ಬ್ರೈನ್ ಟ್ಯುಮರ್ ಕಾಯಿಲೆ ಎಂದ ತಕ್ಷಣ ಖಂಡಿತವಾಗಿಯೂ ಬಹಳ ಭ’ಯವಾಗುತ್ತದೆ. ಒಂದು ಕಾಲದಲ್ಲಿ ಇದು ಮಾ’ರ’ಣಾಂ’ತಿ’ಕ ಕಾಯಿಲೆ ಆಗಿತ್ತು, ಆದರೆ ಈಗ ಟೆಕ್ನಾಲಜಿ ಬಹಳಷ್ಟು ಮುಂದುವರೆದಿದೆ. ಹಾಗಾಗಿ ಇಷ್ಟೊಂದು ಹೆದರುವ ಬೀಳುವ ಅಗತ್ಯ ಇಲ್ಲ. ಯಾಕೆಂದರೆ ಟೆಕ್ನಾಲಜಿ ಎಷ್ಟು ಡೆವೆಲಪ್ ಆಗಿದೆ ಎಂದರೆ ಈಗಿನ ಕಾಲದಲ್ಲಿ 70% ರಿಂದ 80% ಬ್ಲೈನ್ ಟ್ಯೂಮರ್ ರೋಗಿಗಳು ಗುಣವಾಗಿ ಸಹಜವಾಗಿ ಬದುಕುತ್ತಿದ್ದಾರೆ.
ಈ ಟ್ಯೂಮರ್ ಗಳಲ್ಲಿ ಎರಡು ವಿಧ ಇರುತ್ತದೆ. ಮೆಲಿಗ್ನೆಂಟ್ ಮತ್ತು ನಾನ್ ಮೆಲಿಗ್ನೆಂಟ್. ಬ್ರೈನ್ ಟ್ಯೂಮರ್ ಕಾಯಿಲೆ ಕುರಿತು ತಿಳಿದುಕೊಳ್ಳುವ ಕುತೂಹಲಕ್ಕಾಗಿ ಅನೇಕ ಬಾರಿ ನಾವು ಗೂಗಲ್ ಸರ್ಚ್ ಮಾಡಿರುತ್ತೇವೆ ಅಥವಾ ಗೊತ್ತಿರುವ ಡಾಕ್ಟರ್ ಬಳಿ ವಿಚಾರಿಸುತ್ತೇವೆ ಅಥವಾ ಈಗಾಗಲೇ ಈ ಕಾಯಿಲೆಯಿಂದ ನರಳುತ್ತಿರುವುದು ಕುಟುಂಬದವರಿಂದ ಕೆಲ ಮಾಹಿತಿ ಕಾಲೆ ಹಾಕಿರುತ್ತೇವೆ.
ಇಂದು ಈ ಅಂಕಣದಲ್ಲಿ ಕೂಡ ಇದರ ಕುರಿತು ಕೆಲ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ, ತಪ್ಪದೆ ಕೊನೆಯವರೆಗೂ ಓದಿ. ಬ್ರೈನ್ ಟ್ಯುಮರ್ ನಲ್ಲಿ ಮೆದುಳಿನ ಡ್ಯೂರ ಎನ್ನುವ ಪೊರೆಯಿಂದ ಉಂಟಾಗುವ ಮೆರಿಂಜ್ಯೋಮ ನಾನ್ ಮೆಲಿಗ್ನೆಂಟ್ ಟ್ಯೂಮರ್ ನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಬಹುದು. ಆ ನಂತರವು ಅದು ಮತ್ತೆ ಬೆಳೆಯುವುದಾಗಲಿ ಅಥವಾ ಮೆದುಳಿನ ಮತ್ತೊಂದು ಭಾಗಕ್ಕಾಗಲಿ ಹರಡುವುದಾಗಲಿ ಆಗುವುದಿಲ್ಲ.
ಪಿಟ್ಯುಟರಿ ಅಡಿನೋಮ, ಅಕೋಷ್ಟಿಕ್ ಶಾನೋಮ ಇವುಗಳು ಕೂಡ ನಾನ್ ಮೆಲಿಗ್ನೆಂಟ್ ಟ್ಯ್ಯೂಮರ್ ಗಳಾಗಿವೆ, ಇವುಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಇನ್ನು ಮತ್ತೊಂದು ಬಗ್ಗೆ ಟ್ಯೂಮರ್ ಗಳಾದ ಮೆಲಿಗ್ನೆಂಟ್ ಟ್ಯೂಮರ್ ಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ಗ್ಲಯಾಬ್ಲಾಸ್ಟೋಮ ಎನ್ನುವುದು ಬಹಳ ಅಪಾಯಕಾರಿ. ಇದು ಮೆದುಳಿನಲ್ಲಿ ಬೇರೆ ಬೇರೆ ಭಾಗಗಳಿಗೆ ಹಬ್ಬುವ ಬಗೆಯ ಟ್ಯೂಮರ್ ಆಗಿದೆ.
ಆದರೆ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಾಗಲೇ ಇದನ್ನು ಗುರುತಿಸಿ ಸೂಕ್ತ ವೈದ್ಯರ ಸಲಹೆ ಪಡೆದು ಅವಶ್ಯಕತೆ ಇದ್ದಾಗ ಚಿಕಿತ್ಸೆಗೆ ಒಳಗಾದರೆ ಖಂಡಿತವಾಗಿ ಇದರಿಂದಲೂ ಕೂಡ ಪೂರ್ತಿಯಾಗಿ ಗುಣವಾಗಿ ಬದುಕಬಹುದು. ಆದರೆ ಅನೇಕರಿಗೆ ಇದರ ಲಕ್ಷಣಗಳು ಬ್ರೈನ್ ಟ್ಯೂಮಾರ್ ಆಗಿರುವ ಲಕ್ಷಣಗಳು ಎಂದು ಗೊತ್ತೇ ಆಗುವುದಿಲ್ಲ.
ಇದರ ಲಕ್ಷಣಗಳು ಹೇಗಿರುತ್ತವೆ ಎಂದರೆ ಎಷ್ಟೋ ದಿನಗಳಿಂದ ದಿನ ಬೆಳಗ್ಗೆ ಎದ್ದ ಕೂಡಲೇ ಬಹಳ ತಲೆನೋವು ಬರುತ್ತಿದ್ದರೆ, ತಲೆ ನೋವಿನ ಜೊತೆಗೆ ವಾಂತಿಯಾಗಿ ವಾಂತಿ ಆದ ಬಳಿಕ ರಿಲ್ಯಾಕ್ಸ್ ಅನಿಸುತ್ತಿದ್ದೆ, ತುಂಬಾ ತಲೆ ಸುತ್ತು ಬರುವುದು, ಅನ್ ಕಾನ್ಶಿಯಸ್ ಆಗುವುದು, ಅಬ್ ನಾರ್ಮಲ್ ಆಗಿ ಬಿಹೇವ್ ಮಾಡುತ್ತಾ ಅವರ ವರ್ತನೆ ಬದಲಾಗಿರುವುದು, ಪಿಟ್ಸ್ ಕೈ ಕಾಲುಗಳ ವೀಕ್ನೆಸ್ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಇದು ಬ್ರೈನ್ ಟ್ಯೂಮರ್ ಲಕ್ಷಣಗಳಾಗಿರಬಹುದು, ಆಗ ನಿರ್ಲಕ್ಷ ಮಾಡದೆ ಆದಷ್ಟು ಬೇಗ ವೈದ್ಯರ ಸಂಪರ್ಕಿಸಬೇಕು.
ಇದರ ಬಗ್ಗೆ ಸಂಶಯ ಬಂದಾಗ CT, MRI, ಸ್ಟೆಕ್ಟ್ರೋಸ್ಕೋಪಿ ಈ ರೀತಿಯ ಪರೀಕ್ಷೆಗಳಿಂದ ಕಾಯಿಲೆ ದೃಢಪಡಿಸಲಾಗುತ್ತದೆ. ಈ ಕಾಯಿಲೆಗೆ ಕೆಮೋಡೆಕ್ಟಮಾ ಸಾಮಾನ್ಯವಾಗಿ ನೀಡುವ ಚಿಕಿತ್ಸೆ ಮತ್ತು ಮೆದುಳಿನ ಯಾವ ಭಾಗದಲ್ಲಿ ಗೆಡ್ಡೆಗಳು ಆಗಿದೆ ಆ ಭಾಗಕ್ಕೆ ಮಾತ್ರ ಕೆಮೋಡೆಕ್ಟಮ್ ಮಾಡುವ ಚಿಕಿತ್ಸೆಯೂ ಇದೆ. ಬೆನ್ನು ಮೂಳೆಯಲ್ಲಿ ಟ್ಯೂಮರ್ ಆಗಿದ್ದರೆ ಲೆಮೊಕ್ಟಮಿನ್ ಚಿಕಿತ್ಸೆ ಮಾಡುತ್ತಾರೆ. ರೇಡಿಯೋ ಸರ್ಜರಿ ಕಿಮಿಯೋಥೆರಫಿ ಹೀಗೆ ರೋಗಿಯ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಂಡು ಯಾವ ಚಿಕಿತ್ಸೆ ನೀಡಬೇಕು ಎನ್ನುವುದನ್ನು ವೈದ್ಯರ ನಿರ್ಧರಿಸುತ್ತಾರೆ.