ಮನುಷ್ಯನಿಗೆ ನಾನಾ ರೀತಿಯ ಸಮಸ್ಯೆಗಳು ಬರುತ್ತವೆ. ದೇಹಕ್ಕೆ ಬರುವ ಸಮಸ್ಯೆಗಳು ಅದರಲ್ಲೂ ಚರ್ಮ ಸಂಬಂಧಿತ ಸಮಸ್ಯೆಗಳು ಮನುಷ್ಯನನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಕುಗ್ಗಿ ಹೋಗುವಂತೆ ಮಾಡಿಬಿಡುತ್ತವೆ. ಇವುಗಳಲ್ಲಿ ಒಂದು ಮುಖದಲ್ಲಿ ಆಗುವ ಭಂಗು ಇದು ಎಷ್ಟು ಗಂಭೀರ ಎಂದರೆ ಅನೇಕರಿಗೆ ಇದೇ ಕಾರಣದಿಂದ ಮದುವೆ ಕೂಡ ಆಗುವುದಿಲ್ಲ.
ಜೊತೆಗೆ ಈ ಸಮಸ್ಯೆ ದೋಷದಿಂದ ಬರುವುದು ಇತ್ಯಾದಿ ಇತ್ಯಾದಿ ಮೂಢನಂಬಿಕೆಗಳ ಕಾರಣಗಳನ್ನು ಕೊಟ್ಟು ಅವರನ್ನು ಇನ್ನು ಸಹ ಭ’ಯ ಬೀಳಿಸಲಾಗುತ್ತದೆ ಮತ್ತು ಇದು ಗುಣವಾಗದ ಕಾಯಿಲೆ ಎಂದು ಅನೇಕರು ಹೆದರುತ್ತಾರೆ. ಆದರೆ ನಿಜವಾದ ಸತ್ಯ ಏನೆಂದರೆ ಆಯುರ್ವೇದ ಹಾಗೂ ಯೋಗದಿಂದ ಎಂತಹ ಕಾಯಿಲೆ ಬೇಕಾದರೂ ಗುಣಪಡಿಸಬಹುದು.
ಮುಖದಲ್ಲಿ ಆಗಿರುವ ಭಂಗು, ಕಪ್ಪು ಕಲೆಗಳು, ಬಿಳಿ ಮಚ್ಚೆ ಅಥವಾ ನೀಲಿ ಬಣ್ಣದ ಮಾರ್ಕ್ ಗಳು ಇವುಗಳಿಗೆಲ್ಲ ಈಗಾಗಲೇ ಅನೇಕ ಆಸ್ಪತ್ರೆಗಳನ್ನು ತಿರುಗಿ ಗಳನ್ನು ದುಬಾರಿ ಬೆಲೆಯ ಔಷಧಿಗಳನ್ನು ಹಚ್ಚಿದರು ಕೂಡ ಫಲಿತಾಂಶ ಸಿಕ್ಕಲಿಲ್ಲ ಎಂದರೆ ಹೋಪ್ ಕಳೆದುಕೊಳ್ಳಬೇಡಿ. ನೀವು ಇದ್ಯಾವುದು ಮಾಡದೆ ನಿಮ್ಮ ಮನೆಯಲ್ಲಿ ಸಿಗುವ ಮೂರೆ ಮೂರು ಪದಾರ್ಥಗಳಿಂದ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು.
ಅದು ಕೂಡ ಕೇವಲ 21 ದಿನಗಳಲ್ಲಿ ಅಂತಹ ಒಂದು ಅದ್ಭುತವಾದ ಆಯುರ್ವೇದ ಟಿಪ್ ನ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಎಲ್ಲರ ಮನೆಯಲ್ಲೂ ಕೂಡ ಎಳ್ಳು ಇದ್ದೇ ಇರುತ್ತದೆ, ಈ ಎಳ್ಳನ್ನು ಸ್ವಲ್ಪ ತೆಗೆದುಕೊಳ್ಳಿ. ಬಿಳಿ ಎಳ್ಳು ಅಥವಾ ಕಪ್ಪು ಎಳ್ಳು ಯಾವುದೇ ಎಳ್ಳನ್ನು ಬೇಕಾದರೂ ತೆಗೆದುಕೊಳ್ಳಬಹುದು, ಇದರ ಜೊತೆಗೆ ಬಿಳಿ ಸಾಸಿವೆಯನ್ನು ಕೂಡ ಅಷ್ಟೇ ಪ್ರಮಾಣದಲ್ಲಿ ತೆಗೆದುಕೊಳ್ಳಿ.
ಬಿಳಿ ಸಾಸಿವೆಯನ್ನು ಅಡುಗೆಗೆ ಬಳಸುವುದು ಬಹಳ ಕಡಿಮೆ ಇದನ್ನು ಆಯುರ್ವೇದ ಅಂಗಡಿಗಳಲ್ಲಿ ಅಥವಾ ಗ್ರಂಥಿಗೆ ಅಂಗಡಿಗಳಲ್ಲಿ ನೀವು ಖರೀದಿಸಬಹುದು. ಯುವ ಕ್ಷಾರ ಎಂದು ಹೇಳಲಾಗುವ ಒಂದು ವಸ್ತುವನ್ನು ಕೂಡ ನೀವು ಆಯುರ್ವೇದ ಅಂಗಡಿಯಲ್ಲಿ ಖರೀದಿಸಿ, ಯುವ ಕ್ಷಾರ ಎನ್ನುವುದು ಗೋಧಿಯಿಂದ ಮಾಡಿದ ಪದಾರ್ಥವಾಗಿರುತ್ತದೆ.
ಗೋಧಿಯನ್ನು ಚೆನ್ನಾಗಿ ತೊಳೆದು ಅದನ್ನು ಬೇಯಿಸಿ ಬಂದ ಆವಿಯನ್ನು ಒಣಗಿಸಿ ಪಡೆದ ಪುಡಿಯ ರೀತಿಯ ಪದಾರ್ಥ ಆಗಿರುತ್ತದೆ. ಇದನ್ನು ಮನೆಯಲ್ಲಿ ಮಾಡಿಕೊಳ್ಳುವುದು ಕ’ಷ್ಟ ಹಾಗಾಗಿ ಆಯುರ್ವೇದ ಅಂಗಡಿಯಲ್ಲಿ ಖರೀದಿಸಿ. ಈ ಎಲ್ಲವನ್ನು ಕೂಡ ಚೆನ್ನಾಗಿ ಅರೆಯಿರಿ. ಅರೆದ ಆ ಮಿಶ್ರಣವನ್ನು ರಾತ್ರಿ ಹೊತ್ತು ಮಲಗುವ ಮುನ್ನ ಚೆನ್ನಾಗಿ ಮುಖ ತೊಳೆದು ಲೇಪನ ಮಾಡಿಕೊಳ್ಳಿ.
ಬೆಳಗ್ಗೆ ಎದ್ದ ಕೂಡಲೇ ಹಾಲಿನಿಂದ ಅಥವಾ ಎಳನೀರಿನಿಂದ ಅಥವಾ ತಣ್ಣಗಿರುವ ನೀರಿನಿಂದ ಕಡಲೆಹಿಟ್ಟು ಅಥವಾ ಮುಲ್ತಾನ್ ಮಟ್ಟಿ ಬಳಸಿ ನೀಟಾಗಿ ವಾಶ್ ಮಾಡಿ ಈ ರೀತಿ ತಪ್ಪದೇ 21 ದಿನಗಳು ಮಾಡಿದರೆ ಸಾಕು ನಿಮ್ಮ ಮುಖದ ಮೇಲಿರುವ ಎಲ್ಲಾ ಕಲೆಗಳು ಕೂಡ ಮಂಗಮಾಯವಾಗಿ ನಿಮ್ಮ ಮುಖ ಪಳಪಳನೆ ಹೊಳೆಯುತ್ತದೆ. ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳಲು ಮುಖ್ಯವಾದ ಕಾರಣ ಏನೆಂದರೆ ದೇಹದಲ್ಲಿರುವ ಟಾಕ್ಸಿಕ್ ಅಂಶಗಳು.
ಅಜೀರ್ಣ, ಮಲಬದ್ಧತೆ, ಇವುಗಳಿಂದ ಕೂಡ ಇಂತಹ ಸಮಸ್ಯೆಗಳು ಬರುತ್ತವೆ. ಹಾಗಾಗಿ ಆದಷ್ಟು ಆರೋಗ್ಯಕರ ಜೀವನಶೈಲಿ ಉತ್ತಮ ಆಹಾರ ಪದ್ಧತಿ ರೂಡಿಸಿಕೊಳ್ಳಿ. ತಡವಾಗಿ ಮಲಗುವ ಅಭ್ಯಾಸ ಬಿಟ್ಟುಬಿಡಿ. ಇದರಿಂದ ಒಂದು ವೇಳೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿಲ್ಲ ಎಂದರೆ ಆಯುರ್ವೇದದಲ್ಲಿ ತಿಳಿಸಲಾಗುವ ಪಂಚಕರ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳಿ. 100 ಅಷ್ಟೇ ನೂರರಷ್ಟು ನಿಮಗೆ ಫಲಿತಾಂಶ ಖಚಿತ.