಷತೆ ಏನೆಂದರೆ, ಕುಟುಂಬ ಪಿಂಚಣಿಯ ಅನುಕೂಲತೆ ಕೂಡ ಇದೆ.
ಒಂದು ವೇಳೆ ಹೂಡಿಕೆ ಮಾಡಿದ ಮೃ’ತಪಟ್ಟಲ್ಲಿ ಆತನ ಪತ್ನಿಗೆ ಅರ್ಧ ಪಿಂಚಣಿ ಹೋಗುತ್ತದೆ. ರೈತರಿಗಾಗಿ ಜಾರಿಗೆ ತಂದಿರುವ ಹಲವು ವಿಶೇಷ ಯೋಜನೆಗಳಲ್ಲಿ ಇದು ಕೂಡ ಪ್ರಮುಖವಾಗಿದ್ದು ಬಹಳ ಅನುಕೂಲಕರವಾಗಿರುವ ಯೋಜನೆ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇದರ ಅವಶ್ಯಕತೆ ಹಾಗೂ ಪ್ರಯೋಜನಗಳನ್ನು ತಿಳಿದು ಎಲ್ಲಾ ರೈತರು ಕೂಡ ಈ ಯೋಜನೆಯನ್ನು ಖರೀದಿಸಲು ಪ್ರೋತ್ಸಾಹಿಸಿ.
* ಕಿಸಾನ್ ಮಂದನ್ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆ ಹಾಗೂ ಖಚಿತವಾದ ಲಾಭವು ಕೂಡ ಇರುತ್ತದೆ.
* 18 ವರ್ಷ ಮೇಲ್ಪಟ್ಟ 40 ವರ್ಷದ ಒಳಗಿರುವ ರೈತನು ಈ ಯೋಜನೆಯನ್ನು ಖರೀದಿಸಬಹುದು ಮತ್ತು 60 ವರ್ಷ ವಯಸ್ಸಿನವರೆಗೂ ಕೂಡ ತನ್ನ ಸಾಮರ್ಥ್ಯಕ್ಕನುಸಾರವಾಗಿ ಕನಿಷ್ಠ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತ ಬರಬೇಕು
* ಗರಿಷ್ಠ 2 ಹೆಕ್ಟರ್ ವರಗೆ ಕೃಷಿ ಭೂಮಿ ಹೊಂದಿರುವ ರೈತರು ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
* ರೈತರು ಮಾಸಿಕವಾಗಿ 55 ರೂಪಾಯಿ ಇಂದ ಗರಿಷ್ಠ 200 ರೂಪಾಯಿವರೆಗೆ ಹೂಡಿಕೆ ಮಾಡಬಹುದು ಹಾಗೂ ಹೂಡಿಕೆಯ ಆಧಾರದ ಮೇಲೆ ಅವರಿಗೆ 60 ವರ್ಷ ಆದಮೇಲೆ ಪಿಂಚಣಿ ಬರುತ್ತದೆ.
* ಮಾಸಿತಕವಾಗಿ ಗರಿಷ್ಠ ರೂ.3000 ಅಥವಾ ವಾರ್ಷಿಕವಾಗಿ ಗರಿಷ್ಠ ರೂ.36,000 ಪಡೆಯಬಹುದು.
* ಒಂದು ವೇಳೆ ರೈತ 60 ವರ್ಷದ ಒಳಗೆ ಮೃ’ತಪಟ್ಟಲ್ಲಿ ಹೂಡಿಕೆ ಮೊತ್ತ ಮತ್ತು ಅದಕ್ಕೆ ಅನ್ವಯಿಸುವ ಬಡ್ಡಿಯ ಸಮೇತ ಹಿಂತಿರುಗಿಸಲಾಗುತ್ತದೆ. ಒಂದು ವೇಳೆ ಪಿಂಚಣಿ ಪಡೆಯುವ ವೇಳೆ ಮೃ’ತ ಪಟ್ಟಲ್ಲಿ ವ್ಯಕ್ತಿ 3000ರೂ. ಪಿಂಚಣಿ ಪಡೆಯುತ್ತಿದ್ದರೆ ಆತನ ಪತ್ನಿಗೆ ಪ್ರತಿ ತಿಂಗಳು 1500ರೂ. ಪಿಂಚಣಿ ಹೋಗುತ್ತದೆ, ಅವರು ಮೃ’ತಪಟ್ಟ ಬಳಿಕ ನಾಮಿನಿಗೆ ಹೂಡಿಕೆ ಮೊತ್ತ ಹೋಗುತ್ತದೆ.
* ಗ್ರಾಮ ಒನ್ ಅಥವಾ CSC ಕೇಂದ್ರಗಳಲ್ಲಿ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಹಣ ಕಡಿತವಾಗುತ್ತದೆ.
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್ ಮತ್ತು ಪತ್ನಿಯ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಜಮೀನಿನ ಪಹಣಿ ಪತ್ರ
* ನಾಮಿನಿ ಡೀಟೇಲ್ಸ್
* ಮೊಬೈಲ್ ಸಂಖ್ಯೆ