ದೇಹಕ್ಕೆ ಅನೇಕ ರೀತಿಯ ವಿಟಮಿನ್ಸ್ ಮಿನರಲ್ಸ್ ಮುಂತಾದ ಪೋಷಕಾಂಶಗಳ ಅವಶ್ಯಕತೆ ಇದೆ. ಇವುಗಳ ಕೊರತೆ ಉಂಟಾದಾಗ ದೇಹವೇ ಕೆಲವು ಲಕ್ಷಣಗಳ ಮೂಲಕ ಸೂಚನೆ ಕೊಡುತ್ತದೆ. ಇದನ್ನು ನಿರ್ಲಕ್ಷಿಸಿದ್ದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಮುಖ್ಯವಾದ ಎಂಟು ಲಕ್ಷಣಗಳ ಬಗ್ಗೆ ತಿಳಿಸುತ್ತಿದ್ದೇವೆ ಇವುಗಳನ್ನು ಸೂಕ್ಷ್ಮದಲ್ಲಿ ಅರಿತುಕೊಂಡು ದೇಹಕ್ಕೆ ಯಾವುದೇ ಪೋಷಕಾಂಶಗಳ ಕೊರತೆ ಉಂಟಾಗದಂತೆ ನೋಡಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
* ನೀವು ಹಲ್ಲುಜ್ಜುವಾಗ ಅಥವಾ ಕಬ್ಬು ತಿನ್ನುವಾಗ ಆಪಲ್ ತಿನ್ನುವಾಗ ನಿಮ್ಮ ವಸಡಿನಲ್ಲಿ ರಕ್ತ ಬರುತ್ತಿದ್ದರೆ ದೇಹದಲ್ಲಿ ವಿಟಮಿನ್ C ಕಡಿಮೆಯಾಗಿದೆ ಎಂದರ್ಥ. ಗಮ್ಸ್ ನಲ್ಲಿ ರಕ್ತ ಬಂದರೆ ವಿಟಮಿನ್ C ಹೇರಳವಾಗಿರುವ ನಿಂಬೆಹಣ್ಣು, ಕಿತ್ತಳೆ ಹಣ್ಣು, ಮೂಸಂಬಿ, ಕಿವಿ ಹಣ್ಣು, ಕ್ಯಾಪ್ಸಿಕಂ, ಕಪ್ಪು ದ್ರಾಕ್ಷಿ ಸೇವಿಸಿ. ಇದರೊಂದಿಗೆ ಬೆಟ್ಟದ ನೆಲ್ಲಿಕಾಯಿಯನ್ನು ಪ್ರತಿನಿತ್ಯ ಸೇವಿಸುವುದು ಅಥವಾ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಕೂಡ ವಿಟಮಿನ್ C ಕೊರತೆ ನೀಗಿಸುತ್ತದೆ.
* ಕೂರುವಾಗ, ಏಳುವಾಗ, ಮೆಟ್ಟಿಲು ಹತ್ತುವಾಗ, ಇಳಿಯುವಾಗ ಕೀಲುಗಳಲ್ಲಿ ಕ್ರ್ಯಾಂಕಿಂಗ್ ರೀತಿ ಶಬ್ದವಾಗುತ್ತಿದ್ದರೆ ಕುತ್ತಿಗೆಯನ್ನು ಅಲುಗಾಡಿಸುವಾಗಲು ಕೂಡ ಈ ರೀತಿ ಶಬ್ದವಾಗುತ್ತಿದ್ದರೆ ಅದು ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ಸಾರಿ ಹೇಳುತ್ತಿದೆ ಎಂದು ಅರ್ಥ ಇದನ್ನು ನಿರ್ಲಕ್ಷ ಮಾಡಿದರೆ ಕೀಲು ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಹಿಂದೆ ವಯಸ್ಸೋ ಸಹಜ ಕಾಯಿಲೆ ಎನಿಸಿಕೊಂಡಿದ್ದ ಕೀಲು ನೋವು, ಮಂಡಿ ನೋವು, ಸೊಂಟ ನೋವು, ಬೆನ್ನು ನೋವು ಎಲ್ಲವೂ ಕೂಡ ಈಗ 25ನೇ ವಯಸ್ಸಿಗೆ ಕಾಣಿಸಿಕೊಳ್ಳಲು ಕಾರಣ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗಿರುವುದನ್ನು ಸೂಚಿಸುತ್ತದೆ. ಹಾಲು, ಪನೀರ್ , ಚೀಸ್, ಬ್ರೊಕಲಿ, ಸಿಹಿ ಗೆಣಸು, ಮೊಟ್ಟೆ, ಎಲೆ ಅಡಿಕೆ ಸುಣ್ಣ ಇರುವ ತಾಂಬೂಲ ಇವುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು.
* ಉಗುರು ಬೇಗ ತುಂಡಾಗುವುದು, ಮತ್ತೆ ಉಗುರು ಬೆಳೆಯುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುವುದು, ಚಿಕ್ಕ ವಯಸ್ಸಿಗೆ ಬೊಕ್ಕ ತಲೆಯಾಗುವುದು, ಕೂದಲು ಬೇಗ ಬೆಳ್ಳಗಾಗುವುದು ಇದೆಲ್ಲವೂ ಕೂಡ ದೇಹದಲ್ಲಿ Biotin ಕೊರತೆ ಉಂಟಾಗಿರುವುದನ್ನು ಸೂಚಿಸುತ್ತದೆ. ಇದನ್ನು ಸರಿಪಡಿಸಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆಯ ಒಳಗಿನ ಭಾಗ, ಬಿಡಿ ಮಶ್ರೂಮ್ ಸೇವನೆ ಒಳ್ಳೆಯದು. ಇದರೊಂದಿಗೆ ಮೊಸರಿಗೆ ಬೆಲ್ಲ ಮಿಶ್ರಣ ಮಾಡಿ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಈ ಕೊರತೆ ಸರಿದೂಗುತ್ತದೆ.
* ನಿಮ್ಮ ಉಗುರುಗಳ ಮೇಲೆ ಬಿಳಿ ಮಾರ್ಕ್ ಕಾಣುತ್ತಿದ್ದರೆ ಅದು ಜಿಂಕ್ ಕೊರತೆ ಆಗಿದೆ ಎನ್ನುವುದನ್ನು ಸೂಚಿಸುತ್ತದೆ. ಪುರುಷರಲ್ಲಿ ಟೆಸ್ಟೋಸ್ಟಿರಾನ್ ಮತ್ತು ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನ್ ಕೊರತೆಯನ್ನು ಸೂಚಿಸುತ್ತದೆ. ಇದರಿಂದ ಸಂತಾನ ಹೀನತೆ ಹಾಗೂ ನೆನಪಿನ ಶಕ್ತಿ ಕುಂದುವಿಕೆ, ನಿದ್ರಾಹೀನತೆ, ಮಾನಸಿಕ ಖಿನ್ನತೆ, ಏಕಾಗ್ರತೆ ಕೊರತೆ ಉಂಟಾಗುತ್ತದೆ. ಪಿಸ್ತಾ, ಬಾದಾಮಿ, ದ್ರಾಕ್ಷಿ, ಕರ್ಜೂರ ನೆನೆಸಿದ ಕಡಲೆ ಕಾಳು, ಮೊಳಕೆ ಕಟ್ಟಿದ ಕಾಳು ಸೇವಿಸುತ್ತಾ ಬಂದರೆ ಜಿಂಕ್ ಉತ್ಪತ್ತಿ ದೇಹದಲ್ಲಿ ಹೆಚ್ಚಾಗುತ್ತದೆ
* ಬಾಯಿಯಲ್ಲಿ ಹುಣ್ಣಾಗುವುದು, ನಾಲಿಗೆ ಒಡೆದುಕೊಳ್ಳುವುದು ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಮಸಾಲೆ ಪದಾರ್ಥಗಳು, ಜಂಕ್ ಫುಡ್ ಗಳು, ಕಾರ್ಬೋನಿಕ್ ಡ್ರಿಂಕ್ ಗಳನ್ನು ಹೆಚ್ಚಾಗಿ ಸೇವಿಸುವುದು ಇದಕ್ಕೆ ಕಾರಣ. ಆದಷ್ಟು ಮನೆ ಊಟ ಸೇವಿಸುವುದು ಹೆಚ್ಚಾಗಿ ತರಕಾರಿ ಹಣ್ಣುಗಳ ಸೇವನೆ ಮಾಡುವುದು ಮತ್ತು ಮಜ್ಜಿಗೆ ಜೊತೆ ಅಕ್ಕಿ ಗಂಜಿ ಸೇವನೆ ಮಾಡುವುದು ಇದಕ್ಕೆ ಪರಿಹಾರ
* ಐರನ್ ಹಾಗೂ ಹಿಮೋಗ್ಲೋಬಿನ್ ಕೊರತೆ ಹೆಚ್ಚಾಗಿ ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಕಂಡುಬರುತ್ತದೆ. ಈ ರೀತಿ ಆದಾಗ ಉಗುರಿನ ಮೇಲೆ ಉದ್ದನೆಯ ಗೆರೆಗಳು ಮುಖದ ಮೇಲೆ ಬಿಳಿ ಮಚ್ಚೆ ಮುಖದಲ್ಲಿ ಕಾಂತಿ ಇಲ್ಲದೆ ಇರುವುದು ತುಟಿ ಹಾಗೂ ಕಣ್ಣಿನ ಕೆಳಗಡೆ ಕಪ್ಪಾಗುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಐರನ್ ಕೊರತೆ ನೀಗಿಸಲು ಸೋಯಾಬಿನ್, ಹಸಿರು ಸೊಪ್ಪು, ಬ್ರೊಕೋಲಿ ಇವುಗಳ ಸೇವನೆ ಹೆಚ್ಚು ಮಾಡಬೇಕು ನಾನ್ಸ್ಟಿಕ್ ಪಾತ್ರೆಗಳನ್ನು ಬಿಟ್ಟು ಅಲ್ಯೂಮಿನಿಯಂ ಸ್ಟೀಲ್ ಪಾತ್ರೆಗಿಂತ ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ನ್ಯಾಚುರಲ್ ಆಗಿ ಕಬ್ಬಿಣಾಂಶ ದೇಹಕ್ಕೆ ಸೇರುವ ರೀತಿ ಮಾಡುತ್ತದೆ. ಹಿಮೋಗ್ಲೋಬಿನ್ ಕೊರತೆ ನೀಗಿಸಲು ಪ್ರತಿನಿತ್ಯ ಯೋಗ ವ್ಯಾಯಾಮ ಜೊತೆಗೆ ಆಪಲ್ ಕ್ಯಾರೆಟ್ ದಾಳಿಂಬೆ ಇಂತಹ ಹಣ್ಣುಗಳನ್ನು ಸೇವಿಸಬೇಕು.
* ರಾತ್ರಿ ಮಲಗಿದಾಗ ಕಾಲಿನ ನರಗಳು ಬಿಗಿಯಾಗುವುದು, ಗಂಟಾಗುವುದು ವಿಟಮಿನ್ ಇ ಕೊರತೆ ಸೂಚಿಸುತ್ತವೆ. ಆಹಾರದಲ್ಲಿ ಸೂರ್ಯಕಾಂತಿ ಎಣ್ಣೆ ಆಲಿವ್ ಎಣ್ಣೆ ಬಾದಾಮಿ ಎಣ್ಣೆ ಕಡಲೆ ಬೀಜದ ಎಣ್ಣೆ ಇವುಗಳಲ್ಲಿ ಯಾವುದಾದರೂ ಒಂದನ್ನು ಸೇರಿಸುವುದು ವಿಟಮಿನ್ E ಕೊರತೆ ಕಡಿಮೆ ಮಾಡುತ್ತದೆ.
* ನಾಲಿಗೆ ಮೇಲೆ ಬಿಳಿ ಬಣ್ಣ ಹೆಚ್ಚಾಗಿದ್ದರೆ ಇದು ಬೂಸ್ಟ್ ಬೆಳವಣಿಗೆ ಹೆಚ್ಚಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಇದು ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಇದನ್ನು ನಿರ್ಲಕ್ಷಿಸಿದರೆ ಟೇಸ್ಟ್ ಬಡ್ ಗಳು ಹಾಳಾಗಿ ನಾಲಿಗೆ ರುಚಿ ತಿಳಿಯುವುದಿಲ್ಲ, ಲಾಲಾರಸ ಉತ್ಪಾದನೆ ಆಗುವುದಿಲ್ಲ.
ಆಗ ಜೀರ್ಮಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ ಇದನ್ನು ತಪ್ಪಿಸಲು ನಾಲಿಗೆ ಆರೋಗ್ಯಕ್ಕೂ ಕೂಡ ಗಮನ ಕೊಡಬೇಕು. ಹಲ್ಲುಜ್ಜುವಾಗ ಸ್ನಾನ ಮಾಡುವಾಗ ನಾಲಿಗೆಯನ್ನು ಕೂಡ ಶುಚಿಗೊಳಿಸಬೇಕು ಚಾಕ್ಲೇಟ್ ಅತಿಯಾದ ಸಿಹಿಯಾದ ಪದಾರ್ಥಗಳು ಸೇವನೆ ಕಡಿಮೆ ಮಾಡಬೇಕು
* ಇದರೊಂದಿಗೆ ಸೂರ್ಯನ ಬಿಸಿಲು, ಪ್ರತಿದಿನವೂ ವ್ಯಾಯಾಮ, ಮನಸ್ಸಿಗೆ ಧ್ಯಾನ ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥ ಸೇವನೆ ಇದೆಲ್ಲವೂ ಕೂಡ ಮನುಷ್ಯ ಆರೋಗ್ಯವಾಗಿರುವುದಕ್ಕೆ ಪೂರಕವಾದ ಅಂಶಗಳಾಗಿವೆ.