ಲಕ್ಷ್ಮೀದೇವಿಯ ಆಶೀರ್ವಾದವಿದ್ದರೆ ಬದುಕಿನಲ್ಲಿ ಎಲ್ಲವೂ ಹಸನಾಗಿರುತ್ತದೆ. ಆದರೆ ನಮ್ಮಲ್ಲಿರುವ ಕೆಲವು ಅಭ್ಯಾಸಗಳು ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗುವಂತೆ ಮಾಡುತ್ತವೆ. ಇಂತಹ ಅಭ್ಯಾಸಗಳು ನಿಮ್ಮಲ್ಲೂ ಇದ್ದರೆ ಇಂದೇ ಬದಲಾಗಿ, ಇಲ್ಲದಿದ್ದರೆ ಹಣಕಾಸಿನ ಕೊರತೆ ಕಾಡುವ ಜೊತೆಗೆ ಮನೆಯಲ್ಲಿ ನೆಮ್ಮದಿಯೂ ಇರುವುದಿಲ್ಲ.
ಲಕ್ಷ್ಮೀ ದೇವಿಯು ಸಂಪತ್ತಿನ ಜೊತೆಗೆ ಮನೆಗೆ ಸುಖ, ಶಾಂತಿ, ನೆಮ್ಮದಿಯನ್ನೂ ತರುತ್ತಾಳೆ ಅವಳ ಆಶೀರ್ವಾದವಿದ್ದರೆ ಬದುಕಿನಲ್ಲಿ ಸೋಲು ಎಂಬು ದಿರುವುದಿಲ್ಲ. ಆದರೆ ನೀವು ಮಾಡುವ ಸಣ್ಣ ತಪ್ಪುಗಳು, ಅನುಸರಿಸುವ ಅಭ್ಯಾಸಗಳು ಲಕ್ಷ್ಮೀದೇವಿಯ ಮುನಿಸ್ಸಿಗೆ ಕಾರಣವಾಗುತ್ತದೆ. ಇದರಿಂದ ಆಕೆ ನಿಮ್ಮ ಮನೆ ಬಿಟ್ಟು ಹೊರ ನಡೆಯುತ್ತಾಳೆ.
ಇದರಿಂದ ನೀವು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಅಭ್ಯಾಸಗಳು ನಿಮ್ಮಲ್ಲೂ ಇದ್ದರೆ ನಿಮಗೆ ಲಕ್ಷ್ಮೀಯ ಆಶೀರ್ವಾದ ಸಿಗುವುದಿಲ್ಲ. ಅಲ್ಲದೇ ದುರಾದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ ಹಾಗಾದರೆ ಲಕ್ಷ್ಮೀದೇವಿಗೆ ಯಾವ ಅಭ್ಯಾಸಗಳು ಇಷ್ಟವಾಗುವುದಿಲ್ಲ ನೋಡಿ.
ಈ ಸುದ್ದಿ ಓದಿ:-ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ…!!
* ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳದೇ ಇರುವುದು:- ಕೆಲವರು ಪ್ರತಿದಿನ ಮನೆ ಗುಡಿಸುವುದು, ಒರೆಸುವುದು ಮಾಡಿ ಮನೆಯನ್ನು ನೀಟಾಗಿ ಇರಿಸಿಕೊಂಡಿರುತ್ತಾರೆ. ಆದರೆ ಕೆಲವರು ಶುದ್ಧ ಸೋಂಬೇರಿಗಳಾಗಿದ್ದು ಮನೆಯನ್ನು ಗಲೀಜಾಗಿ ಇರಿಸಿಕೊಂಡಿರುತ್ತಾರೆ. ಅಂತಹವರ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ನೆಲೆಸಲು ಇಷ್ಟ ಪಡುವುದಿಲ್ಲ. ಕೊಳಕು ತುಂಬಿರುವ ಮನೆಯಲ್ಲಿ ಬಡತನದ ದೇವಿ ನೆಲೆಸಿರುತ್ತಾಳೆ ಇದರಿಂದ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುವಂತಾಗಬಹುದು.
* ಹೆಂಡತಿಗೆ ಗೌರವ ಕೊಡದೇ ಇರುವುದು:- ಮದುವೆಯ ನಂತರ ಪತಿ-ಪತ್ನಿ ಪರಸ್ಪರ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು. ಒಳ್ಳೆಯ ಸಮಯ ಕೆಟ್ಟ ಸಮಯ ಎರಡೂ ಸಂದರ್ಭಗಳಲ್ಲಿ ಜೊತೆಯಾಗಿ ನಿಲ್ಲಬೇಕು. ಪರಸ್ಪರರ ಭಾವನೆಗಳಿಗೆ ಬೆಲೆ ನೀಡಿ.
ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಿ. ಪ್ರೀತಿಯಿಂದ ಜೀವನ ನಡೆಸಿ, ಪರಸ್ಪರ ಗೌರವಿಸಿ. ಗಂಡನಾದವನು ಎಂದಿಗೂ ತಾನೇ ಮೇಲು, ತಾನು ಹೇಳಿದ್ದೇ ನಡೆಯಬೇಕು ಎಂಬ ದರ್ಪ ತೋರುವುದು, ಹೆಂಡತಿಗೆ ಗೌರವ
ನೀಡದೇ ಇರುವುದು ಮಾಡಿದರೆ ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಿರುವುದಿಲ್ಲ. ಅಂತಹ ವ್ಯಕ್ತಿಯ ಮೇಲೆ ಲಕ್ಷ್ಮೀದೇವಿ ಮುನಿಸಿ ಕೊಳ್ಳುತ್ತಾಳೆ.
ಈ ಸುದ್ದಿ ಓದಿ:-ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!
* ಸೂರ್ಯೋದಯದ ನಂತರವೂ ಮಲಗುವುದು :- ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗು ತ್ತಿವೆ. ಒತ್ತಡ ಮತ್ತು ನಿದ್ರೆಯ ಕೊರತೆಯಿಂದಾಗಿ, ಸೂರ್ಯ ಹುಟ್ಟಿದ ಎಷ್ಟೋ ಹೊತ್ತಿನ ನಂತರ ಎದ್ದೇಳುವವರು ಇದ್ದಾರೆ. ಆದರೆ ಸೂರ್ಯೋದಯದ ನಂತರವೂ ಮಲಗುವವರನ್ನು ಲಕ್ಷ್ಮೀದೇವಿ ಇಷ್ಟಪಡುವುದಿಲ್ಲ. ಇದರಿಂದ ನೀವು ಅವಳ ಕೋಪಕ್ಕೆ ಗುರಿಯಾಗಬಹುದು. ಅಲ್ಲದೇ ಹಲವು ತೊಂದರೆಗಳನ್ನು ಎದುರಿಸಬೇಕಾಗ ಬಹುದು. ನಿಮಗೆ ಸುರ್ಯೋದಯದ ನಂತರವೂ ಮಲಗುವ ಅಭ್ಯಾಸವಿದ್ದರೆ ಇಂದೇ ತ್ಯಜಿಸಿ.
* ಆಹಾರಕ್ಕೆ ಗೌರವ ನೀಡದೇ ಇರುವುದು:- ಆಹಾರವನ್ನು ವ್ಯರ್ಥ ಮಾಡಬೇಡಿ. ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುತ್ತಾರೆ. ಅನ್ನವನ್ನು ಎಂದಿಗೂ ಎಸೆಯಬಾರದು. ಆಹಾರಕ್ಕೆ ಅವಮಾನಿಸುವುದನ್ನು ಲಕ್ಷ್ಮೀ ದೇವಿಯು ಸಹಿಸುವುದಿಲ್ಲ. ಧಾನ್ಯಗಳನ್ನು ಗೌರವದಿಂದ ಕಾಣದ ಮನೆಯಲ್ಲಿ ಉಳಿಯಲು ಲಕ್ಷ್ಮೀದೇವಿ ಮನಸ್ಸು ಮಾಡುವುದಿಲ್ಲ ಎಂದು ಹೇಳಲಾಗುತ್ತದೆ ಮನೆಯಲ್ಲಿ ಸುಖ ಸಮೃದ್ಧಿ ತುಂಬಿರಲು ಮೊದಲು ಆಹಾರವನ್ನು ಗೌರವಿಸಬೇಕು.
* ಸುಳ್ಳು ಹೇಳಬೇಡಿ:- ಯಾರು ಸುಳ್ಳು ಹೇಳುತ್ತಾರೋ ಅವರಿಗೆ ಲಕ್ಷ್ಮೀದೇವಿಯು ಒಲಿಯಲು ಸಾಧ್ಯವಿಲ್ಲ. ಕೆಲವರು ತಮಗೆ ಬೇಕಾದುದನ್ನು ಪಡೆಯಲು ಇತರರಿಗೆ ಮೋಸ ಮಾಡುವ ಸಲುವಾಗಿ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾರೆ. ಇದರಿಂದ ಆ ಕ್ಷಣದಲ್ಲಿ ಅವರು ಗೆದ್ದರೂ ನಂತರದ ದಿನಗಳಲ್ಲಿ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಈ ಸುದ್ದಿ ಓದಿ:-ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!
* ಹಿರಿಯರನ್ನು ಗೌರವಿಸಬೇಕು:- ತಂದೆ-ತಾಯಿ ಮತ್ತು ಹಿರಿಯರನ್ನು ಗೌರವಿಸಬೇಕು. ಆಗ ಮಾತ್ರ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.