* ಬೇರೆಯವರ ಬಗ್ಗೆ ಮಾತನಾಡುವುದು.
* ಬೇರೆಯವರ ಬದುಕನ್ನು ನಮ್ಮ ಬದುಕಿಗೆ ಹೋಲಿಸಿಕೊಳ್ಳುವುದು
* ಪತಿ ಪತ್ನಿಯನ್ನು ನಂಬದೇ ಬೇರೆಯವರ ಮಾತನ್ನು ಕೇಳುವುದು.
* ಪತ್ನಿ ಪತಿಯ ಮಾತನ್ನು ಕೇಳದೆ ಬೇರೆಯವರ ಮಾತನ್ನು ನಂಬುವುದು
* ಬೇರೆಯವರ ಹಣ ಆಸ್ತಿ ಸಂಪಾದನೆ ಕಾರು ಬಂಗಲೆ ಇವೆಲ್ಲವನ್ನೂ ನೋಡಿ ಸುಮ್ಮನಿದ್ದರೆ ಪರವಾಗಿಲ್ಲ ಅದರ ಬದಲು ನಾವು ಹಾಗೆ ಇರಬೇಕು ಎಂದು ಅತಿ ಆಸೆಪಟ್ಟು ಮನೆಯ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಮನೆಯಲ್ಲಿ ಜಗಳ ಉಂಟು ಮಾಡಿಕೊಳ್ಳುವುದು
* ಮನೆ ಅಂದಮೇಲೆ ಜಗಳ ಅಸಮಾಧಾನ ಬಂದೇ ಬರುತ್ತದೆ. ಆದರೆ ಆ
ತೊಂದರೆಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.
* ಪತಿ-ಪತ್ನಿಯ ಜಗಳವನ್ನು ಬೇರೆಯವರೊಡನೆ ಹಂಚಿಕೊಳ್ಳಬಾರದು ನಿಮ್ಮ ಜಗಳಕ್ಕೂ ಬೇರೆಯವರನ್ನು ಮಧ್ಯಕ್ಕೆ ತರಬಾರದು ಯಾವುದೇ ಜಗಳವನ್ನು ನಿಮ್ಮಲ್ಲಿಯೇ ಸರಿಪಡಿಸಿಕೊಳ್ಳಬೇಕು.
* ಪತಿ ಪತ್ನಿಯರು ಕೆಲಸಕ್ಕೆ ಹೋಗುತ್ತಿದ್ದರೆ. ತುಂಬಾನೇ ಉತ್ತಮ
ಆದರೆ ಇದು ನನ್ನ ದುಡ್ಡು ಇದು ನಿನ್ನ ದುಡ್ಡು ಎಂದು ಬೇಧ ಭಾವ ಮಾಡುವುದು ಸಂಪಾದನೆಯ ಬಗ್ಗೆ ಹೀಯಾಳಿಸುವುದು ಇತಿಮಿತಿ ಇಲ್ಲದೆ ಖರ್ಚು ಮಾಡುವುದು ಸುಲಭ ಆದರೆ ಅಗತ್ಯವಿರುವುದಕ್ಕೆ ಮಾತ್ರ ಖರ್ಚು ಮಾಡಿ. ಅಗತ್ಯಕ್ಕೂ ಮೇರಿ ಖರ್ಚು ಮಾಡುವುದರಿಂದ ಮನೆಯ ನೆಮ್ಮದಿ ಹಾಳುಮಾಡುತ್ತದೆ.
* ಯಾರೊಂದಿಗಾದರೂ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ ಹಣ ಕಳೆದುಕೊಂಡರೆ ಸಂಪಾದನೆ ಮಾಡಬಹುದು ಗುಣ ಕಳೆದುಕೊಂಡರೆ ಸಂಪಾದನೆ ಮಾಡಲು ಆಗುವುದಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ.
* ಕೋಪದಲ್ಲಿ ಮಿತಿಮೀರಿ ಮಾತನಾಡಬೇಡಿ ಆ ಮಾತುಗಳು ಮನೆಯನ್ನೇ ಹಾಳು ಮಾಡುತ್ತದೆ ಇದರ ಬಗ್ಗೆ ಎಚ್ಚರವಹಿಸಿ.
ಈ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಬಹಳ ಪ್ರಮುಖವಾ ದಂತಹ ವಿಷಯವಾಗಿದ್ದು ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷ ಇಬ್ಬರು ಕೂಡ ಈ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೇನಾದರೂ ಪತ್ನಿಯಾದವಳು ಇಂತಹ ಕೆಲವು ವಿಚಾರದಲ್ಲಿ ತಾನು ತಪ್ಪು ಮಾಡಿದ್ದೆ ಆದರೆ ಜೀವನ ಪೂರ್ತಿ ಅವಳು ವ್ಯಥೆ ಪಡಬೇಕಾಗುತ್ತದೆ ಹೌದು, ಯಾವುದೇ ಒಬ್ಬ ವ್ಯಕ್ತಿಯಾಗಿರಲಿ ತಪ್ಪು ಮಾಡದೆ ಇರಲು ಸಾಧ್ಯವಿಲ್ಲ ಆದರೆ ಅದೇ ತಪ್ಪನ್ನು ಪದೇಪದೇ ಮಾಡುತ್ತಿದ್ದರೆ ಅದಕ್ಕೆ ಬೆಲೆ ಇರುವುದಿಲ್ಲ.
ಹೌದು ನಡೆದಂತಹ ತಪ್ಪನ್ನು ಸರಿಪಡಿಸಿಕೊಂಡು ಹೋಗಿ ಅದನ್ನು ಸರಿಯಾದ ರೀತಿಯಲ್ಲಿ ಮಾಡುವುದೇ ಪ್ರತಿಯೊಬ್ಬರ ಕರ್ತವ್ಯ. ಅದೇ ರೀತಿಯಾಗಿ ಮೇಲೆ ಹೇಳಿದಂತೆ ಪತ್ನಿಯಾದವಳು ಹಾಗೂ ಪತಿ ಇಬ್ಬರೂ ಕೂಡ ಇಂತಹ ವಿಚಾರದ ಬಗ್ಗೆ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯ. ಇಲ್ಲವಾದರೆ ಅವಳ ಜೀವನವೇ ಹಾಳಾಗುತ್ತದೆ ಎಂದೇ ಹೇಳಬಹುದು.
ಅದರಲ್ಲೂ ಸಂಸಾರದಲ್ಲಿ ಬರುವಂತಹ ಕೆಲವೊಂದಷ್ಟು ವಿಚಾರಗಳನ್ನು ಅವಳು ಆದಷ್ಟು ಗೌಪ್ಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಅವಳು ತನ್ನ ಸಂಸಾರದ ವಿಚಾರಗಳನ್ನು ಬೇರೆಯವರ ಮುಂದೆ ಹೇಳುತ್ತಾ ಬಂದರೆ ಅಲ್ಲಿ ಅವಳ ಪತಿಗೆ ಯಾವು ದೇ ರೀತಿಯ ಬೆಲೆ ಇರುವುದಿಲ್ಲ ಅವಳೇ ತನ್ನ ಪತಿಯ ಬೆಲೆಯನ್ನು ಎಲ್ಲರ ಮುಂದೆ ಕಳೆದಂತೆ ಆಗುತ್ತದೆ.
ಆದ್ದರಿಂದ ಪತ್ನಿಯಾದವಳು ಪತಿಯ ಏಳಿಗೆಯನ್ನು ಪತಿಯ ಹೆಸರನ್ನು ಉಳಿಸಬೇಕೆ ಹೊರತು ಪತಿಯ ಹೆಸರನ್ನು ಅಳಿಸುವ ಕೆಲಸ ಯಾವತ್ತಿಗೂ ಮಾಡಬಾರದು. ಅದರಲ್ಲೂ ಪತಿಯಾದವನು ತನ್ನ ಪತ್ನಿಗೆ ಎಷ್ಟೇ ಹಣ ಐಶ್ವರ್ಯ ಕೊಡದಿದ್ದರೂ ಸಹ ಅವನ ಕೈಲಾದಷ್ಟು ಪ್ರೀತಿಯನ್ನು ಅವಳಿಗೆ ಕೊಡಲು ಇಚ್ಚಿಸುತ್ತಾನೆ.
ಆದರೆ ಪತ್ನಿಯಾದವಳು ನನಗೆ ಚಿನ್ನ ಒಡವೆ ಹಣಕಾಸು ಎಲ್ಲ ಬೇಕು ಎಂದು ಸಂಸಾರದಲ್ಲಿ ಜಗಳ ತೆಗೆಯುವುದು ತಪ್ಪು. ಬದಲಿಗೆ ಅವನ ಪ್ರೀತಿಯಲ್ಲಿ ಅವಳು ಅವನ ಜೊತೆ ಕೊನೆತನಕ ಇರುವುದು ತುಂಬಾ ಮುಖ್ಯ. ಆಗ ಅವರಿಬ್ಬರ ಸಂಸಾರ ಸುಖಕರವಾಗಿ ರುತ್ತದೆ. ಹಾಗೂ ಮೇಲೆ ಹೇಳಿದ ಅಷ್ಟು ಮಾಹಿತಿಗಳು ಕೂಡ ನಿಮ್ಮ ಸಂಸಾರ ಜೀವನದಲ್ಲಿ ಕಲಹವನ್ನು ಉಂಟು ಮಾಡುವಂತಹ ಮಾಹಿತಿ ಗಳಾಗಿದ್ದು ಅವುಗಳನ್ನು ತಿಳಿದು ಅದನ್ನು ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ.