ನೂತನ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ರಾಜ್ಯದ ಎಲ್ಲ ರೈತರಿಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅದೇನೆಂದರೆ, ಬಗರ್ ಹುಕುಂ ಸಾಗುವಳಿದಾರರು ತಮ್ಮ ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ. ಅದಕ್ಕಾಗಿ ಅರ್ಜಿ ಸ್ವೀಕಾರ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈಗಾಗಲೇ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಿಕೊಂಡು ಕೃಷಿ ಮಾಡುತ್ತಿರುವ ರೈತರುಗಳು ಅಥವಾ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ನಿರಾಶ್ರಿತರು ಮುಂತಾದವರಿಗೆ ಅವರ ಹೆಸರಿಗೆ ಆಸ್ತಿಯನ್ನು ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡುತ್ತಿದೆ.
ಇದಕ್ಕೆ ಬಗರ್ ಹುಕುಂ ಸಾಗುವಳಿ ಎಂದು ಕರೆಯಲಾಗುತ್ತಿತ್ತು, ಈಗ ಅದರ ಸಕ್ರಮಕ್ಕೆ ಅರ್ಜಿ ಆಹ್ವಾನ ಮಾಡಿದೆ. ಜನಸಂಖ್ಯೆ ಹೆಚ್ಚಳದ ಕಾರಣದಿಂದಾಗಿ ಅಥವಾ ವಾಸಿಸಲು ಕೃಷಿ ಮಾಡಲು ಜಮೀನು ಇಲ್ಲದ ಕಾರಣಕ್ಕಾಗಿ ಜನರು ಈ ರೀತಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ. ನಂತರ ಅದು ಅವರ ಹೆಸರಿಗೆ ಇಲ್ಲದೆ ಹೋದಲ್ಲಿ ಸರ್ಕಾರದಿಂದ ಯಾವ ಸೌಲಭ್ಯವನ್ನು ಕೂಡ ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ.
ಹಾಗಾಗಿ ಇದನ್ನು ಮನಗಂಡ ಸರ್ಕಾರ ಆಗಾಗ ಈ ರೀತಿ ಕೃಷಿ ಚಟುವಟಿಕೆಗಾಗಿ ಸರ್ಕಾರಿ ಭೂಮಿಯನ್ನು ಅವಲಂಬಿಸುವ ಬಗರ್ ಹುಕುಂ ಸಾಗುವಳಿದಾರರಿಗೆ ಪೂರಕ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈಗಾಗಲೇ ಅನೇಕ ಬಾರಿ ಈ ರೀತಿ ಅವಕಾಶವನ್ನು ಸಹ ನೀಡಿದೆ. ಅದಕ್ಕೆ ಕೆಲವು ನಿಬಂಧನೆಗಳು ಸಾಗುವಳಿದಾರರಾಗಿರುವವರು ಪಾಲಿಸಬೇಕು. ಆ ಕಂಡೀಶನ್ ಒಳಗಡೆ ಇರುವ ರೈತರಿಂದ ಈಗ ಅರ್ಜಿ ಆಹ್ವಾನಿಸಿದೆ.
ಇವರಿಗೆ ಮಾತ್ರವಲ್ಲದೆ ತಂದೆ, ತಾತ, ಮುತ್ತಾತನ ಹೆಸರಿನಲ್ಲಿ ಜಮೀನು ಇದ್ದು ವಂಶಪಾರಂಪರ್ಯದಿಂದ ಅದನ್ನು ತಾವೇ ಸಾಗುವಳಿ ಮಾಡಿಕೊಂಡು ಬರುತ್ತಿರುವವರು ದಾಖಲೆ ಇಲ್ಲ ಎನ್ನುವ ಕಾರಣಕ್ಕೆ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ ಅದು ಕೂಡ ಒಂದು ಸಮಸ್ಯೆ. ಅವರಿಗೆ ಸರ್ಕಾರದಿಂದ ಸಿಗುವ ಕೃಷಿ ಸಾಲವಾಗಲಿ ಅಥವಾ ರೈತರಿಗೆ ಸಿಗುವ ಕಿಸಾನ್ ಸಮ್ಮಾನ್ ನಿಧಿ ಇನ್ನಿತರ ಸೌಲಭ್ಯವಾಗಲಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.
ಸಾಗುವಳಿ ಮಾಡುವ ರೈತನ ಹೆಸರಿನಲ್ಲಿ ಜಮೀನು ಇಲ್ಲ ಎಂದರೆ ರೈತನಿಗೆ ಸಿಗುವ ಯಾವ ಸೌಲಭ್ಯವು ಕೂಡ ಸಿಗುವುದಿಲ್ಲ ಇದರಿಂದ ಈಗ ಈ ಸಮಸ್ಯೆಯನ್ನು ಅರಿತುಕೊಂಡು ಸರ್ಕಾರ ಇವರಿಗೂ ಸಹ ದಾಖಲೆಗಳು ಇಲ್ಲದಿದ್ದರೂ ನಮ್ಮ ಹೆಸರಿಗೆ ಜಮೀನನ್ನು ಮಾಡಿಕೊಳ್ಳಲು ಅರ್ಜಿ ಸಲ್ಲಿಸುವಂತೆ ಕೇಳಿದೆ. ನಂತರ ಅದಕ್ಕೆ ಮಾರ್ಗಸೂಚಿ ಕೂಡ ಇದ್ದು ಅದನ್ನು ಪೂರೈಸಿದರೆ ಸಾಗುವಳಿ ಮಾಡುವ ರೈತನ ಹೆಸರಿಗೆ ತಾತನ ಅಥವಾ ತಂದೆ ಆಸ್ತಿ ವರ್ಗಾವಣೆ ಆಗುತ್ತದೆ.
ಈ ರೀತಿಯಾಗಿ ತಮ್ಮ ಹೆಸರಿಗೆ ದಾಖಲೆಗಳನ್ನು ಬದಲಾಯಿಸಿಕೊಳ್ಳಲು ರೈತರು ಭೂ ಕಂದಾಯ ಇಲಾಖೆ, ಭೂ ದಾಖಲೆ ಇಲಾಖೆ, ತಹಶೀಲ್ದಾರ್ ಕಚೇರಿ ಈ ರೀತಿ ಕಚೇರಿಯಿಂದ ಕಚೇರಿಗೆ ಅಳೆದು ಸಾಕಾಗುತ್ತಿದ್ದರು, ಅವರಿಗೆ ಸರಿಯಾದ ಮಾಹಿತಿ ಕೂಡ ಸಿಗುತ್ತಿರಲಿಲ್ಲ. ಈಗ ಬಗರ್ ಹುಕುಂ ಆದೇಶ ಪತ್ರ ಹೊರ ಬಿದ್ದಿರುವ ಕಾರಣ ಈ ಒಂದು ಸದಾವಕಾಶವನ್ನು ಬಳಸಿಕೊಂಡು ರೈತರು ತಮ್ಮ ಹೆಸರಿಗೆ ದಾಖಲೆಗಳನ್ನು ಬದಲಾಯಿಸಿಕೊಂಡು ಸರ್ಕಾರದ ಎಲ್ಲಾ ಸೌಲಭ್ಯವನ್ನು ಕೂಡ ಪಡೆಯಬಹುದು. ಸರ್ಕಾರ ನೀಡಿರುವ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ ಮತ್ತು ಈ ಮಾಹಿತಿ ಎಲ್ಲ ರೈತರಿಗೂ ತಲುಪುವಂತೆ ಶೇರ್ ಮಾಡಿ.